ಗಿಡಮೂಲಿಕೆ ಚಹಾದಿಂದ ಶುಂಠಿವರೆಗೆ, ಮಳೆಗಾಲದಲ್ಲಿ ಕಾಡುವ ಟಾನ್ಸಿಲ್ಸ್‌ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
ಕನ್ನಡ ಸುದ್ದಿ  /  ಜೀವನಶೈಲಿ  /  ಗಿಡಮೂಲಿಕೆ ಚಹಾದಿಂದ ಶುಂಠಿವರೆಗೆ, ಮಳೆಗಾಲದಲ್ಲಿ ಕಾಡುವ ಟಾನ್ಸಿಲ್ಸ್‌ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಗಿಡಮೂಲಿಕೆ ಚಹಾದಿಂದ ಶುಂಠಿವರೆಗೆ, ಮಳೆಗಾಲದಲ್ಲಿ ಕಾಡುವ ಟಾನ್ಸಿಲ್ಸ್‌ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಮಳೆಗಾಲ ಶುರುವಾದ ತಕ್ಷಣ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಶೀತದ ವಾತಾವರಣ ಕಾರಣ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತವೆ. ಟಾನ್ಸಿಲ್ಸ್‌ ಸಮಸ್ಯೆ ಇರುವವರು ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಮಾನ್ಸೂನ್‌ ಋತುವಿನಲ್ಲಿ ಟಾನ್ಸಿಲ್ಸ್‌ ಸಮಸ್ಯೆ ಹೆಚ್ಚಬಾರದು ಅಂದ್ರೆ ನಿಮಗಾಗಿ ಇಲ್ಲಿದೆ ಒಂದಿಷ್ಟು ಮನೆಮದ್ದು.

ಮಳೆಗಾಲದಲ್ಲಿ ಕಾಡುವ ಟಾನ್ಸಿಲ್‌ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
ಮಳೆಗಾಲದಲ್ಲಿ ಕಾಡುವ ಟಾನ್ಸಿಲ್‌ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು

ಟಾನ್ಸಿಲ್ಸ್‌ ಅಥವಾ ಗಲಗ್ರಂಥಿಯ ಉರಿಯೂತ ಇದು ಸಾಮಾನ್ಯವಾಗಿ ಆಗಾಗ ಕಾಣಿಸುತ್ತದೆ. ಇದು ನಮ್ಮ ದೈನಂದಿನ ಜೀವನಕ್ರಮಕ್ಕೆ ಅಡ್ಡಿಪಡಿಸುತ್ತದೆ. ಆಂಟಿಬಯೋಟಿಕ್‌ಗಳ ಸೇವನೆಯಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯಾದ್ರೂ ಟಾನ್ಸಿಲ್ಸ್‌ ನೋವನ್ನು ಕಡಿಮೆ ಮಾಡಲು ಒಂದಿಷ್ಟು ಮನೆಮದ್ದುಗಳಿವೆ. ಇವು ಮಳೆಗಾಲದಲ್ಲಿ ಸೋಂಕು ನಿವಾರಿಸಿ ಟಾನ್ಸಿಲ್‌ ನೋವು ಕಡಿಮೆ ಮಾಡಲು ನೆರವಾಗುತ್ತವೆ.

ಟಾನ್ಸಿಲ್ಸ್‌ಗೆ ಇಲ್ಲಿದೆ 6 ಮನೆಮದ್ದು

ಗಿಡಮೂಲಿಕೆ ಚಹಾ: ಗಿಡಮೂಲಿಕೆ ಚಹಾಗಳು ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಇದು ಸೋಂಕು ಹಾಗೂ ಉರಿಯೂತ ಕಡಿಮೆ ಮಾಡಲು ಉತ್ತಮ ಔಷಧಿಯಾಗಿದೆ. ಶುಂಠಿ ಚಹಾ, ಕ್ಯಾಮೊಮೈಲ್ ಚಹಾ, ಗ್ರೀನ್‌ ಟೀ ಆರೋಗ್ಯಕರ ಮತ್ತು ಪರಿಣಾಮಕಾರಿ ಪರಿಹಾರಗಳಾಗಿವೆ.

ಉಪ್ಪು ನೀರಿನೊಂದಿಗೆ ಗಾರ್ಗಲ್‌ ಮಾಡುವುದು: ಗಲಗ್ರಂಥಿಯ ಉರಿಯೂತಕ್ಕೆ ಸರಳ ಮತ್ತು ಅತ್ಯಂತ ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದು ಉಪ್ಪುನೀರಿನ ದ್ರಾವಣದೊಂದಿಗೆ ಗಾರ್ಗ್ಲಿಂಗ್ ಮಾಡುವುದು. ಉಪ್ಪು ನೀರು ಗಂಟಲಿನಲ್ಲಿ ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ನಂಜು ನಿರೋಧಕ ಗುಣವನ್ನು ಹೊಂದಿದ್ದು, ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ಟೀ ಚಮಚ ಉಪ್ಪನ್ನು ಬೆರೆಸಿ ಮತ್ತು ದಿನಕ್ಕೆ ಹಲವಾರು ಬಾರಿ ಗಾರ್ಗ್ಲಿಂಗ್ ಮಾಡಿ.

ಜೇನುತುಪ್ಪ ಮತ್ತು ನಿಂಬೆಹಣ್ಣಿನ ಸಿಪ್‌: ಗಂಟಲು ನೋವು ಶಮನಗೊಳಿಸಲು ಸೋಂಕಿನ ವಿರುದ್ಧ ಹೋರಾಡಲು ಜೇನುತುಪ್ಪ ಮತ್ತು ನಿಂಬೆಹಣ್ಣು ಒಂದು ಉತ್ತಮ ಔಷಧಿ. ಜೇನುತುಪ್ಪವು ನೈಸರ್ಗಿಕ ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ನಿಂಬೆ ರಸದಲ್ಲಿರುವ ವಿಟಮಿನ್ ಸಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆಹಣ್ಣಿನ ರಸದೊಂದಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ನಿಧಾನವಾಗಿ ಕುಡಿಯಲು ಪ್ರಯತ್ನಿಸಿ.

ಅರಿಸಿನವನ್ನು ಸೇರಿಸಿ: ಭಾರತೀಯ ಪಾಕಪದ್ಧತಿಯಲ್ಲಿ ಅಗ್ರಸ್ಥಾನ ಪಡೆದಿರುವ ಅರಿಸಿನವು ಕರ್ಕ್ಯುಮಿನ್‌ ಎಂಬ ಪ್ರಬಲ ಸಂಯುಕ್ತವನ್ನು ಹೊಂದಿದೆ. ಇದು ಪ್ರಬಲವಾದ ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮಗಳನ್ನು ಹೊಂದಿದ್ದು, ನಂಜು ನಿವಾರಕವಾಗಿದೆ. ಆಹಾರದಲ್ಲಿ ಅರಿಸಿನವನ್ನು ಸೇರಿಸುವುದು ಟಾನ್ಸಿಲ್‌ ನಿವಾರಣೆಗೆ ಉತ್ತಮ ಮಾರ್ಗವಾಗಿದೆ.

ಎಸೆನ್ಷಿಯಲ್‌ ಎಣ್ಣೆ: ಟೀ ಟ್ರೀ, ಯೂಕಲಿಪ್ಟಸ್ ಮತ್ತು ಪುದೀನಾ ಮುಂತಾದ ಕೆಲವು ಸಾರಭೂತ ತೈಲಗಳು ಗಲಗ್ರಂಥಿಯ ಉರಿಯೂತವನ್ನು ನಿವಾರಿಸಲು ಸಹಾಯ ಮಾಡುವ ಆಂಟಿಮೈಕ್ರೊಬಿಯಲ್ ಮತ್ತು ಡಿಕೊಂಗಸ್ಟೆಂಟ್ ಗುಣಲಕ್ಷಣಗಳನ್ನು ಹೊಂದಿವೆ ಎಂದು ಕಂಡುಬಂದಿದೆ. ನೀವು ಈ ತೈಲಗಳ ಕೆಲವು ಹನಿಗಳನ್ನು ಡಿಫ್ಯೂಸರ್‌ಗೆ ಸೇರಿಸಬಹುದು ಅಥವಾ ಬಿಸಿನೀರಿಗೆ ಇದನ್ನು ಸೇರಿಸಿ ಆವಿಯನ್ನು ಉಸಿರಾಡಬಹುದು. ಇದನ್ನು ಕುತ್ತಿಗೆ ಅಥವಾ ಗಂಟಲಿನ ಭಾಗಕ್ಕೆ ನೇರವಾಗಿ ಅನ್ವಯಿಸಬಹುದು.

ಸಾಕಷ್ಟು ನೀರು ಕುಡಿಯಿರಿ: ಗಂಟಲಿನ ಉರಿಯೂತವನ್ನು ಕಡಿಮೆ ಮಾಡಲು ದೇಹ ಹೈಡ್ರೇಟ್‌ ಆಗಿರುವುದು ಬಹಳ ಮುಖ್ಯ. ನಿರ್ಜಲೀಕರಣವು ಉರಿಯೂತವನ್ನು ಉಲ್ಬಣಗೊಳಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಹೆಚ್ಚು ಕಷ್ಟವಾಗುತ್ತದೆ. ನಿಮ್ಮ ಲೋಳೆಯ ಪೊರೆಗಳನ್ನು ತೇವವಾಗಿಡಲು ಮತ್ತು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಸಾಕಷ್ಟು ನೀರು, ಗಿಡಮೂಲಿಕೆ ಚಹಾಗಳನ್ನು ಕುಡಿಯುತ್ತಿರಬೇಕು.

ಈ ಮನೆಮದ್ದುಗಳು ಟಾನ್ಸಿಲ್‌ ನಿವಾರಣೆಗೆ ಪರಿಣಾಮಕಾರಿ ಔಷಧಿ ಎಂದಾದ್ರೂ ಸಹ ತೀವ್ರತರದ ನೋವು ಕಾಣಿಸಿದ್ರೆ ನೀವು ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಉತ್ತಮ. ಆದರೆ ನಮ್ಮ ದೈನಂದಿನ ದಿನಚರಿಯಲ್ಲಿ ಈ ಮೇಲೆ ಹೇಳಿದ ಕ್ರಮಗಳನ್ನು ನಿರಂತರವಾಗಿ ಅನುಸರಿಸುವ ಮೂಲಕ ಗಂಟಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

Whats_app_banner