ಸಾಸಿವೆ ಎಣ್ಣೆಯಿಂದ ಎಳ್ಳೆಣ್ಣೆಯವರೆಗೆ; ಪ್ರತಿನಿತ್ಯ ಹೊಕ್ಕಳಿಗೆ ಈ ತೈಲಗಳನ್ನು ಹಚ್ಚುವುದರಿಂದ ಸಿಗುತ್ತೆ ಹಲವು ಪ್ರಯೋಜನ
ಹೊಕ್ಕುಳಕ್ಕೆ ಪ್ರತಿದಿನ ತೈಲ ಅಥವಾ ಎಣ್ಣೆಯನ್ನು ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ಸಾಸಿವೆ ಎಣ್ಣೆಯಿಂದ ಹಿಡಿದು ಎಳ್ಳೆಣ್ಣೆವರೆಗೆ ಇವು ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿನಿತ್ಯ ಹೊಕ್ಕುಳನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೆಲವು ರೀತಿಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ.
ಹೊಕ್ಕುಳ ನಮ್ಮ ದೇಹದ ಪ್ರಮುಖ ಭಾಗವಾಗಿದೆ. ಆಯುರ್ವೇದದ ಪ್ರಕಾರ, ಹೊಕ್ಕುಳಕ್ಕೆ ತೈಲ ಅಥವಾ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಹೊಕ್ಕುಳಕ್ಕೆ ಎಣ್ಣೆಯನ್ನು ಹಚ್ಚುತ್ತಿದ್ದರು. ಹೀಗೆ ಮಾಡುವುದರಿಂದ ಎಣ್ಣೆಯು ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಹೊಟ್ಟೆಯಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಣೆ ದೊರೆಯುತ್ತದೆ. ಹೊಕ್ಕುಳವು ವಾಸ್ತವವಾಗಿ ದೇಹದ ವಿಶೇಷ ಭಾಗವಾಗಿದೆ. ಇವು ಅನೇಕ ನರಗಳೊಂದಿಗೆ ಸಂಪರ್ಕ ಹೊಂದಿವೆ. ಇದಕ್ಕೆ ವಿವಿಧ ರೀತಿಯ ಎಣ್ಣೆಗಳನ್ನು ಹಚ್ಚುವುದರಿಂದ ದೇಹದಲ್ಲಿನ ಕೆಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪ್ರತಿದಿನ ಹೊಕ್ಕಳಿಗೆ ಎಣ್ಣೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಹೊಕ್ಕಳಿಗೆ ಎಣ್ಣೆ ಹಚ್ಚುವುದರ ಆರೋಗ್ಯ ಪ್ರಯೋಜನಗಳು
- ಪ್ರತಿನಿತ್ಯ ಎಣ್ಣೆ ಹಚ್ಚುವುದರಿಂದ ಹೊಕ್ಕುಳ ಶುಚಿಯಾಗುತ್ತದೆ. ಅಲ್ಲಿ ಯಾವುದೇ ರೋಗಾಣುಗಳು ರೂಪುಗೊಳ್ಳುವುದಿಲ್ಲ.
- ಎಣ್ಣೆಯಿಂದ ಮಸಾಜ್ ಮಾಡುವುದರಿಂದ ದೇಹದಲ್ಲಿ ಯಾವುದೇ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ.
- ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ಚರ್ಮಕ್ಕೆ ಪ್ರಯೋಜನವನ್ನು ನೀಡುತ್ತದೆ.
- ವಾಯು ಮತ್ತು ಅಜೀರ್ಣವನ್ನು ಹೋಗಲಾಡಿಸುತ್ತದೆ. ಹೊಕ್ಕುಳಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ಹೊಟ್ಟೆಯಲ್ಲಿನ ಜೀರ್ಣಕ್ರಿಯೆಯ ತೊಂದರೆ ದೂರವಾಗುತ್ತದೆ.
- ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು ಮತ್ತು ಸೆಳೆತ ಇರುತ್ತವೆ. ಹೀಗಾಗಿ ಎಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚುವುದರಿಂದ ಪರಿಹಾರ ಸಿಗುತ್ತದೆ. ಪ್ರತಿದಿನ ಕೆಲವು ಹನಿ ಎಣ್ಣೆಯಿಂದ ಹೊಕ್ಕುಳನ್ನು ಮಸಾಜ್ ಮಾಡುವುದರಿಂದ ಗರ್ಭಾಶಯದ ಒಳಪದರದಲ್ಲಿರುವ ನರಗಳು ವಿಶ್ರಾಂತಿ ಪಡೆಯುತ್ತವೆ. ದೇಹವನ್ನು ಉಲ್ಲಾಸಕರವಾಗಿರುತ್ತದೆ.
- ತಾಯಿ ಮತ್ತು ಮಗುವಿಗೆ ಹೊಕ್ಕುಳಿನ ಸಂಪರ್ಕವಿದೆ. ತಾಯಿಯ ಹೊಕ್ಕುಳಿನಿಂದ ಮಗುವಿನ ಹೊಕ್ಕುಳಕ್ಕೆ ಬಲವಾದ ಸಂಪರ್ಕವಿದೆ. ಅದಕ್ಕಾಗಿಯೇ ಪ್ರತಿನಿತ್ಯ ಹೊಕ್ಕಳಿಗೆ ಎಣ್ಣೆ ಹಚ್ಚಿದರೆ ಬಂಜೆತನ ಸಮಸ್ಯೆ ದೂರವಾಗುತ್ತದೆ. ಪ್ರತಿದಿನ ಹೊಕ್ಕುಳಕ್ಕೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ಹೊಕ್ಕಳಿಗೆ ಹಚ್ಚಲು ಯಾವೆಲ್ಲಾ ಎಣ್ಣೆ ಸೂಕ್ತ
ಎಳ್ಳಿನ ಎಣ್ಣೆ: ಹೊಕ್ಕಳಿಗೆ ಎಳ್ಳೆಣ್ಣೆ ಹಚ್ಚುವುದರಿಂದ ಎಲುಬುಗಳು ಬಲಗೊಳ್ಳುತ್ತವೆ ಮತ್ತು ಕೀಲುನೋವು ನಿವಾರಣೆಯಾಗುತ್ತದೆ. ಹೀಗಾಗಿ ವಾರಕ್ಕೊಮ್ಮೆಯಾದರೂ ಹೊಕ್ಕಳಿಗೆ ಎಳ್ಳೆಣ್ಣೆ ಮಸಾಜ್ ಮಾಡುವುದರಿಂದ ತುಂಬಾ ಪ್ರಯೋಜನಕಾರಿಯಾಗಿದೆ.
ಸಾಸಿವೆ ಎಣ್ಣೆ: ನೀವು ಒಣ ತುಟಿಗಳಿಂದ ಬಳಲುತ್ತಿದ್ದರೆ, ಪ್ರತಿದಿನ ಹೊಕ್ಕಳಿಗೆ ಸಾಸಿವೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಬೇಕು. ಸಾಸಿವೆ ಎಣ್ಣೆಯು ಅನೇಕ ಪ್ರಯೋಜನಕಾರಿ ಪೋಷಕಾಂಶಗಳನ್ನು ಒಳಗೊಂಡಿದೆ.
ಬೇವಿನ ಎಣ್ಣೆ: ಮುಖದಲ್ಲಿ ಮೊಡವೆಗಳು ಉಂಟಾಗುವುದಕ್ಕೆ ಈ ಎಣ್ಣೆಯಿಂದ ಪರಿಹಾರ ಪಡೆಯಬಹುದು. ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಬೇವಿನ ಎಣ್ಣೆಯನ್ನು ಹಚ್ಚಬೇಕು.
ಆಲಿವ್ ಎಣ್ಣೆ: ವಯಸ್ಸಾದಂತೆ, ಚರ್ಮದ ಮೇಲೆ ಸೂಕ್ಷ್ಮ ಗೆರೆಗಳು ಮತ್ತು ಸುಕ್ಕುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಮಾಲಿನ್ಯವು ಚರ್ಮವನ್ನು ತ್ವರಿತವಾಗಿ ವಯಸ್ಸಾಗುವಂತೆ ಮಾಡುತ್ತದೆ. ಆಲಿವ್ ಎಣ್ಣೆಯ ಕೆಲವು ಹನಿಗಳನ್ನು ಹೊಕ್ಕುಳಕ್ಕೆ ಪ್ರತಿದಿನ ಹಚ್ಚಿ ಸ್ವಲ್ಪ ಹೊತ್ತು ಮಸಾಜ್ ಮಾಡುವುದರಿಂದ ಪ್ರಯೋಜನ ಪಡೆಯಬಹುದು. ಇದು ಚರ್ಮವನ್ನು ಸುಕ್ಕುಗಳಿಂದ ಮುಕ್ತಗೊಳಿಸಲು ಸಹಾಯ ಮಾಡುತ್ತದೆ.
ತೆಂಗಿನ ಎಣ್ಣೆ: ಮುಟ್ಟಿನ ಸೆಳೆತ ಮತ್ತು ಬಂಜೆತನದಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಲು ಪ್ರತಿದಿನ ಹೊಕ್ಕಳಿಗೆ ತೆಂಗಿನೆಣ್ಣೆ ಹಚ್ಚುವುದು ಒಳ್ಳೆಯದು. ತೆಂಗಿನ ಎಣ್ಣೆ ನಮ್ಮ ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿಯಾಗಿದೆ.
ಬಾದಾಮಿ ಎಣ್ಣೆ: ಪ್ರತಿದಿನ ಬಾದಾಮಿ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ತ್ವಚೆಯು ಹೊಳೆಯುತ್ತದೆ. ಇದರೊಂದಿಗೆ ಕಣ್ಣಿನ ಸುತ್ತಲಿನ ಕಪ್ಪು ವರ್ತುಲಗಳು ಮತ್ತು ಪಫಿನೆಸ್ ಕೂಡ ನಿವಾರಣೆಯಾಗುತ್ತದೆ.
ವಿಭಾಗ