Health Tips: ಕಡಲೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ ಆಹಾರ ಪದಾರ್ಥಗಳನ್ನು ತಿನ್ನಬೇಡಿ; ಕಾರಣ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ಕಡಲೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ ಆಹಾರ ಪದಾರ್ಥಗಳನ್ನು ತಿನ್ನಬೇಡಿ; ಕಾರಣ ತಿಳಿಯಿರಿ

Health Tips: ಕಡಲೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಈ ಆಹಾರ ಪದಾರ್ಥಗಳನ್ನು ತಿನ್ನಬೇಡಿ; ಕಾರಣ ತಿಳಿಯಿರಿ

ಕಡಲೆಕಾಯಿ ತಿಂದ ನಂತರ ಸಾಮಾನ್ಯವಾಗಿ ನೀರು ಕುಡಿಯುತ್ತಾರೆ. ಆದರೆ ಇದರ ಹೊರತಾಗಿ ತಿನ್ನುವಂತಹ ಕೆಲವು ಆಹಾರ ಪದಾರ್ಥಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಕಡಲೆಕಾಯಿ ತಿಂದ ನಂತರ ಈ 5 ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಆ ಪದಾರ್ಥಗಳು ಯಾವುವು ಮತ್ತು ಯಾಕೆ ತಿನ್ನಬಾರದು ಎನ್ನುವುದಕ್ಕೆ ಕಾರಣ ತಿಳಿದುಕೊಳ್ಳಿ.

ಕಡಲೆಕಾಯಿ ತಿಂದ ನಂತರ 5 ಆಹಾರ ಪದಾರ್ಥಗಳನ್ನು ತಿನ್ನಬಾರದು. ಯಾಕೆ ಅನ್ನೋದಕ್ಕೆ ಇಲ್ಲಿದೆ ಕಾರಣ.
ಕಡಲೆಕಾಯಿ ತಿಂದ ನಂತರ 5 ಆಹಾರ ಪದಾರ್ಥಗಳನ್ನು ತಿನ್ನಬಾರದು. ಯಾಕೆ ಅನ್ನೋದಕ್ಕೆ ಇಲ್ಲಿದೆ ಕಾರಣ. (Shutterstock)

ಕಡಲೆಕಾಯಿ ಟೈಂಪಾಸ್ ಮಾಡೋಕೆ ಹೇಳಿ ಮಾಡಿಸಿದಂತಹ ತಿಂಡಿಯಾಗಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗ ಬಿಸಿ ಅಥವಾ ಹುರಿದ ಕಡಲೆಕಾಯಿ ತಿನ್ನುವ ಮಜಾನೇ ಬೇರೆ. ಕಡಲೆಕಾಯಿ ತಿನ್ನುವುದರಿಂದ ಬಾಯಿಗೆ ರುಚಿಯಷ್ಟೇ ಅಲ್ಲ, ಹಲವು ರೀತಿಯ ಆರೋಗ್ಯಕ್ಕೆ ಪ್ರಯೋಜನಗಳೂ ಇವೆ. ಆದರೆ ಸರಿಯಾದ ಕ್ರಮದಲ್ಲಿ ತಿನ್ನದಿದ್ದರೆ ಪ್ರಯೋಜನ ಪಡೆಯುವ ಬದಲು ಹಾನಿಯಾಗುತ್ತದೆ. ಕಡಲೆಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ.

 ಯಾವ ವಸ್ತುಗಳನ್ನು ಕಡಲೆಕಾಯಿ ತಿಂದ ನಂತರ ತಿನ್ನಬಾರದು ಮತ್ತೆ ಯಾಕೆ ಎಂಬುದನ್ನು ತಿಳಿದುಕೊಳ್ಳೋಣ.

ಸೋಯಾ ಆಧಾರಿತ ಪದಾರ್ಥಗಳ ಸೇವನೆ ತಪ್ಪಿಸಿ

ಕಡಲೆಕಾಯಿ ತಿಂದ ನಂತರ ನೀವು ಸೋಯಾಬೀನ್ ಅಥವಾ ಸೋಯಾ ಆಧಾರಿತ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು. ವಾಸ್ತವದಲ್ಲಿ ಇವುಗಳನ್ನು ತಿನ್ನುವುದರಿಂದ ಅಲರ್ಜಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ಈಗಾಗಲೇ ಯಾವುದೇ ರೀತಿಯ ಅಲರ್ಜಿ ಹೊಂದಿರುವವರು ಕಡಲೆಕಾಯಿ ತಿಂದ ಒಂದು ಅಥವಾ ಎರಡು ಗಂಟೆಗಳ ನಂತರ ಸೋಯಾ ಆಧಾರಿತ ಉತ್ಪನ್ನವನ್ನು ಸೇವಿಸಬೇಕು.

ಕಡಲೆಕಾಯಿ ತಿಂದ ತಕ್ಷಣ ಎಳ್ಳು ತಿನ್ನಬೇಡಿ

ಕಡಲೆಕಾಯಿ ತಿಂದ ನಂತರ ನೀವು ಎಳ್ಳು ಅಥವಾ ಎಳ್ಳಿನಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಸಾಮಾನ್ಯವಾಗಿ ಎಳ್ಳು ಮತ್ತು ಕಡಲೆಕಾಯಿಂದ ಮಾಡಿದ ವಸ್ತುಗಳನ್ನು ಚಳಿಗಾಲದಲ್ಲಿ ಸಾಕಷ್ಟು ತಿನ್ನಲಾಗುತ್ತದೆ. ಆದರೆ ಕಡಲೆಕಾಯಿ ಮತ್ತು ಎಳ್ಳಿನ ಬೀಜಗಳನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ಅಲ್ಲದೆ, ಕಡಲೆಕಾಯಿ ತಿಂದ ತಕ್ಷಣ ಎಳ್ಳಿನಿಂದ ತಯಾರಿಸಿದ ವಸ್ತುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಇವು ದೇಹದಲ್ಲಿ ಅಲರ್ಜಿ ಸಮಸ್ಯೆಯನ್ನು ಹೆಚ್ಚಿಸಬಹುದು.

ಚಾಕೊಲೇಟ್ ತಿನ್ನುವುದನ್ನು ತಪ್ಪಿಸಿ

ಕಡಲೆಕಾಯಿ ತಿಂದ ನಂತರ ಚಾಕೊಲೇಟ್ ತಿನ್ನುವುದನ್ನು ತಪ್ಪಿಸಬೇಕು. ಬೀಜಗಳ ರೂಪದಲ್ಲಿ ಕಡಲೆಕಾಯಿಯನ್ನು ಹೊಂದಿರುವ ಕೆಲವು ಚಾಕೊಲೇಟ್ ಗಳನ್ನು ತಿಂದರೂ ಅಲರ್ಜಿ ಇರುವವರಿಗೆ ಹಾನಿಕಾರಕವಾಗುತ್ತದೆ. ಇದಲ್ಲದೆ, ಚಾಕೊಲೇಟ್ ಅಥವಾ ಚಾಕೊಲೇಟ್ ಆಧಾರಿತ ಉತ್ಪನ್ನಗಳನ್ನು ಹುರಿದ ಕಡಲೆಕಾಯಿಯೊಂದಿಗೆ ಅಥವಾ ಕಡಲೆಕಾಯಿ ತಿಂದ ಸುಮಾರು ಒಂದು ಗಂಟೆಯೊಳಗೆ ತಿನ್ನುವುದು ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ.

ಈ ಹಣ್ಣುಗಳನ್ನು ಕಡಲೆಕಾಯಿ ತಿಂದ ನಂತರ ತಿನ್ನಬೇಡಿ

ಕಡಲೆಕಾಯಿ ತಿಂದ ನಂತರ ನಿಂಬೆ, ಕಿತ್ತಳೆ, ಕಿವಿ, ದ್ರಾಕ್ಷಿ ಮುಂತಾದ ಸಿಟ್ರಸ್ ಹಣ್ಣುಗಳನ್ನು ತಿನ್ನದಿರುವುದು ಒಳ್ಳೆಯದು. ಈ ಸಂಯೋಜನೆಯು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ವಿಶೇಷವಾಗಿ ಅಲರ್ಜಿ ಸಮಸ್ಯೆ ಇರುವವರು ಕಡಲೆಕಾಯಿ ತಿಂದ ನಂತರ ಸಿಟ್ರಸ್ ಹಣ್ಣುಗಳನ್ನು ತಿನ್ನಬಾರದು. ಇಲ್ಲದಿದ್ದರೆ, ಇದು ಗಂಟಲು ನೋವು, ಕಿರಿಕಿರಿ ಮತ್ತು ಕೆಮ್ಮಿಗೆ ಕಾರಣವಾಗಬಹುದು.

ಐಸ್ ಕ್ರೀಮ್ ಸೇವನೆಯೂ ಒಳ್ಳೆಯದಲ್ಲ

ಕಡಲೆಕಾಯಿ ಸಾಕಷ್ಟು ಎಣ್ಣೆಯನ್ನು ಹೊಂದಿರುತ್ತದೆ. ಅದೇ ಸಮಯದಲ್ಲಿ ಅದರ ಪರಿಣಾಮವು ಬಿಸಿಯಾಗಿರುತ್ತದೆ, ಆದರೆ ಐಸ್ ಕ್ರೀಮ್ ತಂಪಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಡಲೆಕಾಯಿ ಅಥವಾ ಕಡಲೆಕಾಯಿ ಚಿಕ್ಕಿ ತಿಂದ ತಕ್ಷಣ ಐಸ್ ಕ್ರೀಮ್ ತಿನ್ನುವುದನ್ನು ತಪ್ಪಿಸಬೇಕು. ಐಸ್ ಕ್ರೀಮ್ ಸೇವಿಸಿದ ನಂತರ ಗಂಟಲು ನೋವು, ಕಿರಿಕಿರಿ ಅಥವಾ ಗಂಟಲಿನಲ್ಲಿ ಕಫ ಉಂಟಾಗಬಹುದು.

(ಗಮನಿಸಿ: ಇದು ಕೆಲವೊಂದು ತಜ್ಞರ ವರದಿಗಳನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)

Whats_app_banner