New Year: ಹೊಸ ವರ್ಷದಿಂದ ಲೈಫ್‌ಸ್ಟೈಲ್‌ ಚೇಂಜ್‌ ಮಾಡ್ಕೋಬೇಕು, ಫಿಟ್‌ ಅಂಡ್‌ ಫೈನ್‌ ಆರ್ಗಿಬೇಕು ಅಂತ ಯೋಚಿಸೋರಿಗಾಗಿ ಇಲ್ಲಿದೆ 7 ಸಲಹೆ
ಕನ್ನಡ ಸುದ್ದಿ  /  ಜೀವನಶೈಲಿ  /  New Year: ಹೊಸ ವರ್ಷದಿಂದ ಲೈಫ್‌ಸ್ಟೈಲ್‌ ಚೇಂಜ್‌ ಮಾಡ್ಕೋಬೇಕು, ಫಿಟ್‌ ಅಂಡ್‌ ಫೈನ್‌ ಆರ್ಗಿಬೇಕು ಅಂತ ಯೋಚಿಸೋರಿಗಾಗಿ ಇಲ್ಲಿದೆ 7 ಸಲಹೆ

New Year: ಹೊಸ ವರ್ಷದಿಂದ ಲೈಫ್‌ಸ್ಟೈಲ್‌ ಚೇಂಜ್‌ ಮಾಡ್ಕೋಬೇಕು, ಫಿಟ್‌ ಅಂಡ್‌ ಫೈನ್‌ ಆರ್ಗಿಬೇಕು ಅಂತ ಯೋಚಿಸೋರಿಗಾಗಿ ಇಲ್ಲಿದೆ 7 ಸಲಹೆ

ಹೊಸ ವರ್ಷದಿಂದ ನಾನು ಬದಲಾಗಬೇಕು, ನನ್ನ ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮಕ್ಕೆ ಒತ್ತು ನೀಡಬೇಕು ಎಂದು ನೀವು ಅಂದುಕೊಳ್ಳುತ್ತಿದ್ದರೆ, ನಿಮಗಾಗಿ ಇಲ್ಲಿದೆ 7 ಸಲಹೆ. ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿದ್ರೆ ನೀವು ಬದಲಾಗೋದು ಖಂಡಿತ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಹಳೆ ವರ್ಷ ಕಳೆದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಇಂದು ಹೊಸ ವರ್ಷದ ಮೊದಲ ದಿನ. ಪ್ರತಿ ವರ್ಷವು ಹೊಸವರ್ಷ ಬಂದಾಗ ಬದುಕಿನಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳೋಣ ಎಂದು ಎಲ್ಲರೂ ಬಯಸವುದು ಸಹಜ. ಅದಕ್ಕಾಗಿ ನಿರ್ಣಯಗಳನ್ನೂ ತೆಗೆದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಆರೋಗ್ಯ ಹಾಗೂ ಯೋಗಕ್ಷೇಮದ ಮೇಲೆ ಗಮನ ಹೆಚ್ಚು ಹರಿದಿರುವುದು ಸುಳ್ಳಲ್ಲ. ಕೊರೊನಾ ಕಾಲಘಟ್ಟದ ನಂತರ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಜನರು ಹೆಚ್ಚು ಒಲವು ತೋರುತ್ತಿದ್ದಾರೆ. ಆರೋಗ್ಯ ಚೆನ್ನಾಗಿರಬೇಕು ಎಂದರೆ ಕೇವಲ ದೈಹಿಕ ಶ್ರಮದಿಂದ ಮಾತ್ರವಲ್ಲ ಸಾಧ್ಯವಿಲ್ಲ. ಆರೋಗ್ಯದ ವಿಚಾರಕ್ಕೆ ಬಂದಾಗ ದೈಹಿಕ ವಿಷಯ ಮಾತ್ರವಲ್ಲ, ಮಾನಸಿಕ ಆರೋಗ್ಯವೂ ಮುಖ್ಯವಾಗುತ್ತದೆ.

ಮಾರ್ನಿಂಗ್‌ ವಾಕ್‌, ಯೋಗ, ಆರೋಗ್ಯಕರ ಆಹಾರ ಈ ಎಲ್ಲವೂ ನಮ್ಮ ದೈನಂದಿನ ಯೋಗಕ್ಷೇಮಕ್ಕೆ ಬಹಳ ಮುಖ್ಯ. ಸಣ್ಣಪುಟ್ಟ ಬದಲಾವಣೆಯೂ ಕೂಡ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವಂತೆ ಮಾಡುತ್ತದೆ. ಅಲ್ಲದೆ ಈ ಚಟುವಟಿಕೆಗಳಿಗೆ ಸಮಯ ನೀಡುವುದು 2024ರ ಈ ಹೊಸವರ್ಷ ನಿಮ್ಮ ಬದುಕಿನಲ್ಲಿ ಹೊಸ ಆಶಯಗಳನ್ನು ತುಂಬಿರುವಂತೆ ಮಾಡುವುದು ಸುಳ್ಳಲ್ಲ.

ಹೊಸ ವರ್ಷದಲ್ಲಿ ನೀವು ಬದುಕಿನಲ್ಲಿ ಮಾಡಿಕೊಳ್ಳಬಹುದಾದ 7 ಸಣ್ಣ ಬದಲಾವಣೆಗಳು ಹೀಗಿವೆ. ಇವು ನಮ್ಮ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುವಂತೆ ಮಾಡುವುದು ಸುಳ್ಳಲ್ಲ.

ವಾಕ್‌ ಮಾಡಿ: ಹೊಸ ವರ್ಷದಲ್ಲಿ ನೀವು ಮೊದಲು ದೂರ ಮಾಡಬೇಕಿರುವುದು ಆಲಸ್ಯ. ವಾಕಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿ. ಇದು ಉದ್ದದ ಸ್ಟ್ರೀಟ್‌, ಪಾರ್ಕ್‌, ಟ್ರೆಡ್‌ಮಿಲ್‌ ಹೀಗೆ ಎಲ್ಲಿಯಾದರೂ ಸೈ. ಪ್ರತಿದಿನ ಅರ್ಧ ಗಂಟೆ ವ್ಯಾಯಾಮ ಮಾಡಿ. ಇದರಿಂದ ನಮ್ಮ ಕಾರ್ಡಿಯೊವೆಸ್ಕುಲಾರ್‌ ಹೆಲ್ತ್‌ ಹಾಗೂ ಮಾನಸಿಕ ಯೋಗಕ್ಷೇಮ ಸುಧಾರಿಸುತ್ತದೆ.

ಇದನ್ನೂ ಓದಿ: Life Hacks: ಹೊಸ ವರ್ಷದಲ್ಲಿ ಲೈಫ್‌ ಈಸಿ ಆಗಿರ್ಬೇಕಾ; ನಿಮಗಾಗಿ ಇಲ್ಲಿದೆ ಒಂದಿಷ್ಟು ಸಿಂಪಲ್‌ ಟ್ರಿಕ್ಸ್‌, ಫಾಲೋ ಮಾಡಿ

ಮೈಂಡ್‌ಫುಲ್‌ನೆಸ್:‌ ಅನಾರೋಗ್ಯಕರ ಆಹಾರ ಸೇವಿಸುವುದರಿಲ್ಲ ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಆರೋಗ್ಯಕರ ಆಹಾರ ಸೇವೆನೆಗೆ ಒತ್ತು ನೀಡಿ. ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಿ. ಇವು ಒಟ್ಟಾರೆ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ.

ಸಾಕಷ್ಟು ನೀರು ಕುಡಿಯುವುದು: ನೀರಿಗೆ ರುಚಿಯಿಲ್ಲ, ನಿಜ. ಆದರೆ ನೀರನ್ನು ರುಚಿಸಿಕೊಂಡು ಕುಡಿಯವುದು ಆರೋಗ್ಯಕ್ಕೆ ಬಹಳ ಮುಖ್ಯ. ಇದು ಸುಸ್ಥಿರ ಚೈತನ್ಯಕ್ಕೂ ಅವಶ್ಯ. ಇದು ಮಾನಸಿಕ ಯೋಗಕ್ಷೇಮವನ್ನೂ ಸುಧಾರಿಸುತ್ತದೆ. ದೇಹಕ್ಕೆ ಅಗತ್ಯ ಇರುವಷ್ಟು ನೀರು ಕುಡಿಯುವುದರಿಂದ ದೇಹದಲ್ಲಿನ ಹಲವು ಚಟುವಟಿಕೆಗಳು ಸುಧಾರಿಸುತ್ತವೆ. ಜೀರ್ಣಕ್ರಿಯೆ ವೃದ್ಧಿಯಾಗುತ್ತದೆ. ದೇಹ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ, ಅರಿವಿನ ಸಾಮರ್ಥ್ಯವೂ ವೃದ್ಧಿಯಾಗುತ್ತದೆ. ಇದು ದೇಹದಲ್ಲಿನ ವಿಷಾಂಶ ಹೊರ ಹೋಗಲು ಸಹಕಾರಿ.

ಗುಣಮಟ್ಟದ ನಿದ್ದೆ: ನಿದ್ದೆ ನಾವೆಲ್ಲರೂ ಮಾಡುತ್ತೇವೆ. ಆದರೆ ಎಷ್ಟು ಜನ ಗುಣಮಟ್ಟದ ನಿದ್ದೆ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆ. ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ಯಾವುದೇ ಕಿರಿಕಿರಿ, ಅಡಚಣೆಯಿಲ್ಲದೆ ನಿದ್ದೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದು ನಮ್ಮ ಅರಿವಿನ ಸಾಮರ್ಥ್ಯ ಸುಧಾರಿಸಲು, ಮನಸ್ಥಿತಿ ಸುಧಾರಣೆಗೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯವಾಗುತ್ತದೆ. ಸಮರ್ಪಕ ನಿದ್ದೆಯಿಂದ ಗಮನಶಕ್ತಿ ಹೆಚ್ಚುತ್ತದೆ, ನೆನಪಿನ ಶಕ್ತಿ ಸುಧಾರಿಸುತ್ತದೆ ಹಾಗೂ ಪ್ರಾಬ್ಲಂ ಸಾಲ್ವಿಂಗ್‌ ಸಿಲ್ಕ್‌ ವೃದ್ಧಿಯಾಗುತ್ತದೆ.

ದೀರ್ಘ ಉಸಿರಾಟ: ದೇಹವನ್ನು ರಿಲ್ಯಾಕ್ಸ್‌ ಮಾಡುವುದು ಹಲವು ಕಾರಣಕ್ಕೆ ಅವಶ್ಯ. ಆ ಕಾರಣಕ್ಕೆ ದೀರ್ಘ ಉಸಿರಾಟವನ್ನು ಅಭ್ಯಾಸ ಮಾಡಿ. ಧ್ಯಾನ ಮಾಡುವುದು ಕೂಡ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ನೆರವಾಗುತ್ತದೆ. ಇದು ಒತ್ತಡ ನಿಯಂತ್ರಣಕ್ಕೂ ಬಹಳ ಮುಖ್ಯ. ಒಟ್ಟಾರೆ ಆರೋಗ್ಯಕರ ಜೀವನಶೈಲಿಗೆ ಧಾನ್ಯ, ದೀರ್ಘ ಉಸಿರಾಟದಂತಹ ತಂತ್ರಗಳು ಮುಖ್ಯವಾಗುತ್ತದೆ.

ಸ್ಕ್ರೀನ್‌ ಟೈಮ್‌ ಸಂಪೂರ್ಣ ಕಡಿಮೆ ಮಾಡಿ: ಹೆಚ್ಚಿದ ಸ್ಕ್ರೀನ್‌ಟೈಮ್‌ನಿಂದ ಹಲವು ಸಮಸ್ಯೆಗಳು ಕಾಡುತ್ತಿವೆ. ಅದರಲ್ಲಿ ನಿದ್ದೆಯ ಕೊರತೆ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿರುವ ನಿದ್ದೆಯ ಸಮಸ್ಯೆಗೆ ಮೂಲ ಕಾರಣ ಸ್ಕ್ರೀನ್‌ ಟೈಮ್‌. ರಾತ್ರಿ ಮಲಗುವ ಮುನ್ನ ಮೊಬೈಲ್‌ ನೋಡುವ ಅಭ್ಯಾಸವನ್ನು ತ್ಯಜಿಸಿ. ಸಾಧ್ಯವಾದಷ್ಟು ರಾತ್ರಿ ಮಲಗಲು ಅರ್ಧ ಗಂಟೆ ಇರುವಾಗ ಮೊಬೈಲ್‌ ಅನ್ನು ಬದಿಗಿಡಿ.

ಸಾಮಾಜಿಕವಾಗಿ ತೆರೆದುಕೊಳ್ಳಿ: ಸಾಮಾಜಿಕವಾಗಿ ನಮ್ಮನ್ನು ನಾವು ತೆರೆದುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ. ಇದು ವ್ಯಕ್ತಿಗಳ ಸಂಬಂಧ ಹಾಗೂ ಸಾಮಾಜಿಕ ಬಂಧ ವೃದ್ಧಿಯಾಗಲು ಕಾರಣವಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ ಸಾಮಾಜಿಕವಾಗಿ ತೆರೆದುಕೊಳ್ಳುವುದರಿಂದ ನಮ್ಮ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ. ಇದು ಒತ್ತಡ ನಿರ್ವಹಣೆಗೂ ಮದ್ದು.

Whats_app_banner