ಈ ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದೀರಾ: ತ್ವರಿತ ಪರಿಹಾರಕ್ಕೆ ರಸಂ ಸವಿಯಿರಿ, ಇದನ್ನು ತಯಾರಿಸುವುದು ಹೇಗೆಂದು ಇಲ್ಲಿ ತಿಳಿದುಕೊಳ್ಳಿ-health tips rasam for monsoon how to make rasam recipes rasam is beneficial for health rasam recipe prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಈ ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದೀರಾ: ತ್ವರಿತ ಪರಿಹಾರಕ್ಕೆ ರಸಂ ಸವಿಯಿರಿ, ಇದನ್ನು ತಯಾರಿಸುವುದು ಹೇಗೆಂದು ಇಲ್ಲಿ ತಿಳಿದುಕೊಳ್ಳಿ

ಈ ಮಳೆಗಾಲದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದೀರಾ: ತ್ವರಿತ ಪರಿಹಾರಕ್ಕೆ ರಸಂ ಸವಿಯಿರಿ, ಇದನ್ನು ತಯಾರಿಸುವುದು ಹೇಗೆಂದು ಇಲ್ಲಿ ತಿಳಿದುಕೊಳ್ಳಿ

ಮಳೆಗಾಲದ ಋತುವಿನಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಹೀಗಾಗಿ ಆಹಾರದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರವನ್ನು ಸೇವಿಸುವುದರಿಂದ ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಬಹುದು. ರಸಂ ಖಾದ್ಯವು ಮಾನ್ಸೂನ್ ಸಮಯದಲ್ಲಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ರಸಂ ಖಾದ್ಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕೆಮ್ಮು ಮತ್ತು ಶೀತದಿಂದ ಪರಿಹಾರವನ್ನು ನೀಡುತ್ತದೆ.
ರಸಂ ಖಾದ್ಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕೆಮ್ಮು ಮತ್ತು ಶೀತದಿಂದ ಪರಿಹಾರವನ್ನು ನೀಡುತ್ತದೆ.

ಮಳೆಗಾಲ ಬಂತೆಂದರೆ ಬಹುತೇಕ ಮಂದಿ ಸಂತಪಡುತ್ತಾರೆ. ಈ ಬಾರಿ ಬೇಸಿಗೆಯ ಶಾಖ ಹೆಚ್ಚಿದ್ದರಿಂದ ಮಳೆಗಾಗಿ ಜನರು ಕಾತರದಿಂದ ಕಾಯುತ್ತಿದ್ದರು. ಮಳೆ ಬಂದ ಕೂಡಲೇ ಸಂತಸಗೊಂಡ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದರು. ಮಳೆಗಾಲದಿಂದ ಪರಿಸರ ಹಚ್ಚ ಹಸಿರಾಗಿ ಕಾಣುವುದು ಮಾತ್ರವಲ್ಲದೆ ಹವಾಮಾನವು ಕೂಲ್ ಕೂಲ್ ಆಗಿರುತ್ತದೆ. ಆದರೆ, ಮಳೆಗಾಲದಲ್ಲಿ ಸೋಂಕುಗಳು ಉಲ್ಬಣಗೊಳ್ಳುತ್ತದೆ. ಮಾನ್ಸೂನ್ ಸಮಯದಲ್ಲಿ ಗಾಳಿಯಲ್ಲಿ ಹೆಚ್ಚಿನ ತೇವಾಂಶ ಇರುವುದರಿಂದ ಹಲವಾರು ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಇದು ಹೆಚ್ಚು ಸೋಂಕುಗಳಿಗೆ ಕಾರಣವಾಗುತ್ತದೆ.

ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಹೀಗಾಗಿ ಆಹಾರದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆರೋಗ್ಯವನ್ನು ರಕ್ಷಿಸುವಲ್ಲಿ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವ ಆಹಾರವನ್ನು ಸೇವಿಸುವುದರಿಂದ ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡಬಹುದು.

ಈ ಋತುವಿನಲ್ಲಿ ಸೇವಿಸಲೇಬೇಕಾದ ಖಾದ್ಯವೆಂದರೆ ರಸಂ. ದಕ್ಷಿಣ ಭಾರತೀಯರು ಹೆಚ್ಚಾಗಿ ತಯಾರಿಸುವ ರಸಂ ಖಾದ್ಯವು ಮಾನ್ಸೂನ್ ಸಮಯದಲ್ಲಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಈ ಖಾದ್ಯವನ್ನು ಹೆಚ್ಚು ಗಡಿಬಿಡಿಯಿಲ್ಲದೆ, ಶ್ರಮವಿಲ್ಲದೆ ಬಹಳ ಸುಲಭವಾಗಿ ತಯಾರಿಸಬಹುದು. ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ತ್ವರಿತವಾಗಿ ಈ ಖಾದ್ಯವನ್ನು ತಯಾರಿಸಿ ಅವರಿಗೆ ಉಣಬಡಿಸಬಹುದು.

ಕೇವಲ 5 ನಿಮಿಷಗಳಲ್ಲಿ ತಯಾರಾಗುವ ಈ ಪಾಕವಿಧಾನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಕೆಮ್ಮು ಮತ್ತು ಶೀತದಿಂದ ಪರಿಹಾರವನ್ನು ನೀಡುತ್ತದೆ. ರಸಂ ಖಾದ್ಯಕ್ಕೆ ಹುಣಸೆಹಣ್ಣು ಮತ್ತು ಕರಿಬೇವಿನ ಎಲೆಗಳನ್ನು ಬಳಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯಲು ಕಾರಣವಾಗುತ್ತದೆ. ಒಟ್ಟಿನಲ್ಲಿ ದೇಹವನ್ನು ಗಟ್ಟಿಗೊಳಿಸಲು ರಸಂ ಬಹಳ ಪ್ರಯೋಜನಕಾರಿ.

ರೋಗನಿರೋಧಕ ಶಕ್ತಿ ಹೆಚ್ಚಿಸುವ ರಸಂ ಮಾಡುವುದು ಹೇಗೆ? ಇಲ್ಲಿ ತಿಳಿಯಿರಿ

ಬೇಕಾಗುವ ಸಾಮಾಗ್ರಿಗಳು: ಶುಂಠಿ- ಒಂದು ಸಣ್ಣ ತುಂಡು, ಟೊಮ್ಯಾಟೋ 4 ರಿಂದ 5, ಹುಣಸೆ ಹಣ್ಣು- ಸ್ವಲ್ಪ, ಕೊತ್ತಂಬರಿ ಸೊಪ್ಪು- ಸ್ವಲ್ಪ, ಜೀರಿಗೆ- ಅರ್ಧ ಟೀ ಚಮಚ, ಸಾಸಿವೆ- ಅರ್ಧ ಟೀ ಚಮಚ, ಬೆಳ್ಳುಳ್ಳಿ- ಎರಡರಿಂದ ಮೂರು ಎಸಳು, ಕರಿಬೇವಿನ ಎಲೆ- 1, ರಸಂ ಪುಡಿ- ಸ್ವಲ್ಪ, ಖಾರದ ಪುಡಿ- ಸ್ವಲ್ಪ, ಅಡುಗೆ ಎಣ್ಣೆ- ಒಗ್ಗರಣೆಗೆ, ರುಚಿಗೆ ತಕ್ಕಷ್ಟು ಉಪ್ಪು, ಇಂಗು- ಸ್ವಲ್ಪ

ಮಾಡುವ ವಿಧಾನ: ಮೊದಲಿಗೆ ಟೊಮೆಟೋವನ್ನು ಬೇಯಿಸಿ ಅದರ ಪ್ಯೂರ್ ಮಾಡಿಟ್ಟುಕೊಳ್ಳಿ. ಅಂದರೆ ಬೇಯಿಸಿದ ಟೊಮೆಟೋವನ್ನು ಮಿಕ್ಸಿಯಲ್ಲಿ ರುಬ್ಬಬೇಕು. ಮಿಕ್ಸಿಯಲ್ಲಿ ರುಬ್ಬುವ ವೇಳೆ ಸ್ವಲ್ಪ ಜೀರಿಗೆಯನ್ನು ಸೇರಿಸಿ. ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ ಟೊಮೆಟೋ ಪ್ಯೂರ್ ಮಿಶ್ರಣವನ್ನು ಹಾಕಿ ಬೇಯಿಸಲು ಬಿಡಿ. ಈ ವೇಳೆ ರಸಂ ಪುಡಿ, ಖಾರದ ಪುಡಿ, ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣಿನ ರಸ, ಜಜ್ಜಿದ ಶುಂಠಿಯನ್ನು ಒಂದೊಂದಾಗಿ ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಅಡುಗೆ ಎಣ್ಣೆ ತೆಗೆದುಕೊಂಡು ಅದಕ್ಕೆ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ, ಇಂಗು, ಸಾಸಿವೆ, ಕರಿಬೇವಿನ ಎಲೆಗಳನ್ನು ಹಾಕಿ. ಸಾಸಿವೆ ಸಿಡಿದ ನಂತರ ಕುದಿಯುತ್ತಿರುವ ರಸಂನ ಮಿಶ್ರಣಕ್ಕೆ ಒಗ್ಗರಣೆ ಸೇರಿಸಿ, ಸ್ಟೌವ್ ಆಫ್ ಮಾಡಿ. ಇದನ್ನು ಬಿಸಿ ಬಿಸಿ ಅನ್ನದೊಂದಿಗೆ ಬಡಿಸಬಹುದು. ಅಥವಾ ಹಾಗೆಯೇ ಕುಡಿಯಬಹುದು.