ಇದ್ದಕ್ಕಿದ್ದಂತೆ ಮೂತ್ರ ಬರೋದು ನಿಂತು, ನೋವು ಶುರುವಾಗೋದೇಕೆ? ಮೂತ್ರಕೋಶದ ಸಮಸ್ಯೆ ಬಗ್ಗೆ ಡಾ. ಅಂಜನಪ್ಪ ಟಿಎಚ್ ನೀಡಿದ ಸಲಹೆ ಇಲ್ಲಿದೆ-health tips reason urine problem bladder problem solution of continuous urination gastroenterologist dr anjanappa th ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಇದ್ದಕ್ಕಿದ್ದಂತೆ ಮೂತ್ರ ಬರೋದು ನಿಂತು, ನೋವು ಶುರುವಾಗೋದೇಕೆ? ಮೂತ್ರಕೋಶದ ಸಮಸ್ಯೆ ಬಗ್ಗೆ ಡಾ. ಅಂಜನಪ್ಪ ಟಿಎಚ್ ನೀಡಿದ ಸಲಹೆ ಇಲ್ಲಿದೆ

ಇದ್ದಕ್ಕಿದ್ದಂತೆ ಮೂತ್ರ ಬರೋದು ನಿಂತು, ನೋವು ಶುರುವಾಗೋದೇಕೆ? ಮೂತ್ರಕೋಶದ ಸಮಸ್ಯೆ ಬಗ್ಗೆ ಡಾ. ಅಂಜನಪ್ಪ ಟಿಎಚ್ ನೀಡಿದ ಸಲಹೆ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಮೂತ್ರದ ಸಮಸ್ಯೆ ವಯಸ್ಸಾದವರನ್ನು ಮಾತ್ರವಲ್ಲ ಯುವ ಜನತೆಯನ್ನೂ ಕಾಡುತ್ತಿದೆ. ಪದೇ ಪದೇ ಮೂತ್ರ ಬರುವುದು, ಕೆಲವೊಮ್ಮೆ ಮೂತ್ರ ಮಾಡಲು ಸಾಧ್ಯವಾಗದೇ ನೋವು ಶುರುವಾಗುವುದು ಇಂತಹ ಲಕ್ಷಣಗಳು ಕಾಣಿಸುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣ ಏನು ಎಂಬುದನ್ನು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಅಂಜನಪ್ಪ ಟಿಎಚ್‌ ಅವರು ನೀಡಿರುವ ಸಲಹೆ ಹೀಗಿದೆ.

ಡಾ. ಅಂಜನಪ್ಪ ಟಿಎಚ್‌ (ಬಲಚಿತ್ರ)
ಡಾ. ಅಂಜನಪ್ಪ ಟಿಎಚ್‌ (ಬಲಚಿತ್ರ)

ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿ ಕೂಡ ಒಂದು. ಕಿಡ್ನಿಯು ಮೂತ್ರದ ಮೂಲಕ ದೇಹದಲ್ಲಿರುವ ವಿಷಾಂಶವನ್ನು ಹೊರ ಹಾಕುತ್ತದೆ. ಸಾಮಾನ್ಯ ಮನುಷ್ಯ ಒಂದು ದಿನದಲ್ಲಿ ಹಗಲಿನ ಹೊತ್ತು 4 ರಿಂದ 5 ಬಾರಿ ಮೂತ್ರ ಮಾಡಬಹುದು. ರಾತ್ರಿ ಹೊತ್ತು ಒಂದು ಬಾರಿ ಮೂತ್ರ ಮಾಡುತ್ತಾನೆ. ಆದರೆ ಮಧುಮೇಹಿಗಳಿಗೆ ಪದೇ ಪದೇ ಮೂತ್ರ ಬರುತ್ತದೆ. ಈ ಸಮಸ್ಯೆ ಇಲ್ಲದೆಯೂ ಕೆಲವರಿಗೆ ಪದೇ ಪದೇ ಮೂತ್ರದ ಸಮಸ್ಯೆ ಕಾಡುತ್ತದೆ. ಕೆಲವರಿಗೆ ಮೂತ್ರ ಮಾಡಲು ಆಗದೇ ಸಿಕ್ಕಾಪಟ್ಟೆ ನೋವು ಕಾಣಿಸುತ್ತದೆ. ಈ ಸಮಸ್ಯೆಗೆ ಕಾರಣವೇನು, ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ಏನು ಹೇಳುತ್ತಾರೆ, ಇದಕ್ಕೆ ಪರಿಹಾರ ಎಂಬುದನ್ನು ವಿಡಿಯೊವೊಂದರಲ್ಲಿ ವಿವರಿಸಿದ್ದಾರೆ ಡಾ. ಅಂಜನಪ್ಪ ಟಿಎಸ್.

ಕಿಡ್ನಿಯ ಕಾರ್ಯಗಳು, ಸಾಮರ್ಥ್ಯ

ಮನುಷ್ಯನ ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ. ಕಿಡ್ನಿಯ ಕೆಲಸ ನಮ್ಮ ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುವುದು. ಒಬ್ಬ ಮನುಷ್ಯನ ಕಿಡ್ನಿಯಲ್ಲಿ 250 ಮಿಲಿ ಲೀಟರ್‌ನಷ್ಟು ಮೂತ್ರ ಸೇರಿದಾಗ ಮೂತ್ರ ಮಾಡಬೇಕು ಅನ್ನಿಸುತ್ತದೆ, ಆದರೆ ಆ ಹೊತ್ತಿಗೆ ಮೂತ್ರ ಮಾಡಲು ಸಾಧ್ಯವಿಲ್ಲ ಎಂದಾದಾಗ ನಾವು ಅದನ್ನು ತಡೆದುಕೊಳ್ಳಬಹುದು. ಒಬ್ಬ ಮನುಷ್ಯನ ಮೂತ್ರಕೋಶದ ಸಾಮರ್ಥ್ಯ 500 ಮಿಲಿ ಲೀಟರ್‌. ಅದಾದ ಮೇಲೆ 600 ಮಿಲಿ ಮೀಟರ್‌, 700 ಮಿಲಿ ಲೀಟರ್ ಮೂತ್ರಕೋಶದಲ್ಲಿ ಮೂತ್ರ ತುಂಬಿದ್ರೆ ವಿಪರೀತ ನೋವು ಶುರುವಾಗುತ್ತದೆ. ಅದಕ್ಕೆ ವೈದ್ಯಕೀಯ ಭಾಷೆಯಲ್ಲಿ ಅಕ್ಯೂಟ್ ರಿಟೆಂಷನ್ ಆಫ್ ಯೂರಿನ್ ಎಂದು ಕರೆಯಲಾಗುತ್ತದೆ.

ಮೂತ್ರದ ಸಮಸ್ಯೆ ಕಾಣಿಸಲು ಕಾರಣ

ಪದೇ ಪದೇ ಮೂತ್ರದ ಬರಲು ಕಾರಣಗಳು ಹಲವು. ಸಕ್ಕರೆ ಕಾಯಿಲೆ ಇರುವವರಿಗೂ ಪದೇ ಪದೇ ಮೂತ್ರ ಬರುತ್ತದೆ. ಮೂತ್ರಕೋಶದ ಹಿಂದೆ ಪ್ರಾಸ್ಟೇಟ್ ಎಂಬ ಒಂದು ಗ್ರಂಥಿ ಇರುತ್ತದೆ. ವಯಸ್ಸಾದಂತೆ ಆ ಗ್ರಂಥಿ ದೊಡ್ಡದಾಗುತ್ತಾ ಹೋಗುತ್ತದೆ. ಇದಕ್ಕೆ ಬಿನೈನ್‌ ಹೈಪೊಟ್ರೋಪಿ ಎಂದು ಕರೆಯುತ್ತಾರೆ. ಬಿನೈನ್‌ ಹೈಪೊಟ್ರೋಪಿಯಲ್ಲಿ ಮೂರು ರೋಗಲಕ್ಷಣಗಳು ಕಾಣಿಸುತ್ತವೆ. ಆ ಮೂರು ಯಾವುದು ಅಂದರೆ:

1. ಅರ್ಜೆನ್ಸಿ: ಮೂತ್ರ ತಡೆದುಕೊಳ್ಳಲು ಸಾಧ್ಯವಾಗದೇ ಇರುವುದು.

2. ಫ್ರಿಕ್ವೆನ್ಸಿ: ಪದೇ ಪದೇ ಮೂತ್ರಕ್ಕೆ ಹೋಗಬೇಕು ಎನ್ನಿಸುವುದು.

3. ಹೆಸಿಟೆನ್ಸಿ: ಮೂತ್ರ ಮಾಡಲು ಸಾಧ್ಯವೇ ಇರುವುದು, ಅಂದರೆ ಮೂತ್ರ ಬರಲು ಕಷ್ಟಪಡುವುದು. ಈ ಮೂರು ಲಕ್ಷಣಗಳು ಇದ್ರೆ ಅವರ ಪ್ರಾಸ್ಟೇಟ್ ದೊಡ್ಡದಾಗಿದೆ ಎಂದು ಅರ್ಥ.

ಮೂತ್ರ ಕಟ್ಟಿಕೊಳ್ಳುವ ಸಮಸ್ಯೆಗೆ ಚಿಕಿತ್ಸೆ

ಮೂತ್ರಕೋಶದ ಬಳಿ ಪ್ರಾಸ್ಟೇಟ್ ದೊಡ್ಡದಾಗಿದ್ದರೆ TURP Surgery ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಈ ತಪ್ಪು ಮಾಡಬೇಡಿ

ಮೂತ್ರ ಕಟ್ಟಿದಂತಹ ಸಮಸ್ಯೆ ಎದುರಾದ್ರೆ ಮೂರು ಬಾರಿ ಮೇಕೆ ಕುಣಿದಂತೆ ಜಿಗಿದು ಕುಣಿಯಬೇಕು ಎಂಬುದು ವ್ಯಾಟ್ಸ್‌ಆಪ್ ಯೂನಿರ್ವಸಿಟಿಯಲ್ಲಿ ಹರಿದಾಡುತ್ತಿದೆ, ಆದರೆ ಈ ತಪ್ಪು ಖಂಡಿತ ಮಾಡಬೇಡಿ. ಯಾಕೆಂದರೆ ಮೂತ್ರ ಕಟ್ಟಿಕೊಂಡಾಗ ಬರುವ ನೋವನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ. ಅಂತಹ ಸಮಯದಲ್ಲಿ ತಪ್ಪಿಯೂ ಜಂಪ್ ಮಾಡುವುದು ಮಾಡಬೇಡಿ, ತಕ್ಷಣವೇ ವೈದ್ಯರ ಬಳಿಗೆ ಹೋಗಿ ತೋರಿಸಿ ಎಂದು ಡಾ. ಅಂಜನಪ್ಪ ಹೇಳಿದ್ದಾರೆ.

mysore-dasara_Entry_Point