Red Spinach: ಕೆಂಪು ಹರಿವೆ ಸೊಪ್ಪಿನ ಪ್ರಯೋಜನ ಕೇಳಿದ್ರೆ ದಿನನಿತ್ಯ ತಿನ್ನುವಿರಿ: ಆರೋಗ್ಯಕ್ಕೆ, ತೂಕ ನಷ್ಟಕ್ಕೆ ಸಹಕಾರಿ ಈ ಅಮರಂಥ್ ಎಲೆ
ಕನ್ನಡ ಸುದ್ದಿ  /  ಜೀವನಶೈಲಿ  /  Red Spinach: ಕೆಂಪು ಹರಿವೆ ಸೊಪ್ಪಿನ ಪ್ರಯೋಜನ ಕೇಳಿದ್ರೆ ದಿನನಿತ್ಯ ತಿನ್ನುವಿರಿ: ಆರೋಗ್ಯಕ್ಕೆ, ತೂಕ ನಷ್ಟಕ್ಕೆ ಸಹಕಾರಿ ಈ ಅಮರಂಥ್ ಎಲೆ

Red Spinach: ಕೆಂಪು ಹರಿವೆ ಸೊಪ್ಪಿನ ಪ್ರಯೋಜನ ಕೇಳಿದ್ರೆ ದಿನನಿತ್ಯ ತಿನ್ನುವಿರಿ: ಆರೋಗ್ಯಕ್ಕೆ, ತೂಕ ನಷ್ಟಕ್ಕೆ ಸಹಕಾರಿ ಈ ಅಮರಂಥ್ ಎಲೆ

ಹಸಿರೆಲೆ ಸೊಪ್ಪುಗಳಲ್ಲಿ ಅಗಾಧ ಪೋಷಕಾಂಶವಿದ್ದು, ನಮ್ಮ ದೇಹಕ್ಕೆ ಬೇಕಾದ ಪೌಷ್ಠಿಕಾಂಶಗಳು ಇವುಗಳಿಂದ ಸಿಗುತ್ತವೆ. ನಮ್ಮ ದೇಹವನ್ನು ಆರೋಗ್ಯವಾಗಿಡುವಲ್ಲಿ ಸೊಪ್ಪುಗಳ ಪಾತ್ರ ಮಹತ್ವದ್ದು. ಇವುಗಳಲ್ಲಿ ಕೆಂಪು ಹರಿವೆ ಸೊಪ್ಪು ಕೂಡ ಒಂದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. (ಬರಹ:ಪ್ರಿಯಾಂಕ .ಪಿ.)

ಕೆಂಪು ಹರಿವೆ ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕೆಂಪು ಹರಿವೆ ಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕೆಂಪು ಹರಿವೆ ಸೊಪ್ಪು ಪೌಷ್ಠಿಕಾಂಶವುಳ್ಳ ತರಕಾರಿಯಾಗಿದೆ. ಭಾರತೀಯರ ಪಾಕಪದ್ಧತಿಯಲ್ಲಿ ಅಚ್ಚುಮೆಚ್ಚಿನ ಹಸಿರೆಲೆ ತರಕಾರಿಗಳಲ್ಲಿ ಒಂದಾಗಿದೆ. ಇದು ನೋಡಲು ಬಸಳೆ ಸೊಪ್ಪಿನಂತೆಯೇ ಇರುತ್ತದೆ. ಕೆಂಪು, ಹಸಿರು ಮತ್ತು ನೇರಳೆ ಬಣ್ಣದಲ್ಲಿ ಇದು ಲಭ್ಯವಿದ್ದು, ದಕ್ಷಿಣ ಭಾರತದ ಕರಾವಳಿ ಪ್ರದೇಶ ಹಾಗೂ ಹಿಮಾಲಯದ ತಪ್ಪಲಿನಲ್ಲಿ ಕಾಣಸಿಗುತ್ತದೆ. ಅಮರಂಥ್ ಎಲೆ ಎಂದೂ ಕರೆಯಲ್ಪಡುವ ಹರಿವೆ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿಂದ ಕೂಡಿದೆ. ದಿನನಿತ್ಯದ ಆಹಾರದಲ್ಲಿ ಇದನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ.

ಕೆಂಪು ಹರಿವೆ ಸೊಪ್ಪಿನಲ್ಲಿ ಹೇರಳ ಪೌಷ್ಠಿಕಾಂಶವಿದೆ. ವಿಟಮಿನ್ ಇ, ಸಿ ಮತ್ತು ಕೆ, ಕಬ್ಬಿಣ ಮತ್ತು ಕ್ಯಾಲ್ಸಿಯಂನಂತಹ ಪ್ರಮುಖ ಖನಿಜಗಳಿಂದ ತುಂಬಿದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಸ್ವತಂತ್ರ ರಾಡಿಕಲ್‍ಗಳ ವಿರುದ್ಧ ಹೋರಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ತೂಕ ಇಳಿಸಲು ಪ್ರಯತ್ನಿಸುವವರು ಈ ಕೆಂಪು ಹರಿವೆ ಸೊಪ್ಪನ್ನು ಆಯ್ಕೆ ಮಾಡಬಹುದು. ಇದು ಫೈಬರ್ ನಿಂದ ಸಮೃದ್ಧವಾಗಿದ್ದು, ನಿಮಗೆ ಶಕ್ತಿಯನ್ನು ತುಂಬಲು ಸಹಾಯಕವಾಗಿದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. 100 ಗ್ರಾಂ ಹರಿವೆ ಸೊಪ್ಪಿನಲ್ಲಿರುವುದು ಕೇವಲ 23 ಕ್ಯಾಲೋರಿಗಳು ಮಾತ್ರ. ಅಲ್ಲದೆ ಕೊಬ್ಬಿನಂಶ ಹಾಗೂ ಕೊಲೆಸ್ಟ್ರಾಲ್ ಅಂಶ ಕಡಿಮೆ ಇರುವ ಕಾರಣ ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರು ಕೆಂಪು ಹರಿವೆ ಸೊಪ್ಪನ್ನು ಆಯ್ಕೆ ಮಾಡಬಹುದು. ತೂಕ ಇಳಿಕೆಗೆ ಮಾತ್ರವಲ್ಲ ಇದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅವುಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ..

ಕೆಂಪು ಹರಿವೆ ಸೊಪ್ಪಿನ ಆರೋಗ್ಯ ಪ್ರಯೋಜನಗಳು

ಮಲಬದ್ಧತೆಯನ್ನು ಎದುರಿಸಲು ಸಹಕಾರಿ: ತೂಕ ನಷ್ಟಕ್ಕೆ ಮಾತ್ರವಲ್ಲ, ಜೀರ್ಣಕ್ರಿಯೆಗೂ ಕೆಂಪು ಹರಿವೆಸೊಪ್ಪು ಉತ್ತಮವಾಗಿದೆ. ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಜೀರ್ಣಾಂಗ ವ್ಯವಸ್ಥೆಯನ್ನು ಸರಾಗವಾಗಿ ನಡೆಸುತ್ತದೆ. ಅತಿಸಾರ ಮತ್ತು ರಕ್ತಸ್ರಾವದಿಂದ ಬಳಲುತ್ತಿರುವವರಿಗೆ ಹರಿವೆ ಸೊಪ್ಪು ತುಂಬಾ ಒಳ್ಳೆಯದು.

ರೋಗನಿರೋಧಕ ಶಕ್ತಿ ವರ್ಧಕ: ಕೆಂಪು ಹರಿವೆ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಪ್ರೊಟೀನ್ ಮತ್ತು ವಿಟಮಿನ್ ಕೆ ಅಂಶಗಳಿಂದಾಗಿ ಕಾಲೋಚಿತ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮೂಳೆಗಳ ಆರೋಗ್ಯಕ್ಕೆ ಸಹಕಾರಿ: ಇದರಲ್ಲಿ ಸಾಕಷ್ಟು ಕ್ಯಾಲ್ಸಿಯಂ ಮತ್ತು ಪ್ರೊಟೀನ್‌ಗಳಿರುವುದರಿಂದ ನಿಮ್ಮ ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಇದು ಪರಿಪೂರ್ಣವಾಗಿದೆ. ಈ ಸೊಪ್ಪಿನಲ್ಲಿರುವ ವಿಟಮಿನ್ ಕೆ ಅಂಶವು ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ.

ಕೆಂಪು ಹರಿವೆ ಸೊಪ್ಪಿನ ಖಾದ್ಯ ತಯಾರಿಸುವುದು ತುಂಬಾನೇ ಸಿಂಪಲ್

ಹೌದು, ಕೆಂಪು ಹರಿವೆ ಸೊಪ್ಪಿನ ಖಾದ್ಯವನ್ನು ತಯಾರಿಸುವುದು ತುಂಬಾನೇ ಸಿಂಪಲ್. ಪಾಲಕ್ ಸೊಪ್ಪಿನಂತೆಯೇ ಕೆಂಪು ಹರಿವೆ ಸೊಪ್ಪಿನ ಎಲೆಗಳನ್ನು ತೊಳೆದು ಕತ್ತರಿಸಿ. ಇದರಿಂದ ಪಲ್ಯ, ದಾಲ್ ಅಥವಾ ಸೂಪ್ ತಯಾರಿಸಿ ಸವಿಯಬಹುದು. ಕೆಂಪು ಹರಿವೆ ಸೊಪ್ಪನ್ನು ದಂಟಿನೆಳೆ ಸೊಪ್ಪು ಎಂದೂ ಕರೆಯುತ್ತಾರೆ. ಇದು ಬಲಿತಿದ್ದರೆ, ಬಸಳೆ ದಂಟಿನ ಸೊಪ್ಪಿನಂತೆ, ಹರಿವೆ ಸೊಪ್ಪಿನ ದಂಟಿನ ಸಾಂಬಾರು ಅಥವಾ ಪಲ್ಯ ಮಾಡಬಹುದು. ಕೆಂಪು ಹರಿವೆ ಸೊಪ್ಪಿನ ಪ್ರಯೋಜನದ ಬಗ್ಗೆ ನಿಮಗೆ ತಿಳಿಯಿತಲ್ವಾ. ಹಾಗಿದ್ದರೆ, ನಿಮ್ಮ ಊಟದಲ್ಲಿ ಈ ಆಹಾರವನ್ನು ಖಂಡಿತಾ ಮಿಸ್ ಮಾಡದಿರಿ.

Whats_app_banner