ನೀವು ಚೆನ್ನಾಗಿರಬೇಕಾದ್ರೆ ಹಾರ್ಟ್‌ ಚೆನ್ನಾಗಿರಬೇಕು; ಕಷ್ಟ ಪಟ್ರೂ ಸರಿ ಇಷ್ಟದ ಈ 2 ಆಹಾರ ಇಂದೇ ಬಿಟ್ಬಿಡಿ ಅಂತಿದೆ ಹಾರ್ವರ್ಡ್ ಅಧ್ಯಯನ ವರದಿ-health tips reduce heart disease risk two foods to remove from your menu for heart health uks ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನೀವು ಚೆನ್ನಾಗಿರಬೇಕಾದ್ರೆ ಹಾರ್ಟ್‌ ಚೆನ್ನಾಗಿರಬೇಕು; ಕಷ್ಟ ಪಟ್ರೂ ಸರಿ ಇಷ್ಟದ ಈ 2 ಆಹಾರ ಇಂದೇ ಬಿಟ್ಬಿಡಿ ಅಂತಿದೆ ಹಾರ್ವರ್ಡ್ ಅಧ್ಯಯನ ವರದಿ

ನೀವು ಚೆನ್ನಾಗಿರಬೇಕಾದ್ರೆ ಹಾರ್ಟ್‌ ಚೆನ್ನಾಗಿರಬೇಕು; ಕಷ್ಟ ಪಟ್ರೂ ಸರಿ ಇಷ್ಟದ ಈ 2 ಆಹಾರ ಇಂದೇ ಬಿಟ್ಬಿಡಿ ಅಂತಿದೆ ಹಾರ್ವರ್ಡ್ ಅಧ್ಯಯನ ವರದಿ

ಹೃದಯದ ಆರೋಗ್ಯ ಎಲ್ಲದಕ್ಕೂ ಮುಖ್ಯ. ಸೇವಿಸುವ ಆಹಾರದಲ್ಲೂ ವ್ಯತ್ಯಾಸವಾದರೆ ಅದರ ಪರಿಣಾಮ ಹೃದಯದ ಮೇಲಾಗುತ್ತದೆ. ಇದು ಹಲವು ಅಧ್ಯಯನಗಳಲ್ಲಿ ಸಾಬೀತಾಗಿರೋ ವಿಚಾರ. ಆದರೂ, ನೀವು ಚೆನ್ನಾಗಿರಬೇಕಾದ್ರೆ ಹಾರ್ಟ್‌ ಚೆನ್ನಾಗಿರಬೇಕು; ಕಷ್ಟ ಪಟ್ರೂ ಸರಿ ಇಷ್ಟದ ಈ 2 ಆಹಾರ ಇಂದೇ ಬಿಟ್ಬಿಡಿ ಅಂತಿದೆ ಹಾರ್ವರ್ಡ್‌ನ ಹೊಸ ಅಧ್ಯಯನ ವರದಿ. ಅದರ ವಿವರ ಇಲ್ಲಿದೆ.

ನೀವು ಚೆನ್ನಾಗಿರಬೇಕಾದ್ರೆ ನಿಮ್ಮ ಹಾರ್ಟ್‌ ಚೆನ್ನಾಗಿರಬೇಕು. ಕಷ್ಟ ಪಟ್ರೂ ಸರಿ ನೀವು ಇಷ್ಟ ಪಟ್ಟು ಸೇವಿಸೋ ಈ 2 ಆಹಾರ ಇಂದೇ ಬಿಟ್ಬಿಡಿ ಅಂತಿದೆ ಹಾರ್ವರ್ಡ್ ಅಧ್ಯಯನ ವರದಿ. (ಸಾಂಕೇತಿಕ ಚಿತ್ರ)
ನೀವು ಚೆನ್ನಾಗಿರಬೇಕಾದ್ರೆ ನಿಮ್ಮ ಹಾರ್ಟ್‌ ಚೆನ್ನಾಗಿರಬೇಕು. ಕಷ್ಟ ಪಟ್ರೂ ಸರಿ ನೀವು ಇಷ್ಟ ಪಟ್ಟು ಸೇವಿಸೋ ಈ 2 ಆಹಾರ ಇಂದೇ ಬಿಟ್ಬಿಡಿ ಅಂತಿದೆ ಹಾರ್ವರ್ಡ್ ಅಧ್ಯಯನ ವರದಿ. (ಸಾಂಕೇತಿಕ ಚಿತ್ರ) (Canva)

ಬದಲಾದ ಕಾಲಘಟ್ಟದಲ್ಲಿ ಆಹಾರ ಕ್ರಮ, ಆಹಾರಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ಫ್ಯೂಷನ್ ಫುಡ್‌ಗಳು, ಜಂಕ್ ಫುಡ್‌ಗಳು ಸಂಸ್ಕರಿತ ಆಹಾರಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದ ಢಾಳಾಗಿ ಗೋಚರಿಸುತ್ತಿದೆ. ಇದನ್ನು ಅಧ್ಯಯನ ವರದಿಗಳು ದೃಢೀಕರಿಸುತ್ತಲೇ ಇವೆ. ಇದೀಗ ಹಾರ್ವರ್ಡ್‌ನ ಹೊಸ ಅಧ್ಯಯನ ಹೃದ್ರೋಗ ಅಪಾಯವನ್ನು ಹೆಚ್ಚಿಸುವ ಎರಡು ರೀತಿಯ ಆಹಾರಗಳನ್ನು ಉಲ್ಲೇಖಿಸಿದ್ದು, ಆ ವಿಚಾರವಾಗಿ ಎಲ್ಲರ ಗಮನಸೆಳೆದಿದೆ. ಕೋವಿಡ್ ಸಂಕಷ್ಟ ಬಂದ ನಂತರದಲ್ಲಿ ಹೃದಯಾಘಾತಗಳು ಹೆಚ್ಚಾಗುತ್ತಿರುವುದು ಗಮನಿಸಿಯೇ ಇರುತ್ತೀರಿ. 20 ರಿಂದ 40 ವರ್ಷದೊಳಗಿನವರು ವಿಶೇಷವಾಗಿ ಯುವಜನರು ಕೂಡ ಈ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಹಾರ್ವರ್ಡ್‌ನ ಹೊಸ ಅಧ್ಯಯನ ವರದಿ ಪ್ರಾಮುಖ್ಯವಾಗಿದೆ. ಹೃದ್ರೋಗ ಅಪಾಯ ಹೆಚ್ಚಿಸುವ ಆ ಆಹಾರಗಳನ್ನು ಜಗತ್ತಿನ ಬಹಳಷ್ಟು ಜನ ಸೇವಿಸುತ್ತಿದ್ದು, ಅದನ್ನು ತಪ್ಪಿಸದೇ ಇದ್ದರೆ ಅವರೆಲ್ಲರೂ ಆ ಅಪಾಯವನ್ನು ಎದುರಿಸಲಿದ್ದಾರೆ ಎಂಬ ಎಚ್ಚರಿಕೆಯ ಸಂದೇಶ ಅದರಲ್ಲಿದೆ.

ಪ್ರಸ್ತುತ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇರುವಂಥ ದಿನಗಳಿವು. ಹಠಾತ್ ಹೃದಯಾಘಾತದಿಂದ ಅನೇಕ ಯುವಕರು ಸಾಯುತ್ತಿದ್ದಾರೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಹೃದಯದ ಬಗ್ಗೆ ಕಾಳಜಿ ವಹಿಸಬೇಕು. ಹಾರ್ವರ್ಡ್ ಅಧ್ಯಯನದ ಪ್ರಕಾರ, ಎರಡು ರೀತಿಯ ಆಹಾರವನ್ನು ಸೇವಿಸುವವರಿಗೆ ಹೃದಯದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.

ಹೃದಯಕ್ಕೆ ಸಂಬಂಧಿಸಿ ಇವೆರಡೂ ಅಪಾಯಕಾರಿ

ಅತ್ಯಂತ ಸಿಹಿ ಇರುವ ಸೋಡಾ, ತಂಪು ಪಾನೀಯ (ಸಾಫ್ಟ್ ಡ್ರಿಂಕ್ಸ್‌) ಮತ್ತು ಸಂಸ್ಕರಿಸಿದ ಮಾಂಸವನ್ನು ತಿನ್ನುವುದರಿಂದ ಹೃದ್ರೋಗದ ಅಪಾಯ ಹೆಚ್ಚುತ್ತದೆ. ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ಸೇವಿಸುವುದರಿಂದ ಹೃದಯ ಮತ್ತು ರಕ್ತನಾಳಗಳಲ್ಲಿ ದೀರ್ಘಕಾಲದ ಉರಿಯೂತ ಉಂಟಾಗಬಹುದು. ಅಲ್ಲದೆ, ಸಂಸ್ಕರಿಸಿದ ಮಾಂಸವನ್ನು ಆಗಾಗ್ಗೆ ಸೇವಿಸುವುದರಿಂದ ಹೃದಯದ ಆರೋಗ್ಯ ಕ್ಷೀಣಿಸಬಹುದು. ಸಂಸ್ಕರಿಸಿದ ಮಾಂಸದಲ್ಲಿ ಉಪ್ಪು ಅಧಿಕವಾಗಿರುವುದು ಇದಕ್ಕೆ ಕಾರಣ. ಅಲ್ಲದೆ, ಧೂಮಪಾನ ಕೂಡ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಹಾರ್ವರ್ಡ್‌ನ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು 2 ಲಕ್ಷಕ್ಕೂ ಹೆಚ್ಚು ಜನರ ಅಲ್ಟ್ರಾ-ಪ್ರೊಸೆಸ್ಡ್ ಆಹಾರ ಪದ್ಧತಿಗೆ ಹೊಂದಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ. ಅವರು ಹೃದ್ರೋಗ ಅಥವಾ ಸ್ಟ್ರೋಕ್ ಅನ್ನು ಅಭಿವೃದ್ಧಿಪಡಿಸಿದ್ದಾರೆಯೇ ಎಂದು ನೋಡಲು ಸುಮಾರು ಮೂರು ದಶಕಗಳ ಕಾಲ ಅವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಸಕ್ಕರೆ ಪಾನೀಯಗಳು ಮತ್ತು ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.

ಅಧ್ಯಯನ ವರದಿಯ ವಿವರಗಳು

ಹಾರ್ವರ್ಡ್ ಅಧ್ಯಯನದ ವಿವರಗಳು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಕೆಲವು ಆಹಾರಗಳು ಹೆಚ್ಚುವರಿ ಕ್ಯಾಲೋರಿಗಳು, ಸಕ್ಕರೆ, ಸೋಡಿಯಂ ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ ಸಾಫ್ಟ್‌ ಡ್ರಿಂಕ್ಸ್ ಮತ್ತು ಸಂಸ್ಕರಿತ ಮಾಂಸದ ಹೊರತಾಗಿ ತಿನ್ನಬಾರದ ಆಹಾರಗಳು ಈ ಕೆಳಗಿನಂತಿವೆ. ಇವು ಕೂಡ ಹೃದಯದ ಆರೋಗ್ಯಕ್ಕೆ ಹಿತವಾದುದಲ್ಲ.

ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಬ್ರೆಡ್‌ ಮತ್ತು ಸಾಸ್‌ಗಳು, ಸ್ಪ್ರೆಡ್‌ಗಳು, ಕಾಂಡಿಮೆಂಟ್ಸ್, ಪ್ಯಾಕ್ ಮಾಡಲಾದ ಸಿಹಿ ತಿಂಡಿಗಳು, ಬೇಕರಿ ಐಟಮ್ಸ್‌, ಪ್ಯಾಕೇಜ್ ಮಾಡಿದ ತಿಂಡಿಗಳು, ಸಕ್ಕರೆ ತುಂಬಿದ ಸಿಹಿಯಾದ ಪಾನೀಯಗಳು, ಸಂಸ್ಕರಿಸಿದ ಕೆಂಪು ಮಾಂಸ, ಕೋಳಿ, ಮೀನುಗಳು, ಇನ್‌ಸ್ಟಂಟ್ ಫುಡ್‌, ರೆಡಿ ಟು ಈಟ್‌ ಫುಡ್, ಮದ್ಯ ಮುಂತಾದವು.

ಅಧ್ಯಯನದಲ್ಲಿ ಭಾಗವಹಿಸಿದ ಕೆಲವರು ಬಹಳಷ್ಟು ಬ್ರೆಡ್, ಸಿಹಿ ತಿಂಡಿಗಳು, ಸಿಹಿತಿಂಡಿಗಳು ಮತ್ತು ರೆಡಿ ಟು ಈಟ್‌ ಆಹಾರವನ್ನು ಸೇವಿಸಿದ್ದರು. ಇವೆಲ್ಲವೂ ಸಂಸ್ಕರಿತ ಆಹಾರಗಳ ಪಟ್ಟಿಗೆ ಸೇರುತ್ತವೆ. ಇವುಗಳಿಂದಾಗಿ ಹೃದ್ರೋಗ ಹೆಚ್ಚಾಗಿ ಕಂಡುಬರುತ್ತದೆ. ಧಾನ್ಯದ ಆಹಾರಗಳು ಮತ್ತು ಮೊಸರು/ಹಾಲು ಆಧಾರಿತ ಭಕ್ಷ್ಯಗಳ ಸೇವನೆಯಿಂದ ಹೃದ್ರೋಗದ ಅಪಾಯ ಕಡಿಮೆ.

ದಿನವೂ ಕೂಲ್ ಡ್ರಿಂಕ್ಸ್ ಕುಡಿಯುವವರೂ ಇದ್ದಾರೆ. ಸಂಸ್ಕರಿಸಿದ ಆಹಾರ ಎಂದರೆ ಚೀಸ್, ಪ್ಯಾಕ್ ಮಾಡಿದ ಆಹಾರ, ಪೂರ್ವಸಿದ್ಧ ಆಹಾರ, ಫಾಸ್ಟ್ ಫುಡ್, ಬೇಕರಿ ಉತ್ಪನ್ನಗಳು, ಸೋಡಾ, ಕ್ರೀಡಾ ಪಾನೀಯಗಳು, ಚಿಪ್ಸ್, ಕುಕೀಸ್, ಪಿಜ್ಜಾ, ಬರ್ಗರ್, ಪಾಸ್ತಾ, ಐಸ್ ಕ್ರೀಮ್, ಕೇಕ್ ಇತ್ಯಾದಿ ತಿನ್ನಬೇಡಿ. ಯಾವುದಕ್ಕೂ ತಂಪು ಪಾನೀಯಗಳು (ಸಾಫ್ಟ್ ಡ್ರಿಂಕ್ಸ್‌) ಕುಡಿಯಲೇ ಬೇಡಿ. ಸಂಸ್ಕರಿಸಿದ ಮಾಂಸ ತಿನ್ನಲೇ ಬೇಡಿ.

ಮಾಹಿತಿ -

https://www.thelancet.com/journals/lanam/article/PIIS2667-193X(24)00186-8/fulltext

mysore-dasara_Entry_Point