Health Tips: ನಿದ್ರಾಹೀನತೆ, ಅತಿಯಾದ ತೂಕದ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ; ಎರಡಕ್ಕೂ ಇಲ್ಲಿದೆ ಒಂದೇ ಪರಿಹಾರ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ನಿದ್ರಾಹೀನತೆ, ಅತಿಯಾದ ತೂಕದ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ; ಎರಡಕ್ಕೂ ಇಲ್ಲಿದೆ ಒಂದೇ ಪರಿಹಾರ

Health Tips: ನಿದ್ರಾಹೀನತೆ, ಅತಿಯಾದ ತೂಕದ ಸಮಸ್ಯೆ ನಿಮ್ಮನ್ನು ಕಾಡ್ತಿದ್ಯಾ; ಎರಡಕ್ಕೂ ಇಲ್ಲಿದೆ ಒಂದೇ ಪರಿಹಾರ

Health Tips: ರಾತ್ರಿ ಸರಿಯಾಗಿ ನಿದ್ರೆ ಬಾರದಿರುವುದು ಹಾಗೂ ನೀವು ಅತಿಯಾದ ತೂಕ ಹೊಂದಿರುವುದಕ್ಕೆ ಒಂದಕ್ಕೊಂದು ಸಂಬಧವಿದೆ. ಇದೆಲ್ಲದಕ್ಕೂ, ಒಂದೇ ಪರಿಹಾರವಿದೆ. ರಾತ್ರಿ ಬೇಗ ಊಟ ಮಾಡಿದರೆ ಬಹುತೇಕ ಸಮಸ್ಯೆ ನಿವಾರಣೆಯಾಗುತ್ತದೆ.

ನಿದ್ರಾಹೀನತೆ, ಅತಿಯಾದ ತೂಕದ ಸಮಸ್ಯೆಗೆ ಪರಿಹಾರ
ನಿದ್ರಾಹೀನತೆ, ಅತಿಯಾದ ತೂಕದ ಸಮಸ್ಯೆಗೆ ಪರಿಹಾರ (PC: Unsplash)

Health Tips: ಬಹಳಷ್ಟು ಜನರು ನಿದ್ರಾಹೀನತೆ ಹಾಗೂ ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಾರೆ. ಒಂದು ಸಮಸ್ಯೆ ಪರಿಹರಿಸಿಕೊಳ್ಳಲು ಹೋದರೆ ಮತ್ತೊಂದು ಸಮಸ್ಯೆ ಉಲ್ಬಣವಾಗುತ್ತದೆ. ಆದರೆ ಇದೆರಡಕ್ಕೂ ಒಂದೇ ಪರಿಹಾರವಿದೆ. ಅದು ನೀವು ಊಟ ಮಾಡುವ ಸಮಯ.

ಕೆಲವರು ಬಹಳ ತಡವಾಗಿ ಊಟ ಮಾಡುತ್ತಾರೆ. ಕೆಲಸದ ಒತ್ತಡದಿಂದಲೋ, ಸಮಯದ ಅಭಾವದಿಂದಲೋ ಸರಿಯಾದ ಸಮಯಕ್ಕೆ ಊಟ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಈ ರೀತಿ ತಡವಾಗಿ ಊಟ ಮಾಡುವುದು ನಿದ್ರೆ ಹಾಗೂ ತೂಕದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಆದ್ದರಿಂದ ಯಾವ ಸಮಯದಲ್ಲಿ ಊಟ ಮಾಡಬೇಕು ಎಂಬುದನ್ನು ನೀವು ತಿಳಿಯಬೇಕು.

ಬೇಗ ಊಟ ಮಾಡುವುದು ಒಳ್ಳೆಯದು

ಬೇಗ ಊಟ ಮಾಡುವುದು ನಿಮ್ಮ ಹಸಿವನ್ನು ಪೂರೈಸುವುದರ ಜೊತೆಗೆ ಇನ್ನೂ ಹೆಚ್ಚಿನ ಪ್ರಯೋಜನವಿದೆ. ತಜ್ಞರ ಪ್ರಕಾರ, ರಾತ್ರಿ ಬೇಗ ಊಟ ಮಾಡುವುದರಿಂದ ಜೀರ್ಣಕ್ರಿಯೆ, ನಿದ್ರೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಬೇಗ ಊಟ ಮಾಡುವುದರಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡಾ ಪರಿಹರಿಸಬಹುದು.

ಊಟಕ್ಕೆ ಯಾವ ಸಮಯ ಸೂಕ್ತ

ನಿಮ್ಮ ನಿದ್ರಾಹೀನತೆ ಹಾಗೂ ಅತಿಯಾದ ತೂಕದ ಸಮಸ್ಯೆಯನ್ನು ಸರಿಪಡಿಸಲು ರಾತ್ರಿ 7 ಸೂಕ್ತ ಸಮಯ. ಅದರೂ ಸಾಧ್ಯವಾಗದಿದ್ದಲ್ಲಿ 7.30 ಕ್ಕಾದರೂ ನೀವು ಊಟ ಮುಗಿಸಬೇಕು. ಹೀಗೆ ಮಾಡುವುದರಿಂದ ಉತ್ತಮ ನಿದ್ರೆ, ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಜೊತೆಗೆ ರಕ್ತ ಪರಿಚಲನೆಯನ್ನೂ ಹೆಚ್ಚಿಸುತ್ತದೆ.

ಲಘುವಾದ ಆಹಾರ ಇರಲಿ

ರಾತ್ರಿ ಬೇಗ ಊಟ ಮಾಡಿದರೆ ಅದು ಒಳ್ಳೆಯದು ಎಂಬ ಮಾತ್ರಕ್ಕೆ ಅತಿಯಾಗಿ ಸೇವಿಸುವುದು ಸರಿಯಲ್ಲ. ಆರೋಗ್ಯ ತಜ್ಞರು ಹೇಳುವ ಪ್ರಕಾರ, ರಾತ್ರಿ ಲಘುವಾದ ಊಟ ಮಾಡಿದರೆ ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ನೀವು ಒತ್ತಡದ ಲೈಫ್‌ ಸ್ಟೈಲ್‌ ಅನುಸರಿಸುವವರಾಗಿ , ಸಮಯ ಇಲ್ಲದೆ ಬೆಳಗಿನ ಉಪಹಾರವನ್ನು ಲಘುವಾಗಿ ತಿಂದು ರಾತ್ರಿ ಅತಿಯಾಗಿ ಊಟ ಮಾಡಿದರೆ ಸ್ಥೂಲಕಾಯತೆ, ಹೃದ್ರೋಗ, ಮಧುಮೇಹದಂಥ ಅಪಾಯ ಉಂಟಾಗುತ್ತದೆ. ಆದ್ದರಿಂದ ಈ ಅಪಾಯವನ್ನು ತಗ್ಗಿಸಲು ನೀವು ರಾತ್ರಿ ಮಲಗುವ ಮುನ್ನ ಊಟ ಮಾಡಲು ಪ್ರಯತ್ನಿಸಿ.

ಒಂದು ವೇಳೆ ಸಾಧ್ಯವೇ ಇಲ್ಲ ಎನ್ನುವುದಾದರೆ ರಾತ್ರಿ ಊಟ ಮಾಡಿದ ನಂತರ ಕನಿಷ್ಠ 20 ನಿಮಿಷ ವಾಕ್‌ ಮಾಡಿ.

Whats_app_banner