ಮಳೆಗಾಲದಲ್ಲಿ ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚಲು ಕಾರಣವಾಗುವ ಅಂಶವಿದು; ವಾತಾವರಣ ಬೆಚ್ಚಗಿರಲು ಈ ಉಪಾಯ ಪಾಲಿಸಿ-health tips risk of heart stroke is high during rainy season and you will be surprised to know why monsoon health rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಗಾಲದಲ್ಲಿ ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚಲು ಕಾರಣವಾಗುವ ಅಂಶವಿದು; ವಾತಾವರಣ ಬೆಚ್ಚಗಿರಲು ಈ ಉಪಾಯ ಪಾಲಿಸಿ

ಮಳೆಗಾಲದಲ್ಲಿ ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚಲು ಕಾರಣವಾಗುವ ಅಂಶವಿದು; ವಾತಾವರಣ ಬೆಚ್ಚಗಿರಲು ಈ ಉಪಾಯ ಪಾಲಿಸಿ

ಮಳೆಗಾಲದಲ್ಲಿ ಹಸಿರ ಪ್ರಕೃತಿ, ಹಿಮ ವಾತಾವರಣ ಮನಸ್ಸಿಗೆ ಖುಷಿ ನೀಡಿದ್ರೂ ಆರ್ದ್ರ ವಾತಾವರಣವು ಆರೋಗ್ಯ ಹಾಗೂ ಮನಸ್ಥಿತಿ ಎರಡನ್ನೂ ಹದಗೆಡಿಸುತ್ತದೆ. ಇದರಿಂದ ಹೃದಯಾಘಾತದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಮಳೆಗಾಲದಲ್ಲಿ ವಾತಾವರಣ ಬೆಚ್ಚಗಿರಲು ನೀವು ಅನುಸರಿಸಬೇಕಾದ ಕ್ರಮಗಳಿವು.

ಮಳೆಗಾಲದಲ್ಲಿ ಹೃದಯಾಘಾತ ಸೇರಿದಂತೆ ಗಂಭೀರ ಸಮಸ್ಯೆಗಳು ಎದುರಾಗಲು ಕಾರಣವಾಗುವ ಅಂಶಗಳಿವು; ಮನೆ ವಾತಾವರಣ ಬೆಚ್ಚಗಿರಲು ಈ ಉಪಾಯ ಪಾಲಿಸಿ
ಮಳೆಗಾಲದಲ್ಲಿ ಹೃದಯಾಘಾತ ಸೇರಿದಂತೆ ಗಂಭೀರ ಸಮಸ್ಯೆಗಳು ಎದುರಾಗಲು ಕಾರಣವಾಗುವ ಅಂಶಗಳಿವು; ಮನೆ ವಾತಾವರಣ ಬೆಚ್ಚಗಿರಲು ಈ ಉಪಾಯ ಪಾಲಿಸಿ

ಮಳೆಗಾಲದಲ್ಲಿ ಆರ್ದತೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಗಾಳಿಯಲ್ಲಿನ ಹೆಚ್ಚಿನ ಆರ್ದ್ರತೆಯಿಂದಾಗಿ, ತೇವಾಂಶವು ನಮ್ಮ ಚರ್ಮದ ಮೇಲೆ ದೀರ್ಘಕಾಲ ಉಳಿಯುತ್ತದೆ, ಆದ್ದರಿಂದ ದೇಹವು ಬೇಗನೆ ತಂಪಾಗುವುದಿಲ್ಲ. ಪರಿಣಾಮವಾಗಿ, ನಾವು ಹೆಚ್ಚು ಬಿಸಿಯಾಗುತ್ತೇವೆ. ಅದು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಮಳೆಗಾಲದಲ್ಲಿ ನಮ್ಮ ಹೃದಯ ಮತ್ತು ಚರ್ಮಕ್ಕೆ ಹೆಚ್ಚು ಹಾನಿಯಾಗುತ್ತದೆ. ಚರ್ಮದ ಅಲರ್ಜಿ, ಫುಡ್ ಪಾಯ್ಸನ್, ವೈರಲ್ ಇನ್‌ಫೆಕ್ಷನ್‌ನಂತಹ ಸಮಸ್ಯೆಗಳು ಈ ಸೀಸನ್‌ನಲ್ಲಿ ಬೇಡವೆಂದರೂ ಕಾಡುತ್ತವೆ. ಮಾನ್ಸೂನ್‌ನಲ್ಲಿ ನೀವು ಮಾಡುವ ಸಣ್ಣ ನಿರ್ಲಕ್ಷ್ಯವು ನಿಮ್ಮನ್ನು ಅಪಾಯಕ್ಕೆ ತಳ್ಳಬಹುದು.

ಮಳೆಗಾಲದಲ್ಲಿ ಹೃದಯಾಘಾತ ಹೆಚ್ಚು

ಮಳೆಗಾಲದಲ್ಲಿ ವಾತಾವರಣದಲ್ಲಿ ಆರ್ದ್ರತೆಯ ಪ್ರಮಾಣ ಹೆಚ್ಚಿರುತ್ತದೆ. ಇದು ಉಸಿರಾಟದ ಸೋಂಕುಗಳು ಮತ್ತು ಅಲರ್ಜಿಯನ್ನು ಉಂಟುಮಾಡುತ್ತದೆ. ಈ ಋತುಮಾನವು ಹೃದಯರಕ್ತನಾಳದ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಮಾರಕವಾಗಿದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ನಡೆಸಿದ ಅಧ್ಯಯನವು ಹೃದಯಕ್ಕೆ ಹೆಚ್ಚಿನ ಆರ್ದ್ರತೆ ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತದೆ. ಆರ್ದ್ರತೆ ಹೆಚ್ಚಾದಂತೆ ಹೃದ್ರೋಗದಿಂದ ಸಾವನ್ನಪ್ಪುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ಕಂಡುಹಿಡಿದಿದೆ. ಅದೇ ಸಮಯದಲ್ಲಿ, ಎರಡನೇ ಅಧ್ಯಯನವು ತಾಪಮಾನ ಮತ್ತು ತೇವಾಂಶ ಎರಡೂ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಹಿಡಿದಿದೆ. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿ ಡಾ.ನೇಹಾ ಯಾದವ್ ಮಾತನಾಡಿ, ಮಳೆಗಾಲದಲ್ಲಿ ದೇಹದಲ್ಲಿ ನೀರಿನ ಕೊರತೆಯು ರಕ್ತದೊತ್ತಡ ಹೆಚ್ಚಲು ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡವು ಹೃದ್ರೋಗಗಳಿಗೆ ತುಂಬಾ ಹಾನಿಕಾರಕ. ಈ ಪರಿಸರವು ದೇಹದಲ್ಲಿ ಪ್ರತಿರಕ್ಷಣೆಯನ್ನು ದುರ್ಬಲಗೊಳಿಸುತ್ತದೆ, ವೈರಸ್ ಸೋಂಕುಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಹೆಚ್ಚಿನ ಆರ್ದ್ರತೆಯು ಆಯಾಸವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಆರ್ದ್ರತೆಯು ನಿಮ್ಮ ಮನಸ್ಥಿತಿಗೂ ಅಡ್ಡಿಪಡಿಸಬಹುದು. ಇದು ಮನಸ್ಥಿತಿಯನ್ನು ನಿಯಂತ್ರಿಸುವ ಮೆದುಳಿನಲ್ಲಿರುವ ರಾಸಾಯನಿಕಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಹೆಚ್ಚಿನ ಆರ್ದ್ರತೆಯು ಜನರಲ್ಲಿ ಖಿನ್ನತೆ ಮತ್ತು ಮಾನಸಿಕ ಆತಂಕವನ್ನು ಉಂಟುಮಾಡುತ್ತದೆ. ಇದು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಮಾರಕವಾಗಿದೆ.

ತ್ವಚೆಯ ವಿಚಾರಕ್ಕೆ ಬಂದರೆ ಈ ಋತುವಿನಲ್ಲಿ ಚರ್ಮದ ರಂಧ್ರಗಳು ಮುಚ್ಚುವುದರಿಂದ ಮೊಡವೆ ಸಮಸ್ಯೆಯೂ ಹೆಚ್ಚುತ್ತದೆ. ಈ ಋತುವಿನಲ್ಲಿ ನಿಮ್ಮ ಹೊಟ್ಟೆಯ ಆರೋಗ್ಯವೂ ಹಾಳಾಗುತ್ತದೆ. ವೈದ್ಯರ ಪ್ರಕಾರ, ಶಿಲೀಂಧ್ರಗಳ ಬೆಳವಣಿಗೆಯಿಂದಾಗಿ ಆಹಾರವು ಬೇಗನೆ ಹಾಳಾಗುತ್ತದೆ. ಹಾಗಾಗಿ ಆಹಾರ ಸೇವಿಸುವಾಗ ಎಚ್ಚರದಿಂದಿರಿ.

ಮನೆಯನ್ನು ಬೆಚ್ಚಗಿರಿಸಿ

ನಾವು ವಾಸಿಸುವ ಸ್ಥಳದಲ್ಲಿ ತೇವಾಂಶ ಕಡಿಮೆ ಇರುವಂತೆ ನೋಡಿಕೊಳ್ಳುವುದರಿಂದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಸೋಂಕುರಹಿತವಾಗಿರಿಸುವುದು ನಿಮ್ಮ ಮೊದಲ ಜವಾಬ್ದಾರಿಯಾಗಿದೆ. ಕೊಠಡಿಗಳಿಂದ ತೇವಾಂಶವನ್ನು ದೂರವಿರಿಸಲು ಡಿಹ್ಯೂಮಿಡಿಫೈಯರ್‌ಗಳನ್ನು ಬಳಸಬಹುದು. ಇದಕ್ಕೆ ಎಸಿ ಕೂಡ ಉಪಯುಕ್ತವಾಗಿದೆ. ಮನೆಯಲ್ಲಿ ಯಾವುದೇ ಸೋರಿಕೆ ಅಥವಾ ಬಿರುಕುಗಳು ಕಂಡುಬಂದರೆ, ಮಳೆಗಾಲದ ಮೊದಲು ಅದನ್ನು ಸರಿಪಡಿಸುವುದು ಉತ್ತಮ. ಛಾವಣಿಯ ಮೇಲೆ ಜಲನಿರೋಧಕ ಲೇಪನವನ್ನು ಬಳಸಲು ಸಲಹೆ ನೀಡಲಾಗುತ್ತದೆ. ಕಿಟಿಕಿಗಳನ್ನು ಮುಚ್ಚಿಡಿ. ನೈಸರ್ಗಿಕ ಏರ್ ಫ್ರೆಶ್ನರ್‌ಗಳನ್ನು ಬಳಸಬಹುದು.