ನಿದ್ದೆ ಬರ್ತಿಲ್ಲಾ ಅಂತ ದೂರುವವರಲ್ಲಿ ನೀವು ಇದ್ದೀರಾ? ಈ 6 ಅಭ್ಯಾಸ ಪಾಲಿಸಿದ್ರೆ ಚೆನ್ನಾಗಿ ನಿದ್ರೆ ಬರೋದು ಖಂಡಿತ-health tips sleeping problem 6 guaranteed ways to get a better sleep avoid screen time aromatherapy chamomile tea ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ನಿದ್ದೆ ಬರ್ತಿಲ್ಲಾ ಅಂತ ದೂರುವವರಲ್ಲಿ ನೀವು ಇದ್ದೀರಾ? ಈ 6 ಅಭ್ಯಾಸ ಪಾಲಿಸಿದ್ರೆ ಚೆನ್ನಾಗಿ ನಿದ್ರೆ ಬರೋದು ಖಂಡಿತ

ನಿದ್ದೆ ಬರ್ತಿಲ್ಲಾ ಅಂತ ದೂರುವವರಲ್ಲಿ ನೀವು ಇದ್ದೀರಾ? ಈ 6 ಅಭ್ಯಾಸ ಪಾಲಿಸಿದ್ರೆ ಚೆನ್ನಾಗಿ ನಿದ್ರೆ ಬರೋದು ಖಂಡಿತ

ರಾತ್ರಿ ಮಲಗಿದ್ರೆ ನಿದ್ದೆ ಬರೊಲ್ಲ ಅನ್ನೋದು ಇತ್ತೀಚಿಗೆ ಹಲವರ ಸಮಸ್ಯೆ. ಹಾಗಂತ ಇದು ಪರಿಹಾರ ಮಾಡಲು ಸಾಧ್ಯವೇ ಆಗದಂತಹ ತೊಂದರೆಯೇನಲ್ಲ. ಈ 6 ಅಭ್ಯಾಸಗಳನ್ನು ರೂಢಿಸಿಕೊಂಡರೆ ನಿಮಗೆ ಚೆನ್ನಾಗಿ ನಿದ್ದೆ ಬರೋದು ಖಂಡಿತ. ಹಾಗಾದ್ರೆ ಆ ಅಭ್ಯಾಸಗಳಯ ಯಾವುವು ಅಂತ ಒಮ್ಮೆ ನೋಡಿ.

ನಿದ್ದೆ ಬರ್ತಿಲ್ಲಾ ಅಂತ ದೂರುವವರಲ್ಲಿ ನೀವು ಇದ್ದೀರಾ? ಈ 6 ಅಭ್ಯಾಸ ಪಾಲಿಸಿದ್ರೆ ಚೆನ್ನಾಗಿ ನಿದ್ರೆ ಬರೋದು ಖಂಡಿತ
ನಿದ್ದೆ ಬರ್ತಿಲ್ಲಾ ಅಂತ ದೂರುವವರಲ್ಲಿ ನೀವು ಇದ್ದೀರಾ? ಈ 6 ಅಭ್ಯಾಸ ಪಾಲಿಸಿದ್ರೆ ಚೆನ್ನಾಗಿ ನಿದ್ರೆ ಬರೋದು ಖಂಡಿತ

ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಾವು ಚೆನ್ನಾಗಿ ನಿದ್ದೆ ಮಾಡಬೇಕು. ಆರೋಗ್ಯವಂತ ಮನುಷ್ಯ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ನಿದ್ದೆಯಲ್ಲಿ ವ್ಯತ್ಯಾಸ ಆದ್ರೆ ಆರೋಗ್ಯ ಕೆಡುತ್ತೆ. ದೀರ್ಘಕಾಲದ ನಿದ್ದೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುವುದು ಸಹಜ. ಉತ್ತಮ ನಿದ್ದೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. ಇದು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ, ಮಾತ್ರವಲ್ಲ ನಮ್ಮನ್ನು ಸಕ್ರಿಯವಾಗಿರಿಸುತ್ತದೆ.

ಚೆನ್ನಾಗಿ ನಿದ್ದೆ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು ನಿಜಕ್ಕೂ ಕಷ್ಟವೇನಲ್ಲ. ನಿದ್ದೆಯ ದಿನಚರಿಯನ್ನು ಸರಿಪಡಿಸಲು ಮೂಲಭೂತ ವಿಷಯಗಳಿಂದ ಆರಂಭಿಸಬೇಕು. ಸರಿಯಾಗಿ ಸಮಯಕ್ಕೆ ಮಲಗುವುದು ಹಾಗೂ ಸರಿಯಾಗಿ ಸಮಯಕ್ಕೆ ಏಳುವುದು ಈ ಅಭ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ನಿದ್ದೆಯ ದಿನಚರಿಯನ್ನು ರೂಢಿಸಿಕೊಳ್ಳಬಹುದು. ಗುಣಮಟ್ಟದ ನಿದ್ದೆಗೆ ತಪ್ಪದೇ ಪಾಲಿಸಿಬೇಕಾದ ಕ್ರಮಗಳಿವು. 

ಸಿರ್ಕಾಡಿಯನ್‌ ರಿದಂ ಸರಿಪಡಿಸಿಕೊಳ್ಳಿ

ಗುಣಮಟ್ಟದ ನಿದ್ದೆಗೆ ನಾವು ಇಡಬೇಕಾದ ಮೊದಲ ಹೆಜ್ಜೆ ಎಂದರೆ ಸೂರ್ಯನ ಲಯದೊಂದಿಗೆ ನಮ್ಮ ದೇಹವನ್ನು ಹೊಂದಿಸುವುದು. ಸೂರ್ಯೋದಯಕ್ಕೂ ಮುಂಚೆ ಎಚ್ಚರಗೊಳ್ಳುವುದು ಹಾಗೂ ಸರಿಯಾಗಿ ಸಮಯಕ್ಕೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಮ್ಮ ದೇಹದ ಅಂತರಿಕ ಗಡಿಯಾರವನ್ನು ನಿಯಂತ್ರಿಸಲು ಅದ್ಭುತ ಕೊಡುಗೆಯನ್ನು ನೀಡುತ್ತದೆ. ಇದರಿಂದ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿಯೂ ಸಿಗುತ್ತದೆ.

ಆರೋಮಾಥೆರಪಿ

ಆರೋಮಾಥೆರಪಿ ಮನಸ್ಸಿಗೆ ಹೊಸ ಚೈತನ್ಯ ನೀಡುವುದು ಸುಳ್ಳಲ್ಲ. ಇದರಿಂದ ಮನಸ್ಸಿನ ದುಗುಡವೂ ಕಡಿಮೆಯಾಗುತ್ತದೆ. ಮಲಗುವ ಕೋಣೆಯಲ್ಲಿ ಲ್ಯಾವೆಂಡರ್‌ ಎಣ್ಣೆಯ ಡಿಫ್ಯೂಸರ್‌ ಇಡುವುದರಿಂದ ಕೂಡ ಅದರ ಘಮಕ್ಕೆ ಚೆನ್ನಾಗಿ ನಿದ್ದೆ ಬರುತ್ತದೆ. ಲ್ಯಾವೆಂಡರ್ ಸುಗಂಧವು ಮೆಲಟೋನಿನ್ ಬಿಡುಗಡೆಗೆ ಮೆದುಳಿಗೆ ಸೂಚನೆ ನೀಡುತ್ತದೆ. ಇದು ಉತ್ತಮ ನಿದ್ದೆಗೆ ಸಹಕರಿಸುತ್ತದೆ.

ಕ್ಯಾಮೊಮೈಲ್‌ ಟೀ

ರಾತ್ರಿ ನಾವು ಸೇವಿಸುವ ಆಹಾರವು ನಿದ್ದೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ರಾತ್ರಿ ಊಟದ ನಂತರ ಕ್ಯಾಮೊಮೈಲ್‌ ಟೀ ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದು ದೇಹ ಹಾಗೂ ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ಬೇಗನೆ ನಿದ್ದೆ ಆವರಿಸುತ್ತದೆ.

ಸಮಯವೇ ಎಲ್ಲ

ಆರೋಗ್ಯಕರ ನಿದ್ರೆಯ ದಿನಚರಿಯನ್ನು ರೂಪಿಸುವಲ್ಲಿ ಸಮಯವು ಪ್ರಮುಖ ಪಾತ್ರ ವಹಿಸುತ್ತದೆ. ಬೇಗ ಏಳುವುದು, ಮಧ್ಯಾಹ್ನ 3 ಗಂಟೆಯ ನಂತರ ಕಾಫಿ, ಟೀ, ಕೋಕ್, ಎನರ್ಜಿ ಡ್ರಿಂಕ್ಸ್ ಇತ್ಯಾದಿ ಕೆಫಿನ್ ಅಂಶ ಇರುವ ಉತ್ಪನ್ನಗಳನ್ನು ಸೇವಿಸದೇ ಇರುವುದು, ಹಾಸಿಗೆಯ ಮೇಲೆ ಒರಗುವ 30-60 ನಿಮಿಷಕ್ಕೂ ಮೊದಲೇ ಟಿವಿ, ಕಂಪ್ಯೂಟರ್‌, ಮೊಬೈಲ್‌ ಸ್ಕ್ರೀನ್‌ಗಳಿಂದ ದೂರ ಇರುವುದು ಈ ಅಭ್ಯಾಸಗಳ ಮೂಲಕ ಉತ್ತಮ ನಿದ್ದೆ ಸಾಧ್ಯವಾಗುತ್ತದೆ.

ಡಿಜಿಟಲ್‌ ಡಿಟಾಕ್ಸ್‌

ಮಲಗುವ ಕನಿಷ್ಠ ಒಂದ ಗಂಟೆಗೂ ಮೊದಲು ಡಿಜಿಟಲ್‌ ಸಾಧನಗಳಿಂದ ದೂರವಿರುವುದು ಬಹಳ ಮುಖ್ಯವಾಗುತ್ತದೆ. ಡಿಜಿಟಲ್‌ ಸಾಧನಗಳಿಂದ ಹೊರ ಹೊಮ್ಮುವ ನೀಲಿ ಕಿರಣಗಳು ಮೆಲಟೋನಿನ್‌ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ನಿದ್ದೆಗೆ ಕಾರಣವಾಗುವ ಹಾರ್ಮೋನ್‌ ಆಗಿದ್ದು, ಇದು ಉತ್ಪಾದನೆಯಾಗದೇ ಇದ್ದಾಗ ನಿದ್ದೆಯ ತೊಂದರೆ ಉಂಟಾಗಬಹುದು. ಮಲಗುವ ಮುನ್ನ ಮಂದ ಬೆಳಕು ಇರುವಂತೆ ನೋಡಿಕೊಳ್ಳಿ. ಅತಿಯಾದ ಬೆಳಕು ಕೂಡ ನಿದ್ದೆಗೆ ಹಾನಿ ಮಾಡುತ್ತದೆ.

ಕೋಣೆಯ ವಾತಾವರಣ

ಉತ್ತಮ ನಿದ್ದೆಗೆ ಕೋಣೆಯ ವಾತಾವರಣವೂ ಮುಖ್ಯವಾಗುತ್ತದೆ. ಕೋಣೆಯ ಉಷ್ಣಾಂಶವು 16 ರಿಂದ 19 ಡಿಗ್ರಿ ಸೆಲ್ಸಿಯಸ್ ಇರುವಂತೆ ನೋಡಿಕೊಳ್ಳಿ. ಕೋಣೆಯ ಉಷ್ಣಾಂಶವು ಉತ್ತಮ ಹಾಗೂ ಶಾಂತ ನಿದ್ದೆಗೆ ನೆರವಾಗುತ್ತದೆ. ನಿಮ್ಮ ವ್ಯಾಯಾಮ, ಊಟ ಮತ್ತು ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಆರೋಗ್ಯಕರ ಅಭ್ಯಾಸಗಳೊಂದಿಗೆ ಮೀಸಲಾದ ದೈನಂದಿನ ದಿನಚರಿಯನ್ನು ಅನುಸರಿಸಿ. ನಿಮ್ಮ ದೈನಂದಿನ ದಿನಚರಿಯನ್ನು ಸುಧಾರಿಸಲು ಜಾಗೃತ ಕ್ರಮಗಳನ್ನು ತೆಗೆದುಕೊಳ್ಳಿ, ಇದರೊಂದಿಗೆ ನಿದ್ರೆಯ ದಿನಚರಿಯು ಅನುಕರಣೆಯಾಗುತ್ತದೆ.

ಈ ಮೇಲಿನ ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಿದ್ದೆಯ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು. ಈ ಅಭ್ಯಾಸಗಳು ನಿಮ್ಮ ದಿನಚರಿಯಲ್ಲಿ ನಿರಂತರವಾಗಿ ಪಾಲನೆಯಾಗಬೇಕು. ಆಗ ಮಾತ್ರ ನಿಮ್ಮ ನಿದ್ದೆಯ ದಿನಚರಿ ಸುಧಾರಿಸಲು ಸಾಧ್ಯ.