ನರಮಂಡಲದ ಕಾರ್ಯ ಉತ್ತೇಜಿಸುವುದರಿಂದ ರಕ್ತಪರಿಚಲನೆ ಸುಧಾರಿಸುವವರೆಗೆ: ಕಿವಿ ಮಸಾಜ್ ಮಾಡುವುದರ ಪ್ರಯೋಜನಗಳು ಹಲವು
ಕನ್ನಡ ಸುದ್ದಿ  /  ಜೀವನಶೈಲಿ  /  ನರಮಂಡಲದ ಕಾರ್ಯ ಉತ್ತೇಜಿಸುವುದರಿಂದ ರಕ್ತಪರಿಚಲನೆ ಸುಧಾರಿಸುವವರೆಗೆ: ಕಿವಿ ಮಸಾಜ್ ಮಾಡುವುದರ ಪ್ರಯೋಜನಗಳು ಹಲವು

ನರಮಂಡಲದ ಕಾರ್ಯ ಉತ್ತೇಜಿಸುವುದರಿಂದ ರಕ್ತಪರಿಚಲನೆ ಸುಧಾರಿಸುವವರೆಗೆ: ಕಿವಿ ಮಸಾಜ್ ಮಾಡುವುದರ ಪ್ರಯೋಜನಗಳು ಹಲವು

ಬಾಡಿ ಮಸಾಜ್ ಬಗ್ಗೆ ತಿಳಿದಿರಬಹುದು. ಆದರೆ, ಕಿವಿ ಮಸಾಜ್ ಮಾಡುವುದರ ಪ್ರಯೋಜನಗಳು ಏನು ಎಂಬುದು ನಿಮಗೆ ತಿಳಿದಿದೆಯೇ?ಪ್ರತಿದಿನ ಕಿವಿಗಳಿಗೆ ಮಸಾಜ್ ಮಾಡುವುದರಿಂದ ಶ್ರವಣ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಮೆದುಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ನಿವಾರಿಸಬಹುದು. ಇನ್ನೂ ಅನೇಕ ಪ್ರಯೋಜನಗಳಿದ್ದು, ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

ನರಮಂಡಲದ ಕಾರ್ಯ ಉತ್ತೇಜಿಸುವುದರಿಂದ ರಕ್ತಪರಿಚಲನೆ ಸುಧಾರಿಸುವವರೆಗೆ: ಕಿವಿ ಮಸಾಜ್ ಮಾಡುವುದರ ಪ್ರಯೋಜನಗಳು ಹಲವು
ನರಮಂಡಲದ ಕಾರ್ಯ ಉತ್ತೇಜಿಸುವುದರಿಂದ ರಕ್ತಪರಿಚಲನೆ ಸುಧಾರಿಸುವವರೆಗೆ: ಕಿವಿ ಮಸಾಜ್ ಮಾಡುವುದರ ಪ್ರಯೋಜನಗಳು ಹಲವು (PC: Canva)

ಬಾಡಿ ಮಸಾಜ್, ಮುಖದ ಮಸಾಜ್ ಬಗ್ಗೆ ತಿಳಿದಿರಬಹುದು. ಆದರೆ, ಕಿವಿ ಮಸಾಜ್ ಬಗ್ಗೆ ಎಂದಾದರೂ ಕೇಳಿದ್ದೀರಾ. ಕಿವಿ ಮಸಾಜ್ ಮಾಡುವುದರಿಂದಲೂ ಅನೇಕ ಪ್ರಯೋಜನಗಳಿವೆ. ಬಾಡಿ ಮಸಾಜ್ ಮಾಡಲು ಬೇರೊಬ್ಬ ವ್ಯಕ್ತಿಯ ಸಹಾಯ ಪಡೆಯಬೇಕಾಗುತ್ತದೆ. ಆದರೆ, ಕಿವಿ ಮಸಾಜ್ ಅನ್ನು ಸ್ವತಃ ನಾವೇ ಮಾಡಬಹುದು. ಕಿವಿಯ ಭಾಗವನ್ನು ಮಸಾಜ್ ಮಾಡುವುದರಿಂದ ಶ್ರವಣ ಶಕ್ತಿಯನ್ನು ಹೆಚ್ಚಿಸಬಹುದು ಮತ್ತು ಮೆದುಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳನ್ನು ನಿವಾರಿಸಬಹುದು.

ಪ್ರತಿದಿನ ಬೆರಳುಗಳ ಸಹಾಯದಿಂದ ಕಿವಿಗಳ ಸುತ್ತಲೂ ಮಸಾಜ್ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಶಿಳ್ಳೆ, ಜೋರಾದ ಶಬ್ಧದಿಂದ ಕಿವಿಯಲ್ಲಿ ಗುಂಯಿ ಎನ್ನುವ ಶಬ್ಧ ಬರುತ್ತದೆ. ಇದರಿಂದ ಆಗಾಗ ತಲೆನೋವು ಸಹ ಬರಬಹುದು. ಹೀಗಾಗಿ ಕಿವಿ ಮಸಾಜ್ ಮಾಡುವುದರಿಂದ ಇವೆಲ್ಲವನ್ನೂ ಹೋಗಲಾಡಿಸಲು ಸಹಕಾರಿಯಾಗಿದೆ.

ಕಿವಿ ಮಸಾಜ್ ಮಾಡುವುದರ ಪ್ರಯೋಜನಗಳು

ನರಮಂಡಲದ ಕಾರ್ಯ ಉತ್ತೇಜಿಸಲು ಸಹಕಾರಿ: ಕಿವಿಯ ಸುತ್ತಲಿನ ಪ್ರದೇಶವನ್ನು ನಿಧಾನವಾಗಿ ಮಸಾಜ್ ಮಾಡುವುದರಿಂದ ನರಮಂಡಲವನ್ನು ಉತ್ತೇಜಿಸುತ್ತದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ತೋರುಬೆರಳು ಮತ್ತು ಮಧ್ಯದ ಬೆರಳಿನ ಸಹಾಯದಿಂದ, ವಿ ಆಕಾರದಲ್ಲಿ ನಿಧಾನವಾಗಿ ಉಜ್ಜುತ್ತಾ ಮಸಾಜ್ ಮಾಡಿ.

ಶಬ್ಧಗಳಿಂದ ಪರಿಹಾರ: ನಿರಂತರ ಶಿಳ್ಳೆ, ಗದ್ದಲ ಸೇರಿದಂತೆ ವಿವಿಧ ಶಬ್ಧವು ಕಿವಿಯಲ್ಲಿ ಗುಂಯಿಗುಡುತ್ತಿದ್ದರೆ, ಈ ಮಸಾಜ್ ಮಾಡುವುದರಿಂದ ಪ್ರಯೋಜನ ಪಡೆಯಬಹುದು. ಕೈಗಳಿಂದ ಕಿವಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಕಿವಿಯಲ್ಲಿ ಶಿಳ್ಳೆ ಶಬ್ಧವನ್ನು ಕಡಿಮೆ ಮಾಡಲು ಮತ್ತು ಶ್ರವಣ ಶಕ್ತಿಯನ್ನು ಹೆಚ್ಚಿಸಲು ಪ್ರತಿದಿನ ಇದನ್ನು ಮಾಡಿ.

ವಿಶ್ರಾಂತಿ ನೀಡಲು ಸಹಕಾರಿ: ಕಿವಿಗೆ ಪ್ರತಿದಿನ ಮಸಾಜ್ ಮಾಡುವುದರಿಂದ ದೇಹದಲ್ಲಿ ಉದ್ಭವಿಸುವ ಆತಂಕ ಮತ್ತು ಒತ್ತಡದಂತಹ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದು ಮನಸ್ಸಿಗೆ ಶಾಂತಿ ಹಾಗೂ ವಿಶ್ರಾಂತಿ ನೀಡಲು ಸಹಕಾರಿಯಾಗಿದೆ.

ಆಲಸ್ಯ ಮತ್ತು ಆಯಾಸವನ್ನು ಪರೀಕ್ಷಿಸಿ: ಆಲಸ್ಯ ಮತ್ತು ದಣಿವನ್ನು ಹೊಂದಿದ್ದರೆ ಕೆಲವರಿ ಚಹಾ ಅಥವಾ ಕಾಫಿ ಕುಡಿಯುವ ಬಯಕೆಯಾಗಬಹುದು. ಟೀ, ಕಾಫಿ ಕುಡಿಯುವ ಬದಲು ಹೀಗಾದಾಗ ಕಿವಿ ಮಸಾಜ್ ಮಾಡಿ. ಫಲಿತಾಂಶ ನೋಡಿ ಖಂಡಿತ ಆಶ್ಚರ್ಯಚಕಿತರಾಗುವಿರಿ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಿವಿಗೆ ಮಸಾಜ್ ಮಾಡುವುದರಿಂದ, ಆಲಸ್ಯ ಮತ್ತು ಆಯಾಸದಂತಹ ಸಮಸ್ಯೆಗಳು ಕ್ರಮೇಣ ದೂರವಾಗುತ್ತವೆ.

ಆಗಾಗ್ಗೆ ತಲೆನೋವಿನಿಂದ ಬಳಲುತ್ತಿರುವವರಿಗೆ, ಕಿವಿ ಮಸಾಜ್ ಸಹ ಉತ್ತಮ ಪರಿಹಾರವನ್ನು ನೀಡುತ್ತದೆ. ನೀವು ಪ್ರತಿದಿನ 5 ರಿಂದ 10 ನಿಮಿಷಗಳ ಕಾಲ ಎರಡೂ ಕಿವಿಗಳನ್ನು ಮಸಾಜ್ ಮಾಡಿದರೆ, ನರಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಕ್ರಮೇಣ ತಲೆನೋವಿನ ಸಮಸ್ಯೆ ದೂರವಾಗುತ್ತದೆ.

ಉಲ್ಲಾಸದಿಂದಿರಲು ಸಹಕಾರಿ: ಕಿವಿಗಳಿಗೆ ಮಸಾಜ್ ಮಾಡುವುದರಿಂದ ಮೆದುಳಿನಲ್ಲಿ ಎಂಡಾರ್ಫಿನ್ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ಮನಸ್ಸನ್ನು ಉಲ್ಲಾಸ ಮತ್ತು ಹೆಚ್ಚು ಏಕಾಗ್ರವಾಗಿಸುತ್ತದೆ.

ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ: ಕಿವಿಗಳಿಗೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಸರಿಯಾದ ರಕ್ತ ಪರಿಚಲನೆಯನ್ನು ಒದಗಿಸುವುದು ಮಾತ್ರವಲ್ಲದೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.

ಉಸಿರಾಟದ ವ್ಯವಸ್ಥೆ: ಕಿವಿಗಳಲ್ಲಿನ ಕೆಲವು ಬಿಂದುಗಳು ಉಸಿರಾಟದ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿವೆ. ಕಿವಿಗಳಿಗೆ ಮಸಾಜ್ ಮಾಡುವುದರಿಂದ ಉಸಿರಾಟದ ನಾಳ ಸುಧಾರಿಸುತ್ತದೆ. ಆಹಾರವು ದೇಹವನ್ನು ಸರಿಯಾಗಿ ತಲುಪುತ್ತದೆ.

ಶಾಂತಿಯುತ ನಿದ್ರೆ: ಕಿವಿಗಳನ್ನು ಮಸಾಜ್ ಮಾಡುವುದರಿಂದ ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ. ಇದರ ಪರಿಣಾಮವಾಗಿ ರಾತ್ರಿ ಉತ್ತಮ ನಿದ್ದೆ ಪಡೆಯಲು ಸಾಧ್ಯ.

ಚರ್ಮದ ಆರೋಗ್ಯ: ಕಿವಿಗಳಿಗೆ ಮಸಾಜ್ ಮಾಡುವುದರಿಂದ ಚರ್ಮದ ಮೇಲೆ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಇದು ಕಿವಿಗಳ ಚರ್ಮದ ಮೇಲೆ ಆರೋಗ್ಯಕರ ಬದಲಾವಣೆಗಳನ್ನು ತರುತ್ತದೆ.

ಒಟ್ಟಿನಲ್ಲಿ ಕಿವಿಗೆ ಮಸಾಜ್ ಮಾಡುವುದರಿಂದ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು. ನೀವು ಕೂಡ ಮೇಲೆ ತಿಳಿಸಿದಂತೆ ಯಾವೂದಾದರೂ ತೊಂದರೆ ಎದುರಿಸುತ್ತಿದ್ದಲ್ಲಿ ಕಿವಿಗೆ ಮಸಾಜ್ ಮಾಡುವ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದು.

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner