Blood Pressure: ರಕ್ತದೊತ್ತಡ ನಿರ್ಲಕ್ಷಿಸದಿರಿ; ದೃಷ್ಟಿ ಸಮಸ್ಯೆ, ಬುದ್ಧಿ ಮಾಂದ್ಯತೆ ಸೇರಿದಂತೆ ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಚ್ಚರ!
ಕನ್ನಡ ಸುದ್ದಿ  /  ಜೀವನಶೈಲಿ  /  Blood Pressure: ರಕ್ತದೊತ್ತಡ ನಿರ್ಲಕ್ಷಿಸದಿರಿ; ದೃಷ್ಟಿ ಸಮಸ್ಯೆ, ಬುದ್ಧಿ ಮಾಂದ್ಯತೆ ಸೇರಿದಂತೆ ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಚ್ಚರ!

Blood Pressure: ರಕ್ತದೊತ್ತಡ ನಿರ್ಲಕ್ಷಿಸದಿರಿ; ದೃಷ್ಟಿ ಸಮಸ್ಯೆ, ಬುದ್ಧಿ ಮಾಂದ್ಯತೆ ಸೇರಿದಂತೆ ಈ ಸಮಸ್ಯೆಗಳು ನಿಮ್ಮನ್ನು ಕಾಡಬಹುದು ಎಚ್ಚರ!

Blood Pressure: ಕಾಲ ಕಾಲಕ್ಕೆ ರಕ್ತದೊತ್ತಡ ಪರೀಕ್ಷೆ ಮಾಡಿ ಎಂದು ವೈದ್ಯರು ಹೇಳುತ್ತಲೇ ಇರುತ್ತಾರೆ. ನಾವು ಸರಿಯಾದ ಸಮಯಕ್ಕೆ ರಕ್ತದೊತ್ತಡ ಪರೀಕ್ಷೆ ಮಾಡದೇ ಹೋದಲ್ಲಿ ನಾವು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ರಕ್ತದೊತ್ತಡ ಸಮಸ್ಯೆಯಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸಬಹುದು ಜಾಗ್ರತೆ
ರಕ್ತದೊತ್ತಡ ಸಮಸ್ಯೆಯಿಂದ ಇನ್ನಷ್ಟು ಸಮಸ್ಯೆಗಳು ಉದ್ಭವಿಸಬಹುದು ಜಾಗ್ರತೆ

ರಕ್ತದೊತ್ತಡ: ದಿನನಿತ್ಯದ ಜಂಜಾಟಗಳಲ್ಲಿ ಎಷ್ಟೋ ಬಾರಿ ನಾವು ನಮ್ಮ ಆರೋಗ್ಯದ ಮೇಲೆ ಕಾಳಜಿ ತೋರುವುದನ್ನೇ ಮರೆತುಬಿಡುತ್ತೇವೆ. ಮನುಷ್ಯರು ಸಾಮಾನ್ಯವಾಗಿ ನಿರ್ಲಕ್ಷಿಸುವ ಒಂದು ಆರೋಗ್ಯ ಸಮಸ್ಯೆ ಎಂದರೆ ಅದು ಅಧಿಕ ರಕ್ತದೊತ್ತಡ .

ನಿಮ್ಮ ರಕ್ತದೊತ್ತಡವು 120/80 mmHg ಮೀರಿದಾಗ ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಹಾನಿ ಹಾಗೂ ಹೃದಯಾಘಾತದ ಸಮಸ್ಯೆ ಉಂಟಾಗಬಹುದು. ಹೀಗಾಗಿ ಹೃದಯಾಘಾತದ ಸಮಸ್ಯೆಗಳಿಂದ ನಿಮ್ಮನ್ನು ನೀವು ಉಳಿಸಿಕೊಳ್ಳಬೇಕು ಎಂದರೆ ನಿಮ್ಮ ರಕ್ತದೊತ್ತಡದ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅತ್ಯವಶ್ಯಕವಾಗಿದೆ.

ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನೀವು ನಿರ್ಲಕ್ಷಿಸಿದರೆ ಅಥವಾ ರಕ್ತದೊತ್ತಡ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆ ಮಾಡದೇ ಹೋದಲ್ಲಿ ನೀವು ಯಾವೆಲ್ಲ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ.

ಹೃದಯ ಸಂಬಂಧಿ ಕಾಯಿಲೆಗಳು : ಅಧಿಕ ರಕ್ತದೊತ್ತಡ ಸಮಸ್ಯೆಯು ನೇರವಾಗಿ ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಅಪಧಮನಿಗಳ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇದರಿಂದ ನಿಮಗೆ ಹೃದಯಾಘಾತ, ಹೃದಯ ವೈಫಲ್ಯದಂತಹ ಸಮಸ್ಯೆ ಉಂಟಾಗಬಹುದು.

ದೃಷ್ಟಿ ಸಮಸ್ಯೆ : ಅತಿಯಾದ ರಕ್ತದೊತ್ತಡ ಸಮಸ್ಯೆಯು ನಿಮ್ಮ ಕಣ್ಣುಗಳಿಗೆ ಹಾನಿಯುಂಟು ಮಾಡಬಹುದು. ಅಧ್ಯಯನವೊಂದರ ಪ್ರಕಾರ ಅಧಿಕ ರಕ್ತದೊತ್ತಡವು ದೃಷ್ಟಿಹೀನತೆಗೆ ಕಾರಣವಾಗುತ್ತದೆ ಎಂದು ತಿಳಿದು ಬಂದಿದೆ. ನಿಮ್ಮ ರಕ್ತನಾಳಗಳಿಗೆ ಉಂಟಾಗುವ ಹಾನಿಯು ಹೈಪರ್ಟೆನ್ಸಿವ್ ರೆಟಿನೋಪತಿ ಎಂಬ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇದು ನಿಮ್ಮ ದೃಷ್ಟಿದೋಷಕ್ಕೆ ಕಾರಣವಾಗಬಹುದು.

ಬುದ್ಧಿಮಾಂದ್ಯತೆ : ಫ್ರಾಂಟಿಯರ್ಸ್ ಇನ್ ನ್ಯೂರಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಅಧಿಕ ರಕ್ತದೊತ್ತಡವು ಬುದ್ಧಿಮಾಂದ್ಯತೆಗೆ ಕಾರಣವಾಗುತ್ತದೆ ಎಂದು ಕಂಡುಬಂದಿದೆ. ದೀರ್ಘಕಾಲದ ಅಧಿಕ ರಕ್ತದೊತ್ತಡವು ಮೆದುಳಿನ ನಾಳಗಳನ್ನು ಹಾನಿಗೊಳಿಸುತ್ತದೆ, ಇದು ಬುದ್ಧಿಮಾಂದ್ಯತೆಯ ಲಕ್ಷಣಗಳನ್ನು ಉಂಟುಮಾಡುತ್ತದೆ.

ಸ್ಟ್ರೋಕ್ : ದೀರ್ಘಕಾಲದ ಅಧಿಕ ರಕ್ತದೊತ್ತಡವು ಮೆದುಳಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ಇದು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಮೆದುಳಿಗೆ ರಕ್ತದ ಕೊರತೆಯ ಪಾರ್ಶ್ವವಾಯುಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಥೈರಾಯ್ಡ್ : ಅಧಿಕ ರಕ್ತದೊತ್ತಡವು ನೇರವಾಗಿ ಥೈರಾಯ್ಡ್ ಸಮಸ್ಯೆಯನ್ನು ಉಂಟು ಮಾಡದೇ ಇದ್ದರೂ ಸಹ ಥೈರಾಯ್ಡ್ ಗ್ರಂಥಿಗಳ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ರಕ್ತದ ಪೂರೈಕೆಯು ಥೈರಾಯ್ಡ್ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಬಹುದು.

ಗರ್ಭಧಾರಣೆಯ ತೊಡಕುಗಳು: ಗರ್ಭಿಣಿಯರು ಎಂದಿಗೂ ರಕ್ತದೊತ್ತಡದ ಬಗ್ಗೆ ನಿರ್ಲಕ್ಷ್ಯ ತೋರಲೇಬಾರದು. ಇದು ಅನೇಕ ಸಮಸ್ಯೆಗಳಿಗೆ ದಾರಿ ಮಾಡಬಹುದು. ಅಧಿಕ ರಕ್ತದೊತ್ತಡದಿಂದಾಗಿ ಮೂತ್ರಪಿಂಡ ಹಾಗೂ ಯಕೃತ್ತಿಗೆ ಹಾನಿಯುಂಟಾಗಬಹುದು. ಇದು ತಾಯಿ ಹಾಗೂ ಹುಟ್ಟಲಿರುವ ಮಗುವಿನ ಮೇಲೆ ದೊಡ್ಡ ಮಟ್ಟದ ಅಪಾಯವನ್ನು ತರಬಹುದು.

ಉಸಿರಾಟದ ಸಮಸ್ಯೆಗಳು : ದೀರ್ಘಕಾಲದ ಅಧಿಕ ರಕ್ತದೊತ್ತಡ ಸಮಸ್ಯೆಯು ಶ್ವಾಸಕೋಶದ ಕಾಯಿಲೆಗೆ ಕಾರಣವಾಗುತ್ತದೆ. ಶ್ವಾಸಕೋಶದಲ್ಲಿರುವ ಸಣ್ಣ ಅಪಧಮನಿಗಳ ಮೇಲೆ ದೀರ್ಘಕಾಲದ ರಕ್ತದೊತ್ತಡ ಪರಿಣಾಮ ಬೀರುತ್ತದೆ. ಇದರಿಂದ ಶ್ವಾಸಕೋಶ ದುರ್ಬಲಗೊಳ್ಳಬಹುದು.

ಮೂತ್ರಪಿಂಡಗಳಿಗೆ ಹಾನಿ : ಅಧಿಕ ರಕ್ತದೊತ್ತಡಕ್ಕೆ ಸೂಕ್ತವಾದ ಚಿಕಿತ್ಸೆ ಸಿಗದೇ ಹೋದಲ್ಲಿ ಇದು ಭವಿಷ್ಯದಲ್ಲಿ ಮೂತ್ರಪಿಂಡಗಳ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಇದರಿಂದ ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಆರಂಭಗೊಳ್ಳುತ್ತದೆ. ಅಧಿಕ ರಕ್ತದೊತ್ತಡವು ಮೂತ್ರಪಿಂಡ ಸೇರಿದಂತೆ ದೇಹದ ಅನೇಕ ಅಂಗಗಳನ್ನು ಹಾಳು ಮಾಡುತ್ತದೆ ಎಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್‌ನಲ್ಲಿ ಪ್ರಕಟವಾದ ಅಧ್ಯಯನ ಹೇಳಿದೆ.

ಸ್ಲೀಪ್ ಅಪ್ನಿಯಾ : ದೀರ್ಘಕಾಲದ ರಕ್ತದೊತ್ತಡವು ಸ್ಲೀಪ್ ಅಪ್ನಿಯಾದಂತಹ ಸಮಸ್ಯೆಯುಂಟು ಮಾಡಬಹುದು . ಈ ಸಮಸ್ಯೆಯು ಇದಕ್ಕಿದ್ದಂತೆಯೇ ಮನುಷ್ಯನ ಉಸಿರಾಟವನ್ನು ನಿಲ್ಲಿಸುವ ಸಾಮರ್ಥ್ಯ ಹೊಂದಿರುತ್ತದೆ.

Whats_app_banner