ಕನ್ನಡ ಸುದ್ದಿ  /  ಜೀವನಶೈಲಿ  /  ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

ಬೇಸಿಗೆಯಲ್ಲಿ ಹೇರಳವಾಗಿ ಸಿಗುವ ತರಕಾರಿಗಳಲ್ಲಿ ಸೌತೆಕಾಯಿ ಕೂಡ ಒಂದು. ಸೌತೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಅಂದ ಹೆಚ್ಚುವುದರಿಂದ ಜೀರ್ಣಕ್ರಿಯೆ ವೃದ್ಧಿಯಾಗುವವರೆಗೆ ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.

ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು
ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

ಬೇಸಿಗೆಕಾಲದಲ್ಲಿ ಸೌತೆಕಾಯಿ ಎಂದರೆ ಎಲ್ಲರ ನೆಚ್ಚಿನ ತರಕಾರಿಯಾಗುತ್ತದೆ. ಅದಕ್ಕೆ ಕಾರಣ ಇದರಲ್ಲಿರುವ ನೀರಿನಾಂಶ. ಇದರ ನೀರಿನ ಅಂಶವು ಬಿಸಿಲಿನ ಧಗೆಯಿಂದ ದೇಹಕ್ಕೆ ಕೊಂಚ ಆರಾಮ ನೀಡುತ್ತದೆ. ನಮ್ಮ ದೇಹ ಹಾಗೂ ಚರ್ಮದ ಆರೋಗ್ಯದ ವಿಷಯ ಬಂದಾಗ ಸೌತೆಕಾಯಿಗಳು ಸೂಪರ್ ಹೀರೋಗಳಂತೆ ಕಾರ್ಯ ನಿರ್ವಹಿಸುತ್ತವೆ. ತ್ವಚೆಯ ಆರೋಗ್ಯವನ್ನು ಕಾಪಾಡುವುದರಲ್ಲಿ ಸೌತೆಕಾಯಿ ಎತ್ತಿದ ಕೈ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಟ್ರೆಂಡಿಂಗ್​ ಸುದ್ದಿ

ಅತೀ ಹೆಚ್ಚು ನೀರಿನ ಅಂಶವನ್ನೇ ಹೊಂದಿರುವಂತಹ ಸೌತೆಕಾಯಿಗಳು ಮನುಷ್ಯನ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗದಂತೆ ಕಾಪಾಡುತ್ತವೆ. ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ನಿಯಮಿತವಾಗಿ ಇಡುವಲ್ಲಿ ಸೌತೆಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೇ ಸೌತೆಕಾಯಿಯಲ್ಲಿ ಇರುವ ನಾರಿನಾಂಶ ಅಂಶವು ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಮಲಬದ್ಧತೆ ಸಮಸ್ಯೆಯಿಂದ ನಿಮ್ಮನ್ನು ದೂರವಿಡುತ್ತದೆ. ಸೌತೆಕಾಯಿಯಲ್ಲಿ ಇರುವ ಕಿಣ್ವಗಳು ದೇಹದಲ್ಲಿರುವ ಪ್ರೊಟೀನ್ ಅಂಶವನ್ನು ಚೆನ್ನಾಗಿ ಜೀರ್ಣಗೊಳಿಸಲು ಸಹಕರಿಸುತ್ತವೆ. ಒಟ್ಟಿನಲ್ಲಿ ನಿಮ್ಮ ದೇಹದ ಆರೋಗ್ಯವನ್ನು ವೃದ್ಧಿಸುವ ಎಲ್ಲಾ ರೀತಿಯ ಪ್ರಯತ್ನವನ್ನು ಸೌತೆಕಾಯಿ ಮಾಡುತ್ತದೆ. ಇನ್ನು ತ್ವಚೆಯ ವಿಚಾರಕ್ಕೆ ಬಂದರೆ ಸೌತೆಕಾಯಿಗಳು ತ್ವಚೆಯ ಆರೋಗ್ಯವನ್ನು ಕಾಪಾಡುವ ವಿಚಾರದಲ್ಲಿ ಮಾಂತ್ರಿಕನಂತೆ ಕಾರ್ಯ ನಿರ್ವಹಿಸುತ್ತವೆ.!

ಸೌತೆಕಾಯಿಯಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭವಿದೆ?

ನಿರ್ಜಲೀಕರಣ ಸಮಸ್ಯೆಯಿಂದ ಮುಕ್ತಿ: ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಿನ ಪ್ರಮಾಣದಲ್ಲಿ ಅಡಕವಾಗಿರುತ್ತದೆ. ಇದರಿಂದ ನಿಮಗೆ ನಿರ್ಜಲೀಕರಣದ ಸಮಸ್ಯೆ ಉಂಟಾಗುವುದೇ ಇಲ್ಲ. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಕೂಡ ಸರಾಗವಾಗಿ ಇರುತ್ತದೆ.

ಜೀರ್ಣಕ್ರಿಯೆ ವೃದ್ಧಿಸುತ್ತದೆ: ಸೌತೆಕಾಯಿಯಲ್ಲಿ ನಾರಿನಾಂಶ ಅಗಾಧ ಪ್ರಮಾಣದಲ್ಲಿದ್ದು ಇದು ನಿಮಗೆ ಮಲಬದ್ಧತೆಯಂತಹ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಅಲ್ಲದೇ ಸೌತೆಕಾಯಿಯಲ್ಲಿ ಇರುವ ಎರೆಪ್ಸಿನ್ ಎಂಬ ಕಿಣ್ವವು ಪ್ರೊಟೀನ್‌ ಅನ್ನು ಜೀರ್ಣಗೊಳಿಸಲು ಸಹಕಾರಿಯಾಗಿದೆ. ಸೌತೆಕಾಯಿಯಲ್ಲಿ ಇರುವ ಅಲ್ಕಲಿನ್ ಅಂಶವು ದೇಹದ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.

ತ್ಚಚೆಯ ಕಾಂತಿ: ಸೌತೆಕಾಯಿಯಲ್ಲಿ ಇರುವ ನೀರಿನ ಅಂಶವು ಹೇಗೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆಯೋ ಅದೇ ರೀತಿ ತ್ವಚೆಯ ಕಾಂತಿಯನ್ನು ಕಾಪಾಡುವ ಕಾರ್ಯವನ್ನೂ ಮಾಡುತ್ತದೆ. ಸೌತೆಕಾಯಿಯಲ್ಲಿ ಇರುವ ವಿಟಮಿನ್ ಸಿ ಹಾಗೂ ಬೀಟಾ ಅಂಶವು ಸುಕ್ಕುಗಟ್ಟುವಿಕೆಯಂತಹ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.

ಚರ್ಮದ ಹೊಳಪು: ಸೌತೆಕಾಯಿಯಲ್ಲಿರುವ ಸಿಲಿಕಾ ಅಂಶವು ಮೈಬಣ್ಣವನ್ನು ಸುಧಾರಿಸಲು ಮತ್ತು ಚರ್ಮವನ್ನು ಪುನರ್ಯೌವನಗೊಳಿಸಲು ಸಹಾಯ ಮಾಡುತ್ತದೆ, ಹೆಚ್ಚು ತಾರುಣ್ಯವನ್ನು ನೀಡುತ್ತದೆ.

ಚರ್ಮವನ್ನು ಬಿಗಿಗೊಳಿಸುವುದು: ಸೌತೆಕಾಯಿಯಲ್ಲಿರುವ ಸಂಕೋಚಕ ಗುಣಗಳು ಚರ್ಮವನ್ನು ಬಿಗಿಗೊಳಿಸಲು ಮತ್ತು ತ್ವಚೆಯ ರಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ನಯವಾದ ಮೈಬಣ್ಣವನ್ನು ನೀಡುತ್ತದೆ.

ಸೌತೆಕಾಯಿಯನ್ನು ಸೇವನೆ ಮಾಡಲು ನೀವು ಹೆಚ್ಚೇನು ಮಾಡಬೇಕು ಎಂದಿಲ್ಲ. ಹಾಗೆಯೇ ಸೌತೆಕಾಯಿ ತುಂಡುಗಳನ್ನು ಸೇವಿಸಬಹುದು. ಅಲ್ಲದೇ ಸಲಾಡ್‌ಗಳ ರೂಪದಲ್ಲಿಯೂ ಸೇವನೆ ಮಾಡಬಹುದಾಗಿದೆ.

ಇದು ಮಾತ್ರವಲ್ಲದೇ ಸೌತೆಕಾಯಿಯನ್ನು ಹೊಂದಿರುವ ಕ್ರೀಮ್‌ಗಳ ಬಳಕೆ ಅಥವಾ ನೇರವಾಗಿ ಮುಖಕ್ಕೆ ಸೌತೆಕಾಯಿಯನ್ನು ಲೇಪಿಸಿಕೊಳ್ಳುವ ಮೂಲಕವೂ ನೀವು ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ನಿತ್ಯದ ಆಹಾರದಲ್ಲಿ ನೀವು ಸೌತೆಕಾಯಿಯನ್ನು ಸೇವಿಸುವ ಮೂಲಕ ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಿದೆ.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)