Sweet Potato: ತೂಕ ಇಳಿಕೆಯಿಂದ ಹಿಡಿದು ಹೃದಯದ ಆರೋಗ್ಯದವರೆಗೆ: ಸಿಹಿಗೆಣಸಿನ ಸೇವನೆಯಿಂದ ಸಿಗಲಿದೆ ನೂರೆಂಟು ಲಾಭ-health tips sweet potato for weight loss nutritional benefits of yams for overall health rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Sweet Potato: ತೂಕ ಇಳಿಕೆಯಿಂದ ಹಿಡಿದು ಹೃದಯದ ಆರೋಗ್ಯದವರೆಗೆ: ಸಿಹಿಗೆಣಸಿನ ಸೇವನೆಯಿಂದ ಸಿಗಲಿದೆ ನೂರೆಂಟು ಲಾಭ

Sweet Potato: ತೂಕ ಇಳಿಕೆಯಿಂದ ಹಿಡಿದು ಹೃದಯದ ಆರೋಗ್ಯದವರೆಗೆ: ಸಿಹಿಗೆಣಸಿನ ಸೇವನೆಯಿಂದ ಸಿಗಲಿದೆ ನೂರೆಂಟು ಲಾಭ

ಸಿಹಿ ಗೆಣಸು ಅಗ್ಗದ ದರದಲ್ಲಿ ತಿನ್ನಲು ಸಿಗುವ ಒಂದು ಆಹಾರ ಪದಾರ್ಥ. ಆದರೆ ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳನ್ನು ಕೇಳುತ್ತಾ ಹೋದರೆ ಇದೆಷ್ಟು ಶ್ರೀಮಂತ ತರಕಾರಿ ಎಂದು ಎನಿಸದೇ ಇರದು. ತೂಕ ಇಳಿಕೆಯಿಂದ ಹಿಡಿದು ಮಧುಮೇಹ ನಿಯಂತ್ರಣ ಅಷ್ಟೇ ಏಕೆ ಹೃದಯದ ಆರೋಗ್ಯ ಕಾಪಾಡುವಲ್ಲಿಯೂ ಸಿಹಿ ಗೆಣಸು ಸಹಕಾರಿಯಾಗಿದೆ.

ತೂಕ ಇಳಿಕೆಯಿಂದ ಹಿಡಿದು ಹೃದಯದ ಆರೋಗ್ಯ ಕಾಪಾಡುವಲ್ಲಿಯೂ ಸಿಹಿ ಗೆಣಸು ಸಹಕಾರಿಯಾಗಿದೆ .
ತೂಕ ಇಳಿಕೆಯಿಂದ ಹಿಡಿದು ಹೃದಯದ ಆರೋಗ್ಯ ಕಾಪಾಡುವಲ್ಲಿಯೂ ಸಿಹಿ ಗೆಣಸು ಸಹಕಾರಿಯಾಗಿದೆ .

ಸಿಹಿ ಗೆಣಸು ಪ್ರಿಯರಿಗೆ ಕೊರತೆಯಿಲ್ಲ. ಆಯಾ ಋತುಮಾನಗಳಲ್ಲಿ ಮಾತ್ರ ಲಭ್ಯವಿರುವ ಸಿಹಿಗೆಣಸನ್ನು ಸವಿಯುವ ಮಜವೇ ಬೇರೆ. ಅಲ್ಲದೇ ಇವುಗಳು ಬಾಯಿಗೆ ರುಚಿಕರ ಎನಿಸುವುದರ ಜೊತೆಯಲ್ಲಿ ವಿಟಮಿನ್ ಎ ಸೇರಿದಂತೆ ಸಾಕಷ್ಟು ಖನಿಜಾಂಶಗಳನ್ನು ಹೊಂದಿರುವ ಮೂಲಕ ದೇಹಕ್ಕೆ ಲಾಭವನ್ನು ತಂದುಕೊಡುತ್ತದೆ. ಇವುಗಳಲ್ಲಿ ಫೈಬರ್ ಅಂಶ ಅಗಾಧ ಪ್ರಮಾಣದಲ್ಲಿ ಅಡಕವಾಗಿ ಇರುವುದರಿಂದ ನಿಮಗೆ ಸುಲಭದಲ್ಲಿ ಹಸಿವಿನ ಅನುಭವ ಉಂಟಾಗುವುದಿಲ್ಲ. ಇದರಿಂದ ನಿಮ್ಮ ದೇಹಕ್ಕೆ ಕ್ಯಾಲೋರಿ ಸೇವನೆ ಪ್ರಮಾಣ ಕೂಡ ಕಡಿಮೆ ಆಗುತ್ತದೆ. ಹೀಗಾಗಿ ತೂಕ ಇಳಿಕೆ ಮಾಡುವ ಪ್ರಯತ್ನದಲ್ಲಿ ಇರುವವರ ಪಾಲಿಗೆ ಸಿಹಿಗೆಣಸು ಸೂಪರ್ ಫುಡ್ ಎಂದೇ ಹೇಳಲಾಗುತ್ತದೆ. ಸಿಹಿ ಗೆಣಸಿನಲ್ಲಿರುವ ಯಾವ ಪದಾರ್ಥಗಳು ತೂಕ ಇಳಿಕೆಗೆ ಸಹಕರಿಸುತ್ತದೆ ಎಂಬುದಕ್ಕೆ ಮಾಹಿತಿ ಇಲ್ಲಿದೆ.

ಹೆಚ್ಚಿನ ಫೈಬರ್ ಅಂಶ: ಸಿಹಿಗೆಣಸು ಉತ್ತಮ ಫೈಬರ್ ನ ಮೂಲವಾಗಿದೆ. ಇದರಿಂದ ನಿಮಗೆ ಬೇಗನೇ ಹಸಿವೆಯಾಗುವುದಿಲ್ಲ. ಹೀಗಾಗಿ ನಿಮ್ಮ ದೇಹಕ್ಕೆ ಇನ್ನೊಂದು ಪದಾರ್ಥವನ್ನು ತಿನ್ನಬೇಕು ಎಂಬ ಬಯಕೆ ಉಂಟಾಗುವುದಿಲ್ಲ. ಫೈಬರ್ ನಿಂದ ಸಮೃದ್ಧವಾದ ಅಹಾರ ಸೇವನೆ ಮಾಡುವುದರಿಂದ ಒಟ್ಟಾರೆ ಕ್ಯಾಲೋರಿ ಸೇವನೆ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ತೂಕ ನಷ್ಟಕ್ಕೂ ಸಹಕಾರಿ.

ಕಡಿಮೆ ಗ್ಲೈಸಮಿಕ್ ಸೂಚ್ಯಂಕ: ಉಳಿದ ಆಹಾರಗಳಿಗೆ ಹೋಲಿಕೆ ಮಾಡಿದರೆ ಸಿಹಿ ಗೆಣಸಿನಲ್ಲಿರುವ ಸಕ್ಕರೆಯು ದೇಹದಲ್ಲಿ ಕಡಿಮೆ ಪ್ರಮಾಣದಲ್ಲಿ ಏರಿಕೆಯನ್ನುಂಟು ಮಾಡುತ್ತದೆ. ಇದರಿಂದ ಇನ್ಸುಲಿನ್ ಮಟ್ಟವಾಗಿ ಸ್ಥಿರವಾಗಿಯೇ ಉಳಿಯುತ್ತದೆ. ಅಲ್ಲದೆ ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ. ಮಧುಮೇಹಿಗಳು ಸಕ್ಕರೆ ತಿನ್ನಬೇಕು ಎಂಬ ಕಡುಬಯಕೆಯನ್ನು ಹೊಂದಿದ್ದರೆ ಅವರು ಸಿಹಿಗೆಣಸನ್ನು ಪರ್ಯಾಯವಾಗಿ ಸೇವಿಸಬಹುದಾಗಿದೆ.

ಹೆಚ್ಚಿನ ಪೌಷ್ಠಿಕಾಂಶ: ಸಿಹಿ ಗೆಣಸಿನಲ್ಲಿ ವಿಟಮಿನ್ ಎ, ಸಿ ಹಾಗೂ ಬಿ6, ಖನಿಜಾಂಶಗಳಾದ ಪೊಟ್ಯಾಷಿಯಂ ಹಾಗೂ ಮ್ಯಾಂಗನೀಸ್ ಸೇರಿದಂತೆ ಸಾಕಷ್ಟು ಪೌಷ್ಠಿಕಾಂಶಗಳನ್ನು ಒಳಗೊಂಡಿದೆ. ಕಡಿಮೆ ಕ್ಯಾಲೋರಿಯ ಜೊತೆಯಲ್ಲಿ ದೇಹಕ್ಕೆ ಅಧಿಕ ಪ್ರಮಾಣದ ಪೌಷ್ಠಿಕಾಂಶ ಸೇರ್ಪಡೆಯಾಗುತ್ತದೆ. ಇದರಿಂದ ನೀವು ತೃಪ್ತಿಕರ ಊಟವನ್ನು ಅನಂದಿಸಲು ಸಾಧ್ಯವಿದೆ.

ಅಧಿಕ ಪ್ರಮಾಣದ ನೀರಿನಾಂಶ: ದೇಹದಲ್ಲಿ ನಿರ್ಜಲೀಕರಣ ಉಂಟಾದರೆ ಚಯಾಪಚಯದ ವೇಗ ನಿಧಾನಗೊಳ್ಳುತ್ತದೆ. ಇದರಿಂದ ದೇಹದ ಆರೋಗ್ಯದಲ್ಲಿ ಅಸಮತೋಲನ ಉಂಟಾಗುತ್ತದೆ. ಸಿಹಿ ಗೆಣಸಿನಲ್ಲಿ ನೀರಿನ ಪ್ರಮಾಣ ಹೇರಳವಾಗಿ ಇರುವುದರಿಂದ ನಿಮ್ಮ ಚಯಾಪಚಯದ ವೇಗವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಅಲ್ಲದೇ ನಿಮ್ಮ ದೇಹದಲ್ಲಿ pH ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ: ಸಿಹಿಗೆಣಸು ಕೇವಲ ತೂಕ ಇಳಿಕೆಗೆ ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. ಇವುಗಳಲ್ಲಿ ಹೇರಳವಾಗಿ ಅಡಕವಾಗಿರುವ ವಿಟಮಿನ್ ಎ ಹಾಗೂ ಸಿ ಅಂಶವು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಅಧಿಕಗೊಳಿಸುವ ಕಾರ್ಯವನ್ನು ಮಾಡುತ್ತದೆ.

ಆರೋಗ್ಯಕರ ರಕ್ತದೊತ್ತಡ ನಿರ್ವಹಣೆ: ಸಿಹಿ ಗೆಣಸಿನಲ್ಲಿ ಪೊಟ್ಯಾಷಿಯಂ ಉತ್ತಮ ಪ್ರಮಾಣದಲ್ಲಿ ಇರುತ್ತದೆ. ಇವುಗಳು ದೇಹದಲ್ಲಿ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಸಹಕರಿಸುತ್ತದೆ. ಇದರಿಂದ ಹೈಪರ್ಟೆನ್ಶನ್ನಂತಹ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

ಹೃದಯದ ಆರೋಗ್ಯ: ಸಿಹಿಗೆಣಸಿನಲ್ಲಿರುವ ಪೊಟ್ಯಾಷಿಯಂ, ಫೈಬರ್ ಹಾಗೂ ಆಂಟಿಆಕ್ಸಿಡಂಟ್ ಗುಣಗಳು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕರಿಸುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.