Cancer Symptoms: ಇವು ಕೂಡ ಅಪಾಯಕಾರಿ ಕ್ಯಾನ್ಸರ್ ಲಕ್ಷಣಗಳು; ಆದರೆ ಜನರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ-health tips these are the symptoms of dangerous cancer people are not aware of severe decease diagnosis jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Cancer Symptoms: ಇವು ಕೂಡ ಅಪಾಯಕಾರಿ ಕ್ಯಾನ್ಸರ್ ಲಕ್ಷಣಗಳು; ಆದರೆ ಜನರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ

Cancer Symptoms: ಇವು ಕೂಡ ಅಪಾಯಕಾರಿ ಕ್ಯಾನ್ಸರ್ ಲಕ್ಷಣಗಳು; ಆದರೆ ಜನರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ

Symptoms of Cancer: ಕ್ಯಾನ್ಸರ್ ರೋಗದಿಂದ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಇದಕ್ಕೆ ಕಾರಣ, ಆರಂಭದಲ್ಲೇ ರೋಗನಿರ್ಣಯ ಆಗದೇ ಇರುವುದು. ಹೀಗಾಗಿ ಅನಾರೋಗ್ಯದ ಯಾವುದೇ ಲಕ್ಷಣಗಳು ಕಂಡುಬಂದರೂ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಮುಖ್ಯ.

ಇವು ಕೂಡ ಅಪಾಯಕಾರಿ ಕ್ಯಾನ್ಸರ್ ಲಕ್ಷಣಗಳು; ಆದರೆ ಜನರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ
ಇವು ಕೂಡ ಅಪಾಯಕಾರಿ ಕ್ಯಾನ್ಸರ್ ಲಕ್ಷಣಗಳು; ಆದರೆ ಜನರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ (Pixabay)

ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಹೆಚ್ಚಿನ ಜನರು ಹೃದ್ರೋಗದಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಹೃದ್ರೋಗದ ನಂತರ ಜನರು ಹೆಚ್ಚಾಗಿ ತುತ್ತಾಗುವ ಕಾಯಿಲೆ ಕ್ಯಾನ್ಸರ್. ಈ ಮಾರಕ ರೋಗದಲ್ಲಿ ಹಲವು ವಿಧಗಳಿವೆ. ದೇಹದ ವಿವಿಧ ಅಂಗಗಳಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಭಾರತದಲ್ಲಿ ಪ್ರತಿ ವರ್ಷ 11 ಲಕ್ಷ ಜನರು ಕ್ಯಾನ್ಸರ್ ಪೀಡಿತರಾಗುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ. ಅವರಲ್ಲಿ ಹೆಚ್ಚಿನವರು ಪ್ರಾಣ ಕಳೆದುಕೊಳ್ಳುತ್ತಾರೆ. ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಲಿವರ್‌ ಕ್ಯಾನ್ಸರ್‌, ರಕ್ತದ ಕ್ಯಾನ್ಸರ್‌ಗೆ ತುತ್ತಾಗುವವರು ಹೆಚ್ಚು. ಹೆಚ್ಚಿನ ಸಂದರ್ಭಗಳಲ್ಲಿ ರೋಗ ಮೇಲಿನ ಹಂತಕ್ಕೆ ಹೋದ ಬಳಿಕವೇ ರೋಗನಿರ್ಣಯ ಮಾಡಲಾಗುತ್ತದೆ. ಹೀಗಾಗಿ ಅವರು ಬದುಕುಳಿಯುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕ್ಯಾನ್ಸರ್ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಅಗತ್ಯ.

ಕೆಲವೊಂದು ಅನಿರೀಕ್ಷಿತ ಲಕ್ಷಣಗಳು ಕೂಡಾ ಕ್ಯಾನ್ಸರ್ ರೋಗದ್ದೇ ಆಗಿರುತ್ತವೆ. ಹೆಚ್ಚುನ ಸಂದರ್ಭಗಳಲ್ಲಿ ಇವು ಕ್ಯಾನ್ಸರ್‌ನ ಲಕ್ಷಣ ಎಂಬುದೇ ಹಲವರಿಗೆ ತಿಳಿದಿರುವುದಿಲ್ಲ. ಕ್ಯಾನ್ಸರ್‌ನ ಈ ರೋಗಲಕ್ಷಣಗಳನ್ನು ಎಲ್ಲರೂ ತಿಳಿಯಬೇಕಾಗಿರುವುದು ಅನಿವಾರ್ಯ. ಅವು ಯಾವುವು? ನೋಡೋಣ ಬನ್ನಿ.

ಆಹಾರ ನುಂಗಲು ಅಸಮರ್ಥತೆ

ಆಹಾರವನ್ನು ನುಂಗುವಾಗ ಗಂಟಲಿನಲ್ಲಿ ಏನೋ ನಿರ್ಬಂಧಿಸಿದಂತೆ ಭಾಸವಾಗುವುದು ಕೂಡಾ ಅಪಾಯಕಾರಿ ಲಕ್ಷಣ. ಇಂಥಾ ಸಮಸ್ಯೆಯನ್ನು ಲಘುವಾಗಿ ತೆಗೆದುಕೊಳ್ಳುವವರಿದ್ದಾರೆ. ಆ ಸಂದರ್ಭದಲ್ಲಿ ಹೆಚ್ಚು ನೀರನ್ನು ಕುಡಿದು ಆಹಾರವನ್ನು ಗಂಟಲಿನೊಳಗೆ ತುರುಕುವ ಪ್ರಯತ್ನ ಮಾಡುತ್ತಾರೆ. ವಾಸ್ತವವಾಗಿ, ನುಂಗಲು ತೊಂದರೆಯಾಗುವುದು ಅನ್ನನಾಳ ಅಥವಾ ಗಂಟಲು, ಹೊಟ್ಟೆಯ ಕ್ಯಾನ್ಸರ್‌ನ ಸಂಕೇತವಾಗಿದೆ. ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಗಂಟಲಿನಲ್ಲಿ ನುಂಗಲು ತೊಂದರೆ ಇರುವವರು ಅನ್ನನಾಳದ ಕ್ಯಾನ್ಸರ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು.

ರಾತ್ರಿ ವಿಪರೀತ ಬೆವರುವಿಕೆ

ಕೆಲವರಿಗೆ ರಾತ್ರಿವೇಳೆ ವಿಪರೀತ ಬೆವರುವಿಕೆ ಇರುತ್ತದೆ. ಇದು ಸಾಮಾನ್ಯ ಅಥವಾ ಯಾವುದೋ ಸೋಂಕು ಅಥವಾ ಜ್ವರದ ಕಾರಣದಿಂದ ಎಂದು ಭಾವಿಸುವವರು ಹೆಚ್ಚು. ಮಹಿಳೆಯರಲ್ಲಿ ಇದು ಮುಟ್ಟಿನ ಕಾರಣದಿಂದಾಗಿ ಸಂಭವಿಸುತ್ತದೆ ಎಂದು ಭಾವಿಸಲಾಗಿದೆ. ಲಿಂಫೋಮಾ ಕ್ಯಾನ್ಸರ್ ಅಥವಾ ಲ್ಯುಕೇಮಿಯಾದಿಂದ ಬಳಲುತ್ತಿರುವ ಜನರಲ್ಲಿ ಈ ರೀತಿಯಾಗಿ ರಾತ್ರಿ ಬೆವರುವಿಕೆ ಕಂಡುಬರುತ್ತದೆ. ರಾತ್ರಿ ಬೆವರುವಿಕೆ, ಹಠಾತ್ ತೂಕ ನಷ್ಟ ಹಾಗೂ ಜ್ವರ ಕೂಡಾ ಕ್ಯಾನ್ಸರ್‌ನ ಲಕ್ಷಣಗಳು.

ಗಂಟಲು ಒಣಗಿಂತಾಗುವುದು ಅಥವಾ ಒರಟುತನ

ಕೆಮ್ಮು ಕಡಿಮೆಯಾದ ಕೆಲವು ದಿನಗಳ ನಂತರ ಕೆಲವರಿಗೆ ಗಂಟಲಿನಲ್ಲಿ ಒರಟುತನ ಕಾಣಿಸಿಕೊಳ್ಳುತ್ತದೆ. ಆದರೆ ಇದು ಶೀತ ಅಥವಾ ಅಲರ್ಜಿಯ ಕಾರಣ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ನಿಮಗೆ ದೀರ್ಘಕಾಲದಿಂದ ಕೆಮ್ಮು ಇದ್ದು, ಗಂಟಲಿನಲ್ಲಿ ಬದಲಾವಣೆ ಕಂಡುಬಂದರೆ ಖಂಡಿತವಾಗಿಯೂ ಶ್ವಾಸಕೋಶ ಅಥವಾ ಗಂಟಲು ಕ್ಯಾನ್ಸರ್ ಪರೀಕ್ಷೆ ಮಾಡಬೇಕು. ಧೂಮಪಾನ ಮಾಡುವವರಿಗೆ ನಿರಂತರ ಕೆಮ್ಮಿನಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಧೂಮಪಾನ ಮಾಡದವರಿಗೂ ಶ್ವಾಸಕೋಶದ ಕ್ಯಾನ್ಸರ್ ಬರಬಹುದು. ಹೀಗಾಗಿ ಗಂಟಲು ಒಣಗಿದಂತಾಗಿ ನಿರಂತರ ಕೆಮ್ಮು ಇದ್ದರೆ, ತಕ್ಷಣವೇ ಪರೀಕ್ಷೆಗೆ ಒಳಗಾಗಿ.

ಎದೆಯುರಿ

ಎದೆಯುರಿ ಅಥವಾ ಎದೆ ನೋವು ಆಸಿಡ್ ರಿಫ್ಲೆಕ್ಸ್‌ನಿಂದ ಉಂಟಾಗುತ್ತದೆ ಎಂದು ಭಾವಿಸುವವರು ಹೆಚ್ಚು. ಕೆಲವೊಮ್ಮೆ ಇದು ಹೊಟ್ಟೆ ಅಥವಾ ಅನ್ನನಾಳದ ಕ್ಯಾನ್ಸರ್‌ನ ಲಕ್ಷಣವೂ ಆಗಿರಬಹುದು. ನೀವು ದೀರ್ಘಕಾಲದವರೆಗೆ ಈ ಆಸಿಡ್ ರಿಫ್ಲೆಕ್ಸ್‌ನಿಂದ ಬಳಲುತ್ತಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆಗಳಿಗೆ ಒಳಗಾಗಿ.

ನೋವು

ಯಾವುದೇ ಕಾರಣವಿಲ್ಲದೆ ದೇಹದ ಕೆಲವು ಭಾಗಗಳಲ್ಲಿ ನೋವು ಅನುಭವಿಸುವವರು ಇರುತ್ತಾರೆ. ಉದಾಹರಣೆಗೆ, ಮೂಳೆ ನೋವು ಮೂಳೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ಹೀಗಾಗಿ ದೇಹದ ಯಾವುದೇ ಭಾಗದಲ್ಲಿ ಯಾವುದೇ ಗಾಯಕ್ಕೆ ತುತ್ತಾಗದೆ ಅನಿರೀಕ್ಷಿತ ನೋವು ಕಾಣಿಸಿಕೊಂಡರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ.

ಕಿವಿ ನೋವು

ಯಾವುದೇ ಸೋಂಕು ಅಥವಾ ಗಾಯಗಳಿಲ್ಲದೆ ನಿಮಗೆ ಕಿವಿನೋವು ಇದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಇದು ಗಂಟಲು ಕ್ಯಾನ್ಸರ್‌ನ ಲಕ್ಷಣವಾಗಿದೆ. ಅದರಲ್ಲೂ ಗಂಟಲಿನಲ್ಲಿ ಏನೋ ಇದೆ ಎಂದು ಅನಿಸಿದರೆ ಅಥವಾ ನುಂಗಲು ಕಷ್ಟವಾಗುತ್ತಿದ್ದರೆ ಎಚ್ಚರದಿಂದಿರಬೇಕು. ನೀವು ಕಿವಿ ನೋವಿನ ಜೊತೆಗೆ ನುಂಗಲು ತೊಂದರೆ ಹೊಂದಿದ್ದರೆ, ನೀವು ತಕ್ಷಣ ವೈದ್ಯರ ಸಲಹೆಯೊಂದಿಗೆ ಪರೀಕ್ಷೆಗಳಿಗೆ ಒಳಗಾಗಬೇಕು. ಇದು ಕುತ್ತಿಗೆಯ ಕ್ಯಾನ್ಸರ್‌ನ ಲಕ್ಷಣ ಎನ್ನುತ್ತಾರೆ ವೈದ್ಯರು.

ಬಾಯಿ ಹುಣ್ಣುಗಳು

ಕೆಲವರಿಗೆ ಬಾಯಿ ಹುಣ್ಣು ಉಂಟಾಗುತ್ತದೆ. ಆ ಹುಣ್ಣುಗಳು ಔಷಧಿಗಳಿಂದ ಕಡಿಮೆಯಾಗದಿದ್ದರೆ, ಅದು ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗಬಹುದು. ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಹುಣ್ಣು ಇದ್ದರೆ, ತಕ್ಷಣ ವೈದ್ಯರ ಬಳಿ ತೆರಳಿ ಸೂಕ್ತ ಪರೀಕ್ಷೆಗಳನ್ನು ಮಾಡಿಸಬೇಕು.

ತುರಿಕೆ

ಕೆಲವೊಮ್ಮೆ ಚರ್ಮವು ತುರಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಅವು ಅಲರ್ಜಿಯಿಂದ ಉಂಟಾಗುತ್ತವೆ. ಆದರೆ ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಚರ್ಮವು ತುಂಬಾ ತುರಿಕೆಗೆ ಒಳಗಾಗುತ್ತಿರುತ್ತದೆ. ಇದು ಲಿಂಫೋಮಾದಂತಹ ಕ್ಯಾನ್ಸರ್‌ಗಳ ಆರಂಭಿಕ ಲಕ್ಷಣವಾಗಿದೆ. ತುರಿಕೆ ಮತ್ತು ದದ್ದುಗಳು ಆಗಾಗ್ಗೆ ಸಂಭವಿಸಿದರೆ ಎಚ್ಚರಿಕೆ ವಹಿಸಬೇಕು.

ಚರ್ಮದ ಅಡಿಯಲ್ಲಿ ಉಬ್ಬುಗಳು

ಚರ್ಮದ ಅಡಿಯಲ್ಲಿ ಸಣ್ಣ ಉಂಡೆಗಳು ಅಥವಾ ಉಬ್ಬಿನಂತೆ ಕಾಣಿಸಿಕೊಂಡರೆ, ಅವುಗಳನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅವು ಕಾಲಾನಂತರದಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇರುತ್ತದೆ. ಆ ಗಡ್ಡೆಗಳು ಕ್ಯಾನ್ಸರ್ ಆಗಿ ಬದಲಾಗಬಹುದು. ದೇಹದಲ್ಲಿ ಇದ್ದಕ್ಕಿದ್ದಂತೆ ಗಡ್ಡೆಗಳು ಕಾಣಿಸಿಕೊಂಡರೆ, ಒಮ್ಮೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ.