ಈ ಕಾರಣಕ್ಕಾಗಿ ಬೇಸಿಗೆಯಲ್ಲಿ ಮಾವಿನಹಣ್ಣು ತಿನ್ನಬೇಕಂತೆ; ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಹೇಳೋದು ಹೀಗೆ
ಬಹುತೇಕ ಮಂದಿಗೆ ಬೇಸಿಗೆ ಅಂದ್ರೆ ಇಷ್ಟವಾಗುವುದೇ ಈ ಮಾವಿನ ಹಣ್ಣು ಸವಿಯುವುದಕ್ಕಾಗಿ. ಇತ್ತೀಚೆಗೆ ಸೆಲೆಬ್ರಿಟಿನ್ಯೂಟ್ರಿಷನಿಸ್ಟ್ರುಜುತಾ ದಿವೇಕರ್ ಅವರು ಮಾವಿನ ಹಣ್ಣಿನ ಪ್ರಯೋಜನದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಹಣ್ಣುಗಳ ರಾಜ ಮಾವಿನಹಣ್ಣು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಬಹುತೇಕ ಮಂದಿಗೆ ಬೇಸಿಗೆ ಅಂದ್ರೆ ಇಷ್ಟವಾಗುವುದೇ ಈ ಮಾವಿನ ಹಣ್ಣು ಸವಿಯುವುದಕ್ಕಾಗಿ. ಮಾವು ಇಷ್ಟಪಡದವರು ಬಹುಷಃ ಯಾರೂ ಇರಲಿಕ್ಕಿಲ್ಲ. ಇದು ಕೇವಲ ರುಚಿಕರವಾಗಿರುವುದು ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜುತಾ ದಿವೇಕರ್ ಅವರು ಮಾವಿನ ಹಣ್ಣಿನ ಪ್ರಯೋಜನದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ನ್ಯೂಟ್ರಿಷನಿಸ್ಟ್ ಆಗಿದ್ದ ರುಜುತಾ ದಿವೇಕರ್, ಬೇಸಿಗೆಯಲ್ಲಿ ಮಾವಿನಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ. ರುಜುತಾ ಅವರು ಮಾವಿನ ಹಣ್ಣಿನ ಪೌಷ್ಠಿಕಾಂಶದ ಬಗ್ಗೆ ಅವಲೋಕನವನ್ನು ನೀಡಿದ್ದು, ಅದರ ಪ್ರಯೋಜನದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಬೇಸಿಗೆಯಲ್ಲಿ ರುಚಿಕರವಾದ ಮಾವಿನಹಣ್ಣು ಸವಿಯಲು ಮರೆಯದಿರಿ
ಮಾವು ತಿನ್ನುವುದು ಮಧುಮೇಹಿಗಳಿಗೆ ಅಥವಾ ಸಕ್ಕರೆ ಸೇವನೆಯನ್ನು ಮಿತಿಗೊಳಿಸಲು ಪ್ರಯತ್ನಿಸುತ್ತಿರುವವರಿಗೆ ಆತಂಕಕಾರಿ ಎಂದು ಕೆಲವರು ಭಾವಿಸಿರಬಹುದು. ಆದರೆ, ತಾಜಾ ಮಾವಿನಹಣ್ಣು ತಿನ್ನುವುದು ಮಧುಮೇಹಕ್ಕೆ ಕಾರಣವಾಗುತ್ತದೆ ಅಥವಾ ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯದಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ರುಜುತಾ ದಿವೇಕರ್ ಹಂಚಿಕೊಂಡಿದ್ದಾರೆ. ಮಾವಿನಹಣ್ಣಿನಲ್ಲಿ ಫೈಬರ್, ಆಂಟಿಆಕ್ಸಿಡೆಂಟ್ ಮತ್ತು ಪಾಲಿಫಿನಾಲ್‍ಗಳಿಂದ ಸಮೃದ್ಧವಾಗಿದೆ.
ಮಾವಿನಹಣ್ಣು ತಿನ್ನುವುದು ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗುವುದಿಲ್ಲ. ಹಾಗೆಯೇ ಇದು ಚರ್ಮದ ಬಿರುಕುಗಳಿಗೆ ಕಾರಣವಾಗುವುದಿಲ್ಲ. ಮಾವಿನಹಣ್ಣನ್ನು ಅರ್ಧ ಗಂಟೆ ನೆನೆಸಿ, ನಂತರ ಸೇವಿಸಿ. ಮಾವಿನಹಣ್ಣು ಬಹಳ ರುಚಿಕರವಾಗಿರುತ್ತದೆ. ಇದು ಸಿಹಿ, ತಿರುಳು, ನಾರಿನಂಶ, ಉತ್ಕರ್ಷಣ ನಿರೋಧಕಗಳು, ಪಾಲಿಫಿನಾಲ್‍ಗಳಿಂದ ಸಮೃದ್ಧವಾಗಿದೆ.
ಮಾವು ಆರೋಗ್ಯಕ್ಕೆ ಕೆಟ್ಟದ್ದಲ್ಲ
ಮಾವಿನ ಋತುವಿಗಾಗಿ ಬಹುತೇಕ ಮಂದಿ ಅದರಲ್ಲೂ ಮಾವಿನಹಣ್ಣಿನ ಪ್ರಿಯರು ಕಾಯುತ್ತಾರೆ. ಮಾವಿನಹಣ್ಣು ನೈಸರ್ಗಿಕವಾಗಿ ಹಣ್ಣಾಗುವವರೆಗೆ ಕಾಯುತ್ತಾರೆ. ಅದನ್ನು ಕತ್ತರಿಸಿ ಅದರ ರುಚಿ, ರಸ ಮತ್ತು ಪರಿಮಳವನ್ನು ಆಸ್ವಾದಿಸುತ್ತೇವೆ. ಆದರೆ, ಕೆಲವರು ಮಾವಿನಹಣ್ಣು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಂಬಿದ್ದಾರೆ. ಆದರೆ, ಇದು ತಪ್ಪು ಮಾಹಿತಿ. ಮಾವಿನಹಣ್ಣು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ದಿನಕ್ಕೊಂದು ಮಾವು ತಿನ್ನುವುದು ದುಃಖವನ್ನು ದೂರವಿಡುತ್ತದೆ ಎಂದು ರುಜುತಾ ತಿಳಿಸಿದ್ದಾರೆ.
ಮಾವಿನ ಹಣ್ಣಿನ ಬಗ್ಗೆ ರುಜುತಾ ದಿವೇಕರ್ ಈ ರೀತಿ ಹಂಚಿಕೊಂಡಿದ್ದಾರೆ:
- ಮಾವಿನಹಣ್ಣು ಆರೋಗ್ಯಕ್ಕೆ ಒಳ್ಳೆಯದು
- ಮಾವಿನಹಣ್ಣು ಮಧುಮೇಹಕ್ಕೆ ಕಾರಣವಾಗುವುದಿಲ್ಲ ಅಥವಾ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಅಪಾಯವನ್ನುಂಟು ಮಾಡುವುದಿಲ್ಲ
- ಅಮೇರಿಕನ್ ಡಯಾಬಿಟಿಕ್ ಅಸೋಸಿಯೇಷನ್ ಕೂಡ ಮಾವಿನಹಣ್ಣು ತಿನ್ನುವಂತೆ ಶಿಫಾರಸು ಮಾಡುತ್ತದೆ.
ಗಮನಿಸಿ: ಈ ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಇದು ಸತ್ಯ, ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ಯಾವುದೇ ಪ್ರಶ್ನೆಗಳಿದ್ದರೂ ತಜ್ಞ ವೈದ್ಯರೊಂದಿಗೆ ಮಾರ್ಗದರ್ಶನ ಪಡೆಯಿರಿ.