Tomato Benefits: ಪ್ರತಿದಿನ ಟೊಮೆಟೊ ತಿನ್ನುವುದರಿಂದಾಗುವ 5 ಅದ್ಭುತ ಪ್ರಯೋಜನಗಳಿವು
ಪ್ರತಿದಿನ ಟೊಮೆಟೊ ಹಾಗೂ ಟೊಮೆಟೊಯಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವುದರಿಂದ ನಮ್ಮ ಒಟ್ಟಾರೆ ಆರೋಗ್ಯ ಹಾಗೂ ಯೋಗಕ್ಷೇಮಕ್ಕೆ ಹಲವು ರೀತಿಯ ಪ್ರಯೋಜನಗಳಿವೆ.
ಭಾರತೀಯ ಅಡುಗೆಮನೆಯಲ್ಲಿ ಟೊಮೆಟೊ ಹಣ್ಣು ಇಲ್ಲ ಎಂದಾದರೆ ಅಡುಗೆ ಆಗುವುದೇ ಕಷ್ಟ. ಸಾಮಾನ್ಯ ಬಹುತೇಕ ಖಾದ್ಯಗಳನ್ನು ಟೊಮೆಟೊ ಸೇರಿಸಿ ತಯಾರಿಸುತ್ತಾರೆ. ಈ ಬಹುಪಯೋಗಿ ಟೊಮೆಟೊ ಹಣ್ಣು ಪೌಷ್ಟಿಕಾಂಶ ಸಮೃದ್ಧವಾಗಿದೆ. ಇದರ ಸೇವನೆಯಿಂದ ತಮ್ಮ ಒಟ್ಟಾರೆ ಆರೋಗ್ಯ ಹಾಗೂ ಯೋಗಕ್ಷೇಮ ಸುಧಾರಿಸುತ್ತದೆ. ಹುಳಿ ರುಚಿಯ ಟೊಮೆಟೊ ಆಹಾರ ಖಾದ್ಯಗಳ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯವನ್ನು ಸುಧಾರಿಸುವ ಕಾರಣಕ್ಕೆ ಇದನ್ನು ಪ್ರತಿದಿನ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಪ್ರತಿದಿನ ಟೊಮೆಟೊ ಸೇವಿಸುವುದರಿಂದ ದೇಹದ ಅಂಗಾಂಶಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ಇದು ಹೃದಯದ ಆರೋಗ್ಯ ಸುಧಾರಣೆಗೂ ಉತ್ತಮ. ಇದರಲ್ಲಿ ವಿಟಮಿನ್, ಮಿನರಲ್ಸ್, ಪ್ರೊಟೀನ್, ಪೊಟ್ಯಾಶಿಯಂ ಹಾಗೂ ಫೋಲೇಟ್ ಅಂಶವಿದ್ದು ಇದು ಮೂಳೆಗಳ ಆರೋಗ್ಯ, ತೂಳ ಇಳಿಕೆ ಹಾಗೂ ಹತ್ತು ಹಲವು ಆರೋಗ್ಯ ಸ್ಥಿತಿಗೆ ಉತ್ತಮ. ಪ್ರತಿದಿನ ಟೊಮೆಟೊ ಸೇವಿಸುವುದರಿಂದಾಗುವ 5 ಪ್ರಯೋಜನಗಳು ಹೀಗಿವೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಟೊಮೆಟೊ ಹಣ್ಣಿನಲ್ಲಿ ಲೈಕೋಪಿನ್ ಎಂಬ ಉತ್ಕರ್ಷಣ ನಿರೋಧಕ ಅಂಶವಿದ್ದು, ಇದು ಜೀವಕೋಶಗಳಿಗೆ ಹಾನಿ ಮಾಡುವ ಹಾಗೂ ಪ್ರತಿರಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಫ್ರಿ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಇದು ಮೇದೋಜೀರಕ ಗ್ರಂಥಿ, ಕೊಲೊನ್, ಗಂಟಲು, ಬಾಯಿ, ಸ್ತನ ಹಾಗೂ ಗರ್ಭಕಂಠದಲ್ಲಿ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಹೃದಯ ಆರೋಗ್ಯ
ಟೊಮೆಟೊದಲ್ಲಿ ಲೈಕೋಪಿನ್‌ನಂತಹ ಉತ್ಕರ್ಷಣ ನಿರೋಧಕವು ಕೆಟ್ಟ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ವಿಟಮಿನ್ ಬಿ, ಇ ಹಾಗೂ ಫ್ಲೇವನಾಯ್ಡ್‌ಗಳಂತಹ ಪೋಷಕಾಂಶಗಳು ಹೃದಯದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತವೆ. ಜೊತೆಗೆ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ತೊಂದರೆಗಳನ್ನು ತಡೆಯುತ್ತದೆ.
ಕಣ್ಣಿನ ಆರೋಗ್ಯ
ಟೊಮೆಟೊ ಹಣ್ಣು ಕಣ್ಣಿನ ಆರೋಗ್ಯಕ್ಕೂ ಪ್ರಯೋಜನಕಾರಿ. ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರ್‌ನಂತಹ ಡಿಜಿಟಲ್ ಸಾಧನಗಳ ನೀಲಿ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವ ಲುಟೀನ್ ಮತ್ತು ಝೀಕ್ಸಾಂಥಿನ್ ಎಂಬ ಟೊಮೊಟೊದಲ್ಲಿದೆ ಎಂದು ವೆಬ್‌ಎಂಡಿ ಹೇಳುತ್ತದೆ. ನಿಮ್ಮ ಕಣ್ಣುಗಳನ್ನು ಆಯಾಸದಿಂದ ದೂರವಿರಿಸಲು ಮತ್ತು ಕಣ್ಣಿನ ಆಯಾಸದಿಂದ ತಲೆನೋವು ನಿವಾರಣೆಯಾಗಲು ಟೊಮೆಟೊ ಬಹಳ ಉತ್ತಮ.
ಬಾಯಿಯ ಆರೋಗ್ಯ
ಟೊಮೆಟೊದಲ್ಲಿರುವ ಲೈಕೋಪಿನ್ ಹಾನಿ ಉಂಟು ಮಾಡುವ ಫ್ರಿ ರಾಡಿಕಲ್ ವಿರುದ್ಧ ಹೋರಾಡುವ ಮೂಲಕ ಜಿಂಗೈವಿಟಿಸ್ ಮತ್ತು ಪಿರಿಯಾಂಟೈಟಿಸ್‌ನಂತಹ ಬಾಯಿಯ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಟೊಮೆಟೊ ಸೇವಿಸಿದ 30 ನಿಮಿಷಗಳ ನಂತರ ಹಲ್ಲುಜ್ಜಿ. ಯಾಕೆಂದರೆ ಟೊಮೆಟೊದಲ್ಲಿರುವ ಆಮ್ಲಗಳು ಹಲ್ಲಿನ ದಂತಕವಚಕ್ಕೆ ಹಾನಿ ಮಾಡಬಹುದು.
ಚರ್ಮದ ಆರೋಗ್ಯ
ಟೊಮೆಟೊ ತಿನ್ನುವುದರಿಂದ ತ್ವಚೆ ಆರೋಗ್ಯ ಸುಧಾರಿಸುತ್ತದೆ. ಇದು ಅಕಾಲಿಕ ವಯಸ್ಸಿನ ಲಕ್ಷಣಗಳನ್ನು ತಡೆಯುತ್ತವೆ. ಟೊಮೆಟೊ ಸೇವನೆಯಿಂದ ಚರ್ಮದ ಪದರಗಳಿಂದ ಹೆಚ್ಚುವರಿ ಎಣ್ಣೆ ಅಂಶ ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ. ಇದು ಚರ್ಮದ ರಂಧವನ್ನು ಬಿಗಿಗೊಳಿಸುತ್ತದೆ. ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಬಿಸಿಲಿನ ಅಪಾಯಗಳಿಂದ ಚರ್ಮವನ್ನು ರಕ್ಷಿಸುತ್ತದೆ, ಜೊತೆಗೆ ಚರ್ಮದ ಹೊಳಪನ್ನೂ ಹೆಚ್ಚಿಸುತ್ತದೆ.
ಟೊಮೆಟೊ ಸೇವನೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿರುವುದು ನಿಜ. ಆದರೆ ಕೆಲವರಿಗೆ ಟೊಮೆಟೊ ಅಲರ್ಜಿ ಕೂಡ ಉಂಟು ಮಾಡಬಹುದು. ಹಾಗಾಗಿ ತಜ್ಞರ ಸಲಹೆ ಪಡೆಯುವುದು ಉತ್ತಮ.
ವಿಭಾಗ