Tulsi Kadha: ಬೇಗನೆ ತೂಕ ಇಳಿಬೇಕು ಅಂದ್ರೆ ತುಳಸಿ ಕಧಾ ಕುಡೀರಿ, ಈ ವಿಶೇಷ ದೇಸಿ ಕಷಾಯದ ಇನ್ನಷ್ಟು ಪ್ರಯೋಜನ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  Tulsi Kadha: ಬೇಗನೆ ತೂಕ ಇಳಿಬೇಕು ಅಂದ್ರೆ ತುಳಸಿ ಕಧಾ ಕುಡೀರಿ, ಈ ವಿಶೇಷ ದೇಸಿ ಕಷಾಯದ ಇನ್ನಷ್ಟು ಪ್ರಯೋಜನ ತಿಳಿಯಿರಿ

Tulsi Kadha: ಬೇಗನೆ ತೂಕ ಇಳಿಬೇಕು ಅಂದ್ರೆ ತುಳಸಿ ಕಧಾ ಕುಡೀರಿ, ಈ ವಿಶೇಷ ದೇಸಿ ಕಷಾಯದ ಇನ್ನಷ್ಟು ಪ್ರಯೋಜನ ತಿಳಿಯಿರಿ

ಇಂದು ಉತ್ಥಾನ ದ್ವಾದಶಿ, ಈ ದಿನ ತುಳಸಿ ಪೂಜೆ ವಿಶೇಷ. ತುಳಸಿ ದೈವಿಕ ಶಕ್ತಿಯ ಕಾರಣದಿಂದ ಮಾತ್ರವಲ್ಲ, ಆರೋಗ್ಯ ಲಕ್ಷಣದ ಕಾರಣಗಳಿಂದಲೂ ಸಾಕಷ್ಟು ಖ್ಯಾತಿ ಪಡೆದಿದೆ. ನೀವು ತೂಕ ಇಳಿತಿಲ್ಲ ಅಂತ ಯೋಚ್ನೇ ಮಾಡ್ತಾ ಇದ್ರೆ, ತುಳಸಿ ಕಧಾ ಕುಡೀರಿ. ಈ ವಿಶೇಷ ಕಷಾಯದ ಬಗ್ಗೆ ನಿಮಗೆ ತಿಳಿದಿರದ ಒಂದಿಷ್ಟು ವಿಷಯಗಳು ಇಲ್ಲಿವೆ.

ತುಳಸಿ ಕಧಾ
ತುಳಸಿ ಕಧಾ (India.com)

ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಬಯಸುವುದು ಸಹಜ. ಆ ಋತುಮಾನದಲ್ಲಿ ಬೆಚ್ಚಗಿನ ಆಹ್ಲಾದಕರ ಪಾನೀಯಗಳು ದೇಹ ಹಾಗೂ ಆರೋಗ್ಯಕ್ಕೆ ಚೈತನ್ಯ ನೀಡುವುದು ಸುಳ್ಳಲ್ಲ. ಅದಕ್ಕಾಗಿ ಹಲವರು ಬೆಚ್ಚಗಿನ ಚಹಾ, ಕಾಫಿ ಕುಡಿಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಆದರೆ ಇವು ಆರೋಗ್ಯ ಕೆಡಿಸುತ್ತವೆ, ಅಲ್ಲದೆ ಪರೋಕ್ಷವಾಗಿ ದೇಹ ತೂಕ ಹೆಚ್ಚಲೂ ಕಾರಣವಾಗುತ್ತವೆ. ಆದರೆ ಇಲ್ಲೊಂದು ವಿಶೇಷ ಪಾನೀಯವಿದೆ. ಇದು ದೇಹವನ್ನು ಬೆಚ್ಚಗಿಡುವ ಜೊತೆಗೆ ದೇಹ ತೂಕ ಇಳಿಕೆಗೂ ಸಹಕಾರಿ. ಇದು ಸ್ವಾದವೂ ಅದ್ಭುತ. ಅದುವೇ ತುಳಸಿ ಕಧಾ.

ಕಧಾ ಎಂದರೆ ಕಷಾಯ ಎನ್ನಬಹುದು. ಸಾಂಪ್ರದಾಯಿಕವಾಗಿ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳಿಗೆ ಇದನ್ನು ಮನೆಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ಇದನ್ನು ಗಿಡಮೂಲಿಕೆಗಳು ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಅವುಗಳ ಸಾರವನ್ನು ಹೊರತೆಗೆಯಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಲಾಗುತ್ತದೆ. ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಲು ಸಹಾಯ ಮಾಡುತ್ತದೆ. ತುಳಸಿ ಕಧಾ ನೇರವಾಗಿ ತೂಕ ಇಳಿಕೆಗೆ ಸಹಾಯ ಮಾಡದೇ ಇದ್ದರೂ, ಇದು ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯೊಂದಿಗೆ ಸಂಯೋಜನೆಗೊಂಡಾಗ ಒಟ್ಟಾರೆ ಯೋಗಕ್ಷೇಮ ಮತ್ತು ತೂಕ ನಿರ್ವಹಣೆಗೆ ಕೊಡುಗೆ ನೀಡುವ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ತುಳಸಿ ಕಧಾ ಸೇವನೆಯಿಂದಾಗುವ 5 ಸಂಭಾವ್ಯ ಪ್ರಯೋಜನಗಳು ಇಲ್ಲಿವೆ.

ತುಳಸಿ ಕಢಾದ ಆರೋಗ್ಯ ಪ್ರಯೋಜನಗಳು

ಚಯಾಪಚಯ ವರ್ಧಕ: ತುಳಸಿಯಲ್ಲಿ ಚಯಾಪಚಯವನ್ನು ವೃದ್ಧಿಸುವ ಗುಣ ಇದೆ. ಇದು ಚಯಾಪಚಯ ಹೆಚ್ಚಿಸುವ ಜೊತೆಗೆ ಪರಿಣಾಮಕಾರಿಯಾಗಿ ಕ್ಯಾಲೊರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಒತ್ತಡ ನಿರ್ವಹಣೆ: ತುಳಸಿಯನ್ನು ಅಡಾಪ್ಟೊಜೆನ್‌ ಎಂದು ಪರಿಗಣಿಸಲಾಗುತ್ತದೆ. ಅಂದರೆ ಇದು ದೇಹವು ಒತ್ತಡಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ. ಒತ್ತಡ ನಿರ್ವಹಣೆಯು ತೂಕ ಇಳಿಕೆಗೆ ನಿರ್ಣಾಯಕವಾಗಿದೆ. ಏಕೆಂದರೆ ದೀರ್ಘಕಾಲದ ಒತ್ತಡವು ಆಹಾರ ಕಡುಬಯಕೆಯನ್ನು ಹೆಚ್ಚಿಸಬಹುದು. ಜೊತೆಗೆ ಶಕ್ತಿಯ ಮಟ್ಟವನ್ನು ಉತ್ತೇಜಿಸುವ ಮೂಲಕ ತೂಕ ನಿರ್ವಹಣೆಗೆ ಕೊಡುಗೆ ನೀಡುತ್ತದೆ.

ಉರಿಯೂತದ ಗುಣಲಕ್ಷಣಗಳು: ದೀರ್ಘಕಾಲದ ಉರಿಯೂತವು ಇನ್ಸುಲಿನ್‌ ಪ್ರತಿರೋಧದಂತಹ ತೂಕ ನಷ್ಟಕ್ಕೆ ಅಡ್ಡಿಯಾಗುವ ಪರಿಸ್ಥಿತಿಗಳೊಂದಿಗೆ ಸಂಬಂಧಿಸಿದೆ. ತುಳಸಿಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಒಟ್ಟಾರೆ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ತೂಕ ನಿರ್ವಹಣೆಗೆ ಸಮರ್ಥವಾಗಿ ಕೊಡುಗೆ ನೀಡುತ್ತದೆ.

ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ: ತುಳಸಿ ಕಧಾದಲ್ಲಿ ಸಾಮಾನ್ಯವಾಗಿ ಶುಂಠಿ, ಜೀರಿಗೆ, ಬಡೆಸೋಪು ಮುಂತಾದ ಮಸಾಲೆಗಳನ್ನು ಸೇರಿಸಲಾಗುತ್ತದೆ. ಇವು ಜೀರ್ಣಕ್ರಿಯೆ ಹೆಚ್ಚಲು ಪ್ರಯೋಜನಕಾರಿ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ಪೋಷಕಾಂಶಗಳನ್ನು ಹೀರಿಕೊಳ್ಳಲು ಹಾಗೂ ನಿರ್ವಹಣೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

ತುಳಸಿ ಕಧಾ ತಯಾರಿಸುವುದು

ಬೇಕಾಗುವ ಸಾಮಗ್ರಿಗಳು: ತಾಜಾ ತುಳಸಿ ಎಲೆ - 10 ರಿಂದ 12, ಶುಂಠಿ - 1 ಇಂಚು (ಜಜ್ಜಿದ್ದು), ಜೀರಿಗೆ - 1 ಚಮಚ, ಬಡೆಸೋಪು - 1 ಚಮಚ, ಕಾಳುಮೆಣಸು - 1 ರಿಂದ 2 ಚಮಚ, ಚಕ್ಕೆ - 1, ನೀರು - 4 ರಿಂದ 5 ಕಪ್‌.

ಕಧಾಮೊದಲು ತುಳಸಿ ಎಲೆಯನ್ನು ಚೆನ್ನಾಗಿ ತೊಳೆದು ಶುಂಠಿ ಜೊತೆ ಜಜ್ಜಿಕೊಳ್ಳಿ. ನೀರನ್ನು ಕುದಿಸಿ. ನೀರು ಚೆನ್ನಾಗಿ ಕುದಿ ಬಂದ ಮೇಲೆ ತುಳಸಿ ಎಲೆ, ಜಜ್ಜಿದ ಶುಂಠಿ, ಜೀರಿಗೆ, ಬಡೆಸೋಪು, ಕಾಳುಮೆಣಸು, ಜೋಳ ಹಾಗೂ ಚಕ್ಕೆ ಸೇರಿಸಿ. ಇದನ್ನು ಚಿಕ್ಕ ಉರಿಯಲ್ಲಿ 10 ರಿಂದ 15 ನಿಮಿಷ ಕುದಿಸಿ. ಈ ನೀರಿನಿಂದ ಪರಿಮಳ ಹೊರ ಹೊಮ್ಮುವರೆಗೂ ಕುದಿಸಿ. ನಂತರ ಆ ನೀರನ್ನು ಸೋಸಿ. ಬೆಚ್ಚಗಿದ್ದಾಗಲೇ ಕುಡಿಯಿರಿ. ಇದಕ್ಕೆ ನಿಂಬೆರಸ ಹಾಗೂ ಜೇನುತುಪ್ಪ ಬೆರೆಸಿ ಸೇವಿಸಬಹುದು.

Whats_app_banner