Coconut Water: ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸುವುದಷ್ಟೇ ಅಲ್ಲ, ತೂಕ ಇಳಿಕೆಗೂ ನೆರವಾಗುತ್ತೆ ಎಳನೀರು; ಪ್ರತಿದಿನ ಕುಡಿದು ನೋಡಿ-health tips weight loss with coconut water 6 ways to help you shed kilos hydration low in calories reduce appetite rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Coconut Water: ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸುವುದಷ್ಟೇ ಅಲ್ಲ, ತೂಕ ಇಳಿಕೆಗೂ ನೆರವಾಗುತ್ತೆ ಎಳನೀರು; ಪ್ರತಿದಿನ ಕುಡಿದು ನೋಡಿ

Coconut Water: ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸುವುದಷ್ಟೇ ಅಲ್ಲ, ತೂಕ ಇಳಿಕೆಗೂ ನೆರವಾಗುತ್ತೆ ಎಳನೀರು; ಪ್ರತಿದಿನ ಕುಡಿದು ನೋಡಿ

ಬೇಸಿಗೆಯ ದಾಹ ನೀಗಿಸಿಕೊಳ್ಳಲು ಎಳನೀರು ಕುಡಿಯವುದರಿಂದ ತೂಕ ಇಳಿಕೆಯೂ ಸಾಧ್ಯವಾಗುತ್ತದೆ ಎನ್ನುವುದು ಸುಳ್ಳಲ್ಲ. ಎಲೆಕ್ಟ್ರೋಲೈಟ್‌ಗಳ ನೈಸರ್ಗಿಕ ಮೂಲ, ಕಡಿಮೆ ಕ್ಯಾಲೊರಿ ಹಾಗೂ ಅದ್ಭುತ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಎಳನೀರು ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ ನೋಡಿ.

ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸುವುದಷ್ಟೇ ಅಲ್ಲ, ತೂಕ ಇಳಿಕೆಗೂ ನೆರವಾಗುತ್ತೆ ಎಳನೀರು
ಬೇಸಿಗೆಯಲ್ಲಿ ಬಿಸಿಲಿನ ದಾಹ ನೀಗಿಸುವುದಷ್ಟೇ ಅಲ್ಲ, ತೂಕ ಇಳಿಕೆಗೂ ನೆರವಾಗುತ್ತೆ ಎಳನೀರು

ಬೇಸಿಗೆ ಆರಂಭವಾಗಿ, ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಏರುತ್ತಿರುವ ತಾಪಮಾನಕ್ಕೆ ಹೊಂದಿಕೊಳ್ಳಲು ದೇಹವು ಹೆಣಗಾಡುತ್ತಿದೆ. ಅದಕ್ಕಾಗಿ ದೇಹ ತಂಪಾಗಿಸುವ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ದೇಹವು ನಿರಂತರವಾಗಿ ಬೆವರುವ ಕಾರಣ ದೇಹದಲ್ಲಿ ನೀರಿನಾಂಶದ ಕೊರತೆ ಕಾಡಬಹುದು. ನಿರ್ಜಲೀಕರಣದಿಂದ ಶಾಖಾಘಾತ, ಶಾಖದ ಸೆಳೆತದಂತಹ ಸಮಸ್ಯೆಗಳು ಎದುರಾಗಬಹುದು. ಅಂತಹ ಸಂದರ್ಭದಲ್ಲಿ ದೇಹವು ತಂಪು ಪಾನೀಯಗಳನ್ನು ಬಯಸುವುದು ಸಹಜ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೋಲ್ಡ್‌ ಡ್ರಿಂಕ್ಸ್‌ ಅಥವಾ ಐಸ್‌ಕ್ರೀಮ್‌ ಸೇವನೆಯ ಬದಲು ಎಳನೀರು ಸೇವಿಸುವುದನ್ನು ರೂಢಿಸಿಕೊಳ್ಳಬಹುದು. ಇದರಿಂದ ತೂಕ ಇಳಿಕೆಯೂ ಸಾಧ್ಯ. ಬೇಸಿಗೆಯಲ್ಲಿ ಎಳನೀರು ಸೇವನೆಯಿಂದ ದೇಹ ತೂಕ ಇಳಿಕೆಗೆ ಹೇಗೆ ಸಹಾಯ ಮಾಡುತ್ತದೆ ನೋಡಿ.

ತೂಕ ಇಳಿಸಲು ಬಯಸುವವರಿಗೆ ಬೇಸಿಗೆ ಬೆಸ್ಟ್‌

ತೂಕ ಇಳಿಸಲು ಪ್ರಯತ್ನ ಮಾಡುವವರು ಬೇಸಿಗೆ ಕಾಲದಲ್ಲಿ ಒಂದಿಷ್ಟು ಹೆಚ್ಚು ಶ್ರಮ ಹಾಕಿದರೆ ಖಚಿತ ಫಲಿತಾಂಶ ಖಂಡಿತ. ಯಾಕೆಂದರೆ ಈ ಸಮಯದಲ್ಲಿ ದೇಹದ ಚಯಾಪಚಯವು ಹೆಚ್ಚಿರುತ್ತದೆ. ಚಳಿಗಾಲದಲ್ಲಿ ಕ್ಯಾಲೊರಿ ಅಂಶ ಹೆಚ್ಚಿರುವ ಇರುವ ಆಹಾರ ಸೇವನೆಗೆ ದೇಹ ಹಂಬಲಿಸುತ್ತದೆ, ಆದರೆ ಬೇಸಿಗೆಯಲ್ಲಿ ಹಾಗಲ್ಲ. ಈ ಸಮಯದಲ್ಲಿ ಹಸಿವು ಕೂಡ ಕಡಿಮೆ ಇರುತ್ತದೆ. ಹಾಗಾಗಿ ಈ ಸಮಯದಲ್ಲಿ ನೀರಿನಾಂಶ ಹೆಚ್ಚಿರುವ ಹಣ್ಣು ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ನೀಡುವ ಮೂಲಕ ದೇಹ ತೂಕ ಇಳಿಕೆಗೆ ಪ್ರಯತ್ನಿಸಬೇಕು. ಇದರೊಂದಿಗೆ ಎಳನೀರು ಸೇವನೆ ಕೂಡ ತೂಕ ಇಳಿಕೆಗೆ ಸಹಕಾರಿ.

ಎಳನೀರು ಕಡಿಮೆ ಕ್ಯಾಲೊರಿ ಹೊಂದಿರುವ ಪಾನೀಯಗಳಲ್ಲಿ ಒಂದಾಗಿದೆ. ಇದು ಸಕ್ಕರೆಯ ಪ್ರಮಾಣ ಏರಿಕೆಯಾಗುವುದನ್ನು ತಡೆಯುತ್ತದೆ. ದೇಹವು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುತ್ತದೆ. ಚಯಾಪಚಯ ವೃದ್ಧಿಯಾಗಲು ಎಳನೀರು ಸಹಕಾರಿ.

ಎಳನೀರು ನೇರವಾಗಿ ತೂಕ ನಷ್ಟಕ್ಕೆ ಕಾರಣವಾಗದೇ ಇದ್ದರೂ ಆರೋಗ್ಯಕರ ತೂಕ ನಿರ್ವಹಣೆಗೆ ಇದು ಬೆಸ್ಟ್‌ ಎನ್ನುತ್ತಾರೆ ಮುಂಬೈನ ವೊಕಾರ್ಡ್ ಹಾಸ್ಪಿಟಲ್ಸ್‌ನ ಡಾ.ಋತುಜಾ ಉಗಲ್‌ಮುಗ್ಲೆ.

ಎಳನೀರಿನಿಂದ ತೂಕ ಇಳಿಕೆ ಹೇಗೆ ಸಾಧ್ಯ ನೋಡಿ

ಹೈಡ್ರೇಷನ್‌: ತೂಕ ಇಳಿಕೆಗೆ ದೇಹವು ಹೈಡ್ರೇಟ್‌ ಆಗಿರುವುದು ಬಹಳ ಮುಖ್ಯ. ಇದು ಇದು ಚಯಾಪಚಯ ವೃದ್ಧಿಸಲು ಸಹಾಯ ಮಾಡುವ ಜೊತೆಗೆ, ಹಸಿವನ್ನೂ ನಿಯಂತ್ರಿಸುತ್ತದೆ. ಇದರಲ್ಲಿ ನೈಸರ್ಗಿಕ ಎಲೆಕ್ಟ್ರೋಲೈಟ್‌ ಅಂಶವಿದ್ದು, ದೇಹವನ್ನು ನಿರ್ಜಲೀಕರಣದಿಂದ ಕಾಪಾಡುತ್ತದೆ.

ಕಡಿಮೆ ಕ್ಯಾಲೊರಿ: ಸೋಡಾ ಅಥವಾ ಯಾವುದೇ ಹಣ್ಣಿನ ರಸ ಅಥವಾ ಪಾನೀಯಗಳಿಗೆ ಹೋಲಿಸಿದರೆ ಎಳನೀರಿನಲ್ಲಿ ಕ್ಯಾಲೊರಿ ಅಂಶ ತುಲನಾತ್ಮಕವಾಗಿ ಕಡಿಮೆ ಇರುತ್ತದೆ. ಇದನ್ನು ಪ್ರತಿನಿತ್ಯ ಕುಡಿಯುವುದರಿಂದ ತೂಕ ನಷ್ಟಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತದೆ.

ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತದೆ: ಎಳನೀರಿನಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ವಿಟಮಿನ್ ಸಿ ಯಂತಹ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಈ ಪೋಷಕಾಂಶಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೂ ಮುಖ್ಯ. ಇದು ಚಯಾಪಚಯ ಶಕ್ತಿಯನ್ನು ವೃದ್ಧಿಸಿ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ನೈಸರ್ಗಿಕ ಎಲೆಕ್ಟ್ರೋಲೈಟ್‌ ಸಮತೋಲನ: ಎಳನೀರು ನೈಸರ್ಗಿಕ ಎಲೆಕ್ಟ್ರೋಲೈಟ್‌ ಮೂಲವಾಗಿದೆ. ಇದು ದೇಹದಲ್ಲಿ ನೀರಿನಾಂಶ ತುಂಬಿರುವಂತೆ ನೋಡಿಕೊಳ್ಳುತ್ತದೆ. ವ್ಯಾಯಾಮದಂತಹ ದೈಹಿಕ ಚಟುವಟಿಕೆಯಿಂದ ಉಂಟಾಗುವ ನಿರ್ಜಲೀಕರಣ ಸಮಸ್ಯೆ ತಪ್ಪಿಸಲು ಇದು ಸಹಕಾರಿ. ದೈಹಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ತೂಕ ನಷ್ಟದಲ್ಲಿ ಸಂಭಾವ್ಯವಾಗಿ ಸಹಾಯ ಮಾಡುತ್ತದೆ.

ಹಸಿವನ್ನು ಕಡಿಮೆ ಮಾಡುತ್ತದೆ: ಎಳನೀರು ಸೇವನೆಯಿಂದ ಹಸಿವನ್ನು ನಿಯಂತ್ರಿಸಬಹುದು. ಊಟಕ್ಕೆ ಮೊದಲು ಎಳನೀರು ಸೇವಿಸುವುದರಿಂದ ಹೊಟ್ಟೆ ತುಂಬಿದಂತಿರುತ್ತದೆ. ಇದರಿಂದ ಕಡಿಮೆ ಕ್ಯಾಲೋರಿ ಅಂಶಗಳು ದೇಹವನ್ನು ಸೇರುತ್ತದೆ. ಕಾಲಾನಂತರದಲ್ಲಿ ಇದು ತೂಕ ಇಳಿಕೆಗೆ ನೆರವಾಗುತ್ತದೆ.

ವ್ಯಾಯಾದ ನಂತರದ ಚೇತರಿಕೆ: ಎಲೆಕ್ಟ್ರೋಲೈಟ್ ಅಂಶದಿಂದಾಗಿ ಎಳನೀರನ್ನು ನೈಸರ್ಗಿಕ ಕ್ರೀಡಾ ಪಾನೀಯ ಎಂದು ಕರೆಯುತ್ತಾರೆ. ವ್ಯಾಯಾಮದ ನಂತರ ತೆಂಗಿನ ನೀರನ್ನು ಸೇವಿಸುವುದರಿಂದ ಬೆವರಿನ ಮೂಲಕ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಪುನಃ ತುಂಬಿಸಲು ಸಹಾಯ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ, ತೂಕ ನಿರ್ವಹಣೆಗೆ ಅಗತ್ಯವಾದ ಸ್ಥಿರವಾದ ವ್ಯಾಯಾಮವನ್ನು ಬೆಂಬಲಿಸುತ್ತದೆ.

ಬೇಸಿಗೆಯಲ್ಲಿ ತೂಕ ಇಳಿಯಲು ಏಳನೀರು ಸೇವನೆ ಬೆಸ್ಟ್‌ ಆದರೂ ಕೂಡ ಅದರ ಜೊತೆಗೆ ಸಮತೋಲಿತ ಆಹಾರ ಸೇವನೆ ಹಾಗೂ ಲಘು ವ್ಯಾಯಾಮಗಳಿಗೂ ಗಮನ ನೀಡಬೇಕು. ಆಗ ಮಾತ್ರ ತೂಕ ನಿರ್ವಹಣೆ ಸಾಧ್ಯವಾಗುತ್ತದೆ.