ಏನಿದು ಚಿಲ್ಬ್ಲೈನ್ಸ್ ಪೆರ್ನಿಯೊ? ಚಳಿಗಾಲದಲ್ಲಿ ಬೆರಳುಗಳು ಊದಿಕೊಂಡು ಕೆಂಪಾಗಲು ಕಾರಣ, ಪರಿಹಾರವೇನು? ಇಲ್ಲಿದೆ ಉತ್ತರ
ಚಳಿಗಾಲದಲ್ಲಿ ಕಾಡುವ ಹಲವು ಸಮಸ್ಯೆಗಳಲ್ಲಿ ಚಿಲ್ಬ್ಲೈನ್ಸ್ ಪೆರ್ನಿಯೊ ಕೂಡ ಒಂದು. ಇದು ಶೀತ ವಾತಾವರಣದಲ್ಲಿ ಬೆರಳುಗಳು ಊದಿಕೊಳ್ಳುವಂತೆ ಮಾಡುತ್ತದೆ, ಕೆಂಪಾಗುವುದು, ದದ್ದು ಉಂಟಾಗುವುದು ಮಾಡುತ್ತದೆ. ಇದರಿಂದ ಕಾರಣಗಳೇನು, ಈ ಸಮಸ್ಯೆಗೆ ಪರಿಹಾರವೇನು ಎಂಬ ಉತ್ತರ ಇಲ್ಲಿದೆ.
ಚಳಿಗಾಲವು ಸುಡುವ ಶಾಖದಿಂದ ಪರಿಹಾರವನ್ನು ನೀಡುತ್ತದೆ, ಆ ಕಾರಣಕ್ಕೆ ಚಳಿಗಾಲ ಹಲವರಿಗೆ ಇಷ್ಟವಾಗುತ್ತದೆ. ಆದರೆ ಇದು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ತನ್ನೊಂದಿಗೆ ತರುತ್ತದೆ. ಈ ಋತುವಿನಲ್ಲಿ ಜನರು ಹೆಚ್ಚಾಗಿ ಶೀತ ವಾತಾವರಣದ ಕಾರಣದಿಂದ ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ಊತ, ಕೆಂಪು ಮತ್ತು ತುರಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಯನ್ನು ಇಂಗ್ಲಿಷ್‌ನಲ್ಲಿ ಪೆರ್ನಿಯೊ ಅಥವಾ ಚಿಲ್ಬ್ಲೈನ್ಸ್ ಎಂದೂ ಕರೆಯುತ್ತಾರೆ.
ವಾಸ್ತವವಾಗಿ, ಚಿಲ್ಬ್ಲೈನ್ಸ್ ಎಂಬುದು ಚರ್ಮದ ಸ್ಥಿತಿಯಾಗಿದ್ದು, ಶೀತ ತಾಪಮಾನಕ್ಕೆ ಒಡ್ಡಿಕೊಂಡ ನಂತರ ನೋವು, ಊದಿಕೊಳ್ಳುವುದು ಹಾಗೂ ಕೆಂಪು ದದ್ದುಗಳು ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಪುರುಷರಿಗಿಂತ ಮಹಿಳೆಯರು ಈ ಸಮಸ್ಯೆಗೆ ಹೆಚ್ಚು ಬಲಿಯಾಗುತ್ತಾರೆ. ಈ ಸ್ಥಿತಿಯು ಸಾಮಾನ್ಯವಾಗಿ ವ್ಯಕ್ತಿಯ ಪಾದಗಳು ಅಥವಾ ಕೈಗಳ ಮೇಲೆ ಪರಿಣಾಮ ಬೀರುತ್ತದೆ. ಶೀತ ತಾಪಮಾನಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಚಳಿಗಾಲದಲ್ಲಿ ಈ ರೀತಿಯ ಸಮಸ್ಯೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಈ ಮನೆಮದ್ದುಗಳು ನಿಮಗೆ ಪರಿಹಾರವನ್ನು ನೀಡಬಹುದು.
ಚಿಲ್ಬ್ಲೈನ್ಸ್‌ನ ಲಕ್ಷಣಗಳು
- ಚರ್ಮದ ಊತ
- ಚರ್ಮದಲ್ಲಿ ಸುಡುವ ಸಂವೇದನೆ
- ನೋವಿನೊಂದಿಗೆ ಚರ್ಮವು ಕೆಂಪು ಬಣ್ಣದಿಂದ ಕಡು ನೀಲಿ ಬಣ್ಣಕ್ಕೆ ಬದಲಾಗುತ್ತದೆ
- ಕಾಲು ಮತ್ತು ಕೈಗಳ ಚರ್ಮದ ಮೇಲೆ ತುರಿಕೆಯ ಜೊತೆ ಸಣ್ಣ ಮತ್ತು ಕೆಂಪು ತೇಪೆಗಳು
ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಒಣ ಚರ್ಮದ ಸಮಸ್ಯೆಗೆ ಹೆಚ್ಚು ನೀರು ಕುಡಿಯುವುದೇ ಪರಿಹಾರವೇ? ಇಲ್ಲಿದೆ ತಜ್ಞರ ಉತ್ತರ
ಚಿಲ್ಬ್ಲೈನ್ಸ್‌ಗೆ ಕಾರಣಗಳು
- ಶೀತ ವಾತಾವರಣದಲ್ಲಿ ರಕ್ತ ಪರಿಚಲನೆಗೆ ತೊಂದರೆಯಾಗುವುದರಿಂದ ಚರ್ಮವು ಸೂಕ್ಷ್ಮವಾಗುತ್ತದೆ. ಇದರಿಂದಾಗಿ ಚಿಲ್ಬ್ಲೈನ್ಸ್ ಸಮಸ್ಯೆ ಉಂಟಾಗಬಹುದು.
- ಚಳಿಗಾಲದಲ್ಲಿ ಬಿಗಿಯಾದ ಬಟ್ಟೆ ಅಥವಾ ಬೂಟುಗಳನ್ನು ಧರಿಸುವುದು ಕೂಡ ಚಿಲ್ಬ್ಲೈನ್ಸ್‌ಗೆ ಕಾರಣವಾಗಬಹುದು.
- ಕಡಿಮೆ ತೂಕ ಇರುವವರಲ್ಲಿ ಚಿಲ್ಬ್ಲೈನ್ಸ್ ಬರುವ ಅಪಾಯವೂ ಹೆಚ್ಚು.
- ತಣ್ಣನೆಯ ಗಾಳಿಗೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಚಿಲ್ಬ್ಲೈನ್ಸ್ ಬರುವ ಅಪಾಯವೂ ಹೆಚ್ಚಾಗುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಶೀತ, ನೆಗಡಿ ಗುಣವಾಗಲು ನಾವು ಅನುಸರಿಸುವ ಈ ಕ್ರಮಗಳು ಆರೋಗ್ಯವನ್ನು ಇನ್ನಷ್ಟು ಹದಗೆಡಿಸಬಹುದು, ಇರಲಿ ಎಚ್ಚರ
ಚಿಲ್ಬ್ಲೈನ್ಸ್‌ಗೆ ಪರಿಹಾರ
ಬೆಚ್ಚಗಿನ ಸಾಕ್ಸ್: ಚಳಿಗಾಲದಲ್ಲಿ ಪಾದಗಳು ಬೆಚ್ಚಗಾಗಲು ಉಣ್ಣೆಯ ಸಾಕ್ಸ್ ಧರಿಸಿ. ಉಣ್ಣೆಯ ಸಾಕ್ಸ್‌ಗಳು ಪಾದಗಳನ್ನು ಬೆಚ್ಚಗಾಗಲು ಮಾತ್ರವಲ್ಲದೆ ಬೆವರು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಶೀತ ವಾತಾವರಣಕ್ಕೆ ಹೊಂದುವ ಬೂಟುಗಳನ್ನು ಬಳಸಿ. ಶೂಗಳ ಅನುಚಿತ ಫಿಟ್ಟಿಂಗ್ ಪಾದಗಳಲ್ಲಿ ರಕ್ತ ಪರಿಚಲನೆಗೆ ಪರಿಣಾಮ ಬೀರಬಹುದು, ಇದು ಊತ ಮತ್ತು ತುರಿಕೆಗೆ ಕಾರಣವಾಗಬಹುದು.
ಉಪ್ಪು ನೀರು: ಕೈ ಬೆರಳು ಹಾಗೂ ಕಾಲು ಬೆರಳುಗಳನ್ನು ಉಪ್ಪು ನೀರಿನಲ್ಲಿ ನೆನೆಸಿ ಇಡುವುದು ಕೂಡ ಚಿಲ್ಬ್ಲೈನ್ಸ್‌ಗೆ ಪರಿಹಾರ ನೀಡುತ್ತದೆ.
ಬಿಸಿ ಎಣ್ಣೆ: ಕ್ಯಾಲಮೈನ್ ಲೋಷನ್ ಅಥವಾ ಬೆಚ್ಚಗಿನ ಎಣ್ಣೆಯನ್ನು ಅನ್ವಯಿಸುವುದರಿಂದ ತುರಿಕೆ ಮತ್ತು ಊತದಿಂದ ಪರಿಹಾರವನ್ನು ಪಡೆಯಬಹುದು.
ಉಗುರಿನ ಬದಲು ಬಟ್ಟೆಯಿಂದ ತುರಿಸಿಕೊಳ್ಳಿ: ನೀವು ತುರಿಕೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಉಗುರುಗಳ ಬದಲಿಗೆ ಬಟ್ಟೆಯನ್ನು ಬಳಸಿ. ತುರಿಕೆಯ ಇರುವ ಜಾಗವನ್ನು ನಿಧಾನಕ್ಕೆ ಒರೆಸಿ. ಸ್ಕ್ರಾಚಿಂಗ್ ಸೋಂಕನ್ನು ಹೆಚ್ಚು ಗಂಭೀರಗೊಳಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತುರಿಕೆಯಿಂದ ಪರಿಹಾರ ಪಡೆಯಲು ಕ್ರೀಮ್ ಅಥವಾ ಎಣ್ಣೆಯ ಸಹಾಯವನ್ನು ತೆಗೆದುಕೊಳ್ಳಿ.
ಈ ಎಲ್ಲಾ ಪರಿಹಾರಗಳಿಂದಲೂ ಚಿಲ್ಬ್ಲೈನ್ಸ್ ಗುಣವಾಗಿಲ್ಲ ಎಂದರೆ ನೀವು ವೈದ್ಯರ ಬಳಿಗೆ ಹೋಗಬೇಕು. ಆದರೆ ಯಾವುದೇ ಕಾರಣಕ್ಕೂ ಚಿಲ್ಬ್ಲೈನ್ಸ್ ಅನ್ನು ನಿರ್ಲಕ್ಷ್ಯ ಮಾಡದಿರಿ. ಇದರಿಂದ ಅಪಾಯ ಜಾಸ್ತಿಯಾಗುವ ಸಾಧ್ಯತೆ ಇದೆ.