Dry Ice: ಏನಿದು ಡ್ರೈ ಐಸ್, ಇದನ್ನು ಹೇಗೆ ತಯಾರಿಸುತ್ತಾರೆ? ರಕ್ತದ ವಾಂತಿ ಬರುವಷ್ಟರಮಟ್ಟಿಗೆ ಇದು ಅಪಾಯಕಾರಿಯೇ..?
Viral Video: ಇತ್ತೀಚಿಗೆ ಡ್ರೈ ಐಸ್ ಸೇವಿಸಿದ ಐವರು ರಕ್ತದ ವಾಂತಿ ಮಾಡಿಕೊಳ್ಳುತ್ತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಏನಿದು ಡ್ರೈ ಐಸ್...? ಮಾನವನ ದೇಹಕ್ಕೆ ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ
Viral video: ಕೆಲವು ದಿನಗಳ ಹಿಂದಷ್ಟೇ ಗುರುಗ್ರಾಮದ ರೆಸ್ಟೋರೆಂಟ್ ಒಂದರಲ್ಲಿ ಡ್ರೈ ಐಸ್ ಸೇವನೆ ಮಾಡಿದ ಗ್ರಾಹಕರು ರಕ್ತದ ವಾಂತಿ ಮಾಡಿಕೊಂಡಿದ್ದ ಘಟನೆಯೊಂದು ವೈರಲ್ ಆಗಿತ್ತು. ಇಲ್ಲಿನ ರೆಸ್ಟೋರೆಂಟ್ ಸಿಬ್ಬಂದಿ ಗ್ರಾಹಕರಿಗೆ ಮೌತ್ ಫ್ರೆಶರ್ ರೂಪದಲ್ಲಿ ಡ್ರೈ ಐಸ್ ನೀಡಿದ್ದರು. ಇದಾದ ಬಳಿಕ ಐವರು ಗ್ರಾಹಕರು ಕೂಡಲೇ ರಕ್ತದ ವಾಂತಿ ಮಾಡಿಕೊಂಡಿದ್ದರು. ಈ ಸಂಬಂಧ ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಏನಿದು ಡ್ರೈ ಐಸ್..? ಇದನ್ನು ಸೇವಿಸಿದ ಕೂಡಲೇ ರಕ್ತದ ವಾಂತಿಯಾಗುತ್ತೆ ಎಂದರೆ ಇದು ಎಷ್ಟರ ಮಟ್ಟಿಗೆ ಮಾರಣಾಂತಿಕವಾಗಿರಬಹುದು..? ಇದೆಲ್ಲದರ ಬಗ್ಗೆ ತಿಳಿದುಕೊಳ್ಳೋಣ .
ಏನಿದು ಡ್ರೈ ಐಸ್..?
ಡ್ರೈ ಐಸ್ ಎನ್ನುವುದು ಇಂಗಾಲದ ಡ್ರೈ ಆಕ್ಸೈಡ್‌ನ ಘನ ರೂಪವಾಗಿದೆ. ಸಾಮಾನ್ಯ ಮಂಜುಗಡ್ಡೆಗಳನ್ನು ನೀರನ್ನು ಘನೀಕರಿಸಿ ತಯಾರಿಸಲಾಗುತ್ತದೆ. ಆದರೆ ಈ ಡ್ರೈ ಐಸ್‌ಗಳನ್ನು ಇಂಗಾಲದ ಡೈಆಕ್ಸೈಡ್‌ಳನ್ನು -78.5 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಇರಿಸಿ ತಯಾರಿಸಲಾಗುತ್ತದೆ. ಸಾಮಾನ್ಯ ಮಂಜುಗಡ್ಡೆಯು ಘನದಿಂದ ದ್ರವ ರೂಪಕ್ಕೆ ಬಂದರೆ ಈ ಡ್ರೈ ಐಸ್‌ಗಳು ಘನರೂಪದಿಂದ ಸೀದಾ ಅನಿಲ ರೂಪಕ್ಕೆ ಪರಿವರ್ತನೆಗೊಳ್ಳುತ್ತವೆ.
ಈ ಡ್ರೈ ಐಸ್‌ಗಳನ್ನು ಸಾಕಷ್ಟು ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ಇವುಗಳು ಶಿಥಿಲೀಕರಣ ಕಾರ್ಯಕ್ಕೆ ಹೆಚ್ಚು ಬಳಕೆಯಾಗುತ್ತವೆ. ವೈದ್ಯಕೀಯ ಕ್ಷೇತ್ರಗಳಲ್ಲಿ, ತಂಪು ಪಾನೀಯಗಳು ಹಾಗೂ ಐಸ್ ಕ್ರೀಂಗಳ ತಯಾರಿಕೆಗಳಲ್ಲಿ ಇವುಗಳನ್ನು ಬಳಕೆ ಮಾಡಲಾಗುತ್ತದೆ.
ಡ್ರೈ ಐಸ್‌ಗಳು ಮಾನವ ದೇಹಕ್ಕೆ ಹೇಗೆ ಅಪಾಯಕಾರಿ..?
ಡ್ರೈ ಐಸ್‌ಗಳ ಸೇವನೆಯು ಮನುಷ್ಯನಿಗೆ ಏಕೆ ಒಳ್ಳೆಯದಲ್ಲ ಎನ್ನಲು ಇಲ್ಲಿ ಸಾಕಷ್ಟು ಕಾರಣಗಳನ್ನು ನೀಡಲಾಗಿದೆ. ಇವುಗಳ ಬಗ್ಗೆ ತಿಳಿಯೋಣ.
ಫ್ರಾಸ್ಬೈಟ್ಸ್ : ಡ್ರೈ ಐಸ್‌ಗಳು ಮನುಷ್ಯನ ಚರ್ಮ ಅಥವಾ ಆಂತರಿಕ ಅಂಗಾಗಳ ಜೊತೆಯಲ್ಲಿ ನೇರ ಸಂಪರ್ಕ ಹೊಂದಿದಾಗ ಫ್ರಾಸ್ಬೈಟ್ ಅಥವಾ ಇಡೀ ಅಂಗಾಂಗಗಳನ್ನು ಶಿಥಲೀಕರಣ ಮಾಡಿಬಿಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಉಸಿರುಗಟ್ಟುವಿಕೆ : ಡ್ರೈ ಐಸ್‌ಗಳು ನೇರವಾಗಿ ಘನದಿಂದ ಅನಿಲ ರೂಪಕ್ಕೆ ಮಾರ್ಪಾಡಾಗುತ್ತವೆ. ಈ ಸಂದರ್ಭದಲ್ಲಿ ಇವುಗಳು ಭಾರೀ ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್‌ಗಳನ್ನು ಬಿಡುಗಡೆ ಮಾಡುತ್ತವೆ. ದೇಹದಲ್ಲಿ ಅತಿಯಾಗಿ ಇಂಗಾಲದ ಡೈ ಆಕ್ಸೈಡ್ ಶೇಖರಣೆಯಾದ ದೇಹಕ್ಕೆ ಸರಿಯಾಗಿ ಆಮ್ಲಜನಕ ಸಿಗದೇ ಉಸಿರುಗಟ್ಟುವಿಕೆಯ ಅನುಭವ ಆರಂಭಗೊಳ್ಳುತ್ತದೆ.
ವಿಷಕಾರಿ: ಡ್ರೈ ಐಸ್ ಸೇವನೆಯಿಂದ ಮನುಷ್ಯನ ದೇಹದಲ್ಲಿ ಕಾರ್ಬನ್ ಡೈಆಕ್ಸೈಡ್ ವಿಷತ್ವ ಉಂಟಾಗಬಹುದು. ತಲೆ ತಿರುಗುವುದು, ತಲೆನೋವು, ಆಯಾಸ, ಉಸಿರಾಟ ತೊಂದರೆ, ಪ್ರಜ್ಞಾಹೀನತೆಯಂತಹ ಸಮಸ್ಯೆಗಳು ಉಂಟಾಗಬಹುದು.
ದೇಹದ ಅಂಗಾಂಗ ಸುಡುವುದು : ಡ್ರೈ ಐಸ್ ನುಂಗುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಭಾರೀ ಹಾನಿಯುಂಟಾಗಬಹುದು. ದೇಹದ ಅಂಗಗಳನ್ನು ಸುಟ್ಟು ಹಾಕುವಷ್ಟು ಡ್ರೈ ಐಸ್‌ಳು ಅಪಾಯಕಾರಿಯಾಗಿವೆ.
ಸ್ಫೋಟದ ಭಯ : ಡ್ರೈ ಐಸ್‌ಳನ್ನು ಸೇವಿಸಿದ ಕೂಡಲೇ ದೇಹದಲ್ಲಿ ಅದು ತ್ವರಿತವಾಗಿ ಅನಿಲಗಳನ್ನು ಬಿಡುಗಡೆ ಮಾಡಿಬಿಡುತ್ತದೆ. ಇದರಿಂದ ಕರುಳು ಛಿದ್ರಗೊಳ್ಳುವ ಸಾಧ್ಯತೆ ಕೂಡ ಇರುತ್ತದೆ.
ದೀರ್ಘಕಾಲದ ಆರೋಗ್ಯ ಸಮಸ್ಯೆಗಳು : ಅತಿಯಾದ ಕಾರ್ಬನ್ ಡೈ ಆಕ್ಸೈಡ್‌ಳ ಸೇವನೆಯು ದೀರ್ಘಕಾಲದವರೆಗೆ ಉಸಿರಾಟದ ಸಮಸ್ಯೆ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆ, ನರಮಂಡಲಕ್ಕೆ ಹಾನಿ ಸೇರಿದಂತೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತವೆ.
ತಿಳಿಯದ ಡ್ರೈ ಐಸ್ ಸೇವಿಸಿದಾಗ ಏನು ಮಾಡಬೇಕು..?
ಡ್ರೈ ಐಸ್‌ಳನ್ನು ಸೇವಿಸುವುದು ಅತ್ಯಂತ ಅಪಾಯಕಾರಿಯಾಗಿದೆ. ಒಂದು ವೇಳೆ ನೀವು ತಿಳಿಯದೇ ಆಕಸ್ಮಿಕವಾಗಿ ಡ್ರೈ ಐಸ್ ಸೇವನೆ ಮಾಡಿಬಿಟ್ಟಿದ್ದೀರಿ ಎಂದುಕೊಳ್ಳೋಣ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ತಪಾಸಣೆಗೆ ಒಳಗಾಗುವುದು ಉತ್ತಮ. ಡ್ರೈ ಐಸ್‌ಗಳು ನಿಮ್ಮ ದೇಹದ ಆಂತರಿಕ ಅಂಗಗಳನ್ನು ಫ್ರೀಜ್ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಹೆಚ್ಚಿನ ಅಪಾಯಗಳನ್ನು ತಡೆಗಟ್ಟಲು ಕೂಡಲೇ ಆಸ್ಪತ್ರೆಗೆ ದಾಖಲಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಗಾಗುವುದು ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ.