ಪ್ರತಿನಿತ್ಯ ನೀವು ವ್ಯಾಯಾಮ ಮಾಡುತ್ತೀರಾ? ವರ್ಕೌಟ್ ಮಾಡಲು ಬೆಳಗ್ಗೆ, ಸಂಜೆ ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ
Best time to workout: ಆರೋಗ್ಯಕರ ಜೀವನಶೈಲಿಗೆ ವ್ಯಾಯಾಮ ಅತ್ಯಗತ್ಯ. ಕೆಲವರು ಪ್ರತಿನಿತ್ಯ ಜಿಮ್‌ಗೆ ಹೋದರೆ, ಇನ್ನೂ ಕೆಲವರು ವಾಕಿಂಗ್, ಯೋಗ ಅಥವಾ ಮನೆಯಲ್ಲೇ ವ್ಯಾಯಾಮ ಮಾಡುತ್ತಾರೆ. ಆದರೆ, ಒತ್ತಡದ ಕೆಲಸ, ಆಲಸ್ಯ ಮುಂತಾದವುಗಳಿಂದಾಗಿ ಕೆಲವರು ಏನೂ ಮಾಡದೆ ಸುಮ್ಮನಿರುತ್ತಾರೆ. ನಮ್ಮ ದೇಹ ರಚನೆ ಸಕ್ರಿಯವಾಗಿರುವುದಕ್ಕೆ ವ್ಯಾಯಾಮ ಅತಿಮುಖ್ಯ.
ಬಹುತೇಕರು ಬೆಳಗಿನ ಸಮಯದಲ್ಲಿ ವ್ಯಾಯಾಮ ಮಾಡಿದರೆ, ಇನ್ನೂ ಕೆಲವರು ಸಂಜೆ ವ್ಯಾಯಾಮ ಮಾಡುತ್ತಾರೆ. ಇವೆರಡರಲ್ಲಿ ಯಾವುದು ಒಳ್ಳೆಯದು? ಎರಡೂ ಉತ್ತಮವೇ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಬೆಳಗ್ಗಿನ ಸಮಯದಲ್ಲಿ ವ್ಯಾಯಾಮ ಮಾಡಿದರೆ ನಿಮ್ಮ ದೇಹಕ್ಕೆ ಏನೆಲ್ಲಾ ಪ್ರಯೋಜನವಿದೆ ಇಲ್ಲಿ ಓದಿ
ಸ್ಥಿರತೆ: ಅನೇಕ ಸಂಶೋಧನಾ ಅಧ್ಯಯನಗಳ ಪ್ರಕಾರ, ಬೆಳಗಿನ ಸಮಯದಲ್ಲಿ ವ್ಯಾಯಾಮ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಏಕೆಂದರೆ ಇದು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಜೈವಿಕ ಪ್ರಕ್ರಿಯೆ: ನೀವು ಬೆಳಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ, ನಿಮ್ಮ ದೇಹವು ಹೆಚ್ಚು ಸಕ್ರಿಯವಾಗಲು ಪ್ರಾರಂಭಿಸುತ್ತದೆ. ಅಲ್ಲದೆ ಜೈವಿಕ ಪ್ರಕ್ರಿಯೆಯನ್ನು ಚೆನ್ನಾಗಿ ನಿಭಾಯಿಸುತ್ತದೆ. ದೇಹದ ಸಿರ್ಕಾಡಿಯನ್ ರಿದಮ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿದ್ರೆಯ ಗುಣಮಟ್ಟ: ಬೆಳಗಿನ ವ್ಯಾಯಾಮವು ನಿದ್ರೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ವ್ಯಾಯಾಮವು ಬಹಳ ಉಪಯುಕ್ತವಾಗಿದೆ.
ಕೊಬ್ಬು ನಷ್ಟ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದು ಹೆಚ್ಚಿನ ಕೊಬ್ಬನ್ನು ಸುಡಲು (fat loss) ಸಹಾಯ ಮಾಡುತ್ತದೆ. ತಿಂಡಿ ತಿಂದು ವ್ಯಾಯಾಮ ಮಾಡುವುದಕ್ಕಿಂತ ಏನೂ ತಿನ್ನದೆ ವ್ಯಾಯಾಮ ಮಾಡುವುದು ಉಪಯುಕ್ತ.
ಬೆಳಗ್ಗಿನ ವ್ಯಾಯಾಮದಿಂದ ಋಣಾತ್ಮಕ ಅಂಶಗಳೇನು?
ಬೆಳಗ್ಗಿನ ತಾಲೀಮಿನ ಋಣಾತ್ಮಕ ಅಂಶವೆಂದರೆ ತಾಲೀಮು ಮಾಡುವ ವೇಳೆ ಹಸಿವು ಸಂಬಂಧಿತ ಆಯಾಸದಿಂದ ಹೆಣಗಾಡುವುದು. ವಿಶೇಷವಾಗಿ ಹಿಂದಿನ ರಾತ್ರಿ ನೀವು ಲಘುವಾಗಿ ಊಟ ಮಾಡಿದ್ದರೆ ಈ ಆಯಾಸ ಹೆಚ್ಚಿರುತ್ತದೆ.
ರಾತ್ರಿ ಸಮಯದಲ್ಲಿ ವ್ಯಾಯಾಮ ಮಾಡುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
ಸ್ನಾಯುಗಳಿಗೆ ಉಪಯುಕ್ತ: ರಾತ್ರಿ ವ್ಯಾಯಾಮದ ಸಮಯದಲ್ಲಿ ದೇಹವು ನೈಸರ್ಗಿಕವಾಗಿ ಹೆಚ್ಚು ಟೆಸ್ಟೋಸ್ಟೆರಾನ್ ಅನ್ನು ಉತ್ಪಾದಿಸುತ್ತದೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ಸ್ನಾಯುಗಳನ್ನು ಉತ್ತೇಜಿಸಲು ಅಗತ್ಯ.
ನಿದ್ರೆಯ ಗುಣಮಟ್ಟ: ರಾತ್ರಿ ತಾಲೀಮು ಸಮಯದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್‌ಗಳಿಂದ ಇಡೀ ದಿನದ ಒತ್ತಡ ದೂರವಾಗುತ್ತದೆ. ಆಳವಾದ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ.
ನಿಮಗೆ ಸಾಧ್ಯವಾದಾಗಲೆಲ್ಲಾ ವ್ಯಾಯಾಮ ಮಾಡಲು ಬೆಳಗ್ಗೆ ಅಥವಾ ರಾತ್ರಿ ಎರಡೂ ಕೂಡ ಉತ್ತಮ ಸಮಯ. ತೂಕ ನಷ್ಟ ಅಥವಾ ಶಕ್ತಿಶಾಲಿ ಸ್ನಾಯುಗಳನ್ನು ಹೊಂದಲು ಕೂಡ ಉತ್ತಮವಾಗಿದೆ. ನಿಮ್ಮ ಗುರಿ ಏನೇ ಇದ್ದರೂ ಫಲಿತಾಂಶ ಚೆನ್ನಾಗಿರುತ್ತದೆ. ಆದರೆ, ಇದಕ್ಕೆ ಸಮಯ ಬೇಕೆಂದಿಲ್ಲ. ದೈಹಿಕ ಚಟುವಟಿಕೆಯು ದೇಹಕ್ಕೆ ಅಗಾಧವಾಗಿ ಸಹಾಯ ಮಾಡುತ್ತದೆ. ದಿನವೊಂದಕ್ಕೆ ಕನಿಷ್ಠ 30 ರಿಂದ 40 ನಿಮಿಷ ತಾಲೀಮು ಮಾಡುವುದು ದೇಹಕ್ಕೆ ಉಪಯುಕ್ತವಾಗಿದೆ. ಸಮಯವನ್ನು ಲೆಕ್ಕಿಸದೆ ನಿಮಗೆ ಸಾಧ್ಯವಾದಾಗ ತಾಲೀಮು ಮಾಡಿ