ಹಾಸಿಗೆ ಮೇಲೆ ಕುಳಿತು ತಿನ್ನುವ ಅಭ್ಯಾಸ ಇದ್ಯಾ? ಈ ಸಮಸ್ಯೆಗಳು ಕಾಡಬಹುದು ಎಚ್ಚರ
ಕನ್ನಡ ಸುದ್ದಿ  /  ಜೀವನಶೈಲಿ  /  ಹಾಸಿಗೆ ಮೇಲೆ ಕುಳಿತು ತಿನ್ನುವ ಅಭ್ಯಾಸ ಇದ್ಯಾ? ಈ ಸಮಸ್ಯೆಗಳು ಕಾಡಬಹುದು ಎಚ್ಚರ

ಹಾಸಿಗೆ ಮೇಲೆ ಕುಳಿತು ತಿನ್ನುವ ಅಭ್ಯಾಸ ಇದ್ಯಾ? ಈ ಸಮಸ್ಯೆಗಳು ಕಾಡಬಹುದು ಎಚ್ಚರ

Side effects of having food on bed: ಆರಾಮಾಗಿ ಟಿವಿ ನೋಡುತ್ತಾ ಅಥವಾ ಮೊಬೈಲ್​ನಲ್ಲಿ ಏನನ್ನಾದರೂ ನೋಡುವ ವೇಳೆಗೆ ನಿಮಗೆ ಹಾಸಿಗೆಯಲ್ಲೇ ಮಲಗಿಕೊಂಡು ತಿನ್ನುವ ಅಭ್ಯಾಸವಿದೆಯೇ? ಹಾಗಾದರೆ ನಿಮ್ಮ ಇದೊಂದು ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಯಾವೆಲ್ಲ ದುಷ್ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಮಾಹಿತಿ ಇಲ್ಲಿದೆ.

ಹಾಸಿಗೆ ಮೇಲೆ ಕುಳಿತು ತಿನ್ನುವ ಅಭ್ಯಾಸ
ಹಾಸಿಗೆ ಮೇಲೆ ಕುಳಿತು ತಿನ್ನುವ ಅಭ್ಯಾಸ

ಹಾಸಿಗೆಯಲ್ಲಿ ಮಲಗಿದ್ದಲ್ಲೇ ಎಲ್ಲಾ ಸೌಕರ್ಯಗಳು ನಮಗೆ ಸಿಗುತ್ತದೆ ಎಂದರೆ ಬೇಡ ಎನ್ನುವವರು ಯಾರಾದರೂ ಸಿಗುವರೇ..? ಅಂದಹಾಗೆ ನೀವು ಕೂಡ ಈ ಹಾಸಿಗೆಯಲ್ಲಿ ಕುಳಿತು ತಿನ್ನುವ ಅಭ್ಯಾಸ ಹೊಂದಿದ್ದೀರೇ..? ತಿಂಡಿ, ತಿನಿಸು ಅಥವಾ ಊಟ ಹೀಗೆ ಆಹಾರವನ್ನು ಹಾಸಿಗೆಯಲ್ಲಿ ಕುಳಿತು ತಿನ್ನುವವರು ಪೈಕಿ ನೀವೂ ಒಬ್ಬರಾಗಿದ್ದರೆ ಖಂಡಿತವಾಗಿ ಈ ಅಭ್ಯಾಸವು ನಿಮ್ಮ ಆರೋಗ್ಯದ ಮೇಲೆ ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಲೇಬೇಕು.

ಹೀಗೆ ನೋಡುವಾಗ ಹಾಸಿಗೆಯಲ್ಲಿ ಕುಳಿತು ತಿನ್ನುವುದರಲ್ಲಿ ಏನು ತಪ್ಪಿಲ್ಲ ಎಂದು ತೋರಿದರೂ ಸಹ ನಾವು ಯಾವ ಹೊತ್ತಲ್ಲಿ ಏನನ್ನು ಎಲ್ಲಿ ಕುಳಿತು ತಿನ್ನುತ್ತೇವೆ ಎಂಬುದು ಖಂಡಿತವಾಗಿಯೂ ಮುಖ್ಯವಾಗುತ್ತದೆ. ಹೀಗಾಗಿ ನೀವು ಪ್ರತಿದಿನ ಹಾಸಿಗೆಯಲ್ಲಿ ಕುಳಿತು ತಿನ್ನುವುದರಿಂದ ಯಾವೆಲ್ಲ ಆರೋಗ್ಯ ಅಪಾಯಗಳು ಕಾದಿವೆ ಎಂಬುದನ್ನು ನೋಡೋಣ :

ಹಾಸಿಗೆಯಲ್ಲಿ ಕುಳಿತು ತಿನ್ನುವುದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮಗಳು

ಅಜೀರ್ಣತೆ : ಹಾಸಿಗೆಯಲ್ಲಿ ಕುಳಿತು ತಿನ್ನುವವರು ಸಾಮಾನ್ಯವಾಗಿ ಅಜೀರ್ಣದ ಸಮಸ್ಯೆಯನ್ನು ಎದುರಿಸುತ್ತಾರೆ. ಆಹಾರ ಸೇವನೆ ಮಾಡುವಾಗ ಸರಿಯಾದ ಭಂಗಿಯಲ್ಲಿ ಕುಳಿತು ತಿನ್ನುವುದು ಮುಖ್ಯವಾಗುತ್ತದೆ. ಆದರೆ ಹಾಸಿಗೆಯಲ್ಲಿ ಮಲಗಿಕೊಂಡು, ಹೆಂಗೆಂಗೋ ಕುಳಿತುಕೊಂಡು ತಿನ್ನುವುದು ಜೀರ್ಣಕ್ರಿಯೆಯ ಮೇಲೆ ಅಡ್ಡಪರಿಣಾಮ ಬೀರಬಹುದು. ಇದರಿಂದ ಆಸಿಡಿಟಿ, ಅಜೀರ್ಣತೆ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ. ಕುರ್ಚಿಯ ಮೇಲೆ ಅಥವಾ ನೆಲದ ಮೇಲೆ ಕುಳಿತು ನೇರ ಭಂಗಿಯಲ್ಲಿ ತಿನ್ನುವುದರಿಂದ ಕರುಳಿನ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಲಾಗಿದೆ.

ಬೊಜ್ಜಿನ ಸಮಸ್ಯೆ: ಸಾಮಾನ್ಯವಾಗಿ ಟಿವಿಯಲ್ಲಿ ಏನನ್ನಾದರೂ ನೋಡುತ್ತಿರುವಾಗ ಅಥವಾ ಮೊಬೈಲ್​ನಲ್ಲಿ ಸಿನಿಮಾ ವೀಕ್ಷಿಸುವಾಗ ಹಾಸಿಗೆಯ ಮೇಲೆ ಕುಳಿತು ತಿನ್ನುವುದು ಜಾಸ್ತಿ. ಈ ರೀತಿ ಮಾಡುವಾಗ ನಾವು ಮಿತಿ ಮೀರಿ ತಿನ್ನುತ್ತೇವೆ. ಇದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲಬೇಕಾಗಬಹುದು

ನಿದ್ರಾಹೀನತೆ : ಹಾಸಿಗೆಯಲ್ಲಿ ತಿನ್ನುವ ಭರದಲ್ಲಿ ನಾವು ಹಾಸಿಗೆ ತುಂಬೆಲ್ಲ ಆಹಾರವನ್ನು ಚೆಲ್ಲಿಕೊಳ್ಳುತ್ತೇವೆ. ಅದರಿಂದ ಹಾಸಿಗೆ ಪೂರ್ತಿ ಅಸ್ತವ್ಯಸ್ತ ಆಗಿ ಬಿಡಬಹುದು. ಇದು ಉತ್ತಮ ನಿದ್ರೆಯ ವಾತಾವರಣವನ್ನು ಹಾಳು ಮಾಡಿಬಿಡಬಹುದು. ಹೀಗಾಗಿ ನಿಮಗೆ ಗುಣಮಟ್ಟದ ನಿದ್ರೆ ಬರುವುದಿಲ್ಲ. ಹೀಗಾಗಿ ಹಾಸಿಗೆಯ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ತುಂಬಾನೇ ಮುಖ್ಯ.

ಮಲಗುವ ಕೋಣೆಯಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಹಾಗೂ ಆಹಾರ ಸೇವನೆಯ ವಿಚಾರದಲ್ಲಿ ಶುಚಿತ್ವವನ್ನು ನಿರ್ವಹಿಸಬೇಕು. ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹಾಸಿಗೆಯ ಮೇಲೆ ಕುಳಿತು ತಿಂದು ದೇಹದ ಆರೋಗ್ಯವನ್ನು ಹದಗೆಡಿಸಿಕೊಳ್ಳುವುದನ್ನು ಬಿಟ್ಟು ಕುರ್ಚಿಯ ಮೇಲೆ, ನೆಲದ ಮೇಲೆ ನೇರವಾದ ಭಂಗಿಯಲ್ಲಿ ಕುಳಿತು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ನಿಮ್ಮ ಜೀರ್ಣಕ್ರಿಯೆ ಕೂಡ ಸರಾಗವಾಗಿ ಸಾಗಲಿದೆ.

Whats_app_banner