ಕಪ್ಪು vs ಬಿಳಿ ಎಳ್ಳು: ಯಾವುದರಲ್ಲಿ ಹೆಚ್ಚು ಪೋಷಕಾಂಶವಿದೆ, ಆರೋಗ್ಯಕ್ಕೆ ಯಾವುದು ಉತ್ತಮ? ಇಲ್ಲಿದೆ ಮಾಹಿತಿ
ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾಗಿ ಈ ಸಮಯದಲ್ಲಿ ಎಳ್ಳಿನ ಬಳಕೆ ಹೆಚ್ಚು. ಈ ಸಂದರ್ಭ ನಿಮಗೆ ಕಪ್ಪು ಎಳ್ಳು ಉತ್ತಮವೋ ಅಥವಾ ಬಿಳಿ ಎಳ್ಳು ಉತ್ತಮವೋ ಎಂಬ ಅನುಮಾನ ಬರಬಹುದು. ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ, ಯಾವುದರಲ್ಲಿ ಹೆಚ್ಚು ಪೋಷಕಾಂಶಗಳಿವೆ ನೋಡಿ.
ಚಳಿಗಾಲ ಶುರುವಾದ ಕೂಡಲೇ ಎಳ್ಳಿನ ಖಾದ್ಯಗಳ ಬಳಕೆಯೂ ಹೆಚ್ಚಾಗುತ್ತದೆ. ಎಳ್ಳು ದೇಹಕ್ಕೆ ಉಷ್ಣಾಂಶ ಒದಗಿಸುತ್ತದೆ. ಇದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ ಎಂದು ಹೇಳಲಾಗುತ್ತದೆ. ಎಳ್ಳಿನಲ್ಲಿ ಎರಡು ವಿಧಗಳಿವೆ. ಕಪ್ಪು ಎಳ್ಳು ಹಾಗೂ ಬಿಳಿ ಎಳ್ಳು ಎರಡೂ ಬಳಕೆಯಲ್ಲಿದೆ. ಎಳ್ಳನ್ನು ಬಳಸುವುದರಿಂದ ಖಾದ್ಯಗಳಿಗೆ ವಿಶೇಷ ರುಚಿ ಸಿಗುತ್ತದೆ.
ಇದೀಗ ಚಳಿಗಾಲವಾಗಿದ್ದು ನಿಮಗೆ ಕಪ್ಪು ಎಳ್ಳು ಹಾಗೂ ಬಿಳಿ ಎಳ್ಳು ಈ ಎರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ ಎಂಬ ಗೊಂದಲ ಕಾಡುತ್ತಿರಬಹುದು. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮ, ಯಾವುದರಲ್ಲಿ ಹೆಚ್ಚು ಪೋಷಕಾಂಶವಿದೆ ನೋಡಿ.
ಕಪ್ಪು ಹಾಗೂ ಬಿಳಿ ಎಳ್ಳಿನಲ್ಲಿರುವ ಪೋಷಕಾಂಶಗಳಲ್ಲಿ ಕೆಲವು ವ್ಯತ್ಯಾಸಗಳಿವೆ. ಆದರೂ ಈ ಎರಡೂ ಆರೋಗ್ಯಕ್ಕೆ ಉತ್ತಮ. ಈ ಎರಡಕ್ಕೂ ಹೋಲಿಸಿದರೆ ಕಪ್ಪು ಎಳ್ಳು ಆರೋಗ್ಯಕ್ಕೆ ಉತ್ತಮ ಎನ್ನಲಾಗುತ್ತದೆ.
ಕಪ್ಪು ಎಳ್ಳಿನ ಪ್ರಯೋಜನಗಳು
ಕಪ್ಪು ಎಳ್ಳಿನಲ್ಲಿ ನಾರಿನಾಂಶ ಹೆಚ್ಚಿರುತ್ತದೆ. ಇದು ಬಿಳಿ ಎಳ್ಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಾಗಿದೆ. ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣಾಂಶ ಇದರಲ್ಲಿ ಸಮೃದ್ಧವಾಗಿರುತ್ತದೆ. ಎಲುಬಿನ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಬಿಳಿ ಎಳ್ಳಿಗಿಂತ ಕಪ್ಪು ಎಳ್ಳು ಹೆಚ್ಚು ಪ್ರಯೋಜನಕಾರಿ ಎಂಬುದು ತಜ್ಞರ ಉತ್ತರ.
ಇದರಲ್ಲಿ ನಾರಿನಾಂಶ ಹೆಚ್ಚಿರುವ ಕಾರಣ ಇದು ಜೀರ್ಣಕ್ರಿಯೆಗೆ ಉತ್ತಮ. ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳ ನಿವಾರಣೆಗೂ ಇದು ಸಹಕಾರಿ.
ಬಿಳಿ ಎಳ್ಳಿನ ಪ್ರಯೋಜನಗಳು
ಬಿಳಿ ಎಳ್ಳಿನಲ್ಲಿ ಪೋಷಕಾಂಶ ಕಡಿಮೆ ಇರುತ್ತದೆ. ಇದರಲ್ಲಿ ಕೊಬ್ಬಿನಾಂಶ ಹೆಚ್ಚಿರುತ್ತದೆ. ಕಪ್ಪು ಎಳ್ಳಿಗಿಂತ ಕಡಿಮೆ ಪೌಷ್ಟಿಕಾಂಶ ಹೊಂದಿದ್ದರೂ, ಬಿಳಿ ಎಳ್ಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ದೇಹಕ್ಕೆ ಉತ್ತಮ ಕ್ಯಾಲ್ಸಿಯಂ ಒದಗಿಸುತ್ತದೆ. ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು.
ಚಳಿಗಾಲದಲ್ಲಿ ಎಳ್ಳಿನ ಪ್ರಯೋಜನಗಳು
ಕಪ್ಪು ಮತ್ತು ಬಿಳಿ ಎಳ್ಳು ಎರಡೂ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಕಪ್ಪು ಎಳ್ಳಿನಿಂದ ಆರೋಗ್ಯ ಪ್ರಯೋಜನಗಳು ಜಾಸ್ತಿ.
- ಕಪ್ಪು ಎಳ್ಳಿನಲ್ಲಿ ಹೆಚ್ಚು ಆ್ಯಂಟಿಆಕ್ಸಿಡೆಂಟ್‌ಗಳಿದ್ದು, ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ಹೃದಯ ಸಮಸ್ಯೆಗಳಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.
- ಕಪ್ಪು ಮತ್ತು ಬಿಳಿ ಎಳ್ಳಿನ ಬೀಜಗಳು ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇವು ಆರೋಗ್ಯಕರ ಕೊಬ್ಬಿನಾಮ್ಲಗಳಾಗಿವೆ. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಎಳ್ಳು ನಾರಿನಂಶವನ್ನೂ ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಕಪ್ಪು ಎಳ್ಳು ತಿನ್ನುವುದು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಎಳ್ಳಿನಲ್ಲಿ ಎಣ್ಣೆಯ ಶೇಕಡಾವಾರು ಪ್ರಮಾಣ ಹೆಚ್ಚು. ಈ ಕಾರಣದಿಂದಾಗಿ, ಇದು ಚರ್ಮ ಮತ್ತು ಕೂದಲಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. *
- ಕಪ್ಪು ಎಳ್ಳು ತಿನ್ನುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಇದು ಅಕಾಲಿಕ ಬಾಲನೆರೆಯನ್ನು ತಡೆಯುತ್ತದೆ.
- ಎರಡೂ ಬಗೆಯ ಎಳ್ಳುಗಳಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ಇದು ಮೂಳೆಗಳ ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಲ್ಲುಗಳು ಕೂಡ ಒಳ್ಳೆಯದು.
ಇದನ್ನೂ ಓದಿ: ಪ್ರತಿದಿನ ಒಂದು ಚಮಚ ಎಳ್ಳು ತಿಂದರೆ ಇಷ್ಟೆಲ್ಲಾ ಪ್ರಯೋಜನ