ಚಳಿಗಾಲದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಾಡಬಾರದು ಅಂದ್ರೆ ಹಾಲಿಗೆ ಈ 4 ಪದಾರ್ಥ ಸೇರಿಸಿ ಕುಡಿಯಿರಿ, ಇದರಿಂದ ಮೆದುಳು ಚುರುಕಾಗುತ್ತೆ
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲೇ ಸರಿ. ಈ ಸಮಯದಲ್ಲಿ ಮೆದುಳು ಕೂಡ ಚುರುಕಾಗಿ ಕೆಲಸ ಮಾಡುವುದಿಲ್ಲ. ಚಳಿಗಾಲದಲ್ಲಿ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಪರಿಹಾರ ಎಂದರೆ ಹಾಲಿಗೆ ಕೆಲವು ವಸ್ತುಗಳನ್ನು ಸೇರಿಸಿ ಕುಡಿಯುವುದು. ಈ ವಸ್ತುಗಳನ್ನು ಸೇರಿಸಿದ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಚಳಿಗಾಲದ ಸಮಸ್ಯೆಗಳು ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ.
ಹಾಲು ಮನುಷ್ಯನ ಆರೋಗ್ಯಕ್ಕೆ ಬಹಳ ಉತ್ತಮ. ಕ್ಯಾಲ್ಸಿಯಂ ಸಮೃದ್ಧವಾಗಿರುವ ಹಾಲನ್ನು ಪ್ರತಿದಿನ ಕುಡಿಯುವುದಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಬಾಲ್ಯದಿಂದಲೂ ನಾವು ಹಾಲು ಕುಡಿಯುತ್ತಾ ಬಂದಿರುತ್ತೇವೆ. ಹಾಲಿನ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಅದಕ್ಕೆ ಕೆಲವೊಂದು ವಸ್ತುಗಳನ್ನು ಸೇರಿಸಲಾಗುತ್ತದೆ. ಚಳಿಗಾಲದಲ್ಲೂ ಹಾಲು ಆರೋಗ್ಯಕ್ಕೆ ಉತ್ತಮ. ಆದರೆ ಇದನ್ನು ಇನ್ನಷ್ಟು ಉತ್ತಮವಾಗಿಸಲು ಹಾಲಿಗೆ ಕೆಲವು ಪದಾರ್ಥಗಳನ್ನು ಸೇರಿಸಿ ಕುಡಿಯಬೇಕು.
ಚಳಿಗಾಲದಲ್ಲಿ ಬರೀ ಹಾಲನ್ನು ಕುಡಿಯುವ ಬದಲು ಹಾಲಿಗೆ ಈ ಕೆಲವು ವಸ್ತುಗಳನ್ನು ಸೇರಿಸಿ ಕುಡಿಯಬೇಕು. ಇದು ದೇಹಕ್ಕೆ ಮಾತ್ರವಲ್ಲ ನಮ್ಮ ಮೆದುಳಿಗೂ ಉತ್ತಮ. ಅಡುಗೆಮನೆಯಲ್ಲೇ ಇರುವ ಈ ವಸ್ತುಗಳನ್ನು ಹಾಲಿಗೆ ಸೇರಿಸಿ ಕುದಿಸಿ ಕುಡಿಯಬೇಕು. ಇದು ನಮ್ಮ ಒಟ್ಟಾರೆ ಆರೋಗ್ಯಕ್ಕೂ ಉತ್ತಮ. ಹಾಗಾದರೆ ಚಳಿಗಾಲಕ್ಕೆ ಔಷಧದಂತೆ ಕೆಲಸ ಮಾಡುವ ಆ ವಸ್ತುಗಳು ಯಾವುವು ನೋಡಿ.
ಶುಂಠಿ ಹಾಲು
ಚಳಿಗಾಲದಲ್ಲಿ ಹಾಲಿಗೆ ಸ್ವಲ್ಪ ಶುಂಠಿ ಸೇರಿಸಿ ಸ್ವಲ್ಪ ಸಮಯ ಕುದಿಸಿ ಕುಡಿಯಬಹುದು. ಇದು ಹಾಲಿಗೆ ಉತ್ತಮ ಪರಿಮಳವನ್ನು ನೀಡುವುದಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ. ಪ್ರತಿದಿನ ಶುಂಠಿ ಹಾಲನ್ನು ಸೇವಿಸುವುದರಿಂದ ನಮ್ಮ ದೇಹವು ಬೆಚ್ಚಗಿರುತ್ತದೆ, ಇದು ಋತುಮಾನದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ.
ಬಾದಾಮಿ ಹಾಲು
ಬಾದಾಮಿ ಮತ್ತು ಹಾಲಿಗಿಂತ ಯಾವುದೇ ಉತ್ತಮ ಸಂಯೋಜನೆ ಇಲ್ಲ. ಈ ಎರಡೂ ವಸ್ತುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಮತ್ತು ನಮ್ಮ ಒಟ್ಟಾರೆ ದೈಹಿಕ ಆರೋಗ್ಯ ಮತ್ತು ಮೆದುಳಿನ ಆರೋಗ್ಯವನ್ನು ಸುಧಾರಿಸಲು ಬಾದಾಮಿ ಹಾಲು ಸಹಾಯ ಮಾಡುತ್ತದೆ. ಮಕ್ಕಳು ಕೂಡ ಬಾದಾಮಿ ಹಾಲನ್ನು ಖುಷಿಯಿಂದ ಕುಡಿಯುತ್ತಾರೆ. ಚಳಿಗಾಲದುದ್ದಕ್ಕೂ ಬಾದಾಮಿ ಹಾಲನ್ನು ಕುಡಿಯಬೇಕು. ನೀವು ಹಾಲಿಗೆ ಬಾದಾಮಿ ಪುಡಿಯನ್ನು ಸೇರಿಸಬಹುದು ಅಥವಾ ಬೇಯಿಸಿದ ಬಾದಾಮಿಯನ್ನು ಬೆರೆಸಿ ಕುಡಿಯಬಹುದು.
ಕರ್ಜೂರ ಮತ್ತು ಹಾಲು
ಹಾಲು ಮತ್ತು ಖರ್ಜೂರದ ಸಂಯೋಜನೆಯು ನಮ್ಮ ದೇಹಕ್ಕೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ದೇಹವನ್ನು ಬೆಚ್ಚಗಿಡಲು, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಮತ್ತು ಜ್ಞಾಪಕಶಕ್ತಿಯನ್ನು ಹೆಚ್ಚಿಸಲು ಇದು ತುಂಬಾ ಸಹಾಯಕವಾಗಿದೆ. ಪ್ರತಿನಿತ್ಯ ಎರಡರಿಂದ ಮೂರು ಖರ್ಜೂರವನ್ನು ಹಾಲಿನೊಂದಿಗೆ ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳಾದ ಫೈಬರ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ತಾಮ್ರ ಸಿಗುತ್ತದೆ. ಚಳಿಗಾಲದಲ್ಲಿ ನಿಮ್ಮಿಡಿ ಕುಟುಂಬ ಕರ್ಜೂರದ ಹಾಲನ್ನು ಕುಡಿಯುವ ಅಭ್ಯಾಸ ಮಾಡಿ. ಇದರಿಂದ ದೇಹ ಹಾಗೂ ಮನಸ್ಸು ಎರಡೂ ಚುರುಕಾಗುತ್ತದೆ.
ಜಾಯಿಕಾಯಿ ಮತ್ತು ಹಾಲು
ಚಳಿಗಾಲದಲ್ಲಿ ನೀವು ಒಂದು ಚಿಟಿಕೆ ಜಾಯಿಕಾಯಿ ಪುಡಿಯನ್ನು ಬೆರೆಸಿ ಹಾಲು ಕುಡಿಯಬಹುದು. ಜಾಕಾಯಿಯಲ್ಲಿ ದೇಹ ಬೆಚ್ಚಗಾಗಿಸುವ ಗುಣ ಇದೆ. ಇದರಿಂದಾಗಿ ಶೀತ ವಾತಾವರಣದಲ್ಲಿ ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಾಧ್ಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಶೀತ ಮತ್ತು ಕೆಮ್ಮು ಮುಂತಾದ ಋತುಮಾನದ ಕಾಯಿಲೆಗಳ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಜಾಯಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)