ಮಹಿಳೆಯರೇ, ಮಳೆಗಾಲದಲ್ಲಿ ಮುಟ್ಟಿನ ನೈರ್ಮಲ್ಯ ಪಾಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ, ಮಾನ್ಸೂನ್‌ನಲ್ಲಿ ಹೀಗಿರಲಿ ಮುಟ್ಟಿನ ದಿನಗಳು
ಕನ್ನಡ ಸುದ್ದಿ  /  ಜೀವನಶೈಲಿ  /  ಮಹಿಳೆಯರೇ, ಮಳೆಗಾಲದಲ್ಲಿ ಮುಟ್ಟಿನ ನೈರ್ಮಲ್ಯ ಪಾಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ, ಮಾನ್ಸೂನ್‌ನಲ್ಲಿ ಹೀಗಿರಲಿ ಮುಟ್ಟಿನ ದಿನಗಳು

ಮಹಿಳೆಯರೇ, ಮಳೆಗಾಲದಲ್ಲಿ ಮುಟ್ಟಿನ ನೈರ್ಮಲ್ಯ ಪಾಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ, ಮಾನ್ಸೂನ್‌ನಲ್ಲಿ ಹೀಗಿರಲಿ ಮುಟ್ಟಿನ ದಿನಗಳು

ಮಳೆಗಾಲದಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ನೀಡಬೇಕು. ಅದರಲ್ಲೂ ಮಹಿಳೆಯರು ತಮ್ಮ ಮುಟ್ಟಿನ ದಿನಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಾನ್ಸೂನ್‌ನ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳದೇ ಇದ್ದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ಹಾಗಾಗಿ ಈ ಟಿಪ್ಸ್‌ಗಳನ್ನು ನೀವು ತಪ್ಪದೇ ಪಾಲಿಸಬೇಕು.

ಮಹಿಳೆಯರೇ, ಮಳೆಗಾಲದಲ್ಲಿ ಮುಟ್ಟಿನ ನೈರ್ಮಲ್ಯ ಪಾಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ, ಮಾನ್ಸೂನ್‌ನಲ್ಲಿ ಹೀಗಿರಲಿ ನಿಮ್ಮ ಮುಟ್ಟಿನ ದಿನಗಳು
ಮಹಿಳೆಯರೇ, ಮಳೆಗಾಲದಲ್ಲಿ ಮುಟ್ಟಿನ ನೈರ್ಮಲ್ಯ ಪಾಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ, ಮಾನ್ಸೂನ್‌ನಲ್ಲಿ ಹೀಗಿರಲಿ ನಿಮ್ಮ ಮುಟ್ಟಿನ ದಿನಗಳು

ಮಳೆಗಾಲವು ನಮ್ಮೆಲ್ಲರಿಗೂ ಮುದ ತರುವ ಸಮಯ. ಮಳೆ ಸುರಿದಾಗ ಬೇಸರವಾಗುತ್ತೆ ಎನ್ನುವವರು ಕಡಿಮೆ. ಆದರೆ ಮಳೆಗಾಲದಲ್ಲಿ ಕೆಲವೊಂದು ಸಮಸ್ಯೆಗಳು ಕಾಡುವುದು ಸಹಜ. ಅಲರ್ಜಿ ಸೋಂಕಿನ ಸಮಸ್ಯೆ ಹೆಚ್ಚಿರುವ ಈ ಸಮಯದಲ್ಲಿ ಮುಟ್ಟಿನ ದಿನಗಳು ನಿಜಕ್ಕೂ ದುಸ್ತರವಾಗಿರುತ್ತವೆ. ಒದ್ದೆಯಾದ ಬಟ್ಟೆ, ಪರಿಸರದ ತೇವಾಂಶ ಮತ್ತು ಪೀರಿಯಡ್ಸ್‌ ಪ್ಯಾಡ್‌ಗಳಿಂದ ತೇವಾಂಶದ ಸಂಯೋಜನೆಯು ಮಹಿಳೆಯರನ್ನು ಸೋಂಕಿಗೆ ತುತ್ತಾಗುವಂತೆ ಮಾಡಬಹುದು. ಹಾಗಂತ ಮುಟ್ಟಿನ ದಿನಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಮಾನ್ಸೂನ್ ಸಮಯದಲ್ಲಿ ಮುಟ್ಟಿನ ನೈರ್ಮಲ್ಯ ಕಾಪಾಡಿಕೊಳ್ಳಲು ತಜ್ಞರು ನೀಡಿದ ಸಲಹೆ ಹೀಗಿದೆ.

ಮಾನ್ಸೂನ್ ಋತುಚಕ್ರದ ಆರೈಕೆಗೆ ಸಲಹೆಗಳು

ಪ್ರತಿ 3 ರಿಂದ 4 ಗಂಟೆಗಳಿಗೊಮ್ಮೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳು, ಟ್ಯಾಂಪೂನ್‌ಗಳು ಮತ್ತು ಮುಟ್ಟಿನ ಕಪ್‌ಗಳನ್ನು ಬದಲಾಯಿಸಿ. ಮಾನ್ಸೂನ್ ಸಮಯದಲ್ಲಿ, ಸೋಂಕಿನಿಂದ ದೂರವಿರಲು ಮುಟ್ಟಿನ ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ನೀಡಿ. ಸ್ಯಾನಿಟರಿ ನ್ಯಾಪ್ಕಿನ್‌ಗಳು ಅಥವಾ ಟ್ಯಾಂಪೂನ್‌ಗಳು, ಆರ್ದ್ರ ವಾತಾವರಣದಲ್ಲಿ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇದರಿಂದ ಮತ್ತಷ್ಟು ಅಲರ್ಜಿ ಮತ್ತು ಸೋಂಕುಗಳಿಗೆ ಕಾರಣವಾಗಬಹುದು. ನೀವು ಮುಟ್ಟಿನ ಉತ್ಪನ್ನಗಳನ್ನು ಬದಲಿಸದ ನಂತರ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಇದರಿಂದ ಸೂಕ್ಷ್ಮಜೀವಿಗಳು ಹರಡುವುದನ್ನು ತಡೆಯಬಹುದು. ನಿಮ್ಮ ಚರ್ಮಕ್ಕೆ ಹೊಂದುವ ಉತ್ಪನ್ನವನ್ನು ಬಳಸುವುದು ಬಹಳ ಮುಖ್ಯವಾಗುತ್ತದೆ. ತಪ್ಪಾದ ಉತ್ಪನ್ನಗಳ ಬಳಕೆಯೂ ತೊಂದರೆಗೆ ಕಾರಣವಾಗುತ್ತದೆ.

ಯೋನಿ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ: ತೇವಾಂಶ ಕಾರಣದಿಂದ ಉಂಟಾಗುವ ಸೋಂಕು ಯೋನಿಗೆ ಕಿರಿಕಿರಿ ಉಂಟು ಮಾಡಬಹುದು. ಯೋನಿ ಭಾಗದಲ್ಲಿ ಪಿಎಚ್‌ ಸಮತೋಲನವನ್ನು ಕಾಪಾಡಿಕೊಳ್ಳಲು ಚರ್ಮಕ್ಕೆ ಹಾನಿಯುಂಟು ಮಾಡುವ ಉತ್ಪನ್ನವನ್ನು ಬಳಸುವುದನ್ನು ಬಿಡಬೇಕು. ಹೈಡ್ರೇಟ್‌ ಆಗಿರಿ, ಸಮತೋಲಿತ ಆಹಾರವನ್ನು ಸೇವಿಸಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಪ್ರಯತ್ನಿಸಿ ಮತ್ತು ಮಸಾಲೆಯುಕ್ತ ಆಹಾರ, ಮದ್ಯ, ಧೂಮಪಾನದಂತಹ ಅಭ್ಯಾಸವನ್ನು ತಪ್ಪಿಸುವುದು ಕೂಡ ಮುಖ್ಯವಾಗುತ್ತದೆ.

ಹತ್ತಿಯ ಒಳಉಡುಪುಗಳನ್ನು ಧರಿಸಿ: ಮಳೆಗಾಲದಲ್ಲಿ ತಪ್ಪಿಯೂ ಬಿಗಿಯಾದ ನೈಲಾನ್ ಬಟ್ಟೆಗಳನ್ನು ಧರಿಸಬೇಡಿ. ಬದಲಾಗಿ, ಸರಿಯಾದ ರಕ್ತಪರಿಚಲನೆಗೆ ಸಹಾಯ ಮಾಡುವ ಮತ್ತು ವಾಸನೆಯನ್ನು ತಡೆಯುವ ಗಾಳಿಯಾಡಬಲ್ಲ ಹತ್ತಿ ಬಟ್ಟೆಗಳನ್ನು ಬಳಸಿ.

ಶೇವಿಂಗ್‌ ಮಾಡುವುದನ್ನು ತಪ್ಪಿಸಿ: ಮಳೆಗಾಲದಲ್ಲಿ ನಿಮ್ಮ ಖಾಸಗಿ ಭಾಗವನ್ನು ಶೇವಿಂಗ್‌ ಮಾಡದೇ ಇರುವುದು ಉತ್ತಮ. ಅಪ್ಪಿ ತಪ್ಪಿ ಚಿಕ್ಕ ಗಾಯವಾದರೂ ಅದರಿಂದ ನೀವು ಇನ್ನಷ್ಟು ತೊಂದರೆಗಳನ್ನು ಎದುರಿಸುವಂತಾಗಬಹುದು. ಸೂಕ್ಷ್ಮ ಚರ್ಮ ಹೊಂದಿರುವವರು ಖಾಸಗಿ ಭಾಗವನ್ನು ಹೆಚ್ಚು ಕಾಳಜಿ ಮಾಡಬೇಕು. ಯಾಕೆಂದರೆ ಮಳೆಗಾಲದಲ್ಲಿ ಉಂಟಾಗುವ ಸೋಂಕು, ಗಾಯ ಬೇಗನೆ ಗುಣವಾಗುವುದಿಲ್ಲ. ನೆನಪಿರಲಿ.

ಪ್ರತಿದಿನ ಎರಡು ಬಾರಿ ಸ್ನಾನ ಮಾಡಿ: ಮಳೆಗಾಲದ ಮುಟ್ಟಿನ ದಿನಗಳಲ್ಲಿ ದಿನಕ್ಕೆ ಎರಡು ಬಾರಿ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿ. ಮಳೆಗಾಲದಲ್ಲಿ ತೇವಾಂಶವು ಅತಿಯಾದ ಬೆವರು ಮತ್ತು ವಾಸನೆಯನ್ನು ಉಂಟುಮಾಡುತ್ತದೆ. ಮಳೆಗಾಲದಲ್ಲಿ ಸುಗಂಧ ರಹಿತ ಚರ್ಮಕ್ಕೆ ಹೊಂದುವ ಸೋಪ್‌ ಬಳಸುವುದು ಉತ್ತಮ.

ಈ ಮೇಲಿನ ಸಲಹೆಗಳನ್ನು ಪಾಲಿಸುವ ಮೂಲಕ ಮಳೆಗಾಲದ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಬಹುದು. ಮಳೆಗಾಲದಲ್ಲಿ ಸೋಂಕಿನ ಕಾರಣದಿಂದ ಉಂಟಾಗುವ ತೊಂದರೆಗಳು ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು ಎಚ್ಚರ.

Whats_app_banner