ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಮಲವಿಸರ್ಜನೆ ಮಾಡುವುದೇಕೆ? ವೈದ್ಯರು ನೀಡುವ ಕಾರಣ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಮಲವಿಸರ್ಜನೆ ಮಾಡುವುದೇಕೆ? ವೈದ್ಯರು ನೀಡುವ ಕಾರಣ ಹೀಗಿದೆ

ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಮಲವಿಸರ್ಜನೆ ಮಾಡುವುದೇಕೆ? ವೈದ್ಯರು ನೀಡುವ ಕಾರಣ ಹೀಗಿದೆ

ಮಹಿಳೆಯರು ಮುಟ್ಟಿನ ಸಮಯದಲ್ಲಿ ಹಲವು ಬಾರಿ ಮಲ ವಿಸರ್ಜನೆ ಮಾಡುತ್ತಾರೆ. ಹಾಗಾದರೆ ಈ ಸಮಯದಲ್ಲಿ ಹೆಚ್ಚಾಗಿ ಮಲವಿಸರ್ಜನೆ ಮಾಡುವುದೇಕೆ? ವೈದ್ಯರು ನೀಡಿರುವ 3 ಕಾರಣಗಳು ಹೀಗಿವೆ.

ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಮಲವಿಸರ್ಜನೆ ಮಾಡುವುದೇಕೆ?
ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಮಲವಿಸರ್ಜನೆ ಮಾಡುವುದೇಕೆ?

ಮುಟ್ಟಿನ ಸಮಯದಲ್ಲಿ ಹೆಣ್ಣುಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಅತಿಯಾದ ರಕ್ತಸ್ರಾವ, ಹೊಟ್ಟೆನೋವು ಮುಂತಾದವುಗಳ ಜೊತೆ ಹೆಚ್ಚಾಗಿ ಮಲವಿಸರ್ಜಿಸುವುದು ಸೇರಿರುತ್ತದೆ.

ಜೂನ್ 2ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಮಹಿಳೆಯೊಬ್ಬರು ಕೇಳಿದ ಪ್ರಶ್ನೆಗೆ ಯುಕೆ ಮೂಲದ ಎನ್‌ಎಚ್‌ಎಸ್ ಶಸ್ತ್ರಚಿಕಿತ್ಸಕ ಡಾ. ಕರಣ್ ರಾಜನ್ ಪ್ರತಿಕ್ರಿಯಿಸಿದ್ದಾರೆ.

ನಾಡಿಯಾ ಒಕಮೊಟೊ ಎನ್ನುವ ಮಹಿಳೆಯು ‘ಮುಟ್ಟಿನ ಸಮಯದಲ್ಲಿ ನಾನು ಹೆಚ್ಚು ಹೆಚ್ಚು ಮಲವಿಸರ್ಜನೆ ಮಾಡುವುದೇಕೆ?‘ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಾ. ಕರಣ್‌ ಮಹಿಳೆಯರು ತಮ್ಮ ಮುಟ್ಟಿನ ಚಕ್ರದಲ್ಲಿ (ಮುಟ್ಟಿನ ಸಮಯದಲ್ಲಿ) ಕರುಳಿನ ಚಲನೆಯಲ್ಲಿ ಉಂಟಾಗುವ ಬದಲಾವಣೆಗಳ ಬಗ್ಗೆ ವಿವರಣೆ ನೀಡಿದ್ದಾರೆ.

ಹಾಗಾದರೆ ಮುಟ್ಟಿನ ಸಮಯದಲ್ಲಿ ಹೆಚ್ಚು ಮಲವಿಸರ್ಜನೆ ಮಾಡಲು ಕಾರಣವೇನು ಎಂಬ ವಿವರ ಇಲ್ಲಿದೆ ನೋಡಿ.

1. ದೇಹ ನೀರು ಹೀರಿಕೊಳ್ಳಲು ತೊಂದರೆ ಉಂಟಾಗುವುದು

ಡಾ. ರಾಜನ್ ವಿಡಿಯೊದಲ್ಲಿ ‘ತುಂಬಾ ಒಳ್ಳೆಯ ಪ್ರಶ್ನೆ. ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ಮಲವಿಸರ್ಜನೆ ಮಾಡಲು ವಾಸ್ತವವಾಗಿ 3 ಕಾರಣಗಳಿವೆ. ಮೊದಲ ಕಾರಣವೆಂದರೆ... ಋತುಚಕ್ರದ ಹಾರ್ಮೋನುಗಳು ನಿಮ್ಮ ದೇಹವು ನೀರನ್ನು ಹೀರಿಕೊಳ್ಳಲು ಕಷ್ಟವಾಗಿಸುತ್ತದೆ. ಆದ್ದರಿಂದ, ನಿಮ್ಮ ಮಲವು ಸಡಿಲ ಮತ್ತು ಮೃದುವಾಗುವ ಸಾಧ್ಯತೆಗಳು ಮತ್ತು ಅತಿಸಾರದ ಸಾಧ್ಯತೆಗಳು ಹೆಚ್ಚು‘ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

2. ಪ್ರೊಸ್ಟಗ್ಲಾಂಡಿನ್‌ಗಳು ಕರುಳಿನ ಮೇಲೆ ಪರಿಣಾಮ ಬೀರಬಹುದು

‘ಎರಡನೆಯ ಕಾರಣ ಪ್ರೊಸ್ಟಗ್ಲಾಂಡಿನ್‌ಗಳು. ಈಗ ಬಿಳಿ, ಮೃದುವಾದ ವಸ್ತುವು ನಿಮ್ಮ ಗರ್ಭಾಶಯ ಎಂದು ಕಲ್ಪಿಸಿಕೊಳ್ಳಿ. ಬಿಡುಗಡೆಯಾಗುವ ಪ್ರೊಸ್ಟಗ್ಲಾಂಡಿನ್‌ಗಳು ಗರ್ಭಾಶಯವನ್ನು ಸೆಳೆತ ಮತ್ತು ಹಿಂಸಾತ್ಮಕವಾಗಿ ಸಂಕುಚಿತಗೊಳಿಸುತ್ತವೆ. ಇದು ಸ್ವಲ್ಪ ತಲೆಕೆಳಗಾಗಿ ಮಾಡಿದಂತೆ. ಇದು ನೋವನ್ನು ಉಂಟುಮಾಡುತ್ತದೆ. ಈಗ ಪ್ರೊಸ್ಟಗ್ಲಾಂಡಿನ್‌ಗಳು ಕರುಳಿನಂತೆ ಹತ್ತಿರದ ಅಂಗಗಳಲ್ಲಿ ಇದೇ ರೀತಿಯ ಹಿಂಸಾತ್ಮಕ ಸಂಕೋಚನಗಳನ್ನು ಉಂಟುಮಾಡುತ್ತವೆ. ಅಂತಹ ಸಂದರ್ಭದಲ್ಲಿ ಕರುಳು ಹಿಸುಕುತ್ತಿರುವ ಅನುಭವವಾದಾಗ ಕರುಳಿನ ಚಲನೆ ಉಂಟಾಗುತ್ತದೆ ಎಂದು ಅವರು ವಿವರಿಸಿದರು.

3. ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್‌ನಲ್ಲಿನ ಬದಲಾವಣೆ

‘ಋತುಚಕ್ರದ ಸಮಯದಲ್ಲಿ, ಹಾರ್ಮೋನುಗಳ ಏರಿಳಿತ ಸಹಜ. ವಾಸ್ತವವಾಗಿ, ಜಿಐ ಟ್ರಾಕ್ಟ್ ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್‌ನಲ್ಲಿನ ಆ ಬದಲಾವಣೆಗಳಿಗೆ ಬಹಳ ಸೂಕ್ಷ್ಮವಾಗಿರುತ್ತದೆ. ಕೆಲವೊಮ್ಮೆ ಇದು ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಕೆಲವೊಮ್ಮೆ ಇದು ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರ ಆಧಾರದ ಮೇಲೆ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅತಿಸಾರ ಅಥವಾ ಮಲಬದ್ಧತೆಯಂತಹ ಸಮಸ್ಯೆಗಳನ್ನು ಎದುರಿಸಬಹುದು ಎಂದು ಅವರು ಹೇಳುತ್ತಾರೆ.

(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ (ಎಚ್‌ಟಿ ಕನ್ನಡ) ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

HT Kannada Desk