Yellow Teeth: ಎಷ್ಟೇ ಬ್ರಷ್ ಮಾಡಿದ್ರು ಹಳದಿ ಹಲ್ಲಿನ ಸಮಸ್ಯೆ ನಿವಾರಣೆ ಆಗ್ತಿಲ್ವಾ; ಹಾಗಿದ್ರೆ ಈ ವಿಚಾರಗಳತ್ತ ಗಮನ ಹರಿಸಿ
ಹಳದಿ ಹಲ್ಲಿನ ಸಮಸ್ಯೆ ಹಲವರನ್ನು ಕಾಡುತ್ತಿರುತ್ತಿರುತ್ತದೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಇದರಿಂದ ಮುಜುಗರ ಉಂಟಾಗುವುದು ಮಾತ್ರ ಸುಳ್ಳಲ್ಲ. ಈ ಸಮಸ್ಯೆಯಿಂದ ದೂರಾಗಲು ಪದೇ ಪದೇ ಬ್ರಷ್ ಮಾಡಬೇಕು ಅಂತೇನಿಲ್ಲ. ನಿಮ್ಮ ಹಲ್ಲನ್ನು ಬಿಳಿಯಾಗಿಸಲು ಇಲ್ಲಿದೆ ಬೆಸ್ಟ್ ಐಡಿಯಾ.

ಹಲ್ಲು ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಹಾಲಿನಂತೆ ಬಿಳುಪಿನ ಹಲ್ಲನ್ನು ಎಲ್ಲರೂ ಬಯಸುತ್ತಾರೆ. ಆದರೆ ಕೆಲವರಿಗೆ ಹಲ್ಲುಗಳು ಹಳದಿಯಾಗಿರುತ್ತದೆ. ಎಷ್ಟೇ ಬ್ರಶ್ ಮಾಡಿದ್ರು ಹಲ್ಲು ಬಿಳಿಯಾಗುವುದಿಲ್ಲ. ಅದಕ್ಕೆ ಕಾರಣಗಳು ಹಲವಿರಬಹುದು. ಜೀವನಶೈಲಿಯ ಆಯ್ಕೆಗಳು ಹಲ್ಲು ಬಿಳಿಯಾಗಲು ಕಾರಣವಾಗುತ್ತವೆ.
ಲಂಡನ್ ಮೂಲದ ದಂತವೈದ್ಯ ಡಾ. ಸುರಿನಾ ಸೆಹಗಲ್ ಹಳದಿ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ ಎಂಬು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ಅವರು ಹಲ್ಲುಗಳು ಹಳದಿಯಾಗದಂತೆ ತಡೆಯುವುದು ಹಾಗೂ ಬಾಯಿಯ ನೈಮರ್ಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸರಳ ತಂತ್ರಗಳನ್ನು ನೀವು ಫಾಲೋ ಮಾಡುವ ಮೂಲಕ ಹಳದಿ ಹಲ್ಲಿನ ಸಮಸ್ಯೆಗೆ ಗುಡ್‌ಬೈ ಹೇಳಬಹುದು.
ಬ್ರಷ್ ಮಾಡುವ ವಿಧಾನ
ಬ್ರಷ್ ಮಾಡುವಾಗ ನಾವು ಅನುಸರಿಸುವ ಸಾಮಾನ್ಯ ತಪ್ಪುಗಳ ಬಗ್ಗೆ ವಿವರಿಸಿದ್ದಾರೆ ಡಾ. ಸೆಹಗಲ್. ಅವರ ಪ್ರಕಾರ ನಾವು ಬ್ರಷ್ ಬಳಸಿ ಅತಿಯಾಗಿ ಹಲ್ಲುಜ್ಜುವುದರಿಂದ ಬಿಳಿ ದಂತಕವಚದ ಪದರದ ಸವೆತಕ್ಕೆ ಕಾರಣವಾಗಬಹುದು. ಇದರಿಂದಾಗಿ ಕಾಲಕ್ರಮೇಣ ನಿಮ್ಮ ಹಲ್ಲುಗಳು ಹಳದಿಯಾಗಬಹುದು. ಮಾತ್ರವಲ್ಲ ಹಲ್ಲುಗಳ ಹುಳುಕಿಗೂ ಇದು ಕಾರಣವಾಗಬಹುದು. ಇದರ ಬದಲು ಮೃದುವಾಗಿ ಹಲ್ಲುಜ್ಜುವ ತಂತ್ರಗಳನ್ನು ಅನುಸರಿಸಲು ಎಲೆಕ್ಟ್ರಿಕ್ ಟೂತ್ ಬ್ರಷ್ ಬಳಸಬಹುದು ಎಂದು ಅವರು ಸಲಹೆ ನೀಡುತ್ತಾರೆ. ಇದರಿಂದ ದಂತಕವಚದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಎಲೆಕ್ಟ್ರಿಕ್ ಟೂತ್ ಬ್ರಷ್‌ಗಳು ಪ್ಲೇಕ್ ಹಾಗೂ ವಸಡಿನ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಆಗಾಗ್ಗೆ ತಿನ್ನುವುದು
ಡಾ. ಸೆಹಗಲ್ ಅವರ ಪ್ರಕಾರ ಆಗಾಗ್ಗೆ ತಿನ್ನುವುದರಿಂದ ಹಲ್ಲಿನ ಸಮಸ್ಯೆಗಳು ಹೆಚ್ಚಬಹುದು. ನಾನು ಪ್ರತಿ ಬಾರಿ ತಿನ್ನುವಾಗಲೂ ನಮ್ಮ ಬಾಯಿಯು ಹೆಚ್ಚು ಆಮ್ಲೀಯವಾಗಬಹುದು. ಇದು ದಂತಕವಚದ ಮೇಲೆ ಪರಿಣಾಮ ಬೀರುತ್ತದೆ. ಪದೇ ಪದೇ ತಿನ್ನುತ್ತಿದ್ದರೆ, ಹಲ್ಲುಗಳ ಆಸಿಡ್ ದಾಳಿಗೆ ಒಳಗಾಗುತ್ತವೆ. ಇದು ದಂತ ಕವಚದ ಸವೆತಕ್ಕೆ ಕಾರಣವಾಗಬಹುದು. ನಿಮ್ಮ ಹಲ್ಲು ಮುತ್ತಿನಂತೆ ಬಿಳುಪಾಗಿರಬೇಕು ಅಂದ್ರೆ ಪದೇ ಪದೇ ತಿನ್ನುವುದಕ್ಕೆ ಕಡಿವಾಣ ಹಾಕಬೇಕು. ನಿಗದಿತ ಸಮಯಕ್ಕೆ ನಿಯಮಿತ ಆಹಾರ ಸೇರಿಸುವುದು ಮುಖ್ಯವಾಗುತ್ತದೆ.
ಪಾನೀಯಗಳನ್ನು ಕುಡಿಯುವಾಗ ಈ ವಿಚಾರ ನೆನಪಿನಲ್ಲಿರಲಿ
ಆಮ್ಲೀಯ ಅಂಶ ಇರುವ ಪಾನೀಯಗಳನ್ನು ಕುಡಿಯವಾಗ ಸ್ಟ್ರಾ ಬಳಸುವುದು ಬೆಸ್ಟ್ ಎನ್ನುತ್ತಾರೆ ಡಾ. ಸೆಹಗಲ್. ಈ ತಂಪು ಪಾನೀಯಗಳನ್ನು ನೇರವಾಗಿ ಕುಡಿಯುವುದರಿಂದ ಹಲ್ಲಿನ ಸಮಸ್ಯೆಯನ್ನು ಉಂಟು ಮಾಡುತ್ತವೆ. ಆ ಕಾರಣಕ್ಕೆ ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವಾಗ ತಪ್ಪದೇ ಸ್ಟ್ರಾ ಬಳಸಿ. ಇದರಿಂದ ದಂತಕವಚಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು.
ಇದರೊಂದಿಗೆ ಹಲ್ಲಿನ ಸಮಸ್ಯೆಗಳಿಂದ ದೂರಾಗಲು ನಿರಂತರವಾಗಿ ಬಾಯಿಯ ನೈಮರ್ಲ್ಯ ಕಾಪಾಡಿಕೊಳ್ಳುವುದು ಹಾಗೂ ಆಗಾಗ ತಪಾಸಣೆ ಮಾಡಿಸುವುದು ಕೂಡ ಮುಖ್ಯವಾಗುತ್ತದೆ. ಇದರೊಂದಿಗೆ ನಾವು ಸೇವಿಸುವ ಆಹಾರಗಳು ಕೂಡ ಹಲ್ಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಸಕ್ಕರೆ, ಪಿಷ್ಟಗಳು ಮತ್ತು ಆಮ್ಲದ ಅಂಶಗಳಿರುವ ಆಹಾರಗಳನ್ನು ಅತಿಯಾಗಿ ಸೇವಿಸುವುದರಿಂದ ಪ್ಲೇಕ್ ಉಂಟಾಗುವುದು ಮತ್ತು ದಂತಕವಚವನ್ನು ದುರ್ಬಲಗೊಳಿಸಲು ಕಾರಣವಾಗಬಹುದು.
ದಂತಕವಚದ ಶಕ್ತಿಯನ್ನು ಕಾಪಾಡಿಕೊಳ್ಳಲು ಹುಳಿ ಮಿಠಾಯಿಗಳು, ಬ್ರೆಡ್, ಆಲ್ಕೋಹಾಲ್, ಕಾರ್ಬೊನೇಟೆಡ್ ಪಾನೀಯಗಳು, ಐಸ್, ಸಿಟ್ರಸ್ ಹಣ್ಣುಗಳು ಮತ್ತು ಆಲೂಗೆಡ್ಡೆ ಚಿಪ್ಸ್ ಸೇವನೆಯನ್ನು ತಪ್ಪಿಸುವಂತೆ ತಜ್ಞರು ಸಲಹೆ ನೀಡುತ್ತಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)
ವಿಭಾಗ