ಹೃದಯಾಘಾತಕ್ಕೆ ಬಲಿಯಾದ ಭಾರತದ 6 ಯುವ ಸಿಇಒ, ಸಂಸ್ಥಾಪಕರು; ಅಮಿತ್ ಬ್ಯಾನರ್ಜಿಯಿಂದ ಅಂಬರೀಶ್ ಮೂರ್ತಿವರೆಗೆ ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯಾಘಾತಕ್ಕೆ ಬಲಿಯಾದ ಭಾರತದ 6 ಯುವ ಸಿಇಒ, ಸಂಸ್ಥಾಪಕರು; ಅಮಿತ್ ಬ್ಯಾನರ್ಜಿಯಿಂದ ಅಂಬರೀಶ್ ಮೂರ್ತಿವರೆಗೆ ಇಲ್ಲಿದೆ ವಿವರ

ಹೃದಯಾಘಾತಕ್ಕೆ ಬಲಿಯಾದ ಭಾರತದ 6 ಯುವ ಸಿಇಒ, ಸಂಸ್ಥಾಪಕರು; ಅಮಿತ್ ಬ್ಯಾನರ್ಜಿಯಿಂದ ಅಂಬರೀಶ್ ಮೂರ್ತಿವರೆಗೆ ಇಲ್ಲಿದೆ ವಿವರ

ಇತ್ತೀಚಿಗೆ ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗಿದೆ. ಟೇಬಲ್‌ ಸ್ಪೇಸ್‌ ಕಂಪನಿ ಸಹ ಸಂಸ್ಥಾಪಕ ಅಮಿತ್ ಬ್ಯಾನರ್ಜಿ ಅಕಾಲಿಕ ಮರಣ ಈಗ ಉದ್ಯಮ ವಲಯದಲ್ಲಿ ಆತಂಕ ಸೃಷ್ಟಿಸಿದೆ. 44ನೇ ವಯಸ್ಸಿಗೆ ಹೃದಯಘಾತಕ್ಕೆ ಬಲಿಯಾದ ಅಮಿತ್‌ ಸಾಧನೆ ಚಿಕ್ಕದಲ್ಲ. ಈ ಸಂದರ್ಭ ಹೃದಯಾಘಾತದಿಂದ ಮರಣ ಹೊಂದಿದ ಯುವ ಉದ್ಯಮಿಗಳು ಮತ್ತು ಸಿಇಒಗಳ ಪಟ್ಟಿ ನೋಡೋಣ.

ಅಮಿತ್ ಬ್ಯಾನರ್ಜಿ (ಎಡಚಿತ್ರ)
ಅಮಿತ್ ಬ್ಯಾನರ್ಜಿ (ಎಡಚಿತ್ರ)

ಇತ್ತೀಚಿನ ಒತ್ತಡದ ಜೀವನಶೈಲಿಯು ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅತಿಯಾದ ಮಾನಸಿಕ, ದೈಹಿಕ ಒತ್ತಡವು ಹೃದ್ರೋಗದ ಪ್ರಮಾಣ ಏರಿಕೆಯಾಗಲು ಕಾರಣವಾಗಿದೆ. ಇದರಿಂದ ಹಲವು ಉದ್ಯಮಿಗಳು, ಸಿಇಒಗಳು ಹೃದಯಾಘಾತದಿಂದಾಗಿ ಚಿಕ್ಕ ವಯಸ್ಸಿಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ನಿನ್ನೆಯಷ್ಟೇ ಸಾವನ್ನಪ್ಪಿದ ಟೇಬಲ್ ಸ್ಪೇಸ್ ಕಂಪನಿಯ ಸಹ ಸಂಸ್ಥಾಪಕ ಅಮಿತ್ ಬ್ಯಾನರ್ಜಿ ಕೂಡ ಉದಾಹರಣೆ.

ಅಮಿತ್ ಬ್ಯಾನರ್ಜಿ ನಿನ್ನೆ (ಜನವರಿ 6) ತಮ್ಮ 44ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಅದಕ್ಕೆ ಕಾರಣ ಹೃದಯಾಘಾತ. ಅವರ ಸಾವಿನ ಸುದ್ದಿಯು ವ್ಯವಹಾರ ವಲಯದಲ್ಲಿ ದಿಗಿಲು ಮೂಡಿಸಿದೆ. ಬ್ಯಾನರ್ಜಿ ಅವರ ಸಾವು ಯುವ ಉದ್ಯಮಿಗಳು ಹಾಗೂ ಸಿಇಒಗಳ ಸಾವನ್ನು ನೆನಪಿಸಿದೆ. ಅಲ್ಲದೇ ಈ ವಲಯದಲ್ಲಿ ಮಾನಸಿಕ ಒತ್ತಡದ ಬಗ್ಗೆಯೂ ಚರ್ಚೆ ಶುರುವಾಗಿದೆ.

ದೊಡ್ಡ ದೊಡ್ಡ ವ್ಯವಹಾರಗಳನ್ನು ಮುನ್ನಡೆಸುವ ಮೂಲಕ ಸಾಧನೆ ಮಾಡಿ ಹೆಸರು, ಖ್ಯಾತಿ ಗಳಿಸಿದ್ದರೂ ಅವರಿಗೆ ಒತ್ತಡ ಕಡಿಮೆ ಇರುವುದಿಲ್ಲ. ಅತಿಯಾದ ಒತ್ತಡದ ಕಾರಣದಿಂದ ಸಣ್ಣ ವಯಸ್ಸಿನಲ್ಲೇ ಹೃದಯಘಾತದಿಂದ ಪ್ರಾಣ ಕಳೆದುಕೊಳ್ಳುವಂತಾಗುತ್ತಿದೆ. ಅಮಿತ್ ಬ್ಯಾನರ್ಜಿ ಮಾತ್ರವಲ್ಲದೇ ಭಾರತದಲ್ಲಿ ಹಲವು ಯುವ ಉದ್ಯಮಿಗಳು, ಸಿಇಒಗಳು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಇದು ಆತಂಕಕಾರಿ ವಿಷಯವಾಗಿರುವುದು ಸುಳ್ಳಲ್ಲ. ಈ ಹೊತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ರೂ ಹೃದಯಘಾತಕ್ಕೆ ಬಲಿಯಾಗಿ, ಅಕಾಲಿಕ ಮರಣ ಹೊಂದಿದ ಉದ್ಯಮಿಗಳು, ಸಿಇಒಗಳ ಬಗ್ಗೆ ತಿಳಿಯೋಣ.

ಅಮಿತ್‌ ಬ್ಯಾನರ್ಜಿ

ಅಮಿತ್ ಬ್ಯಾನರ್ಜಿ 2017ರಲ್ಲಿ ಟೇಬಲ್ ಸ್ಪೇಸ್ ಎನ್ನುವ ಕಂಪನಿಯನ್ನು ಶುರು ಮಾಡಿದ್ದರು. ಅವರು ಜನಿಸಿದ್ದು 1980ರಲ್ಲಿ. ವರ್ಕ್‌ಸ್ಪೇಸ್ ಸೆಕ್ಟರ್‌ನಲ್ಲಿ ಟೇಬಲ್‌ ಸ್ಪೇಸ್‌ ಕಂಪನಿ ಬಹಳ ಬೇಗ ಹೆಸರು ಗಳಿಸಿತ್ತು. ಕಾರ್ಪೊರೇಟ್ ರಿಯಲ್ ಎಸ್ಟೇಟ್‌ನಲ್ಲಿ ಅಪಾರ ಅನುಭವ ಹೊಂದಿರುವ ಬ್ಯಾನರ್ಜಿ ಅವರು ಈ ಹಿಂದೆ ಆಕ್ಸೆಂಚರ್‌ನಲ್ಲಿ ಕಾರ್ಪೊರೇಟ್ ರಿಯಲ್ ಎಸ್ಟೇಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ 13 ವರ್ಷಗಳ ಕಾಲ ಕೆಲಸ ಮಾಡಿದ್ದರು. ಅವರ ಕಾರ್ಯತಂತ್ರದ ದೃಷ್ಟಿಕೋನವು ಟೇಬಲ್ ಸ್ಪೇಸ್ ಗಮನಾರ್ಹವಾಗಿ ಬೆಳೆಯಲು ಸಹಾಯ ಮಾಡಿತು. ಅವರು ಕಂಪನಿಯಲ್ಲಿ ಶೇ 21.55 ಪಾಲನ್ನು ಹೊಂದಿದ್ದರು. ಅವರ ಅವಾಸ್ತವಿಕ ಷೇರುಗಳು ಅಂದಾಜು ರೂ 866.8 ಕೋಟಿ ಮೌಲ್ಯದ್ದಾಗಿತ್ತು. ಇದೀಗ ಇದಕ್ಕಿದ್ದಂತೆ ಹೃದಯಾಘಾತದಿಂದ ಜಗತ್ತಿಗೆ ಗುಡ್‌ಬೈ ಹೇಳಿದ ಬ್ಯಾನರ್ಜಿ ಅವರ ಸಾವು ಸ್ಟಾರ್ಟ್‌ಅಪ್‌ ಜಗತ್ತಿನಲ್ಲಿ ಮೌನ ನೆಲೆಸುವಂತೆ ಮಾಡಿದೆ. ವೃತ್ತಿಜೀವನದಲ್ಲಿ ಬಹಳ ಸಾಧನೆ ಮಾಡಿ, ಮುಂದೆ ಹೋಗಬೇಕು ಎಂದು ಕನಸು ಕಂಡಿದ್ದ ಇವರು ಮಾನಸಿಕ ಹಾಗೂ ದೈಹಿಕ ಒತ್ತಡದಿಂದ 44ನೇ ವಯಸ್ಸಿಗೆ ಇಹಲೋಕಕ್ಕೆ ಗುಡ್‌ಬೈ ಹೇಳುವಂತಾಗಿದೆ.

ರೋಹನ್ ಮಿರ್ಚಂದಾನಿ

ಡ್ರಮ್ಸ್ ಫುಡ್ ಇಂಟರ್‌ನ್ಯಾಶನಲ್‌ನ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ಕೂಡ ಹೃದಯಾಘಾತದಿಂದ ಮರಣ ಹೊಂದಿದ್ದರು. ಇವರು ತಮ್ಮ 42ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದರು. ಇವರು ಭಾರತದ ಅತ್ಯಂತ ಪ್ರಸಿದ್ಧ ಮೊಸರಿನ ಕಂಪನಿ ಎಪಿಗಾಮಿಯಾಯನ್ನು ಸ್ಥಾಪಿಸಿದ್ದರು. 2024ರ ಡಿಸೆಂಬರ್ 1ರಂದು ಇವರು ಸಾವನ್ನಪ್ಪಿದ್ದರು. ಇವರ ಸಾವು ಆಹಾರ ಹಾಗೂ ಪಾನೀಯ ಉದ್ಯಮದ ಮೇಲೆ ಶಾಶ್ವತ ಪರಿಣಾಮ ಬೀರುವಂತೆ ಮಾಡಿದ್ದು ಸುಳ್ಳಲ್ಲ. ಇವರು ಭಾರತೀಯ ಆರೋಗ್ಯಕರ ಆಹಾರಗಳ ಮೇಲೆ ಕಾಂತ್ರಿ ಮಾಡಿದ್ದರು. ಅವರು ನಿರ್ಮಿಸಿದ ಬ್ರ್ಯಾಂಡ್ ಮೂಲಕ ಅವರ ಪರಂಪರೆ ಮುಂದುವರಿಯುತ್ತದೆ.

ಅಂಬರೀಶ್ ಮೂರ್ತಿ

ಅಂಬರೀಶ್ ಮೂರ್ತಿ ಭಾರತದ ಅತಿದೊಡ್ಡ ಆನ್‌ಲೈನ್ ಪೀಠೋಪಕರಣ ಮಾರುಕಟ್ಟೆಯಾದ ಪೆಪ್ಪರ್‌ಫ್ರೈನ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿದ್ದರು. ಆನ್‌ಲೈನ್ ಪೀಠೋಪಕರಣ ಉದ್ಯಮವನ್ನು ಪರಿವರ್ತಿಸುವ ಮೂರ್ತಿ ಅವರ ದೃಷ್ಟಿ ಅವರನ್ನು ಇ-ಕಾಮರ್ಸ್‌ ವಿಭಾಗದಲ್ಲಿ ಗೌರವಾನ್ವಿತ ವ್ಯಕ್ತಿಯನ್ನಾಗಿ ಮಾಡಿತು. ಇವರು ಆಗಸ್ಟ್ 7, 2023 ರಂದು, ತಮ್ಮ 51ನೇ ವಯಸ್ಸಿಗೆ ಹೃದಯಾಘಾತದಿಂದಾಗಿ ಸಾಯುತ್ತಾರೆ. ಅವರ ಸಾವು ಭಾರತೀಯ ವ್ಯಾಪಾರ ಸಮುದಾಯಕ್ಕೆ ಆಘಾತ ಉಂಟು ಮಾಡಿತು. ಅವರ ದುರಂತ ಸಾವಿನ ಹೊರತಾಗಿಯೂ, ಪೆಪ್ಪರ್‌ಫ್ರೈ ತನ್ನ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಮೂರ್ತಿ ಅವರ ಉದ್ಯಮಶೀಲತಾ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.

ರುದ್ರತೇಜ್ ಸಿಂಗ್

ರೂಡಿ ಎಂದು ಕರೆಯಲ್ಪಡುವ ರುದ್ರತೇಜ್ ಸಿಂಗ್, ಐಕಾನಿಕ್ ಮೋಟಾರ್‌ಸೈಕಲ್ ಬ್ರ್ಯಾಂಡ್ ರಾಯಲ್ ಎನ್‌ಫೀಲ್ಡ್‌ನ ಸಿಇಒ ಆಗಿದ್ದರು. ಸಿಂಗ್ ಅವರ ನಾಯಕತ್ವದಲ್ಲಿ, ರಾಯಲ್ ಎನ್‌ಫೀಲ್ಡ್ ಭಾರತದಲ್ಲಿ ಮತ್ತು ಅಂತರರಾಷ್ಟ್ರೀಯವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. 2020 ರಲ್ಲಿ 42ನೇ ವಯಸ್ಸಿನಲ್ಲಿ ಹೃದಯ ಸ್ತಂಭನ ಇವರು ಸಾವನ್ನಪ್ಪುತ್ತಾರೆ. ಸಿಂಗ್ ಅವರ ನವೀನ ವಿಧಾನವು ರಾಯಲ್ ಎನ್‌ಫೀಲ್ಡ್ ಅನ್ನು ಮೋಟಾರ್‌ಸೈಕಲ್ ವಿಭಾಗದಲ್ಲಿ ಜಾಗತಿಕ ನಾಯಕನಾಗಿ ಇರಿಸಲು ಸಹಾಯ ಮಾಡಿತು.

ರಂಜನ್ ದಾಸ್

ರಂಜನ್ ದಾಸ್ ಅವರು ಪ್ರಮುಖ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯಾದ SAP ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿದ್ದರು. ದಾಸ್, ಕೇವಲ 39 ವರ್ಷ ವಯಸ್ಸಿನವರಾಗಿದ್ದಾಗ, ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ 2009ರಲ್ಲಿ ಹೃದಯ ಸ್ತಂಭನದಿಂದ ಹಠಾತ್ತನೆ ನಿಧನರಾದರು. ಭಾರತದಲ್ಲಿ SAP ಯ ಉಪಸ್ಥಿತಿಯನ್ನು ವಿಸ್ತರಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು ಮತ್ತು ಅವರ ಹಠಾತ್ ಮರಣವು ಉನ್ನತ-ಪ್ರೊಫೈಲ್ ಪಾತ್ರಗಳಲ್ಲಿ ಕಾರ್ಯನಿರ್ವಾಹಕರು ಎದುರಿಸುತ್ತಿರುವ ತೀವ್ರವಾದ ಒತ್ತಡಗಳಿಗೆ ಗಮನವನ್ನು ತಂದಿತು.

ರೋಹನ್ ಮಲ್ಹೋತ್ರಾ

ಗುಡ್ ಕ್ಯಾಪಿಟಲ್‌ನ ಸಹ-ಸಂಸ್ಥಾಪಕರಾದ ರೋಹನ್ ಮಲ್ಹೋತ್ರಾ ಅವರು 44 ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಾರೆ. ಇವರು ಭರವಸೆಯ ಸ್ಟಾರ್ಟ್‌ಅಪ್‌ಗಳನ್ನು ಗುರುತಿಸುವ ಮತ್ತು ಆರಂಭಿಕ ಹಂತದ ಉದ್ಯಮಿಗಳನ್ನು ಬೆಂಬಲಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದರು. ಗುಡ್ ಕ್ಯಾಪಿಟಲ್ ಅನ್ನು ಸ್ಥಾಪಿಸುವ ಮೊದಲು, ಅವರು ಎಚ್‌ಎಸ್‌ಬಿಸಿಯಲ್ಲಿ ಗಮನಾರ್ಹ ವೃತ್ತಿಜೀವನವನ್ನು ಹೊಂದಿದ್ದರು ಮತ್ತು ನಂತರ ಏಂಜೆಲಿಸ್ಟ್ ಇಂಡಿಯಾಗೆ ಸಲಹೆಗಾರರಾಗಿದ್ದರು. ಅವರ ಅನಿರೀಕ್ಷಿತ ಮರಣವು ಭಾರತೀಯ ಸಾಹಸೋದ್ಯಮ ಬಂಡವಾಳ ಸಮುದಾಯದಲ್ಲಿ ಗಮನಾರ್ಹ ಅಂತರವನ್ನು ಉಂಟುಮಾಡಿತು,

ಬ್ಯಾನರ್ಜಿ, ಮಿರ್ಚಂದಾನಿ, ಮೂರ್ತಿ, ಸಿಂಗ್, ದಾಸ್ ಮತ್ತು ಮಲ್ಹೋತ್ರಾ ಅವರ ಸಾವುಗಳು ಕಟುವಾದ ವಾಸ್ತವವನ್ನು ಎತ್ತಿ ತೋರಿಸುತ್ತವೆ. ನಾಯಕತ್ವ ಸ್ಥಾನದಲ್ಲಿರುವವರ ಮೇಲಿನ ಮಾನಸಿಕ ಒತ್ತಡ ಹಾಗೂ ಪರಿಣಾಮವನ್ನು ಇವರ ಸಾವು ತೆರೆದಿಟ್ಟಿದೆ. ಉದ್ಯಮಶೀಲತೆ ಮತ್ತು ಕಾರ್ಪೊರೇಟ್ ನಾಯಕತ್ವದ ಬೇಡಿಕೆಗಳು ನಿರಂತರವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ, ಉತ್ತಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯು ಎಂದಿಗೂ ಹೆಚ್ಚು ನಿರ್ಣಾಯಕವಾಗಿರಲಿಲ್ಲ.

Whats_app_banner