ಗರ್ಭಿಣಿಯಾದ ತಕ್ಷಣ ಬದಲಾಗಲಿ ಆಹಾರ ಪದ್ಧತಿ: ಗರ್ಭಾವಸ್ಥೆಯಲ್ಲಿ ಗೊತ್ತಿರಲೇಬೇಕಾದ ವಿಚಾರ ಇದು-health what to eat during pregnancy for healthy baby eating these things in starting days of pregnancy prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗರ್ಭಿಣಿಯಾದ ತಕ್ಷಣ ಬದಲಾಗಲಿ ಆಹಾರ ಪದ್ಧತಿ: ಗರ್ಭಾವಸ್ಥೆಯಲ್ಲಿ ಗೊತ್ತಿರಲೇಬೇಕಾದ ವಿಚಾರ ಇದು

ಗರ್ಭಿಣಿಯಾದ ತಕ್ಷಣ ಬದಲಾಗಲಿ ಆಹಾರ ಪದ್ಧತಿ: ಗರ್ಭಾವಸ್ಥೆಯಲ್ಲಿ ಗೊತ್ತಿರಲೇಬೇಕಾದ ವಿಚಾರ ಇದು

ಗರ್ಭಿಣಿಯಾಗುವ ಮುಂಚೆ ನೀವು ನಿಮಗಿಷ್ಟ ಬಂದ ಆಹಾರ ತಿನ್ನಬಹುದು. ಆದರೆ, ಗರ್ಭಿಣಿ ಅಂತಾ ಗೊತ್ತಾದ ಕೂಡಲೇ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಿದ್ದರೆ, ಗರ್ಭಾವಸ್ಥೆಯ ಮೊದಲ ಹಂತದಲ್ಲಿ ಯಾವೆಲ್ಲಾ ಆಹಾರ ಸೇವಿಸಬಹುದು ಅನ್ನೋದು ಇಲ್ಲಿದೆ:

ಗರ್ಭಾವಸ್ಥೆಯ ಮೊದಲ ಹಂತದಲ್ಲಿ ಯಾವೆಲ್ಲಾ ಆಹಾರ ಸೇವಿಸಬಹುದು ಅನ್ನೋದು ಇಲ್ಲಿದೆ:
ಗರ್ಭಾವಸ್ಥೆಯ ಮೊದಲ ಹಂತದಲ್ಲಿ ಯಾವೆಲ್ಲಾ ಆಹಾರ ಸೇವಿಸಬಹುದು ಅನ್ನೋದು ಇಲ್ಲಿದೆ: (freepik)

ಗರ್ಭಾವಸ್ಥೆಯ ಪ್ರಯಾಣವು ಪ್ರತಿಯೊಂದು ಮಹಿಳೆಯರ ಜೀವನಕ್ಕೂ ಅತ್ಯಂತ ಸುಮಧುರ ಕ್ಷಣವಾಗಿದೆ. ತಾಯಿ ಹಾಗೂ ಮಗುವಿನ ಆರೋಗ್ಯ ಕೂಡ ಬಹಳ ಮುಖ್ಯವಾಗಿರುತ್ತದೆ. ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ, ದೇಹವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತದೆ. ಹೀಗಾಗಿ ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇದು ತಾಯಿಯ ಆರೋಗ್ಯ ಹಾಗೂ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಪೂರಕವಾಗಿದೆ. ವಿಶೇಷವಾಗಿ ಫೋಲಿಕ್ ಆಮ್ಲ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಪ್ರಮುಖ ಪೋಷಕಾಂಶಗಳು ಬಹಳ ಮುಖ್ಯವಾಗಿವೆ. ಗರ್ಭಾವಸ್ಥೆಯಲ್ಲಿ ಮಲಬದ್ಧತೆಯಂತಹ ಸಮಸ್ಯೆಗಳು ಇರುವುದು ಸಾಮಾನ್ಯ. ಹೀಗಾಗಿ ಸಮತೋಲಿತ ಆಹಾರವನ್ನು ಸೇವಿಸುವುದು ಅತ್ಯಗತ್ಯ. ಕೇವಲ ಆಹಾರ ಮಾತ್ರವಲ್ಲ ಪಾನೀಯ ಸೇವನೆಯೂ ಅತ್ಯಗತ್ಯ. ಹಾಗಿದ್ದರೆ ಗರ್ಭಾವಸ್ಥೆಯಲ್ಲಿ ಸೇವಿಸಬೇಕಾದ ಆಹಾರ ಹಾಗೂ ಪಾನೀಯಗಳು ಯಾವ್ಯಾವು, ಇಲ್ಲಿ ತಿಳಿದುಕೊಳ್ಳಿ:

ಗರ್ಭಾವಸ್ಥೆಯಲ್ಲಿ ಸೇವಿಸಬೇಕಾದ ಆಹಾರ ಹಾಗೂ ಪಾನೀಯಗಳು

ಹಣ್ಣುಗಳು: ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಹೀಗಾಗಿ ಹೆಚ್ಚು ಹೆಚ್ಚು ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಆದರೆ, ಅಪ್ಪಿತಪ್ಪಿಯೂ ಪಪ್ಪಾಯಿ, ಅನಾನಸ್ ಇತ್ಯಾದಿ ಹಣ್ಣುಗಳನ್ನು ತಿನ್ನದಿರಿ. ಇದರಿಂದ ಗರ್ಭಪಾತವಾಗುವ ಸಂಭವ ಹೆಚ್ಚಿರುತ್ತದೆ. ಆಪಲ್, ದಾಳಿಂಬೆ, ಕಿತ್ತಳೆ ಹಣ್ಣು ಇತ್ಯಾದಿಗಳನ್ನು ತಿನ್ನಬಹುದು. ಕಿತ್ತಳೆಯಲ್ಲಿ ವಿಟಮಿನ್ ಸಿ, ಫೋಲಿಕ್ ಆಮ್ಲ ಹಾಗೂ ಫೈಬರ್ ಅನ್ನು ಹೊಂದಿದೆ. ಇದು ತಾಯಿ-ಮಗುವಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ.

ಎಳನೀರು: ಗರ್ಭಾವಸ್ಥೆಯಲ್ಲಿ ಎಳನೀರು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಫೈಬರ್ ಹಾಗೂ ಪ್ರೋಟೀನ್ ಜೊತೆಗೆ ಇದರಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಂ, ಸೋಡಿಯಂ, ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ದೈನಂದಿನ ಪೌಷ್ಟಿಕಾಂಶದ ಎಳನೀರಿನಿಂದ ಹೇರಳವಾಗಿ ದೊರೆಯುತ್ತದೆ. ಅಲ್ಲದೆ ಗರ್ಭಿಣಿಯರು ಎಳನೀರು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವಲ್ಲೂ ಸಹಕಾರಿಯಾಗಿದೆ.

ಸಿಹಿಗೆಣಸು: ಗರ್ಭಿಣಿಯರು ಸಿಹಿಗೆಣಸು ಸೇವಿಸುವುದರಿಂದಲೂ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಎ, ಬಿ 6 ಮತ್ತು ಸಿ ಅನ್ನು ಹೊಂದಿರುತ್ತದೆ. ಭ್ರೂಣದ ಬೆಳವಣಿಗೆಗೆ ವಿಟಮಿನ್ ಎ ಅತ್ಯಗತ್ಯ. ಮೂಳೆಗಳು ಮತ್ತು ಸ್ನಾಯುರಜ್ಜುಗಳ ಬೆಳವಣಿಗೆಗೆ ಇದು ಉತ್ತಮವೆಂದು ಪರಿಗಣಿಸಲಾಗಿದೆ. ಸಿಹಿಗೆಣಸಿನಲ್ಲಿ ರಂಜಕ, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸತು ಮುಂತಾದ ಪೋಷಕಾಂಶಗಳನ್ನು ಒಳಗೊಂಡಿದೆ.

ಮೊಳಕೆ ಕಾಳುಗಳು: ಇವುಗಳಲ್ಲಿ ಕಬ್ಬಿಣ ಹಾಗೂ ಫೈಬರ್ ಅನ್ನು ಹೊಂದಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಮಲಬದ್ಧತೆಯು ಸಾಮಾನ್ಯವಾಗಿದ್ದು, ಮೊಳಕೆ ಕಾಳಿನಲ್ಲಿ ಫೈಬರ್ ಅಂಶವಿರುವುದರಿಂದ ಮಲಬದ್ಧತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಇದನ್ನು ಹಾಗೆಯೇ ತಿನ್ನುವುದರಿಂದ ಬೇಯಿಸಿ ತಿನ್ನುವುದು ಉತ್ತಮ. ಕಚ್ಚಾ ಮೊಳಕೆ ಕಾಳುಗಳು ಬ್ಯಾಕ್ಟೀರಿಯಾವನ್ನು ಹೊಂದಿರಬಹುದು. ಹೀಗಾಗಿ ಬೇಯಿಸಿ ತಿನ್ನುವುದು ಉತ್ತಮ.

ಗರ್ಭಾವಸ್ಥೆಯಲ್ಲಿ ಈ ಪೌಷ್ಟಿಕಾಂಶಭರಿತ ಆಹಾರವನ್ನು ಸೇವಿಸುವ ಮೂಲಕ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಆದರೆ, ಯಾವಾಗಲೂ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

mysore-dasara_Entry_Point