Menstruation: ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟಿದಂತೆ ರಕ್ತಸ್ರಾವ ಆಗುವುದು ಸಹಜವೇ? ಮುಟ್ಟಿನ ತೊಂದರೆಗೆ 6 ಪ್ರಮುಖ ಕಾರಣಗಳಿವು-health women health menstruation are blood clots normal during period 6 reasons why your monthly cycle is irregular rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Menstruation: ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟಿದಂತೆ ರಕ್ತಸ್ರಾವ ಆಗುವುದು ಸಹಜವೇ? ಮುಟ್ಟಿನ ತೊಂದರೆಗೆ 6 ಪ್ರಮುಖ ಕಾರಣಗಳಿವು

Menstruation: ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟಿದಂತೆ ರಕ್ತಸ್ರಾವ ಆಗುವುದು ಸಹಜವೇ? ಮುಟ್ಟಿನ ತೊಂದರೆಗೆ 6 ಪ್ರಮುಖ ಕಾರಣಗಳಿವು

Blood Clots Normal During Period: ಮುಟ್ಟಾಗುವ ಮಹಿಳೆಯರಲ್ಲಿ ಬ್ಲಡ್‌ ಕಾಟ್‌ ಅಥವಾ ಹೆಪ್ಪುಗಟ್ಟಿದಂತೆ ರಕ್ತಸ್ರಾವವಾಗುವುದು ಸಾಮಾನ್ಯ. ಕೆಲವೊಮ್ಮೆ ಸಹಜ ಸ್ರಾವಕ್ಕಿಂತ ಹೆಚ್ಚು ಹೆಪ್ಪುಗಟ್ಟಿದಂತೆ ರಕ್ತಸ್ರಾವವಾಗಬಹುದು. ಮುಟ್ಟಿನ ಸಮಯದಲ್ಲಿ ಅತಿಯಾಗಿ ಬ್ಲಡ್‌ ಕಾಟ್‌ ಕಾಣಿಸಿದರೆ ಅದು ಸಮಸ್ಯೆಯು ಸೂಚಕವೂ ಆಗಿರಬಹುದು. ಮುಟ್ಟಿನ ತೊಂದರೆಗೆ ಪ್ರಮುಖ ಕಾರಣಗಳೇನು?

ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟಿದಂತೆ ರಕ್ತಸ್ರಾವ ಆಗುವುದು ಸಹಜವೇ? ಮುಟ್ಟಿನ ತೊಂದರೆಗೆ 6 ಪ್ರಮುಖ ಕಾರಣಗಳಿವು
ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟಿದಂತೆ ರಕ್ತಸ್ರಾವ ಆಗುವುದು ಸಹಜವೇ? ಮುಟ್ಟಿನ ತೊಂದರೆಗೆ 6 ಪ್ರಮುಖ ಕಾರಣಗಳಿವು

ಮುಟ್ಟಿನ ದಿನಗಳಲ್ಲಿ ಮಹಿಳೆಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುವುದು ಸಹಜ. ಈ ಸಮಸ್ಯೆಗಳು ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವರಿಗೆ ಮುಟ್ಟಿನ ದಿನಗಳಲ್ಲಿ ರಕ್ತ ಹೆಪ್ಪುಗಟ್ಟಿದಂತೆ ಸ್ರಾವವಾಗುತ್ತದೆ. ಈ ಹೆಪ್ಪುಗಟ್ಟಿದ ರಕ್ತವು ಗರ್ಭಾಶಯದಿಂದ ಬಿಡುಗಡೆಯಾಗುವ ಅಂಗಾಂಶ ಹಾಗೂ ರಕ್ತದ ಮಿಶ್ರಣವಾಗಿರುತ್ತದೆ. ಮುಟ್ಟಿನ ದಿನಗಳ ರಕ್ತಸ್ರಾವವು ಒಬ್ಬ ಹೆಣ್ಣುಮಗಳಿಂದ ಇನ್ನೊಂದು ಹೆಣ್ಣುಮಗಳಿಗೆ ಭಿನ್ನವಾಗಿರಬಹುದು. ಅಲ್ಲದೆ ಒಂದು ತಿಂಗಳಲ್ಲಿ ಇದ್ದ ಹಾಗೆ ಇನ್ನೊಂದು ತಿಂಗಳಲ್ಲೂ ಸ್ರಾವವಾಗಬೇಕು ಎಂದೇನಿಲ್ಲ. ಅವಧಿ, ಪ್ರಮಾಣ ಹಾಗೂ ಪುನರಾವರ್ತನೆ ಈ ಎಲ್ಲವೂ ಬದಲಾಗುತ್ತಿರುತ್ತದೆ. ಮುಟ್ಟಿನ ದಿನಗಳಲ್ಲಿ ಚಿಕ್ಕ ಚಿಕ್ಕ ರಕ್ತದ ಗಡ್ಡೆಗಳಂತೆ ಸ್ರಾವವಾಗುವುದು ಸಹಜ. ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಅತಿಯಾದ ರಕ್ತಸ್ರಾವದೊಂದಿಗೆ ದೊಡ್ಡ ದೊಡ್ಡ ರಕ್ತದ ಗಡ್ಡೆಗಳು ಸ್ರಾವವಾಗುವುದು ಯಾವುದೋ ಸಮಸ್ಯೆಯ ಸೂಚಕವಾಗಿರಬಹುದು.

ತಿಂಗಳ ಮುಟ್ಟಿನ ಅವಧಿಯಲ್ಲಿ ಬ್ಲಡ್‌ ಕಾಟ್‌ ಸಾಮಾನ್ಯವೇ?

ದೇಹದ ರಕ್ಷಣಾತ್ಮಕ ವ್ಯವಸ್ಥೆಯ ನೈಸರ್ಗಿಕ ಅಂಶವೆಂದರೆ ರಕ್ತ ಹೆಪ್ಪುಗಟ್ಟುವಿಕೆ. ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟಿದಂತೆ ದಪ್ಪ, ಜೆಲ್ಲಿ ತರಹದ ಸ್ರಾವವಾಗುತ್ತಿದ್ದರೆ ಇದು ದೇಹದಿಂದ ಹೆಚ್ಚು ರಕ್ತ ನಷ್ಟವಾಗುವುದನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಮುಟ್ಟಿನ ದಿನಗಳಲ್ಲಿ ದಪ್ಪನೆಯ ಲೋಳೆಯಂತಹ ರಕ್ತಸ್ರಾವವಾದರೆ ಗಾಬರಿಯಾಗುವುದು ಸಹಜ. ಹೆಚ್ಚಿನ ಸಮಯ ರಕ್ತ ಹೆಪ್ಪುಗಟ್ಟುವಿಕೆಯು ಮಾಸಿಕ ಋತುಚಕ್ರದ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಇದು ಸಹ ಲಕ್ಷಣವಾಗಿದ್ದು, ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಆದರೆ ಕೆಲವೊಮ್ಮೆ ಇದು ಆರೋಗ್ಯ ಸಮಸ್ಯೆಯ ಸೂಚಕವೂ ಆಗಿರುತ್ತದೆ. ಹಾಗಾಗಿ ಒಮ್ಮೆ ವೈದ್ಯರ ಬಳಿ ತೋರಿಸಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ರಕ್ತದ ಗೆಡ್ಡಯು ಗಾಡ ಕೆಂಪು ಬಣ್ಣ ಅಥವಾ ಕಡುಗೆಂಪು ಬಣ್ಣ ಹೊಂದಿರಬಹುದು. ಕೆಲವೊಮ್ಮೆ ದೊಡ್ಡ ಗಾತ್ರದ ಹೆಪ್ಪುಗಟ್ಟಿದಂತೆ ರಕ್ತಸ್ರಾವವಾಗುತ್ತದೆ. ಕಡುಗೆಂಪು ಅಥವಾ ಕಪ್ಪು ಬಣ್ಣದಲ್ಲಿಯೂ ಸ್ರಾವವಾಗಬಹುದು.

ಸರಿಯಾಗಿ ಮುಟ್ಟಾಗದೇ ಇರಲು ಪ್ರಮುಖ ಕಾರಣಗಳಿವು

ಥೈರಾಯ್ಡ್‌

ಕುತ್ತಿಗೆಯ ಭಾಗದಲ್ಲಿ ಥೈರಾಯ್ಡ್‌ ಎನ್ನುವ ಗ್ರಂಥಿ ಇರುತ್ತದೆ. ಇದು ದೇಹದಲ್ಲಿ ಥೈರಾಯ್ಡ್‌ ಎಂಬ ಹಾರ್ಮೋನ್‌ ಅನ್ನು ಬಿಡುಗಡೆ ಮಾಡುವ ಹಾಗೂ ಹಂಚುವ ಕೆಲಸವನ್ನು ಮಾಡುತ್ತದೆ. ಥೈರಾಯ್ಡ್‌ ಗ್ರಂಥಿಯು ಸರಿಯಾಗಿ ಕೆಲಸ ಮಾಡದೇ ಇದ್ದಾಗ ಅಸಹಜ ಮುಟ್ಟು ಕಾಡುವುದು ಸಹಜ. ಅಸಹಜ ಮುಟ್ಟು ಹಾಗೂ ರಕ್ತಸ್ರಾವದಲ್ಲಿನ ವ್ಯತ್ಯಾಸವು ಹೈಪೊಥೈರಾಡಿಸಂ ಹಾಗೂ ಥೈರಾಯಿಡಿಸಂನಂತಹ ಸಮಸ್ಯೆ ಉಲ್ಬಣಕ್ಕೆ ಕಾರಣವಾಗುತ್ತದೆ.

ಗರ್ಭನಿರೋಧಕಗಳು

ಮುಟ್ಟಿನ ದಿನಗಳಲ್ಲಿ ಹೆಚ್ಚು ರಕ್ತಸ್ರಾವ ಅಥವಾ ಹೆಪ್ಪುಗಟ್ಟಿದಂತೆ ರಕ್ತಸ್ರಾವವಾಗಲು ಪ್ರಮುಖ ಕಾರಣ ಗರ್ಭನಿರೋಧಕ ಔಷಧಿಗಳು. ಇವು ಮಾಸಿಕ ಋತುಚಕ್ರದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತವೆ. ಐಯುಡಿಯಂತಹ ಹಾರ್ಮೋನ್‌ ಅಲ್ಲದ ಗರ್ಭ ನಿರೋಧಕ ವಿಧಾನಗಳು ಕೆಲವು ಮಹಿಳೆಯರಲ್ಲಿ ಅವಧಿಗಿಂತ ಮೊದಲು ಮುಟ್ಟಾಗುವುದು ಅಥವಾ ರಕ್ತ ಹೆಪ್ಪುಗೆಟ್ಟುವಿಕೆಗೆ ಕಾರಣವಾಗಬಹುದು.

ನಾವು ಸೇವಿಸುವ ಕೆಲವು ಔಷಧಿಗಳು

ನಾವು ಸೇವಿಸುವ ಕೆಲವು ಔಷಧಿಗಳು ಮುಟ್ಟಿನ ರಕ್ತಸ್ರಾವದ ಮೇಲೆ ಪರಿಣಾಮ ಬೀರುತ್ತದೆ. ಇದು ಅತಿಯಾದ ರಕ್ತಸ್ರಾವ ಹಾಗೂ ಹೆಪ್ಪುಗಟ್ಟಿದಂತಹ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಉರಿಯೂತ, ಹಾರ್ಮೋನ್‌ ಸಂಬಂಧಿಸಿ ಔಷಧಿಗಳು ಹಾಗೂ ಹೆಪ್ಪುರೋಧಕಗಳು ಮುಟ್ಟಿನ ದಿನಗಳ ಮೇಲೆ ಪ್ರಭಾವ ಬೀರುವಂತೆ ಮಾಡಬಹುದು. ಇಲ್ಲದೆ ಇದರಿಂದ ರಕ್ತಸ್ರಾವದಲ್ಲಿ ವ್ಯತ್ಯಾಸವೂ ಉಂಟಾಗಬಹುದು.

ಗರ್ಭಾಪಾತ

ಗರ್ಭಪಾತ ಅಥವಾ ಅಪಸ್ಥಾನೀಯ ಗರ್ಭಧಾರಣೆ, ಇದು ಗರ್ಭಾಶಯದ ಹೊರಗೆ ಮಗುವಿನ ಬೆಳವಣಿಗೆಯನ್ನು ಪ್ರಾರಂಭಿಸಿದಾಗ, ಕೆಲವೊಮ್ಮೆ ಗರ್ಭಾವಸ್ಥೆಯ ಆರಂಭಿಕ ಹಂತಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಅವಧಿಯ ಹೆಪ್ಪುಗಟ್ಟುವಿಕೆ ಎಂದು ತಪ್ಪಾಗಿ ಗ್ರಹಿಸಬಹುದು. ಅಕಾಲಿಕವಾಗಿ ಕೊನೆಗೊಳ್ಳುವ ಗರ್ಭಧಾರಣೆಯ ಪರಿಣಾಮವಾಗಿ ಸಾಮಾನ್ಯಕ್ಕಿಂತ ದೊಡ್ಡದಾದ ರಕ್ತ ಹೆಪ್ಪುಗಟ್ಟುವಿಕೆ ಬೆಳೆಯಬಹುದು.

ಎಂಡೊಮೆಟ್ರಿಯೊಸಿಸ್‌

ಎಂಡೊಮೆಟ್ರಿಯೊಸಿಸ್‌ ಕೂಡ ಗರ್ಭಾಶಯಕ್ಕೆ ಸಂಬಂಧಿಸಿ ಸಮಸ್ಯೆಯಾಗಿದೆ. ಇದು ನಿಮ್ಮ ಅವಧಿಯಲ್ಲಿ ತೀವ್ರವಾದ ಸೆಳೆತ, ಅತಿಯಾದ ರಕ್ತಸ್ರಾವ ಮತ್ತು ಕಿಬ್ಬೊಟ್ಟೆಯ ನೋವಿಗೆ ಕಾರಣವಾಗಬಹುದು. ಇದು ದೀರ್ಘಕಾಲ ಮುಂದುವರಿದರೆ ಅಸಹನೀಯ ನೋವಿನಿಂದ ಕೂಡಿರುತ್ತದೆ, ಅಲ್ಲದೆ ಇದು ರೋಗನಿರ್ಣಯ ಮಾಡಲು ಸವಾಲಾಗಬಹುದು. ಆದರೆ ಈ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಹಲವಾರು ಚಿಕಿತ್ಸೆಗಳಿವೆ.

ಪಿಸಿಓಎಸ್‌

ಪಿಸಿಓಎಸ್‌ ಕೂಡ ಹಾರ್ಮೋನ್‌ಗೆ ಸಂಬಂಧಿಸಿದ ತೊಂದರೆಯಾಗುದೆ. ಇದು ಋತುಚಕ್ರದ ಸಮಯದಲ್ಲಿ ಅತಿಯಾದ ಹೆಪ್ಪುಗಟ್ಟುವಿಕೆ ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು. ಇದರಿಂದ ಇತ್ತೀಚಿನ ದಿನಗಳಲ್ಲಿ ಹಲವು ಮಹಿಳೆಯರು, ಹದಿಹರೆಯದ ಹೆಣ್ಣುಮಕ್ಕಳು ಮುಟ್ಟಿನ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ

Irregular Periods: ಪದೇ ಪದೇ ಮುಟ್ಟಿನ ಸಮಸ್ಯೆ ಕಾಡ್ತಾ ಇದ್ಯಾ; ಇವು ಕಾರಣವಿರಬಹುದು, ನಿರ್ಲಕ್ಷ್ಯ ಮಾಡಿದಿರಿ

Reasons For Irregular Periods: ಇತ್ತೀಚೆಗೆ ಮಹಿಳೆಯರನ್ನು ಮುಟ್ಟಿನ ಸಮಸ್ಯೆ ಹೆಚ್ಚು ಕಾಡುತ್ತಿದೆ. ಅಸಹಜ ಮುಟ್ಟಿನ ಪ್ರಕ್ರಿಯೆಗೆ ಕಾರಣಗಳು ಹಲವಿರಬಹುದು. ಹಾರ್ಮೋನ್‌ ಅಸಮತೋಲನ ಪ್ರಮುಖ ಕಾರಣವಾದರೆ ಉಳಿದ ಕಾರಣಗಳು ಹೀಗಿವೆ ನೋಡಿ.

mysore-dasara_Entry_Point