ತೂಕ ಇಳಿಕೆಗೆ ಸಹಾಯ ಮಾಡುತ್ತೆ ಈ ಓಟ್ಸ್ ರವೆ ಇಡ್ಲಿ; ಇಷ್ಟು ಪದಾರ್ಥಗಳಿದ್ದರೆ ಮನೆಯಲ್ಲೇ ತಯಾರಿಸುವ ವಿಧಾನ ತಿಳಿಯಿರಿ
ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುವ ಓಟ್ಸ್ ರವೆ ಇಡ್ಲಿಯನ್ನು ಸುಲಭವಾಗಿ ಮನೆಯಲ್ಲೇ ಮಾಡಿಕೊಳ್ಳಬಹುದು. ಓಟ್ಸ್ ರವೆ ಇಡ್ಲಿ ಮಾಡುವ ವಿಧಾನ, ಇದಕ್ಕೆ ಬೇಕಾಗಿರುವ ಪದಾರ್ಥಗಳ ವಿವರನ್ನು ಇಲ್ಲಿ ನೀಡಲಾಗಿದೆ.
ಆರೋಗ್ಯಕರ ಆಹಾರದಲ್ಲಿ ಇಂಡ್ಲಿಗೆ ಅಗ್ರ ಸ್ಥಾನವಿದೆ. ದಕ್ಷಿಣ ಭಾರತದಲ್ಲಿ ತಿಂಡಿಗೆ ತುಂಬಾ ಜನಪ್ರಿಯವಾಗಿರುವ ಇಂಡ್ಲಿಯನ್ನು ಉತ್ತರದವರು ಇಷ್ಟಪಡುತ್ತಾರೆ. ಇಂಡ್ಲಿ ಸಾಂಬರ್, ಇಂಡ್ಲಿ ಚೆಟ್ನಿ, ಇಂಡ್ಲಿ ಸಾಂಬರ್ ಡಿಪ್ ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತೆ. ಆರೋಗ್ಯ ಸರಿ ಇಲ್ಲಿದ್ದಾಗ ವೈದ್ಯರು ಕೂಡ ಇಡ್ಲಿ ತಿನ್ನುವಂತೆ ಸಲಹೆ ನೀಡುತ್ತಾರೆ. ಅಷ್ಟರ ಮಟ್ಟಿಗೆ ಇಡ್ಲಿ ಫೇಮಸ್. ಇಡ್ಲಿಯಲ್ಲಿ ತುಂಬಾ ವೆರೈಟಿಗಳಿವೆ. ಅಕ್ಕಿ ಇಡ್ಲಿ, ರೆವೆ ಇಡ್ಲಿ, ತಟ್ಲೆ ಇಡ್ಲಿ, ತರಕಾರಿ ಇಡ್ಲಿ, ಬೀಟ್‌ರೂಟ್ ಇಡ್ಲಿ ಹೀಗೆ ಹಲವು ಬಗೆಯ ಇಡ್ಲಿಗಳನ್ನು ಕಾಣಬಹುದು. ಒಂದು ವೇಳೆ ನೀವೇನಾದರೂ ಮನೆಯಲ್ಲೇ ರುಚಿ ರುಚಿಯಾದ ಓಟ್ಸ್ ರವೆ ಇಡ್ಲಿಯನ್ನು ಮಾಡಬೇಕು ಅಂತ ಪ್ಲಾನ್ ಮಾಡಿಕೊಂಡರೆ ನಿಮಗಾಗಿ ಓಟ್ಸ್ ರವೆ ಇಡ್ಲಿ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಈ ಇಡ್ಲಿ ತೂಕ ಇಳಿಸಿಕೊಳ್ಳಲು ತುಂಬಾ ನೆರವಾಗುತ್ತೆ. ರೆಸಿಪಿಗೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನವನ್ನು ತಿಳಿಯಿರಿ.
ಓಟ್ಸ್ ಮತ್ತು ರವೆ ಇಡ್ಲಿ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಓಟ್ಸ್ ರವೆ ಇಡ್ಲಿಯನ್ನು ಮನೆಯಲ್ಲೇ ತಯಾರಿಸಲು ಬೇಕಾಗುವ ಪದಾರ್ಥಗಳು
1 ಕಪ್ ಓಟ್ಸ್, ಅರ್ಧ ಕಪ್ ರವೆ, 1 ಕಪ್ ಮೊಸರು, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಕಪ್ ಹಸಿರು ಕ್ಯಾಪ್ಸಿಕಂ, 1 ಚಮಕ ಎಣ್ಣೆ, 2 ಚಮಚ ಸಾಸಿವೆ, 10 ರಿಂದ 12 ಕರಿಬೇವಿನ ಎಲೆಗಳು, 1 ಚಮಚ ಅಡಿಗೆ ಸೋಡಾ ಹಾಗೂ ತುಪ್ಪ.
ಓಟ್ಸ್ ಮತ್ತು ರವೆ ಇಡ್ಲಿ ರೆಸಿಪಿ ಮಾಡುವ ವಿಧಾನ
ಹಂತ 1: ಮೊದಲಿಗೆ ಓಟ್ಸ್ ಅನ್ನು ಚೆನ್ನಾಗಿ ಪುಡಿ ಮಿಶ್ರಣ ಮಾಡಿ ಇಟ್ಟುಕೊಳ್ಳಬೇಕು
ಹಂತ 2: ಓಟ್ಸ್ ಅನ್ನು ರವೆಯೊಂದಿಗೆ ಮಿಕ್ಸ್ ಮಾಡಿಕೊಂಡು ಬೌಲ್‌ಗೆ ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ
ಹಂತ 3: ರುಚಿಗೆ ತಕ್ಕಷ್ಟು ಉಪ್ಪು, ಕ್ಯಾಪ್ಸಿಕಂ, ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ
ಹಂತ 4: ಎಣ್ಣೆ, ಸಾಸಿವೆ, ಕರಿಬೇವಿನ ಎಲೆಗಳನ್ನು ಪಾತ್ರೆಗೆ ಹಾಕಿಕೊಂಡು ಹದ ಮಾಡಿಕೊಳ್ಳಿ
ಹಂತ 5: ಹದ ಮಾಡಿಟ್ಟುಕೊಂಡಿರುವ ಸಾಸಿವೆ, ಕರಿಬೇವನ್ನು ಮಿಶ್ರಣ ಮಾಡಿ. ಅಂತಿಮವಾಗಿ ಸೋಡಾ ಸೇರಿ ಮತ್ತೆ ಚೆನ್ನಾಗಿ ಕಲಸಿ
ಹಂತ 6: ತುಪ್ಪ ಸವರಿದ ಇಂಡ್ಲಿ ಅಚ್ಚುಗಳಿಗೆ ಹಿಟ್ಟನ್ನು ಹಾಕಿ. ಇಡ್ಲಿ ಸ್ಟೀಮರ್‌ಗೆ ಹಾಕಿ 10 ರಿಂದ 12 ನಿಮಿಷಗಳ ಕಾಲ ಬೇಯಲು ಬಿಡಿ
ಹಂತ 7: ನಿಮ್ಮ ತೂಕ ಇಳಿಸುವ ಓಟ್ಸ್ ಮತ್ತು ರವೆ ಇಡ್ಲಿ ಸಿದ್ಧವಾಗಿದೆ. ತೆಂಗಿನ ಕಾಯಿ ಅಥವಾ ಶೇಂಗಾ ಚೆಟ್ನಿಯೊಂದಿಗೆ ಸವಿಯಿರಿ. ತುಂಬಾ ರುಚಿಯಾಗಿರುತ್ತೆ.