Heart Attack Issue in Children: ಮಕ್ಕಳನ್ನೂ ಬಿಡ್ತಿಲ್ಲ ಹೃದಯಘಾತ ಸಮಸ್ಯೆ..ಏನು ಇದಕ್ಕೆಲ್ಲಾ ಕಾರಣ..?
ಕನ್ನಡ ಸುದ್ದಿ  /  ಜೀವನಶೈಲಿ  /  Heart Attack Issue In Children: ಮಕ್ಕಳನ್ನೂ ಬಿಡ್ತಿಲ್ಲ ಹೃದಯಘಾತ ಸಮಸ್ಯೆ..ಏನು ಇದಕ್ಕೆಲ್ಲಾ ಕಾರಣ..?

Heart Attack Issue in Children: ಮಕ್ಕಳನ್ನೂ ಬಿಡ್ತಿಲ್ಲ ಹೃದಯಘಾತ ಸಮಸ್ಯೆ..ಏನು ಇದಕ್ಕೆಲ್ಲಾ ಕಾರಣ..?

ಸ್ಥೂಲಕಾಯದ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಈ ಅಭ್ಯಾಸಗಳ ಬಗ್ಗೆ ಗಮನಹರಿಸಬೇಕು. ಅವರೊಂದಿಗೆ ಸಮಯ ಕಳೆಯಬೇಕು. ಮೊಬೈಲ್‌, ಕಂಪ್ಯೂಟರ್‌ನಿಂದ ದೂರ ಇರುವಂತೆ ನೋಡಿಕೊಳ್ಳಿ. ಅದರ ಬದಲಿಗೆ ಗ್ರೌಂಡ್‌ನಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಕಳಿಸಿ.

ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಮಸ್ಯೆ
ಮಕ್ಕಳಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಮಸ್ಯೆ (PC: unsplash)

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿದೆ. ಆರೋಗ್ಯವಾಗಿದ್ದವರು ಕೂಡಾ ಹೃದಯಾಘಾತದಿಂದ ನಿಧನರಾಗುತ್ತಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಗಳು ಹಿರಿಯರು ಮಾತ್ರವಲ್ಲ, ಈಗ ಮಕ್ಕಳನ್ನೂ ಕಾಡುತ್ತಿದೆ. ಇದು ಬಹಳ ಗಂಭೀರ ಸಮಸ್ಯೆಯಾಗಿದೆ. ವಯಸ್ಕರು ಮತ್ತು ಮಕ್ಕಳಲ್ಲಿ ಇದರ ಅಪಾಯವು ಹೆಚ್ಚಾಗಿರುತ್ತದೆ. ದೇಹದಲ್ಲಿ ರಕ್ತದ ಪೂರೈಕೆಗೆ ಅಡಚಣೆ ಉಂಟಾದಾಗ, ಹೃದಯದ ಸ್ನಾಯುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ ಇದರಿಂದ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಸರಿಯಾದ ಆಹಾರವನ್ನು ತಿನ್ನದೆ, ಜಂಕ್‌ ಫುಡ್‌ಗಳನ್ನೇ ಹೆಚ್ಚು ತಿನ್ನುತ್ತಾ ಮೊಬೈಲ್‌, ಲ್ಯಾಪ್‌ಟಾಪ್‌ ಮುಂದೆ ಗಂಟೆಗಟ್ಟಲೆ ಕುಳಿತುಕೊಳ್ಳುವ ಮಕ್ಕಳಲ್ಲಿ, ಚಯಾಪಚಯ ದರವು ಕ್ಷೀಣಿಸುತ್ತದೆ. ಈ ಹೈಪೊಗ್ಲಿಸಿಮಿಯಾವು ಹೃದಯದ ಸಮಸ್ಯೆಗಳನ್ನು ಹೆಚ್ಚಿಸಲು ಕಾರಣವಾಗಬಹುದು. ಕೊರೊನಾ ಸಮಯದಲ್ಲಿ ಪ್ರಪಂಚದಾದ್ಯಂತ ಶಾಲೆಗಳನ್ನು ಮುಚ್ಚಲಾಗಿತ್ತು. ಹೆದರಿಕೆಯಿಂದ ಪೋಷಕರು ಕೂಡಾ ಮಕ್ಕಳನ್ನು ಹೊರಗೆ ಕಳಿಸಲು ಹೆದರುತ್ತಿದ್ದರು. ಇದರ ಪರಿಣಾಮ ಮಕ್ಕಳು ಆಟವಾಡುವುದನ್ನು ನಿಲ್ಲಿಸಿದರು. ಮನೆಯಲ್ಲಿ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಮುಂದೆ ಕುಳಿತು ತಿಂಡಿ ತಿನ್ನುತ್ತಾ ದಿನವಿಡೀ ಒಂದೇ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಇಂತಹ ಕಾರಣಗಳು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇಂದಿನ ಮಕ್ಕಳು ಮೊಬೈಲ್‌ಗೆ ಅಡಿಕ್ಟ್ ಆಗಿದ್ದಾರೆ. ಇದರ ಮೂಲಕ ದೇಹ ಹಾಗೂ ಮನಸ್ಸು ಎರಡೂ ದುರ್ಬಲವಾಗುತ್ತಿದೆ.

ಮಕ್ಕಳಲ್ಲಿ ಉಂಟಾಗುವ ಒತ್ತಡದ ಕಾರಣದಿಂದ ಕೂಡಾ ಅವರಿಗೆ ಹೃದಯದ ಸಮಸ್ಯೆ ಬರುತ್ತವೆ. ರಾತ್ರಿ ತಡವಾಗಿ ಮಲಗುವುದು, ಮೊಬೈಲ್ ಬಳಸುವುದು, ಅದರಲ್ಲಿ ಗೇಮ್ ಆಡುವುದು, ಬೆಳಗ್ಗೆ ಬೇಗ ಏಳುವುದು ಇವೆಲ್ಲವೂ ಕಾಯಿಲೆಗಳಿಗೆ ಕಾರಣ. ಇದರೊಂದಿಗೆ ಸ್ಥೂಲಕಾಯದ ಸಮಸ್ಯೆಯೂ ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಈ ಅಭ್ಯಾಸಗಳ ಬಗ್ಗೆ ಗಮನಹರಿಸಬೇಕು. ಅವರೊಂದಿಗೆ ಸಮಯ ಕಳೆಯಬೇಕು. ಮೊಬೈಲ್‌, ಕಂಪ್ಯೂಟರ್‌ನಿಂದ ದೂರ ಇರುವಂತೆ ನೋಡಿಕೊಳ್ಳಿ. ಅದರ ಬದಲಿಗೆ ಗ್ರೌಂಡ್‌ನಲ್ಲಿ ಸ್ನೇಹಿತರೊಂದಿಗೆ ಆಟವಾಡಲು ಕಳಿಸಿ.

ಇನ್ನು ಮಕ್ಕಳು ತಿನ್ನುವ ಆಹಾರದಿಂದ ಕೂಡಾ ಸಮಸ್ಯೆ ಹೆಚ್ಚು. ಇಂದಿನ ಮಕ್ಕಳು ಹೆಚ್ಚು ಜಂಕ್‌ ಫುಡ್‌ಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಹೆತ್ತವರು ಮಕ್ಕಳ ದೈಹಿಕ ಸಾಮರ್ಥ್ಯದ ಬಗ್ಗೆ ಕೂಡಾ ಗಮನ ಹರಿಸಬೇಕು. ಅಲ್ಲದೆ ಮಕ್ಕಳಿಗೆ ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಬೇಕು. ಹೊರಗೆ ಹೋಗಬೇಕಾಗಿ ಬಂದಾಗಿ ಅಪರೂಪಕ್ಕೆ ಹೊರಗಿನ ಆಹಾರ ಸೇವಿಸಿದರೆ ಏನೂ ಸಮಸ್ಯೆ ಇಲ್ಲ. ಆದರೆ ಪ್ರತಿದಿನ ತಿನ್ನುವುದರಿಂದ ಮಕ್ಕಳ ದೇಹದಲ್ಲಿ ಬೊಜ್ಜು ಹೆಚ್ಚಾಗಿ ಸ್ಥೂಲಕಾಯತೆ ಸಮಸ್ಯೆ ಹೆಚ್ಚಾಗುತ್ತದೆ. ಆದ್ದರಿಂದ ಪೋಷಕರಿಗೆ ಇದರ ಬಗ್ಗೆ ಹೆಚ್ಚಿನ ಗಮನ ಇರಬೇಕು.

Whats_app_banner