Heart Health: ನೀವು ಹೆಚ್ಚು ಸೇವಿಸುತ್ತಿರುವ ಈ 2 ಆಹಾರದಿಂದ ನಿಮ್ಮ ಹೃದಯಕ್ಕೆ ಅಪಾಯ, ಈಗಲೇ ಮೆನುವಿನಿಂದ ಪಕ್ಕಕ್ಕಿಡಿ-heart health these two foods you eat too much increase heart disease avoid sugar sweetened beverages and processed meat ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Heart Health: ನೀವು ಹೆಚ್ಚು ಸೇವಿಸುತ್ತಿರುವ ಈ 2 ಆಹಾರದಿಂದ ನಿಮ್ಮ ಹೃದಯಕ್ಕೆ ಅಪಾಯ, ಈಗಲೇ ಮೆನುವಿನಿಂದ ಪಕ್ಕಕ್ಕಿಡಿ

Heart Health: ನೀವು ಹೆಚ್ಚು ಸೇವಿಸುತ್ತಿರುವ ಈ 2 ಆಹಾರದಿಂದ ನಿಮ್ಮ ಹೃದಯಕ್ಕೆ ಅಪಾಯ, ಈಗಲೇ ಮೆನುವಿನಿಂದ ಪಕ್ಕಕ್ಕಿಡಿ

Heart Health: ಸಾಕಷ್ಟು ಆಹಾರಗಳು ಹೃದಯದ ಆರೋಗ್ಯಕ್ಕೆ ಉಪಕಾರಿ. ಅದೇ ರೀತಿ ಕೆಲವೊಂದು ಆಹಾರಗಳು ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಎಂದು ಪರಿಗಣಿಸಲ್ಪಿಟ್ಟಿವೆ. ಹಾರ್ವರ್ಡ್‌ ವಿಶ್ವವಿದ್ಯಾಲಯದ ಹೊಸ ಅಧ್ಯಯನವೊಂದರ ಪ್ರಕಾರ ಎರಡು ಬಗೆಯ ಆಹಾರಗಳು ಹಾರ್ಟ್‌ ಹೆಲ್ತ್‌ಗೆ ಉತ್ತಮವಲ್ಲ. ಈ ಆಹಾರಗಳು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ ಎಂದಿದೆ.

ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾದ ಆಹಾರಗಳು
ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾದ ಆಹಾರಗಳು (Pixabay)

Heart Health: ಹಲವು ಜನರು ಪ್ರತಿನಿತ್ಯ ಹೃದಯಾಘಾತದಿಂದ ಸಾಯುವ ಸುದ್ದಿಗಳು ವರದಿಯಾಗುತ್ತಿವೆ. ನಮಗೆ ಗೊತ್ತಿರುವ ಅನೇಕ ಆತ್ಮೀಯರು, ಬಂಧು ಬಳಗ ಹಾರ್ಟ್‌ ಅಟ್ಯಾಕ್‌ನಿಂದ ಮೃತಪಡುವ ಸುದ್ದಿಗಳನ್ನು ಕೇಳಿದಾಗ ಕಸಿವಿಸಿಯಾಗುವುದು ಸಹಜ. ಈಗಷ್ಟೇ ಆರೋಗ್ಯವಾಗಿದ್ದವರು ಸಡನ್‌ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದರು ಎಂದೆಲ್ಲ ಹೇಳುತ್ತಾರೆ. ಸೈಲೆಂಟ್‌ ಕಿಲ್ಲರ್‌ ರೀತಿ ಹೃದಯಾಘಾತವಾಗಿ ಸಾಕಷ್ಟು ಜನರು ಹಠಾತ್‌ ಇಲ್ಲವಾಗುತ್ತಾರೆ. ಇದೇ ಕಾರಣಕ್ಕೆ ಈಗ ಎಲ್ಲರೂ ಹೃದಯದ ಆರೋಗ್ಯ ಹೆಚ್ಚಿಸಿಕೊಳ್ಳಲು ಆದ್ಯತೆ ನೀಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಹೃದಯದ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಹಾರ್ವರ್ಡ್‌ ವಿಶ್ವವಿದ್ಯಾಲಯದ ಪ್ರಕಾರ ಎರಡು ರೀತಿಯ ಆಹಾರವನ್ನು ಸೇವಿಸುವವರಿಗೆ ಹೃದಯದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಹೃದಯದ ಆರೋಗ್ಯಕ್ಕೆ ಅಪಾಯಕಾರಿ ಆಹಾರಗಳು

ಸಕ್ಕರೆ ಅಂಶ, ಸೋಡಾ ಅಂಶಗಳಿರುವ ಕೂಲ್‌ ಡ್ರಿಂಕ್ಸ್‌ಗಳು ಮತ್ತು ಸಂಸ್ಕರಿಸಿದ ಮಾಂಸಗಳಿಂದ ಹೃದ್ರೋಗದ ಅಪಾಯ ಹೆಚ್ಚುತ್ತದೆ. ಸಕ್ಕರೆಯ ಅಂಶ ಹೆಚ್ಚಿರುವ ಆಹಾರ ಸೇವಿಸುವುದರಿಂದ ಹೃದಯ ಮತ್ತು ರಕ್ತನಾಳಗಳಲ್ಲಿ ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು. ಇದೇ ರೀತಿ ಸಂಸ್ಕರಿಸಿದ ಮಾಂಸವನ್ನು ಆಗಾಗ್ಗೆ ಸೇವಿಸುವುದರಿಂದ ಹೃದಯದ ಆರೋಗ್ಯವು ಹದಗೆಡಬಹುದು. ಇವುಗಳಲ್ಲದೆ, ಧೂಮಪಾನವು ಹೃದಯದ ಆರೋಗ್ಯಕ್ಕೆ ಹಾನಿಕಾರಕ.

ಹಾರ್ವರ್ಡ್‌ನ ಡಿಎಚ್‌ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು 200,000 ಕ್ಕೂ ಹೆಚ್ಚು ಜನರ ಅಲ್ಟ್ರಾ-ಪ್ರೊಸೆಸ್ಡ್ ಆಹಾರ ಪದ್ಧತಿಗಳನ್ನು ಅಧ್ಯಯನ ಮಾಡಿದ್ದಾರೆ. ಅವರಲ್ಲಿ ಹೃದ್ರೋಗ ಅಥವಾ ಸ್ಟ್ರೋಕ್ ಅಭಿವೃದ್ಧಿಗೊಂಡಿರುವುದೇ ಎಂದು ಮೂರು ದಶಕಗಳ ಕಾಲ ಸಂಶೋಧನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಕ್ಕರೆ ಪಾನೀಯಗಳು ಮತ್ತು ಸಂಸ್ಕರಿಸಿದ ಮಾಂಸವನ್ನು ತಿನ್ನುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ.

ಅಧ್ಯಯನದಿಂದ ವಿವರಗಳು

ಹಾರ್ವರ್ಡ್ ಅಧ್ಯಯನದ ವಿವರಗಳನ್ನು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಕೆಲವು ಆಹಾರಗಳು ಹೆಚ್ಚುವರಿ ಕ್ಯಾಲೋರಿಗಳು, ಸಕ್ಕರೆ, ಸೋಡಿಯಂ ಮತ್ತು ಅನಾರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತವೆ. ಅಂತಹ ಆಹಾರಗಳ ವಿವರ ಇಲ್ಲಿದೆ.

  • ಸಂಸ್ಕರಿಸಿದ ಹಿಟ್ಟಿನಿಂದ ಮಾಡಿದ ಬ್ರೆಡ್
  • ಸಾಸ್‌ಗಳು, ಸ್ಪ್ರೆಡ್‌ಗಳು, ಕಾಂಡಿಮೆಂಟ್ಸ್‌
  • ಪ್ಯಾಕೇಜ್ ಮಾಡಿದ ಸಿಹಿ ತಿಂಡಿಗಳು
  • ಪ್ಯಾಕೇಜ್ ಮಾಡಿದ ತಿಂಡಿಗಳು
  • ಸಕ್ಕರೆ-ಸಿಹಿ ಪಾನೀಯಗಳು
  • ಸಂಸ್ಕರಿಸಿದ ಕೆಂಪು ಮಾಂಸ, ಕೋಳಿ, ಮೀನು
  • ರೆಡಿ ಟು ಈಟ್‌ ಫುಡ್‌ಗಳು
  • ಮೊಸರು / ಹಾಲು ಆಧರಿತ ಸಿಹಿತಿಂಡಿಗಳು
  • ಮದ್ಯ
  • ತಂಪು ಪಾನೀಯಗಳು

ಅಧ್ಯಯನದಲ್ಲಿ ಭಾಗವಹಿಸಿದ ಕೆಲವರು ಬ್ರೆಡ್, ಸಿಹಿ ತಿಂಡಿಗಳು ಮತ್ತು ರೆಡಿ ಟು ಈಟ್‌ ಆಹಾರವನ್ನು ನಿತ್ಯ ಸೇವಿಸುತ್ತಾರೆ ಎನ್ನುವುದನ್ನು ತಿಳಿಯಲಾಯಿತು. ಇಂತಹ ಆಹಾರ ಸೇವಿಸದೆ ಇರುವವರ ಆರೋಗ್ಯದೊಂದಿಗೆ ಸಂಶೋಧಕರು ತುಲನೆ ಮಾಡಿದ್ದಾರೆ. ಧಾನ್ಯದ ಆಹಾರಗಳು ಮತ್ತು ಮೊಸರು/ಹಾಲು ಆಧಾರಿತ ಭಕ್ಷ್ಯಗಳು ಹೃದಯಕ್ಕೆ ಅಷ್ಟೇನೂ ಅಪಾಯ ಉಂಟು ಮಾಡದೆ ಇರುವುದನ್ನು ಕಂಡುಕೊಳ್ಳಲಾಯಿತು.

ಈ ಎರಡು ಆಹಾರ ಬೇಡ

ತಂಪು ಪಾನೀಯಗಳು ಮತ್ತು ಸಂಸ್ಕರಿಸಿದ ಮಾಂಸವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿದೆ ಎಂದು ಹಾರ್ವರ್ಡ್‌ ಅಧ್ಯಯನಕಾರರು ಹೇಳಿದ್ದಾರೆ. ಸಾಮಾನ್ಯವಾಗಿ ಯುವ ಜನತೆ ಈ ಎರಡು ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಚೀಸ್‌, ಪ್ಯಾಕ್‌ ಮಾಡಿರುವ ಆಹಾರ, ರೆಡಿ ಟು ಈಟ್‌ ಆಹಾರಗಳು, ಫಾಸ್ಟ್ ಫುಡ್, ಬೇಕರಿ ಉತ್ಪನ್ನಗಳು, ಸೋಡಾ, ಕ್ರೀಡಾ ಪಾನೀಯಗಳು, ಚಿಪ್ಸ್, ಕುಕೀಸ್, ಪಿಜ್ಜಾ, ಬರ್ಗರ್, ಪಾಸ್ತಾ, ಐಸ್ ಕ್ರೀಮ್, ಕೇಕ್ ಇತ್ಯಾದಿಗಳನ್ನು ಪ್ರತಿನಿತ್ಯ ಸೇವಿಸುವವರಾದರೆ ನಿಮ್ಮ ಹೃದಯದ ಆರೋಗ್ಯದ ಕುರಿತು ಇನ್ನೊಮ್ಮೆ ಯೋಚಿಸಿರಿ.

mysore-dasara_Entry_Point