Aloo Egg Bonda Recipe: ಐದೇ ನಿಮಿಷದಲ್ಲಿ ಫಟಾಫಟ್‌ ರೆಡಿಯಾಗುತ್ತೆ ರುಚಿಕರ ಆಲೂ -ಮೊಟ್ಟೆ ಬೋಂಡಾ; ಮಕ್ಕಳಿಗಿದು ಬಲು ಇಷ್ಟ ಪಾಕವಿಧಾನ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Aloo Egg Bonda Recipe: ಐದೇ ನಿಮಿಷದಲ್ಲಿ ಫಟಾಫಟ್‌ ರೆಡಿಯಾಗುತ್ತೆ ರುಚಿಕರ ಆಲೂ -ಮೊಟ್ಟೆ ಬೋಂಡಾ; ಮಕ್ಕಳಿಗಿದು ಬಲು ಇಷ್ಟ ಪಾಕವಿಧಾನ ಹೀಗಿದೆ

Aloo Egg Bonda Recipe: ಐದೇ ನಿಮಿಷದಲ್ಲಿ ಫಟಾಫಟ್‌ ರೆಡಿಯಾಗುತ್ತೆ ರುಚಿಕರ ಆಲೂ -ಮೊಟ್ಟೆ ಬೋಂಡಾ; ಮಕ್ಕಳಿಗಿದು ಬಲು ಇಷ್ಟ ಪಾಕವಿಧಾನ ಹೀಗಿದೆ

ಆಲೂ ಮತ್ತು ಮೊಟ್ಟೆ ಬಳಸಿ ಎಂದಾದರೂ ಬೋಂಡಾ ಮಾಡಿದ್ದೀರಾ? ಇಲ್ಲವಾದಲ್ಲಿ ಇಲ್ಲಿದೆ ನೋಡಿ ರುಚಿಕರ ಆಲೂ ಎಗ್‌ ಬೋಂಡಾ.

ಐದೇ ನಿಮಿಷದಲ್ಲಿ ಫಟಾಫಟ್‌ ರೆಡಿಯಾಗುತ್ತೆ ರುಚಿಕರ ಆಲೂ -ಮೊಟ್ಟೆ ಬೋಂಡಾ; ಮಕ್ಕಳಿಗಿದು ಬಲು ಇಷ್ಟ ಪಾಕವಿಧಾನ ಹೀಗಿದೆ
ಐದೇ ನಿಮಿಷದಲ್ಲಿ ಫಟಾಫಟ್‌ ರೆಡಿಯಾಗುತ್ತೆ ರುಚಿಕರ ಆಲೂ -ಮೊಟ್ಟೆ ಬೋಂಡಾ; ಮಕ್ಕಳಿಗಿದು ಬಲು ಇಷ್ಟ ಪಾಕವಿಧಾನ ಹೀಗಿದೆ (Instagram/@myfunfoodgallery)

Aloo Egg Bonda Recipe: ಮೊಟ್ಟೆಯೊಂದಿದ್ದರೆ ತರಹೇವಾರಿ ಖಾದ್ಯಗಳನ್ನು ಮಾಡಬಹುದು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಮೊಟ್ಟೆಯಿಂದ ಏನೇ ಮಾಡಿದರೂ ಅದು ಅವರಿಗಿಷ್ಟ. ಹೀಗಿರುವಾಗ ಆಲೂ ಮತ್ತು ಮೊಟ್ಟೆ ಬಳಸಿ ಎಂದಾದರೂ ಬೋಂಡಾ ಮಾಡಿದ್ದೀರಾ? ಇಲ್ಲವಾದಲ್ಲಿ ಇಲ್ಲಿದೆ ನೋಡಿ ರುಚಿಕರ ಆಲೂ ಎಗ್‌ ಬೋಂಡಾ.

ಕಡಿಮೆ ಸಾಮಗ್ರಿ ಬಳಸಿಕೊಂಡು ಕೇವಲ ಐದೇ ನಿಮಿಷದಲ್ಲಿಯೇ ಈ ಬೋಂಡಾ ಮಾಡಬಹುದು. ನೋಡುವುದಕ್ಕೂ ಚೆಂದಕಾಣಿಸುವ ಈ ರೆಸಿಪಿ ಬಾಯಲ್ಲಿಟ್ಟರೆ ನಿಮ್ಮನ್ನು ಮತ್ತೆ ಮತ್ತೆ ಬೇಕೆನಿಸುವಂತೆ ಮಾಡುತ್ತದೆ. ಹಾಗಾದರೆ ಈ ಬೋಂಡಾ ಮಾಡಲು ಏನೆಲ್ಲ ಸಾಮಾಗ್ರಿ ಬೇಕು ಮತ್ತು ಮಾಡುವ ವಿಧಾನ ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಆಲೂ ಮೊಟ್ಟೆ ಬೊಂಡಾ ಮಾಡಲು ಬೇಕಾಗುವ ಸಾಮಗ್ರಿ

- ಬೇಯಿಸಿದ ಮೊಟ್ಟೆ ನಾಲ್ಕು (ನಿಮ್ಮ ಆಯ್ಕೆ)

- ನಾಲ್ಕು ಬೇಯಿಸಿದ ಆಲೂಗಡ್ಡೆ

- ಜೀರಿಗೆ ಒಂದು ಟೀ ಚಮಚ

- ಧನಿಯಾ ಕಾಳು ಅರ್ಧ ಟೀ ಚಮಚ

- ಹಸಿ ಮೆಣಸಿನಕಾಯಿ ನಾಲ್ಕು

- ಉಪ್ಪು ರುಚಿಗೆ ತಕ್ಕಷ್ಟು

- ಚಾಟ್‌ ಮಸಾಲಾ

- ಕೆಂಪು ಮೆಣಸಿನ ಖಾರ ಅರ್ಧ ಟೀ ಚಮಚ

- ಅರಿಶಿನ ಪುಡಿ ಸ್ವಲ್ಪ

- ಸ್ವಲ್ಪ ಕೊತ್ತಂಬರಿ ಸೊಪ್ಪು

- ಕಡಲೆ ಹಿಟ್ಟು ಒಂದು ಟೀ ಚಮಚ

- ಬ್ರೆಡ್‌ ಪೌಡರ್‌

- ಒಂದು ಮೊಟ್ಟೆ

ಆಲೂ ಮೊಟ್ಟೆ ಬೋಂಡಾ ಮಾಡುವ ವಿಧಾನ...

  • ಮೊದಲಿಗೆ ನಾಲ್ಕು ಆಲೂಗಡ್ಡೆ ಮತ್ತು ನಾಲ್ಕು ಮೊಟ್ಟೆಯನ್ನು ಬೇಯಿಸಿಕೊಳ್ಳಿ.
  • ಬಳಿಕ ನಾಲ್ಕು ಆಲೂಗಡ್ಡೆಯನ್ನು ಒಂದು ಬೌಲ್‌ನಲ್ಲಿ ತೆಗೆದು, ಪುಡಿ ಮಾಡಿಕೊಳ್ಳಿ.
  • ಹಾಗೇ ಪುಡಿಯಾದ ಮಿಶ್ರಣಕ್ಕೆ ಜೀರಿಗೆ, ಧನಿಯಾ ಕಾಳು, ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ.
  • ರುಚಿಗೆ ತಕ್ಕಷ್ಟು ಉಪ್ಪು, ಚಾಟ್‌ ಮಸಾಲಾ, ಕೆಂಪು ಮೆಣಸಿನ ಖಾರದ ಪುಡಿ ಹಾಕಿಕೊಳ್ಳಿ.
  • ಅರಿಶಿನ ಪುಡಿ, ಕತ್ತರಿಸಿದ ಕೊತ್ತಂಬರಿ ಹಾಕಿ. ಬಳಿಕ ಒಂದು ಕಪ್‌ ಕಡಲೆ ಹಿಟ್ಟು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
  • ಹೀಗೆ ರೆಡಿಯಾದ ಮಿಶ್ರಣವನ್ನು ಒಂದು ಹಿಡಿಯಷ್ಟು ತೆಗೆದುಕೊಂಡು ಕೈಯಲ್ಲಿಯೇ ತಟ್ಟಿ ಅದರ ಮೇಲೆ ಒಂದು ಮೊಟ್ಟೆ ಇಟ್ಟು. ಮೊಟ್ಟೆ ಕಾಣದಂತೆ ಆಲೂ ಮಿಶ್ರಣದಿಂದಲೇ ಮುಚ್ಚಿ.
  • ಮತ್ತೊಂದು ಬೌಲ್‌ನಲ್ಲಿ ಒಡೆದ ಹಸಿ ಮೊಟ್ಟೆಯಲ್ಲಿ ಗೋಲಿಗಳನ್ನು ಅದ್ದಿ.
  • ಮತ್ತೊಂದು ಬೌಲ್‌ನಲ್ಲಿ ಬ್ರೆಡ್‌ ಪುಡಿ ಮಾಡಿಕೊಂಡು ಆ ಪುಡಿಗೆ ಮೊಟ್ಟೆ ಆಲೂ ಗೋಲಿಗಳನ್ನು ಹಾಕಿ.
  • ಕೊನೆಗೆ ಬಿಸಿ ಎಣ್ಣೆಯಲ್ಲಿ ಕಂದು ಬಣ್ಣಕ್ಕೆ ಬರುವವರೆಗೂ ಕರಿಯಿರಿ.
  • ಬ್ರೌನ್‌ ಬಣ್ಣಕ್ಕೆ ಬಂದ ಬಳಿಕ ಒಂದು ಬೋಂಡಾದಲ್ಲಿ ಎರಡು ಭಾಗ ಮಾಡಿ ಬ್ಯಾಟಿಂಗ್‌ ಆರಂಭಿಸಿ....
  • ನೀವಿದಕ್ಕೆ ಟೊಮೆಟೊ ಕೆಚಪ್‌ ಸೈಡಿಷ್‌ ಆಗಿ ಬಳಸಿಕೊಳ್ಳಬಹುದು.

Whats_app_banner