Panchatantra: ಹೈಸ್ಕೂಲ್ ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ; ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ- ಬಹುಮಾನ ಗೆಲ್ಲಿ
Panchatantra story telling: ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬೆಂಗಳೂರು ಮಹಾನಗರ ಘಟಕದ ವತಿಯಿಂದ ಆಯೋಜಿಸಲಾದ ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯಲ್ಲಿ 8, 9 ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಗೆಲ್ಲಿ. ಇಲ್ಲಿದೆ ಸಂಪೂರ್ಣ ಮಾಹಿತಿ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬೆಂಗಳೂರು ಮಹಾನಗರ ಘಟಕದ ವತಿಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕನ್ನಡಲ್ಲಿ ಪಂಚತಂತ್ರ ಕಥೆ ಹೇಳುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯು ಸಂಪೂರ್ಣ ಉಚಿತವಾಗಿದ್ದು, ಹೆಚ್ಚು ವಿದ್ಯಾರ್ಥಿಳು ಭಾಗವಹಿಸಿ ತಮ್ಮ ಪ್ರತಿಭಾ ಪ್ರದರ್ಶನ ಮಾಡುವುದರ ಮೂಲಕ ಬಹುಮಾನವನ್ನೂ ಗೆಲ್ಲಬಹುದು. ಇನ್ನು ಈ ಮೂಲಕ ಪ್ರಾಚೀನ ಕಥಾ ಸಂಸ್ಕೃತಿಗೆ ಉತ್ತೇಜನ ಸಿಕ್ಕಂತಾಗುತ್ತದೆ.
ಭಾರತೀಯ ಪರಂಪರೆಯಲ್ಲಿ ಕಥೆಯ ಮೂಲಕ ನೀತಿ ಹೇಳುವ ಭವ್ಯ ಇತಿಹಾಸವಿದೆ. ರಾಮಾಯಣ ಮಹಾಭಾರತಗಳು ಈ ಕೆಲಸವನ್ನು ಸಹಸ್ರಾರು ವರ್ಷಗಳಿಂದ ಮಾಡುತ್ತಲೇ ಬಂದಿವೆ. ಅದೇ ಸಾಲಿಗೆ ಸೇರುವ ಮತ್ತೊಂದು ಮಹತ್ವದ ಕೃತಿಯೇ ಪಂಚತಂತ್ರ. ಪಂಚತಂತ್ರವು ಮಕ್ಕಳಿಂದ ಮೊದಲ್ಗೊಂಡು ಹಿರಿಯರಿಗೂ ಇಷ್ಟವಾಗುವ ಹಲವು ಸಣ್ಣ ಸಣ್ಣ ಕಥೆಗಳ ಅಪೂರ್ವ ಸಂಗ್ರಹ. ಇಂತಹ ಅಪೂರ್ವ ಕೃತಿಯನ್ನು ಮುಂದಿನ ಪೀಳಿಗೆಗೂ ದಾಟಿಸಲು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವೇದಿಕೆಯಾಗುತ್ತಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಶಾಲೆಗಳಲ್ಲಿ 8, 9 ಮತ್ತು 10ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಇದೊಂದು ಸುವರ್ಣಾವಕಾಶ. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ಬೆಂಗಳೂರು ಮಹಾನಗರದ ವತಿಯಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪಂಚತಂತ್ರದ ಯಾವುದಾದರೂ ಒಂದು ಕಥೆಯನ್ನು, ಅದರ ನೀತಿಯನ್ನೂ ಸೇರಿಸಿ ಮಕ್ಕಳು ತಮ್ಮದೇ ವಾಕ್ಯಗಳಲ್ಲಿ ಹೇಳಬೇಕು. ಮೂರರಿಂದ ಐದು ನಿಮಿಷಕ್ಕೆ ಮೀರದಂತೆ ಕತೆ ಹೇಳಿ ಅದನ್ನು ವೀಡಿಯೋ ಮಾಡಿ ಕಳಿಸಿದರೆ ಸಾಕು.
8,9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ತರಗತಿಗೆ ಪ್ರತ್ಯೇಕವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಸಂಪೂರ್ಣ ಉಚಿತವಾಗಿರುತ್ತದೆ. ವಿಡಿಯೋ ಕಳಿಸಲು ಕಡೆಯ ದಿನಾಂಕ 10ನೇ ಸೆಪ್ಟೆಂಬರ್2024. ವಿಡಿಯೋ ಕಳಿಸುವ ರೀತಿ ಹಾಗೂ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ www.abspkarnataka.org ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ
ವಿಡಿಯೋ ಕಳಿಸಿ
absp.bangalore@gmail.com ಗೆ ಇಮೇಲ್‌ಮೂಲಕ ಸಂಪರ್ಕಿಸಬಹುದು.
ಪಂಚತಂತ್ರದ ಕುರಿತು ಶ್ರೀಮತಿ ಶಾಂತ ನಾಗಮಂಗಲ ಅವರ ಮಾತು
ಭಾರತವೇ ಇಡೀ ವಿಶ್ವಕ್ಕೆ ಮಾದರಿಯಾದ ಕೊಡುಗೆ ಕೊಟ್ಟಿದ್ದು ಪಂಚತಂತ್ರದ ಮೂಲಕ. ಕಥಾ ಸಾಹಿತ್ಯದಲ್ಲಿ ವಿಶ್ವಕ್ಕೆ ಮಾದರಿಯಾಗುವಂತೆ ಮಾಡಿದ್ದು ಇದೇ ಪಂಚತಂತ್ರ
ವಿಭಾಗ