ಮಹಾಶಿವರಾತ್ರಿಯಿಂದ ಹೋಳಿವರೆಗೆ; ಮಾರ್ಚ್ ತಿಂಗಳಲ್ಲಿ ಬರುವ ಹಬ್ಬಗಳು, ಶುಭ ಮುಹೂರ್ತಗಳ ಕುರಿತ ಸಂಪೂರ್ಣ ವಿವರ ಇಲ್ಲಿದೆ
ಮಾರ್ಚ್ ತಿಂಗಳಿನಲ್ಲಿ ಆಚರಿಸುವ ಹಬ್ಬ ಮತ್ತು ಶುಭ ಮಹೂರ್ತಗಳನ್ನು ತಿಳಿಯಲು ಇಲ್ಲಿದೆ ಮಾರ್ಚ್ ತಿಂಗಳ ಕ್ಯಾಲೆಂಡರ್. ಸುಲಭವಾಗಿ ನೆನಪಿಟ್ಟುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವೂ ಯಾವುದಾದರೂ ಶುಭ ಕಾರ್ಯ ಮಾಡಬೇಕೆಂದುಕೊಂಡಿದ್ದರೆ ಈ ದಿನಗಳನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಇಂದೇ ನೋಟ್ ಮಾಡಿಟ್ಟುಕೊಳ್ಳಿ.
ನಾವೀಗ ಹೊಸ ವರ್ಷದ ಮೂರನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದ ಪ್ರಕಾರ ಇದು ವರ್ಷದ ಕೊನೆಯ ತಿಂಗಳು. ಈ ತಿಂಗಳಿನಲ್ಲಿ ಅನೇಕ ಹಬ್ಬಗಳ ಬರುತ್ತವೆ. ಶುಭಕಾರ್ಯಗಳಿಗೂ ಉತ್ತಮ ಮುಹೂರ್ತವಿರುವ ತಿಂಗಳು ಇದಾಗಿದೆ. ಶಿವನ ಆರಾಧನೆಯ ಮಹಾ ಶಿವರಾತ್ರಿ, ಬಣ್ಣಗಳ ಹಬ್ಬ ಹೋಳಿ ಈ ಮಾರ್ಚ್ ತಿಂಗಳಿನಲ್ಲಿಯೇ ಬಂದಿರುವುದು ವಿಶೇಷ. ಇದರ ಜೊತೆಗೆ ಹಿಂದೂಗಳು ಆಚರಿಸುವ ಇನ್ನೂ ಹಲವು ಹಬ್ಬಗಳು ಈ ತಿಂಗಳಿನಲ್ಲೇ ಬಂದಿದೆ. ಪಂಚಾಂಗದ ಪ್ರಕಾರ ಮಾರ್ಚ್ ತಿಂಗಳಿನಲ್ಲಿ ಮದುವೆ, ಗೃಹಪ್ರವೇಶ ಮುಂತಾದ ಶುಭ ಕಾರ್ಯಗಳಿಗೂ ಒಳ್ಳೆಯ ಮುಹೂರ್ತವಿದೆ. ಶುಭ ಕಾರ್ಯಗಳನ್ನು ಮಾಡಲು ಶುಭ ಮುಹೂರ್ತವನ್ನೇ ನೋಡುತ್ತಾರೆ. ಏಕೆಂದರೆ ಅದು ಹೊಸ ಭರವಸೆ ಮತ್ತು ಕನಸುಗಳನ್ನು ಹುಟ್ಟು ಹಾಕುತ್ತದೆ. ಹಾಗಾಗಿಯೇ ಎಲ್ಲಾ ಹೊಸ ಕೆಲಸಗಳನ್ನು ಶುಭ ಮುಹೂರ್ತದಲ್ಲಿಯೇ ಪ್ರಾರಂಭಿಸುವುದು ರೂಢಿ. ಮಾರ್ಚ್ ತಿಂಗಳಿನಲ್ಲಿ ಆಚರಿಸುವ ಹಬ್ಬ ಮತ್ತು ಶುಭ ಮಹೂರ್ತಗಳನ್ನು ತಿಳಿಯಲು ಇಲ್ಲಿದೆ ಮಾರ್ಚ್ ತಿಂಗಳ ಕ್ಯಾಲೆಂಡರ್. ಸುಲಭವಾಗಿ ನೆನಪಿಟ್ಟುಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ.
ಮಾರ್ಚ್ 2024ರಲ್ಲಿ ಆಚರಿಸುವ ಹಬ್ಬಗಳು
ಮಾರ್ಚ್ 6, 2024 ಬುಧವಾರ – ವಿಜಯ ಏಕಾದಶಿ
ಮಾರ್ಚ್ 8, 2024 ಶುಕ್ರವಾರ – ಮಹಾ ಶಿವರಾತ್ರಿ, ಪ್ರದೋಶ ವ್ರತ (ಕೃಷ್ಣ ಪಕ್ಷ), ಮಾಸಿಕ ಶಿವರಾತ್ರಿ
ಮಾರ್ಚ್ 10, 2024 ರವಿವಾರ – ಫಾಲ್ಗುಣ ಅಮಾವಾಸ್ಯೆ
ಮಾರ್ಚ್ 14, 2024 ಗುರುವಾರ – ಮೀನ ಸಂಕ್ರಾಂತಿ
ಮಾರ್ಚ್ 20, 2024 ಬುಧವಾರ – ಆಮಲಕಿ ಏಕಾದಶಿ
ಮಾರ್ಚ್ 22, 2024 ಶುಕ್ರವಾರ – ಪ್ರದೋಶ ವ್ರತ (ಶುಕ್ಲ ಪಕ್ಷ)
ಮಾರ್ಚ್24, 2024 ರವಿವಾರ – ಹೋಲಿಕಾ ದಹನ
ಮಾರ್ಚ್ 25, 2024 ಸೋಮವಾರ – ಹೋಳಿ, ಫಾಲ್ಗುಣ ಪೂರ್ಣಿಮೆ ಉಪವಾಸ
ಮಾರ್ಚ್ 2024ರ ಗೃಹಪ್ರವೇಶ ಮುಹೂರ್ತಗಳು
ಮಾರ್ಚ್ 2, 2024, ಶನಿವಾರ - ಮಧ್ಯಾಹ್ನ 02:42 ರಿಂದ ಮಾರ್ಚ್ 3, 2024 ಭಾನುವಾರ ಬೆಳಿಗ್ಗೆ 06:44 ರವರೆಗೆ
ಮಾರ್ಚ್ 6, 2024, ಬುಧವಾರ - ಮಧ್ಯಾಹ್ನ 02:53 ರಿಂದ 04:16 ರವರೆಗೆ
ಮಾರ್ಚ್ 11, 2024, ಸೋಮವಾರ - ಬೆಳಿಗ್ಗೆ 06:34 ರಿಂದ ಸಂಜೆ 06:34 ರವರೆಗೆ
ಮಾರ್ಚ್ 15, 2024, ಶುಕ್ರವಾರ – ರಾತ್ರಿ 10:08 ರಿಂದ ಮಾರ್ಚ್ 16, 2024, ಶನಿವಾರ ಬೆಳಿಗ್ಗೆ 06:38 ರವರೆಗೆ
ಮಾರ್ಚ್ 16, 2024, ಶನಿವಾರ - ಬೆಳಿಗ್ಗೆ 06:29 ರಿಂದ ರಾತ್ರಿ 09:40 ರವರೆಗೆ
ಮಾರ್ಚ್ 27, 2024, ಬುಧವಾರ - ಬೆಳಿಗ್ಗೆ 06:16 ರಿಂದ ಮಧ್ಯಾಹ್ನ 04:16 ರವರೆಗೆ
ಮಾರ್ಚ್ 29, 2024, ಶುಕ್ರವಾರ - ರಾತ್ರಿ 08:36 ರಿಂದ ಮಾರ್ಚ್ 30, 2024 ಶನಿವಾರ ಬೆಳಿಗ್ಗೆ 06:14 ರವರೆಗೆ
ಮಾರ್ಚ್ 30, 2024, ಶನಿವಾರ - ಬೆಳಿಗ್ಗೆ 06:13 ರಿಂದ ರಾತ್ರಿ 09:16 ರವರೆಗೆ
ಮಾರ್ಚ್ 2024 ಜವಳ (ಮಕ್ಕಳ ಮೊದಲ ಕೇಶ ಮುಂಡನ) ಮುಹೂರ್ತಗಳು
ಮಾರ್ಚ್ 8, 2024, ಶುಕ್ರವಾರ - ಬೆಳಿಗ್ಗೆ 06:38 ರಿಂದ ರಾತ್ರಿ 10:00 ರವರೆಗೆ
ಮಾರ್ಚ್ 20, 2024, ಬುಧವಾರ - ಬೆಳಿಗ್ಗೆ 06:24 ರಿಂದ ರಾತ್ರಿ 10:39 ರವರೆಗೆ
ಮಾರ್ಚ್ 27, 2024, ಬುಧವಾರ - ಬೆಳಿಗ್ಗೆ 06:16 ರಿಂದ ಮಾರ್ಚ್ 28, 2024, ಗುರುವಾರ ಸಂಜೆ 06:16 ರವರೆಗೆ
ಮಾರ್ಚ್ 28, 2024, ಗುರುವಾರ - ಬೆಳಿಗ್ಗೆ 06:15 ರಿಂದ ಸಂಜೆ 06:38 ರವರೆಗೆ
ಮಾರ್ಚ್ 2024ರ ಮದುವೆ ಮುಹೂರ್ತಗಳು
ಮಾರ್ಚ್ 1, 2024, ಶುಕ್ರವಾರ – ಬೆಳಿಗ್ಗೆ 06:46 ರಿಂದ ಮಧ್ಯಾಹ್ನ 12:48ರವರೆಗೆ
ಮಾರ್ಚ್ 2, 2024, ಶನಿವಾರ – ಬೆಳಿಗ್ಗೆ 08:24 ರಿಂದ ಮಾರ್ಚ್ 3, 2024, ಭಾನುವಾರ ಬೆಳಿಗ್ಗೆ 06:44 ರವರೆಗೆ
ಮಾರ್ಚ್ 3, 2024, ಭಾನುವಾರ - ಬೆಳಿಗ್ಗೆ 06:44 ರಿಂದ ಮಧ್ಯಾಹ್ನ 03:55 ರವರೆಗೆ
ಮಾರ್ಚ್ 4, 2024, ಸೋಮವಾರ - ರಾತ್ರಿ 10:16 ರಿಂದ ಮಾರ್ಚ್ 5, 2024, ಮಂಗಳವಾರ ಬೆಳಿಗ್ಗೆ 06:42 ರವರೆಗೆ
ಮಾರ್ಚ್ 5, 2024, ಮಂಗಳವಾರ - ಬೆಳಿಗ್ಗೆ 06:42 ರಿಂದ ಮಧ್ಯಾಹ್ನ 02:09 ರವರೆಗೆ
ಮಾರ್ಚ್ 6, 2024, ಬುಧವಾರ - ಮಧ್ಯಾಹ್ನ 02:52 ರಿಂದ ಮಾರ್ಚ್ 7, 2024, ಗುರುವಾರ ಬೆಳಿಗ್ಗೆ 06:40 ರವರೆಗೆ
ಮಾರ್ಚ್ 7, 2024, ಗುರುವಾರ - ಬೆಳಿಗ್ಗೆ 06:40 ರಿಂದ 08:24 ರವರೆಗೆ
ಮಾರ್ಚ್ 10, 2024, ಭಾನುವಾರ - 01:55 am ನಿಂದ ಮಾರ್ಚ್ 11, 2024, ಸೋಮವಾರ ಬೆಳಿಗ್ಗೆ 06:35 ರವರೆಗೆ
ಮಾರ್ಚ್ 11, 2024, ಸೋಮವಾರ – ಬೆಳಿಗ್ಗೆ 06:35 ರಿಂದ ಮಾರ್ಚ್ 12, 2024, ಮಂಗಳವಾರ ಬೆಳಿಗ್ಗೆ 06:34 ರವರೆಗೆ
ಮಾರ್ಚ್ 12, 2024, ಮಂಗಳವಾರ - ಬೆಳಿಗ್ಗೆ 06:34 ರಿಂದ 03:08 ರವರೆಗೆ
ನೋಡಿದ್ರಲ್ಲ ಮಾರ್ಚ್ ತಿಂಗಳಲ್ಲಿ ಏನೆಲ್ಲಾ ಹಬ್ಬಗಳಿವೆ, ಯಾವೆಲ್ಲಾ ಶುಭಮುಹೂರ್ತಗಳಿವೆ, ಯಾವ ಕಾರ್ಯಕ್ರಮಕ್ಕೆ ಯಾವುದು ಶುಭ ಮುಹೂರ್ತ ಎಂಬ ವಿವರ. ನಿಮ್ಮ ಮನೆಯಲ್ಲೂ ಏನಾದ್ರೂ ವಿಶೇಷ ಕಾರ್ಯಕ್ರಮ ಮಾಡುವ ಯೋಚನೆ ಇದ್ರೆ ನೀವು ಇದನ್ನೂ ಗಮನಿಸಿ. ನಿಮಗೂ ಸಹಾಯ ಆಗುತ್ತೆ.
(This copy first appeared in Hindustan Times Kannada website. To read more like this please logon to kannada.hindustantimes.com)