Home Decor Tips: ನಿಮ್ಮ‌ಮನಸಿನ‌ ಆನಂದಕ್ಕಾಗಿ ಮನೆಯನ್ನು ಈ ರೀತಿ ಅಲಂಕರಿಸಿ, ನೆಮ್ಮದಿಯಿಂದ ಬದುಕಿ-home decor tips decorate your home like this for your happiness and live comfortably smk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Home Decor Tips: ನಿಮ್ಮ‌ಮನಸಿನ‌ ಆನಂದಕ್ಕಾಗಿ ಮನೆಯನ್ನು ಈ ರೀತಿ ಅಲಂಕರಿಸಿ, ನೆಮ್ಮದಿಯಿಂದ ಬದುಕಿ

Home Decor Tips: ನಿಮ್ಮ‌ಮನಸಿನ‌ ಆನಂದಕ್ಕಾಗಿ ಮನೆಯನ್ನು ಈ ರೀತಿ ಅಲಂಕರಿಸಿ, ನೆಮ್ಮದಿಯಿಂದ ಬದುಕಿ

Home Decor Tips: ನಿಮಗೆ ನಿಮ್ಮ ಮನೆ ಬಗ್ಗೆ ಸಾವಿರಾರು ಕನಸುಗಳಿರುತ್ತದೆ. ತಾನು ತನ್ನ ಮನೆಯ್ನುಈ ರೀತಿ ಅಲಂಕಾರ ಮಾಡಬೇಕು. ಇಷ್ಟು ಚೆನ್ನಾಗಿ ಇಟ್ಟುಕೊಳ್ಳಬೇಕು. ಇನ್ನು ಏನೇನೋ ಆಸೆಗಳು. ಅವುಗಳನ್ನು ತಡೆಹಿಡಿಯಬೇಡಿ. ಈ ರೀತಿ ಮನೆಯನ್ನು ಅಲಂಕರಿಸಿ.

ನಿಮ್ಮ ಮನೆಯನ್ನು ಈ ರೀತಿ ಅಲಂಕರಿಸಿ
ನಿಮ್ಮ ಮನೆಯನ್ನು ಈ ರೀತಿ ಅಲಂಕರಿಸಿ

ಎಲ್ಲರಿಗೂ ತಮ್ಮ ಮನೆಯನ್ನು ತಾವು ಸುಂದರವಾಗಿ ಇಟ್ಟುಕೊಳ್ಳಬೇಕು. ಬೇರೆಯವರ ಸಮಾಧಾನಕ್ಕಲ್ಲ. ತನ್ನದೇ ಸಮಾಧಾನಕ್ಕೆ ಈ ರೀತಿ ಮಾಡಬೇಕು ಎಂಬ ಆಸೆ ಇರುತ್ತದೆ. ಅವರು ತನ್ನ ಅನುಕೂಲಕ್ಕೆ ತಕ್ಕಂತೆ ಮನೆಯನ್ನು ಅಲಂಕಾರ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ತಮಗಾಗಿ ಅಥವಾ ತಮ್ಮ ಇಷ್ಟಕ್ಕಿಂತ ಹೆಚ್ಚು ಇತರರಿಗೆ ಏನು ಬೇಕು ಎಂದೇ ಆಲೋಚನೆ ಮಾಡುತ್ತಾರೆ. ಇದು ತಪ್ಪೂ ಅಲ್ಲ ಸರಿಯೂ ಅಲ್ಲ. ನಿಮ್ಮ ಆದ್ಯತೆಗಳಿಗೆ ನೀವು ಮೊದಲು ಒತ್ತುಕೊಡುವುದನ್ನು ಕಲಿಯಬೇಕು. ನಿಮ್ಮ ಮನೆಯನ್ನು ಅಲಂಕರಿಸಲು ಇಲ್ಲಿದೆ ಟಿಪ್ಸ್‌.

ಮನೆ ಅಲಂಕಾರಿಕ್ಕಾಗಿ ಬೆಸ್ಟ್‌ ಐಡಿಯಾಗಳು

ಮಧ್ಯಮ ವರ್ಗದ ಮನೆಗಳು ಹೆಚ್ಚಾಗಿ ಚಿಕ್ಕದಾಗಿರುತ್ತವೆ ಅಥವಾ ಮಧ್ಯಮ ಗಾತ್ರದಲ್ಲಿರುತ್ತವೆ. ಹೆಚ್ಚಿಗೆ ಜಾಗ ಅಲ್ಲಿ ಖಾಲಿ ಉಳಿದಿರುವುದಿಲ್ಲ. ಇದ್ದ ಜಾಗದಲ್ಲೇ ಏನಾದರೂ ಒಂದನ್ನು ಮಾಡಬೇಕು. ಚಿಕ್ಕ ಮನೆಯನ್ನು ಅಚ್ಚುಕಟ್ಟಾಗಿ ಮತ್ತು ಸುಂದರವಾಗಿ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ಎಲ್ಲಾ ಸಾಮಾನುಗಳನ್ನು ಇಟ್ಟ ನಂತರ, ಮನೆ ಇಕ್ಕಟ್ಟಾಗುತ್ತದೆ. ಮನೆಗಳು ಇಕ್ಕಟ್ಟಾದ ಕಿರಿಕಿರಿಯಾಗುತ್ತದೆ.

ಅನೇಕ ಜನರು ಗೋಡೆಗಳನ್ನು ಖಾಲಿ ಬಿಡುತ್ತಾರೆ. ಕೆಳಗೆ ಜಾಗವನ್ನು ಉಳಿಸಲು ಗೋಡೆಗಳು ಅತ್ಯುತ್ತಮ ಆಯ್ಕೆಯಾಗಿದೆ. ಗೋಡೆಗಳ ಮೇಲೆ ಮರದ ಹಲಗೆ ಇಟ್ಟು ಈ ಮೂಲಕ ಜಾಗವನ್ನು ಬಳಸಿಕೊಳ್ಳಬಹುದು. ಮನೆಯಲ್ಲಿನ ಗೋಡೆಗಳ ಬಣ್ಣಗಳಿಗೆ ಅನುಗುಣವಾಗಿ ಪೀಠೋಪಕರಣಗಳನ್ನು ತೆಗೆದುಕೊಂಡರೆ ಮನೆ ಆಕರ್ಷಕವಾಗಿ ಮತ್ತು ದೊಡ್ಡದಾಗಿ ಕಾಣುತ್ತದೆ.

ಕೆಲವರು ಪ್ರತಿ ಕೋಣೆಯಲ್ಲಿ ಕಪಾಟುಗಳನ್ನು ಮಾಡುತ್ತಾರೆ. ನೀವು ಇದನ್ನು ಮಾಡಿದರೆ ಕೋಣೆಯು ಚಿಕ್ಕದಾಗಿದೆ ಎಂದು ಭಾವಿಸಬಹುದು ಆದರೆ ಇದು ಸತ್ಯ. ಹೆಚ್ಚಿ ಸಾಮಗ್ರಿಗಳನ್ನು ಹಿಡಿಸುವ ಸಲುವಾಗಿ ಗೋಡೆಯ ಅಂದವನ್ನೆಲ್ಲ ನೀವು ಹಾಳು ಮಾಡಿರುತ್ತೀರಾ.

ವಿನ್ಯಾಸ ಸುಂದರವಾಗಿರಬೇಕು

ಇಂದಿನ ಕಂಪ್ಯೂಟರ್ ಯುಗದಲ್ಲಿ ಅಂತರ್ಜಾಲದ ಮೂಲಕ ಹಲವು ರೀತಿಯ ವಿಚಾರಗಳನ್ನು ಪಡೆಯಬಹುದು. ಆದರೆ ಮನೆಗೆ ಬಳಸುವ ಯಾವುದೇ ಅಲಂಕಾರ ಅಥವಾ ವಿನ್ಯಾಸವು ಆ ಮನೆಗೆ ಪರಿಪೂರ್ಣತೆಯನ್ನು ತರಬೇಕು. ಮನೆಯ ಪ್ರತಿಯೊಂದು ಮೂಲೆಯು ವಿನ್ಯಾಸದಿಂದ ಕೂಡಿರಬೇಕು.

ಅನುಕೂಲಕರವಾಗಿರಬೇಕು

ಮನೆಯು ಒಟ್ಟಿಗೆ ಕೆಲಸ ಮಾಡಲು ಮತ್ತು ಮೋಜು ಮಾಡಲು ಅನುಕೂಲಕರವಾಗಿರಬೇಕು. ಈಗ ಪ್ರತಿಯೊಬ್ಬರ ಜೀವನದಲ್ಲಿ ಆರೋಗ್ಯವು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಆದ್ದರಿಂದ ಶುದ್ಧ ಗಾಳಿಗಾಗಿ ಗಿಡಗಳನ್ನು, ಜೊತೆಗೆ ಔಷಧೀಯ ಸಸ್ಯಗಳನ್ನು ಆದಷ್ಟು ಮನೆ ಒಳಗಡೆ ಬೆಳೆಯಬೇಕು.

mysore-dasara_Entry_Point