Used Furnitures: ಸೆಕೆಂಡ್ ಹ್ಯಾಂಡ್ ಫರ್ನಿಚರ್ ಖರೀದಿಸುವುದು ಉತ್ತಮವೇ? ಸೋಫಾ, ಚೇರ್, ಟೇಬಲ್, ವಾರ್ಡ್‌ರೋಬ್ ಬಳಸಿದ್ದನ್ನು ಬಳಸಿ!
Used vs New Furnitures: ಮನೆಗೆ ಹಳೆ ಫರ್ನಿಚರ್ ಖರೀದಿ ಉತ್ತಮವೇ? ಹಳೆ ಫರ್ನಿಚರ್ ಖರೀದಿಸುವಾಗ ಗಮನಿಸಬೇಕಾದ ಅಂಶಗಳೇನು? ಹೊಸತು ಖರೀದಿಸಿದರೆ ಲಾಭವಿದೆಯೇ, ಮನೆಗೆ ಬೆಡ್, ಸೋಫಾ, ಟೇಬಲ್, ಚೇರ್‌ಗಳು, ಡೆಸ್ಕ್‌ಗಳು, ಆರ್ಮ್ ಚೇರ್‌ಗಳು, ಕ್ಯಾಬಿನೆಟ್, ಡೈನಿಂಗ್ ಟೇಬಲ್, ಒಟ್ಟೊಮನ್, ಸ್ಟೂಲ್ ಖರೀದಿಸುವವರಿಗೆ ಸಲಹೆ ಇಲ್ಲಿದೆ.
ಎಲ್ಲರಿಗೂ ಹೊಸತು ಬೇಕೆಂದಿರುತ್ತದೆ. ಆದರೆ, ಅವರವರ ಬಜೆಟ್, ಅನುಕೂಲಕ್ಕೆ ತಕ್ಕಂತೆ ಎಲ್ಲಾ ಸಮಯದಲ್ಲಿಯೂ ಹೊಸತನ್ನೇ ಖರೀದಿಸಲಾಗುವುದಿಲ್ಲ. ಇದೇ ಕಾರಣಕ್ಕೆ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಹೊಸ ಮನೆ ಅಥವಾ ಬಾಡಿಗೆ ಮನೆಯಲ್ಲಿ ವಾಸಿಸುವವರು ಫರ್ನಿಚರ್ ಖರೀದಿ ಸಮಯದಲ್ಲಿ ಸಾಕಷ್ಟು ಯೋಚನೆ ಮಾಡುತ್ತಾರೆ. ಸೆಕೆಂಡ್ ಹ್ಯಾಂಡ್ ಫರ್ನಿಚರ್ ಖರೀದಿಗೆ ಬಜೆಟ್ ಒಂದೇ ಕಾರಣವಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುವವರು ಬಹುತೇಕರು ಉದ್ಯೋಗಿಗಳಾಗಿರುತ್ತಾರೆ. ಉದ್ಯೋಗದ ಕಾರಣದಿಂದ ಕೆಲವು ವರ್ಷಗಳಿಗೊಮ್ಮೆ ಮನೆ ಶಿಫ್ಟ್ ಮಾಡುತ್ತಾರೆ. ಬೆಂಗಳೂರಿನಲ್ಲಿ ಇದ್ದವರು ಹೈದರಾಬಾದ್, ಚೆನ್ನೈ, ದೆಹಲಿ, ಮುಂಬೈಗೆ ಹೋಗಬೇಕಾಗುತ್ತದೆ. ಕೆಲವೊಮ್ಮೆ ವಿದೇಶಕ್ಕೆ ಹೋಗಬೇಕಾಗುತ್ತದೆ. ಇಂತಹ ಸಮಯದಲ್ಲಿ ದುಬಾರಿ ದರ ಕೊಟ್ಟು ಖರೀದಿಸಿದ ಹೊಸ ಫರ್ನಿಚರ್‌ಗಳನ್ನು ಇತರರಿಗೆ ಕಡಿಮೆ ದರಕ್ಕೆ ನೀಡಬೇಕಾಗುತ್ತದೆ. ಈ ರೀತಿಯ ಸೆಕೆಂಡ್ ಹ್ಯಾಂಡ್ ಫರ್ನಿಚರ್‌ಗಳಿಗೆ ತುಂಬಾ ಬೇಡಿಕೆಯಿದೆ. ಸಾಕಷ್ಟು ಬುದ್ದಿವಂತರು ಮನೆ ಮಾಡುವ ಸಮಯದಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ, ವಾರ್ಡ್‌ರೋಬ್, ಬೆಡ್, ಟೇಬಲ್, ಟೀಪಾಯಿ ಖರೀದಿಸುತ್ತಾರೆ.
ಸೆಕೆಂಡ್ ಹ್ಯಾಂಡ್ ಫರ್ನಿಚರ್‌ಗಳು
ಒಂದು ಮನೆಗೆ ಹಲವು ಬಗೆಯ ಫರ್ನಿಚರ್‌ಗಳು ಬೇಕಾಗುತ್ತವೆ. ಬೆಡ್, ಸೋಫಾ, ಟೇಬಲ್, ಚೈರ್‌ಗಳು, ಡೆಸ್ಕ್‌ಗಳು, ಆರ್ಮ್ ಚೈರ್‌ಗಳು, ಕ್ಯಾಬಿನೆಟ್, ಡೈನಿಂಗ್ ಟೇಬಲ್, ಒಟ್ಟೊಮನ್, ಸ್ಟೂಲ್, ಬುಕ್‌ಕೇಸಸ್, ನೈಟ್ ಸ್ಟ್ಯಾಂಡ್, ರಿಕ್ಲೈನರ್, ಸೆಕ್ಷನಲ್, ಲಾಂಗ್, ಡಿನ್ನಿಂಗ್ ಚೇರ್, ಡ್ರಾಯರ್, ಸೆಲ್ಫುಗಳು... ಹೀಗೆ ಮನೆಯ ಗಾತ್ರ, ಅವಶ್ಯಕತೆಗೆ ತಕ್ಕಂತೆ ವಿವಿಧ ಫರ್ನಿಚರ್‌ಗಳು ಬೇಕಾಗುತ್ತವೆ.
ಹೊಸತಾ? ಹಳತಾ?
ಹೊಸ ಫರ್ನಿಚರ್ ಖರೀದಿಯಿಂದ ಲಾಭಗಳು
- ಗುಣಮಟ್ಟ ಮತ್ತು ಫರ್ನಿಚರ್ ಸ್ಥಿತಿ ಉತ್ತಮವಾಗಿರುತ್ತದೆ. ಅದಕ್ಕೆ ವಾರೆಂಟಿಯೂ ಇರುತ್ತದೆ. ಹೊಸದಾಗಿ ಕಾಣಿಸುತ್ತದೆ.
- ನಮ್ಮ ಮನೆಯ ಕೋಣೆಗಳಿಗೆ ತಕ್ಕಂತೆ ಫರ್ನಿಚರ್‌ಗಳನ್ನು ಕಸ್ಟಮೈಜ್ಡ್ ಮಾಡಿಕೊಳ್ಳಬಹುದು.
- ಹೊಸ ಫರ್ನಿಚರ್‌ಗಳು ಇತ್ತೀಚಿನ ಟ್ರೆಂಡ್‌ಗೆ ತಕ್ಕಂತೆ ಇರುತ್ತವೆ.
ಅವಗುಣಗಳು
- ಹೊಸ ಫರ್ನಿಚರ್‌ಗಳು ದುಬಾರಿಯಾಗಿರುತ್ತವೆ.
- ಫರ್ನಿಚರ್‌ಗಳ ಮೌಲ್ಯ ಬೇಗ ಕಡಿಮೆಯಾಗುತ್ತದೆ. ಡಿಪ್ರಿಸಿಯೇಷನ್ ದರ ಹೆಚ್ಚು.
- ಮನೆ ಬಿಟ್ಟು ಹೋಗುವಾಗ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾಗುತ್ತದೆ.
ಇದರ ಬದಲು ಬಳಕೆ ಮಾಡಿದ ಫರ್ನಿಚರ್‌ಗಳನ್ನು ಖರೀದಿಸಿದರೆ ಅನೇಕ ಲಾಭಗಳಿವೆ.
ಗುಣಗಳು
- ಕಡಿಮೆ ದರಕ್ಕೆ ದೊರಕುತ್ತವೆ. ಇದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತದೆ.
- ಒಂದಿಷ್ಟು ಹುಡುಕಾಟ ನಡೆಸಿದರೆ ಉತ್ತಮ ಗುಣಮಟ್ಟದ ಫರ್ನಿಚರ್‌ಗಳು ಕಡಿಮೆ ದರಕ್ಕೆ ದೊರಕುತ್ತವೆ.
- ಪರಿಸರಕ್ಕೂ ಪ್ರಯೋಜನ. ಹೊಸತು ಖರೀದಿಸಿದರೆ ಪರಿಸರಕ್ಕೆ ಹಾನಿ ಹೆಚ್ಚು.
- ಮನೆ ಬಿಟ್ಟು ಹೋಗುವಾಗ ಇತರರಿಗೆ ಮಾರಾಟ ಮಾಡಿ ಹೋಗಬಹುದು. ಹೆಚ್ಚು ನಷ್ಟವಾಗುವುದಿಲ್ಲ.
ಅವಗುಣಗಳು
- ಸೆಕೆಂಡ್ ಹ್ಯಾಂಡ್ ಫರ್ನಿಚರ್‌ಗಳ ಸ್ಥಿತಿ ಮತ್ತು ಗುಣಮಟ್ಟದ ಕುರಿತು ಖಾತ್ರಿ ಇರುವುದಿಲ್ಲ.
- ಲಭ್ಯತೆ ಕಡಿಮೆ. ನಮಗೆ ಬೇಕೆಂದಾಗ ಉತ್ತಮ ಸೆಕೆಂಡ್ ಹ್ಯಾಂಡ್ ಫರ್ನಿಚರ್‌ಗಳು ದೊರಕದೆ ಇರಬಹುದು.
- ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಫರ್ನಿಚರ್‌ಗಳೆಂದು ಗುಣಮಟ್ಟವಿಲ್ಲದ ಫರ್ನಿಚರ್‌ಗಳನ್ನು ಮಾರಾಟ ಮಾಡುತ್ತಿರಬಹುದು.
- ರಿಪೇರಿ ಖರ್ಚು ಬರಬಹುದು. ಕೆಲವು ಸೆಕೆಂಡ್ ಹ್ಯಾಂಡ್ ಫರ್ನಿಚರ್‌ಗಳ ರಿಪೇರಿ ಖರ್ಚು ಹೆಚ್ಚಿರಬಹುದು.
ಯಾವುದು ಖರೀದಿಸುವುದು ಉತ್ತಮ?
ನೀವು ಸ್ವಂತ ಮನೆ ಮಾಡಿ ಅದೇ ಸ್ಥಳದಲ್ಲಿ ಹತ್ತು ಹಲವು ವರ್ಷ ಇರುವವರಾದರೆ ಹೊಸ ಫರ್ನಿಚರ್ ಉತ್ತಮ. ಆದರೆ, ಇದೇ ಸಮಯದಲ್ಲಿ ನಿಮ್ಮಲ್ಲಿ ಬಜೆಟ್ ಕಡಿಮೆ ಇದ್ದರೆ ಉತ್ತಮ ಗುಣಮಟ್ಟದ ಸೆಕೆಂಡ್ ಹ್ಯಾಂಡ್ ಫರ್ನಿಚರ್‌ಗಳನ್ನು ಹುಡುಕಾಟ ನಡೆಸಬಹುದು.
ಹೊಸ ಮತ್ತು ಹಳೆಯ ಫರ್ನಿಚರ್‌ಗಳ ದರ ವ್ಯತ್ಯಾಸ ಗಮನಿಸಿ. ಹೊಸತು ಖರೀದಿಸುವ ಮುನ್ನ ಓಲೆಕ್ಸ್ ಮುಂತಾದ ತಾಣಗಳಲ್ಲಿ ಹಳೆಯ ಫರ್ನಿಚರ್‌ಗಳು ಲಭ್ಯ ಇದೆಯೇ ನೋಡಿ. ಒಂದೆರಡು ಸಾವಿರ ರೂಪಾಯಿ ದರ ವ್ಯತ್ಯಾಸ ಇದ್ದರೆ ಹೊಸತು ಖರೀದಿಸಿ.
ಉದ್ಯೋಗದ ಉದ್ದೇಶದಿಂದ ಆಗಾಗ ಸ್ಥಳ ಬದಲಾಯಿಸುವವರು ಸೆಕೆಂಡ್ ಹ್ಯಾಂಡ್ ಫರ್ನಿಚರ್ ಖರೀದಿಸುವುದು ಉತ್ತಮ.
ಕೆಲವೊಮ್ಮೆ ಹಳೆಯ ಫರ್ನಿಚರ್‌ಗಳು ಅತ್ಯಂತ ಗುಣಮಟ್ಟ ಹೊಂದಿರುತ್ತವೆ. ಉತ್ತಮ ಮರದಿಂದ ನಿರ್ಮಿಸಿರುವಂತಹ ಒಳ್ಳೆಯ ಫರ್ನಿಚರ್‌ಗಳು ದೊರಕಬಹುದು. ಚಂದ ಕಾಣುವ ಹೊಸ ಫರ್ನಿಚರ್‌ಗಳ ನಿರ್ಮಾಣ ಗುಣಮಟ್ಟ, ನಿರ್ಮಾಣ ವಸ್ತುಗಳು ಉತ್ತಮವಾಗಿರದೆ ಇರಬಹುದು. ಹೀಗಾಗಿ, ಹೊಸತು ಅಥವಾ ಹಳೆಯದು ಎಂದು ನೋಡದೆ ನಿರ್ಮಿಸಿರುವ ವಸ್ತು, ಗುಣಮಟ್ಟ ಹಾಗೂ ನಿಮ್ಮ ಅವಶ್ಯಕತೆ, ಬಜೆಟ್ ಗಮನದಲ್ಲಿಟ್ಟುಕೊಂಡು ಮುಂದುವರೆಯಿರಿ.
ವಿಭಾಗ