ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಅಡುಗೆಮನೆಯ ಸ್ಟೇನ್‌ಲೆಸ್‌ ಸ್ಟೀಲ್‌ ಸಿಂಕ್‌ ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌; ನೀವೂ ಟ್ರೈ ಮಾಡಿ ನೋಡಿ

Kitchen Tips: ಅಡುಗೆಮನೆಯ ಸ್ಟೇನ್‌ಲೆಸ್‌ ಸ್ಟೀಲ್‌ ಸಿಂಕ್‌ ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌; ನೀವೂ ಟ್ರೈ ಮಾಡಿ ನೋಡಿ

Kicthen Tips in Kannada: ಅಡುಗೆಮನೆ ಸ್ವಚ್ಛ ಮಾಡೋದು ಅಂದ್ರೆ ಹೆಣ್ಣುಮಕ್ಕಳಿಗೆ ಹರಸಾಹಸ ಮಾಡಿದಂತೆ ಸರಿ. ಅದರಲ್ಲೂ ಸಿಂಕ್‌ ಅಂತೂ ಪ್ರತಿದಿನ ತೊಳಿಬೇಕು. ಅಷ್ಟು ತೊಳೆದ್ರು ಸ್ಟೇನ್‌ಲೆಸ್‌ ಸಿಂಕ್‌ ಬಣ್ಣ ಮಾಸಿದಂತೆ ಮಸುಕಾಗಿರುತ್ತೆ. ಇದನ್ನು ಗಾಜಿನಂತೆ ಹೊಳೆಯುವಂತೆ ಮಾಡಲು ಈ ಟಿಪ್ಸ್‌ ಅನುಸರಿಸಿ. ಇದು ವರ್ಕ್‌ಔಟ್‌ ಆಗೋದು ಪಕ್ಕಾ.

ಅಡುಗೆಮನೆಯ ಸ್ಟೇನ್‌ಲೆಸ್‌ ಸ್ಟೀಲ್‌ ಸಿಂಕ್‌ ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌
ಅಡುಗೆಮನೆಯ ಸ್ಟೇನ್‌ಲೆಸ್‌ ಸ್ಟೀಲ್‌ ಸಿಂಕ್‌ ಸ್ವಚ್ಛ ಮಾಡಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಅಡುಗೆಮನೆಯ ಸಿಂಕ್‌ ಅನ್ನು ಸ್ವಚ್ಛವಾಗಿ ಮತ್ತು ಸದಾ ಹೊಳೆಯುವಂತೆ ಇರಿಸಿಕೊಳ್ಳಬೇಕು ಎಂಬುದು ಬಹುತೇಕ ಹೆಣ್ಣುಮಕ್ಕಳ ಇಂಗಿತ. ಆದರೆ ಸಿಂಕ್‌ ಪದೇ ಪದೇ ಕೊಳೆಯಾಗುತ್ತದೆ. ಊಟ ಹಾಗೂ ಅಡುಗೆ ಮಾಡಿದ ಪಾತ್ರೆ, ಒರೆಸುವ ಬಟ್ಟೆ, ತರಕಾರಿಗಳನ್ನು ತೊಳೆದ ನಂತರ ಸಿಂಕ್ ಕೊಳೆಯಾಗುತ್ತದೆ. ಸ್ಟೇನ್‌ಲೆಸ್ ಸ್ಟೀಲ್ ಸಿಂಕಾಗಿದ್ದರೆ ಅದರ ಹೊಳಪನ್ನು ಕಾಪಾಡಿಕೊಳ್ಳುವುದು ಮತ್ತಷ್ಟು ಸವಾಲು. ಹಾಗಂತ ಚಿಂತಿಸುವ ಅಗತ್ಯವಿಲ್ಲ. ಸಿಂಕ್‌ ಅನ್ನು ಹೊಚ್ಚ ಹೊಸದಾಗಿ ಕಾಣುವಂತೆ ಮಾಡಲು ಸುಲಭ ಮತ್ತು ಸರಳ ಸಲಹೆಗಳು ಇಲ್ಲಿವೆ. ಇದನ್ನು ನೀವು ಅನುಸರಿಸಿ ನೋಡಿ.

ಟ್ರೆಂಡಿಂಗ್​ ಸುದ್ದಿ

ಅಡಿಗೆ ಸೋಡಾ

ಅಡಿಗೆ ಸೋಡಾವು ಖಾದ್ಯಗಳು ಉಬ್ಬಲು, ರುಚಿ ಹೆಚ್ಚಿಸಲು ಮಾತ್ರವಲ್ಲ ಸ್ವಚ್ಛತೆಗೂ ಹೇಳಿ ಮಾಡಿಸಿದ್ದು. ಇದನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್‌ ತಯಾರಿಸಿ. ಆ ಪೇಸ್ಟ್‌ ಅನ್ನು ಸಿಂಕ್‌ ತುಂಬಾ ಹರಡಿ ಸ್ವಲ್ಪ ಸಮಯ ಬಿಡಬೇಕು. ನಂತರ ಸ್ಕ್ರಬ್‌ನಿಂದ ಚೆನ್ನಾಗಿ ಉಜ್ಜಿ. ನಂತರ ನೀರಿನಿಂದ ತೊಳೆಯಿರಿ.

ಡಿಶ್ ಸೋಪ್ ಡಿಲೈಟ್

ನಿಮ್ಮ ಸಿಂಕ್ ಅಷ್ಟೊಂದು ಗಲೀಜಾಗಿಲ್ಲದೇ ಇದ್ದರೆ, ಡಿಶ್ ಸೋಪನ್ನೂ ಬಳಸಬಹುದು. ಸ್ವಲ್ಪ ಡಿಶ್ ಸೋಪ್‌ ಅನ್ನು ಸಿಂಕ್‌ಗೆ ಸುರಿದು ಸ್ಪಂಜಿನಿಂದ ಸ್ಕ್ರಬ್ ಮಾಡಬೇಕು. ನಿಯಮಿತವಾಗಿ ಹೀಗೆ ಮಾಡುವುದರಿಂದ ಸಿಂಕ್ ಸುಂದರವಾಗುತ್ತದೆ.

ಆಲಿವ್ ಎಣ್ಣೆ

ಮೃದುವಾದ ಒಂದು ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ಸ್ಟೇನ್‌ಲೆಸ್ ಸ್ಟೀಲ್ ಸಿಂಕನ್ನು ನಿಧಾನವಾಗಿ ಒರೆಸಿದರಾಯಿತು. ಇದು ನೀರಿನ ಕಲೆಗಳನ್ನು ತೆಗೆದು ಹಾಕುವುದಲ್ಲದೆ ಸಿಂಕನ್ನು ಹೊಳೆಯುವಂತೆ ಮಾಡುತ್ತದೆ.

ವಿನೇಗರ್

ಸಿಂಕ್‌ಗೆ ಅಡಿಗೆ ಸೋಡಾವನ್ನು ಸಿಂಪಡಿಸಿ, ತದ ನಂತರ ಅದರ ಮೇಲೆ ವಿನೆಗರನ್ನು ಸುರಿಯಬೇಕು. ಸ್ಕ್ರಬ್ ಬ್ರಷ್‌ನ ಸಹಾಯದಿಂದ ಸ್ವಲ್ಪ ಗಟ್ಟಿಯಾಗಿ ಉಜ್ಜಬೇಕು. ಸ್ವಲ್ಪ ಸಮಯದ ನಂತರ, ಕೆಲವು ಹನಿ ಸೋಪ್‌ ಆಯಿಲ್‌ ಮತ್ತು ಸ್ವಲ್ಪ ನೀರನ್ನು ಸೇರಿಸಿ, ಉಜ್ಜಿ. ನಂತರ ನೀರಿನಿಂದ ತೊಳೆಯಿರಿ. ಸಿಂಕ್ ಬಹಳಷ್ಟು ಶುಚಿಯಾಗುತ್ತದೆ.

ನಿಂಬೆ

ಒಂದು ನಿಂಬೆಹಣ್ಣನ್ನು ಅರ್ಧ ಭಾಗ ಮಾಡಿ. ಅದರ ಮೇಲೆ ಸ್ವಲ್ಪ ಅಡಿಗೆ ಸೋಡಾ ಸಿಂಪಡಿಸಿ. ಇದರಿಂದ ಸಿಂಕ್‌ನ ಎಲ್ಲಾ ಭಾಗವನ್ನು ಚೆನ್ನಾಗಿ ಉಜ್ಜಿ. ಕೆಲವು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಉತ್ತಮ ಫಲಿತಾಂಶ ಸಿಗಲಿದೆ.

ಈ ಎಲ್ಲಾ ವಸ್ತುಗಳು ಸ್ಟೇನ್‌ಲೆಸ್‌ ಸ್ಟೀಲ್‌ ಸಿಂಕ್‌ ತೊಳೆಯಲು ಸಹಾಯ ಮಾಡುತ್ತವೆ, ಮಾತ್ರವಲ್ಲ ಅಡುಗೆಮನೆ ಅಂದ ಹೆಚ್ಚಿಸುತ್ತವೆ. ಆದರೆ ಬಳಸುವ ಮುನ್ನ ಸ್ವಲ್ಪ ಜಾಗೃತೆ ಇರಲಿ.

ಲೇಖನ: ಅಕ್ಷರ ಕಿರಣ್‌

ಇದನ್ನೂ ಓದಿ

Chutney Recipe: 5 ನಿಮಿಷದಲ್ಲಿ ರೆಡಿ ಆಗುವ ಸೂಪರ್‌ ಟೇಸ್ಟಿ ಚಟ್ನಿ ರೆಸಿಪಿ ಇಲ್ಲಿದೆ; ಅನ್ನ, ದೋಸೆ, ಚಪಾತಿಗೆ ಇದು ಬೆಸ್ಟ್‌ ಕಾಂಬಿನೇಷನ್

ಬೆಳಗೆದ್ದು ತಿಂಡಿಗೆ ಏನು ಮಾಡೋದು, ಮಧ್ಯಾಹ್ನ ಊಟಕ್ಕೆ ನೆಂಜಿಕೊಳ್ಳಲು ಏನೂ ಮಾಡಿಲ್ಲ, ಚಪಾತಿ ಜೊತೆ ಸಾಗು, ಪಲ್ಯ ತಿಂದು ಬೇಸರ ಆಗಿದೆ, ಏನು ಮಾಡಬೇಕು ತಿಳಿತಿಲ್ಲ. ಇಡ್ಲಿ ಮಾಡಿದ್ದೆ, ಸಾಂಬಾರ್‌ ಮಾಡೋಕೆ ಟೈಮ್‌ ಇಲ್ಲ ಈ ಎಲ್ಲಾ ಚಿಂತೆಯನ್ನು ದೂರ ಮಾಡುವ, 5 ನಿಮಿಷದಲ್ಲಿ ತಯಾರಿಸಬಹುದಾದ, ಅನ್ನ, ಇಡ್ಲಿ, ದೋಸೆ ಜೊತೆ ಬೆಸ್ಟ್‌ ಕಾಂಬಿನೇಷನ್‌ ಚಟ್ನಿ ರೆಸಿಪಿ ಇಲ್ಲಿದೆ.

ದಕ್ಷಿಣ ಭಾರತೀಯರು ಚಟ್ನಿ ಪ್ರಿಯರು. ಅನ್ನ, ದೋಸೆ, ಉಪ್ಪಿಟ್ಟು, ಚಪಾತಿ, ಇಡ್ಲಿ, ವಡಾ ಈ ಎಲ್ಲದಕ್ಕೂ ಕಾಂಬಿನೇಷನ್‌ ಆಗಿ ಚಟ್ನಿ ಇರಲೇಬೇಕು. ಚಟ್ನಿ ರುಚಿ ನಾಲಿಗೆಯ ತುದಿ ಸವರಿದರೆ ಸಾಕು, ಇನ್ನಷ್ಟು, ಮತ್ತಷ್ಟು ತಿನ್ನಬೇಕು ಎನ್ನಿಸುವುದು ಸಹಜ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಕೊಬ್ಬರಿ ಹಾಗೂ ಶೇಂಗಾ ಚಟ್ನಿ ಮಾಡುತ್ತಾರೆ.

ವಿಭಾಗ