Kitchen Tips: ಈರುಳ್ಳಿ ಕೊಳೆಯದೇ, ಬೇರು ಮೂಡದಂತೆ ಬಹಳ ದಿನ ಇರ್ಬೇಕು ಅಂದ್ರೆ ಈ 5 ಸಿಂಪಲ್ ಟಿಪ್ಸ್ ಅನುಸರಿಸಿ
ಈರುಳ್ಳಿ ಇಲ್ದೆ ಬಹುತೇಕ ಅಡುಗೆ ಪರಿಪೂರ್ಣ ಆಗೊಲ್ಲ. ಹಾಗಂತ ರಾಶಿ ಈರುಳ್ಳಿಯನ್ನು ಮನೆಯಲ್ಲಿ ತಂದು ಇರಿಸಿಕೊಂಡ್ರೆ ಕೊಳೆಯುತ್ತವೆ, ಇಲ್ಲಾಂದ್ರೆ ಬೇರು ಮೂಡುವ ಮೂಲಕ ಅಡುಗೆಗೆ ಬಳಸಲು ಬರುವುದಿಲ್ಲ. ಹಾಗಾದರೆ ಈರುಳ್ಳಿ ಕೆಡದಂತೆ ಇರಿಸುವುದು ಹೇಗೆ? ಇಲ್ಲಿದೆ ಟಿಪ್ಸ್.
ಈರುಳ್ಳಿ ಬೇರು ಮೂಡದಂತೆ ರಕ್ಷಿಸಿಕೊಳ್ಳುವುದು ನಿಜಕ್ಕೂ ಕಷ್ಟ. ರಾಶಿ ಈರುಳ್ಳಿ ತಂದು ಮನೆಯಲ್ಲಿ ಇರಿಸಿಕೊಂಡರೆ ಒಂದಿಷ್ಟು ದಿನಗಳ ನಂತರ ಬೇರು ಮೂಡಲು ಆರಂಭವಾಗುತ್ತದೆ. ಬೇರು ಮೂಡಿದ ಈರುಳ್ಳಿ ಬಳಸಲು ಆಗುವುದಿಲ್ಲ. ಅಲ್ಲದೆ ಇದು ಒಳಗಿನಿಂದ ಕೊಳೆಯಲು ಆರಂಭವಾಗುತ್ತದೆ. ಹಾಗಾದರೆ ಈರುಳ್ಳಿ ತಾಜಾವಾಗಿ ಇರುವಂತೆ ಇರಿಸುವುದು ಹೇಗೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಟಿಪ್ಸ್.
ಉತ್ತಮವಾದುದನ್ನೇ ಆಯ್ಕೆ ಮಾಡಿ
ನೀವು ಮಾರುಕಟ್ಟೆ ಅಥವಾ ಅಂಗಡಿಗೆ ಈರುಳ್ಳಿ ತರಲು ಹೋದಾಗ ಉತ್ತಮವಾಗಿರುವುದನ್ನೇ ಆಯ್ಕೆ ಮಾಡಿ. ಗಟ್ಟಿಯಾದ, ಒಣಗಿದ, ಮೂಗೇಟು ಇಲ್ಲದ ಹಾಗೂ ಕಲೆಗಳಿಲ್ಲದ ಈರುಳ್ಳಿಗಳನ್ನು ಆರಿಸಿ. ಕೊಳೆತಿರುವ ಈರುಳ್ಳಿ ಜೊತೆ ಚೆನ್ನಾಗಿರುವುದನ್ನು ಇರಿಸಬೇಡಿ. ಇದರಿಂದ ಇನ್ನಷ್ಟು ಕೊಳೆಯುವ ಸಾಧ್ಯತೆ ಇದೆ.
ತಂಪಾಗಿರುವ ಹಾಗೂ ತೇವವಿಲ್ಲದ ಜಾಗದಲ್ಲಿ ಇರಿಸಿ
ಈರುಳ್ಳಿಗಳನ್ನು ತಂಪಾದ ಹಾಗೂ ತೇವವಿಲ್ಲದ ಒಣ ವಾತಾವರಣದಲ್ಲಿ ಈರುಳ್ಳಿಯನ್ನು ಇರಿಸುವುದು ಮುಖ್ಯವಾಗುತ್ತದೆ. ಇದರಿಂದ ಈರುಳ್ಳಿ ಬೇರು ಬರುವುದಿಲ್ಲ. ಒಂದರ ಮೇಲೆ ಒಂದರಂತೆ ಹೇರಿ ಇರಿಸಬೇಡಿ. ನಿಮ್ಮ ಅಡುಗೆಮನೆ ಅಥವಾ ಪ್ಯಾಂಟ್ರಿ ಉತ್ತಮ ಗಾಳಿ ಹರಿವು ಹೊಂದಿರುವ ಶಾಖ, ಹಾಗೂ ಸೂರ್ಯನ ಬೆಳಕು ನೆರವಾಗಿ ಬೀಳುವ ಕಡೆ ಇರಿಸಿ.
ಒಣಗಿಸಿ
ತೇವಾಂಶವು ಈರುಳ್ಳಿಗೆ ಪರಮಶತ್ರು. ಅದ್ದರಿಂದ ಈರುಳ್ಳಿಯನ್ನು ಒಣಗಿಸುವುದು ಅತ್ಯಗತ್ಯ. ಖರೀದಿಸಿದ ನಂತರ ಅಥವಾ ಕೊಯ್ಲು ಮಾಡಿದ ನಂತರ ಈರುಳ್ಳಿಯನ್ನು ಶೇಖರಿಸುವ ಮೊದಲು ಚೆನ್ನಾಗಿ ಗಾಳಿ ಹರಡುವ ಪ್ರದೇಶದಲ್ಲಿ ಕೆಲವು ಗಂಟೆಗಳ ಕಾಲ ಒಣಗಲು ಬಿಡಿ. ಈರುಳ್ಳಿಯನ್ನು ತೊಳೆಯುವುದು ಒಳ್ಳೆಯ ಅಭ್ಯಾಸವಲ್ಲ. ಒಂದು ವೇಳೆ ತೊಳೆಯಲೇಬೇಕಾದರೆ ನಂತರ ಅದನ್ನು ಬಟ್ಟೆಯಿಂದ ಒರೆಸಿ.
ಶೇಖರಣೆಗೆ ಸರಿಯಾದ ಪಾತ್ರೆ ಬಳಸಿ
ಪ್ಲಾಸ್ಟಿಕ್ ಕವರ್ ಅಥವಾ ಚೀಲದಲ್ಲಿ ಈರುಳ್ಳಿಗಳನ್ನು ಇರಿಸುವ ಬದಲು ಮೆಶ್ ಬ್ಯಾಗ್ ಅಥವಾ ಬುಟ್ಟಿಗಳನ್ನು ಬಳಸಿ. ಇದು ಈರುಳ್ಳಿಗೆ ಗಾಳಿ ಹರಡಲು ಸಹಾಯ ಮಾಡುತ್ತದೆ. ಇದರಿಂದ ತೇವಾಂಶದ ಕೊರತೆ ಹಾಗೂ ಕೊಳೆಯುವುದನ್ನು ತಪ್ಪಿಸಬಹುದು. ಇದರ ಬದಲು ತೆರೆದ ರಟ್ಟಿನ ಬಾಕ್ಸ್‌ನಲ್ಲೂ ಸಂಗ್ರಹಿಸಿ ಇಡಬಹುದು.
ಆಲೂಗೆಡ್ಡೆಯ ಜೊತೆ ಇರಿಸಬೇಡಿ
ಹಣ್ಣು ತರಕಾರಿಗಳ ಜೊತೆ ಈರುಳ್ಳಿಯನ್ನು ಇರಿಸುವುದರಿಂದ ಬೇಗನೆ ಮಾಗುತ್ತದೆ. ಅವು ಮಾಗಿದ ವೇಗವನ್ನು ಹೆಚ್ಚಿಸುವ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ಈರುಳ್ಳಿ ಬೇಗನೆ ಕೊಳೆಯುವಂತೆ ಮಾಡುತ್ತದೆ. ಈ ಕಾರಣಕ್ಕೆ ಈರುಳ್ಳಿಯನ್ನು ಇತರ ತರಕಾರಿಗಳಿಂದ ದೂರವಿರಿಸಿ. ಅದರಲ್ಲೂ ವಿಶೇಷವಾಗಿ ಆಲೂಗೆಡ್ಡೆ ಈರುಳ್ಳಿಯನ್ನು ದೂರವಿರಿಸಿ.
ಇದನ್ನೂ ಓದಿ
Kitchen Tips: ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರಬಾರದು ಅಂದ್ರೆ ಈ ಟಿಪ್ಸ್ ಅನುಸರಿಸಿ
Onion Cutting Tips: ಜೀವನದಲ್ಲಿ ದೊಡ್ಡ ಸವಾಲಿನ ಕೆಲಸ ಯಾವುದು ಎಂದು ಕೆಲವರ ಬಳಿ ಕೇಳಿದ್ರೆ ʼಈರುಳ್ಳಿ ಕಟ್ ಮಾಡೋದುʼ ಅಂತ ತಮಾಷೆಯಾಗಿ ಹೇಳ್ತಾರೆ. ಆ ಕ್ಷಣಕ್ಕೆ ಇದು ತಮಾಷೆ ಅನ್ನಿಸಬಹುದು. ಆದರೆ ಈ ಮಾತು ನಿಜ ಅನ್ನುವುದು ಸುಳ್ಳಲ್ಲ. ಹಾಗಾದ್ರೆ ಕಣ್ಣಲ್ಲಿ ನೀರು ಬಾರದೇ ಈರುಳ್ಳಿ ಕಟ್ ಮಾಡೋದು ಸಾಧ್ಯವಿಲ್ವಾ? ಖಂಡಿತ ಇದೆ. ಈ ಸಿಂಪಲ್ ಟಿಪ್ಸ್ ಅನುಸರಿಸಿ ನೋಡಿ.
ವಿಭಾಗ