Potato Storage: ಬೇಯಿಸಿದ ಆಲೂಗೆಡ್ಡೆಯನ್ನು ಫ್ರಿಜ್‌ನಲ್ಲಿ ಇಡ್ತೀರಾ; ಹಾಗಿದ್ರೆ ಈ ಅಭ್ಯಾಸಕ್ಕೆ ಇಂದೇ ಗುಡ್‌ಬೈ ಹೇಳಿ; ಕಾರಣ ಹೀಗಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  Potato Storage: ಬೇಯಿಸಿದ ಆಲೂಗೆಡ್ಡೆಯನ್ನು ಫ್ರಿಜ್‌ನಲ್ಲಿ ಇಡ್ತೀರಾ; ಹಾಗಿದ್ರೆ ಈ ಅಭ್ಯಾಸಕ್ಕೆ ಇಂದೇ ಗುಡ್‌ಬೈ ಹೇಳಿ; ಕಾರಣ ಹೀಗಿದೆ

Potato Storage: ಬೇಯಿಸಿದ ಆಲೂಗೆಡ್ಡೆಯನ್ನು ಫ್ರಿಜ್‌ನಲ್ಲಿ ಇಡ್ತೀರಾ; ಹಾಗಿದ್ರೆ ಈ ಅಭ್ಯಾಸಕ್ಕೆ ಇಂದೇ ಗುಡ್‌ಬೈ ಹೇಳಿ; ಕಾರಣ ಹೀಗಿದೆ

ಹಲವರು ತಮ್ಮ ಒತ್ತಡದ ಜೀವನದಲ್ಲಿ ಅಡುಗೆಮನೆ ನಿಭಾಯಿಸಲು ಕೆಲವೊಂದು ಟ್ರಿಕ್ಸ್‌ಗಳನ್ನು ಕಲಿತಿರುತ್ತಾರೆ. ಅವುಗಳಲ್ಲಿ ಹಿಂದಿನ ದಿನವೇ ಎಲ್ಲವನ್ನೂ ಬೇಯಿಸಿ ಅಥವಾ ಕತ್ತರಿಸಿ ಫ್ರಿಜ್‌ನಲ್ಲಿ ಇರಿಸುವುದೂ ಒಂದು. ಆದರೆ ಆಲೂಗೆಡ್ಡೆಯನ್ನು ಬೇಯಿಸಿ ಫ್ರಿಜ್‌ನಲ್ಲಿ ಇಡ್ತೀರಿ ಅಂದ್ರೆ ನೀವು ಈ ಸ್ಟೋರಿ ಓದಲೇಬೇಕು.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಆಲೂಗೆಡ್ಡೆಯನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಬೇಯಿಸಿದರೂ ಅಥವಾ ಹುರಿದರೂ ಆಲೂಗೆಡ್ಡೆ ರುಚಿಯಂತೂ ಅದ್ಭುತ. ಫ್ರೆಂಚ್‌ ಫ್ರೈಸ್‌ಗೆ ಆ ಕಾರಣಕ್ಕೆ ಅಷ್ಟೊಂದು ಬೇಡಿಕೆ. ಇದನ್ನು ಟೊಮೆಟೊ ಕೆಚಪ್‌ನಲ್ಲಿ ಅದ್ದಿ ತಿಂದರೆ ತಿಂತಾನೇ ಇರಬೇಕು ಅನ್ನಿಸುತ್ತೆ.

ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಆಲೂಗಡ್ಡೆ ಇದ್ದೇ ಇರುತ್ತದೆ. ಆದರೆ, ಇವುಗಳನ್ನು ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ಪೌಷ್ಟಿಕತಜ್ಞರು. ಅಲ್ಲದೇ ಫ್ರಿಡ್ಜ್‌ನಲ್ಲಿ ಇಡಬಾರದ ಆಹಾರಗಳಲ್ಲಿ ಇದೂ ಒಂದು. ಶೀತ ಹವಾಮಾನವು ಅವುಗಳನ್ನು ತ್ವರಿತವಾಗಿ ಮೊಳಕೆಯೊಡೆಯುವಂತೆ ಮಾಡುತ್ತದೆ. ಇದರಿಂದ ಅದು ಬಳಕೆಗೆ ಯೋಗ್ಯವಾಗಿಲ್ಲದಂತಾಗಬಹುದು.

ಕೆಲವರು ಬೇಯಿಸಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದರೆ, ಅದು ನಿಜವಾಗಿ ಒಳ್ಳೆಯ ಅಭ್ಯಾಸವಲ್ಲ ಎನ್ನುತ್ತಾರೆ ತಜ್ಞರು. ಹೀಗೆ ಮಾಡುವುದರಿಂದ ಅದಕ್ಕೆ ಹಾನಿಕಾರಕ ಅಂಶಗಳು ಸೇರುತ್ತವೆ. ಫ್ರಿಡ್ಜ್‌ನಲ್ಲಿ ಇಟ್ಟ ಆಲೂಗೆಡ್ಡೆ ತಿನ್ನುವುದು ಖಂಡಿತ ಆರೋಗ್ಯಕ್ಕೆ ಒಳ್ಳೆಯದಲ್ಲ.

ಆಕಾರ ಬದಲಾಗುತ್ತದೆ

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಜ್‌ನಲ್ಲಿಟ್ಟರೆ ಅವುಗಳ ಆಕಾರವೇ ಬದಲಾಗುತ್ತದೆ. ಶೀತ ವಾತಾವರಣವು ಅದರಲ್ಲಿರುವ ಕಾರ್ಬೋಹೈಡ್ರೇಟ್‌ಗಳ ಸ್ಫಟಿಕೀಕರಣಕ್ಕೆ ಕಾರಣವಾಗುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ಮತ್ತೆ ಬಿಸಿ ಮಾಡಿದಾಗ ಅವುಗಳ ವಿನ್ಯಾಸವನ್ನು ಕಳೆದುಕೊಳ್ಳುತ್ತವೆ.

ರುಚಿ ಕೆಡುತ್ತದೆ

ಆಲೂಗೆಡ್ಡೆಯನ್ನು ಫ್ರಿಜ್‌ನಲ್ಲಿ ಇಟ್ಟರೆ ಆಲೂಗಡ್ಡೆಯ ರುಚಿ ಸಂಪೂರ್ಣ ಸಪ್ಪೆಯಾಗುತ್ತದೆ. ಮೃದುವಾದ ಈ ಗಡ್ಡೆಗಳು ಗಟ್ಟಿಯಾಗುತ್ತವೆ. ಬೇಯಿಸಿದ ಆಲೂಗೆಡ್ಡೆ ಪರಿಮಳ ಉಳಿಸಿಕೊಳ್ಳಲು ಕೋಣೆಯ ಉಷ್ಣಾಂಶದಲ್ಲಿ ಶೇಖರಿಸಿ ಇಡುವುದು ಉತ್ತಮ. ಅಷ್ಟೇ ಅಲ್ಲ, ಬೇಯಿಸಿದ ಆಲೂಗಡ್ಡೆಯನ್ನು ಮುಚ್ಚಳವಿಲ್ಲದೆ ಹೊರಗೆ ಇಟ್ಟರೆ ಅದರ ಬಣ್ಣವೂ ಬದಲಾಗುವ ಸಾಧ್ಯತೆ ಇದೆ.

ಕ್ಯಾನ್ಸರ್ ಅಪಾಯ

ಆಲೂಗೆಡ್ಡೆಗಳನ್ನು ಬೇಯಿಸುವುದು ಅಥವಾ ಹುರಿಯುವುದರಿಂದ ಅಕ್ರಿಲಾಮೈಡ್ ಎಂಬ ಹಾನಿಕಾರಕ ರಾಸಾಯನಿಕವನ್ನು ಸೃಷ್ಟಿಸುತ್ತದೆ. ಅಡುಗೆ ಮಾಡಿದ ನಂತರ ಅವುಗಳನ್ನು ಫ್ರಿಜ್‌ನಲ್ಲಿ ಇಡುವುದು ಮತ್ತು ಮತ್ತೆ ಬಿಸಿ ಮಾಡುವುದರಿಂದ ಅಕ್ರಿಲಾಮೈಡ್ ಮಟ್ಟವನ್ನು ಹೆಚ್ಚಿಸುತ್ತದೆ. ಕೋಣೆಯ ಉಷ್ಣಾಂಶದಲ್ಲಿ ಅವುಗಳನ್ನು ಸಂಗ್ರಹಿಸುವುದು ಅಕ್ರಿಲಾಮೈಡ್ ಪ್ರಮಾಣ ಹೆಚ್ಚಿಸುವುದು ಕಡಿಮೆಯಾಗುತ್ತದೆ.

ತಣ್ಣನೆಯ ಆಹಾರವನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡುವುದರಿಂದ ಸಕ್ಕರೆ ಮತ್ತು ಅಮೈನೋ ಆಮ್ಲಗಳ ಅಕ್ರಿಲಾಮೈಡ್ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ಇದು ಕ್ಯಾನ್ಸರ್‌ಗೆ ಸಂಬಂಧಿಸಿದೆ. ಹಾಗಾಗಿ ಅವುಗಳನ್ನು ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಪೋಷಕಾಂಶವಿರುವುದಿಲ್ಲ

ಬೇಯಿಸಿದ ಆಲೂಗಡ್ಡೆಯನ್ನು ಪೋಷಕಾಂಶಗಳ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತದೆ. ಆದರೆ ಅವುಗಳನ್ನು ಫ್ರಿಜ್‌ನಲ್ಲಿ ಇಡುವುದರಿಂದ ವಿಟಮಿನ್ ಸಿಯಂತಹ ಕೆಲವು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳ ನಷ್ಟಕ್ಕೆ ಕಾರಣವಾಗಬಹುದು. ಅದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ.

ಆಲೂಗೆಡ್ಡೆ ಕೆಡುತ್ತದೆ

ಯಾವುದೇ ಪದಾರ್ಥವು ಫ್ರಿಜ್‌ನಲ್ಲಿ ಇಡುವುದರಿಂದ ಹೆಚ್ಚು ಕಾಲ ತಾಜಾವಾಗಿರುತ್ತದೆ. ಆದರೆ ಇದು ಆಲೂಗಡ್ಡೆಗೆ ಅನ್ವಯಿಸುವುದಿಲ್ಲ. ಬೇಯಿಸಿದ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅವು ಬೇಗನೆ ಹಾಳಾಗುತ್ತವೆ. ಇದು ಸಿಹಿ ರುಚಿಯಾಗಿಯೂ ಬದಲಾಗುತ್ತದೆ. ಅವುಗಳನ್ನು ತಾಜಾವಾಗಿಡಲು ತಂಪಾದ ಕತ್ತಲೆಯ ಜಾಗದಲ್ಲಿ ಇರಿಸುವುದು ಉತ್ತಮ.

Whats_app_banner