ಕನ್ನಡ ಸುದ್ದಿ  /  Lifestyle  /  Home Remedies For Scalp On Pimple

Acne on Scalp: ಸ್ಕಾಲ್ಪ್‌ ಮೊಡವೆ ನೋವಿನಿಂದ ನೀವೂ ಬಳಲುತ್ತಿದ್ದೀರಾ..ಇಲ್ಲಿದೆ ನೋಡಿ ಮನೆಮದ್ದು

ಸ್ಕಾಲ್ಪ್‌ ಮೇಲಿನ ಮೊಡವೆಗಳು ಗಂಭೀರ ತೊಂದರೆಗೆ ಕಾರಣವಾಗಬಹುದು. ಚರ್ಮದ ಮೇಲಿನ ರಂಧ್ರಗಳು ಅಥವಾ ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕಿನಿಂದ ಈ ಸಮಸ್ಯೆ ಉಂಟಾಗುತ್ತದೆ. ಇವುಗಳನ್ನು ನೆತ್ತಿಯ ಮೊಡವೆ ಎಂದೂ ಕರೆಯುತ್ತಾರೆ.

ತಲೆ ಮೊಡವೆಗೆ ಮನೆ ಮದ್ದು
ತಲೆ ಮೊಡವೆಗೆ ಮನೆ ಮದ್ದು

ಮೊಡವೆಗಳು ಮುಖದ ಮೇಲೆ ಮಾತ್ರವಲ್ಲ, ತಲೆಯ ಸ್ಕಾಲ್ಪ್‌ನಲ್ಲೂ ಆಗುತ್ತದೆ. ಈ ಮೊಡವೆಗಳು ತುಂಬಾ ನೋವಿನಿಂದ ಕೂಡಿದೆ. ಇದರಿಂದ ತಲೆ ಬಾಚಲೂ ಆಗುವುದಿಲ್ಲ. ಸಾಮಾನ್ಯವಾಗಿ ಮುಚ್ಚಿಹೋಗಿರುವ ರಂಧ್ರದಿಂದ ಅಥವಾ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿನಿಂದ ಈ ಸಮಸ್ಯೆ ಉಂಟಾಗುತ್ತದೆ. ಇವುಗಳನ್ನು ನೆತ್ತಿಯ ಮೊಡವೆ ಎಂದೂ ಕರೆಯಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ನೆತ್ತಿಯ ಮೊಡವೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಸ್ಕಾಲ್ಪ್‌ ಮೇಲಿನ ಮೊಡವೆಗಳು ಗಂಭೀರ ತೊಂದರೆಗೆ ಕಾರಣವಾಗಬಹುದು. ಚರ್ಮದ ಮೇಲಿನ ರಂಧ್ರಗಳು ಅಥವಾ ಬ್ಯಾಕ್ಟೀರಿಯಾ ಅಥವಾ ಫಂಗಲ್ ಸೋಂಕಿನಿಂದ ಈ ಸಮಸ್ಯೆ ಉಂಟಾಗುತ್ತದೆ. ಇವುಗಳನ್ನು ನೆತ್ತಿಯ ಮೊಡವೆ ಎಂದೂ ಕರೆಯುತ್ತಾರೆ. ನಿಮ್ಮ ನೆತ್ತಿಯಲ್ಲಿ ಸಣ್ಣ ಮೊಡವೆಗಳು ಅಥವಾ ಗುಳ್ಳೆಗಳು ಕಾಣಿಸಿಕೊಂಡರೆ, ಅವುಗಳನ್ನು ತೊಡೆದುಹಾಕಲು ಈ ಮನೆಮದ್ದುಗಳನ್ನು ಅನುಸರಿಸಿ.

ಟೊಮ್ಯಾಟೋ ರಸ

ಸ್ಯಾಲಿಸಿಲಿಕ್ ಆಮ್ಲ ಸಮೃದ್ಧವಾಗಿರುವ ಟೊಮ್ಯಾಟೋ, ನಿಮ್ಮ ನೆತ್ತಿಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ಮೊಡವೆ ಒಡೆಯುವಿಕೆಯನ್ನು ಕ್ರಮೇಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಬಟ್ಟಲಿನಲ್ಲಿ ಟೊಮ್ಯಾಟೊ ರಸವನ್ನು ತೆಗೆದುಕೊಂಡು, ಹತ್ತಿಯ ತುಂಡನ್ನು ನೆನೆಸಿ ಮತ್ತು ಅದನ್ನು ನೆತ್ತಿಯ ಮೇಲೆ ಮೃದುವಾಗಿ ಹಚ್ಚಿ. ಒಂದು ಗಂಟೆಯ ನಂತರ ನಿಮ್ಮ ಮೈಲ್ಡ್‌ ಶಾಂಪೂ ಬಳಸಿ ತಲೆಗೆ ಸ್ನಾನ ಮಾಡಿ.

ಮೆಂತ್ಯ

ನೆತ್ತಿಯ ಮೇಲಿನ ಮೊಡವೆ ಸಮಸ್ಯೆಗೆ ಮೆಂತ್ಯ ಕೂಡಾ ಪರಿಣಾಮಕಾರಿ. ಮೆಂತ್ಯವನ್ನು ರಾತ್ರಿ ನೆನೆಸಿಡಿ. ನೆನೆಸಿದ ಮೆಂತ್ಯವನ್ನು ಪೇಸ್ಟ್‌ ಮಾಡಿ ತಲೆಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸ್ಯಾಲಿಸಿಲಿಕ್ ಆಸಿಡ್, ಆ್ಯಂಟಿಆಕ್ಸಿಡೆಂಟ್, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ವೈರಸ್ ಗುಣಗಳು ಹೇರಳವಾಗಿವೆ. ಇದು ನೆತ್ತಿಯ ಮೇಲಿನ ಮೊಡವೆಗಳಿಂದ ಮುಕ್ತಿ ಹೊಂದಲು ಬಹಳ ಸಹಾಯ ಮಾಡುತ್ತದೆ. ಕೆಲವು ಬೆಳ್ಳುಳ್ಳಿ ಎಸಳುಗಳನ್ನು ನೀರಿನಲ್ಲಿ ಕುದಿಸಿದ ನಂತರ, ನೀರನ್ನು ತಣ್ಣಗಾಗಲು ಬಿಡಿ. ಇದನ್ನು ಸ್ಕಾಲ್ಪ್‌ಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು ತಲೆಗೆ ಸ್ನಾನ ಮಾಡಿ.

ಅಲೋವೆರಾ, ಪುದೀನಾ

ಒಂದು ಹಿಡಿ ಪುದೀನಾ ಎಲೆಗಳನ್ನು ನೀರಿಗೆ ಸೇರಿಸಿ ಕುದಿಸಿ. ಮಿಶ್ರಣ ಅರ್ಧಕ್ಕೆ ಇಳಿದಾಗ ಸ್ಟೋವ್‌ ಆಫ್‌ ಮಾಡಿ. ನೀರು ತಣ್ಣಗಾದಾಗ ಇದರೊಂದಿಗೆ ಅಲೋವೆರಾ ಜೆಲ್ ಸೇರಿಸಿ ಮಿಕ್ಸ್‌ ಮಾಡಿ. ಇದನ್ನು ರೆಫ್ರಿಜರೇಟರ್‌ನಲ್ಲಿಟ್ಟು ಪ್ರತಿನಿತ್ಯ ತಲೆಯ ಬುಡಕ್ಕೆ ಹಚ್ಚಿದರೆ ಬಹಳ ಪ್ರಯೋಜನಕಾರಿ.