ಕನ್ನಡ ಸುದ್ದಿ  /  Lifestyle  /  Home Remedies For Weak Kidneys

Food for Weak Kidneys: ದುರ್ಬಲ ಮೂತ್ರಪಿಂಡಕ್ಕೆ ಈ ಆಹಾರಗಳು ಬಹಳ ಸಹಾಯಕ..ಅಗತ್ಯವಿರುವವರಿಗೆ ತಿಳಿಸಿಕೊಡಿ

ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ನೀವು ಪದೇ ಪದೆ ಏಳುವುದು ಸೇರಿದಂತೆ ಇನ್ನಿತರ ಲಕ್ಷಣಗಳು ದುರ್ಬಲ ಮೂತ್ರಪಿಂಡದ ಲಕ್ಷಣಗಳಾಗಿವೆ. ಮೂತ್ರಪಿಂಡಗಳು ದುರ್ಬಲಗೊಂಡಿದೆ ಎನ್ನುವುದು ತಿಳಿದುಬಂದಲ್ಲಿ ಅದನ್ನು ನಿವಾರಿಸಲು ಕೆಲವೊಂದು ಮನೆ ಮದ್ದುಗಳಿವೆ.

ದುರ್ಬಲ ಮೂತ್ರಪಿಂಡಕ್ಕೆ ಸಹಾಯಕವಾಗುವ ಆಹಾರಗಳು
ದುರ್ಬಲ ಮೂತ್ರಪಿಂಡಕ್ಕೆ ಸಹಾಯಕವಾಗುವ ಆಹಾರಗಳು (PC: Pixaby)

ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ತೆಗೆದುಹಾಕುತ್ತವೆ. ನೀರು, ಲವಣಗಳು ಮತ್ತು ಖನಿಜ ಲವಣಗಳನ್ನು ಸಮತೋಲನಗೊಳಿಸುವಲ್ಲಿ ಮೂತ್ರಪಿಂಡವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ಕೆಲವೊಮ್ಮೆ ಮೂತ್ರಪಿಂಡಗಳು ದುರ್ಬಲಗೊಳ್ಳುವ ಸಾಧ್ಯತೆ ಇದೆ.

ಅಧಿಕ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳು ಮೂತ್ರಪಿಂಡವನ್ನು ಹಾನಿಗೊಳಿಸುತ್ತವೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಇದ್ದರೆ, ಮೂತ್ರಪಿಂಡಗಳು ಕ್ರಮೇಣ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಆಗಾಗ್ಗೆ ಮೂತ್ರ ವಿಸರ್ಜನೆ, ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಹಸಿವಿನ ಕೊರತೆ, ಕಣ್ಣುಗಳು ಉಬ್ಬುವುದು, ಬಾಯಿಯ ದುರ್ವಾಸನೆ, ಸ್ನಾಯು ನೋವು ಮುಂತಾದ ಲಕ್ಷಣಗಳು ಮೂತ್ರಪಿಂಡ ವೈಫಲ್ಯದ ಲಕ್ಷಣಗಳು.

ಮೂತ್ರಪಿಂಡಗಳು 55 ಗ್ಯಾಲನ್ ರಕ್ತವನ್ನು ಫಿಲ್ಟರ್ ಮಾಡುತ್ತವೆ ಮತ್ತು ಪ್ರತಿದಿನ ಅದರಿಂದ ತ್ಯಾಜ್ಯವನ್ನು ತೆಗೆದುಹಾಕುತ್ತವೆ. ಮೂತ್ರಪಿಂಡಗಳು ದೇಹದಲ್ಲಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವವನ್ನು ಸಂಗ್ರಹಿಸುವುದನ್ನು ತಡೆಯುತ್ತದೆ. ಇದು ಎಲೆಕ್ಟ್ರೋಲೈಟ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಾಯ ಮಾಡುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಇದು ರಕ್ತದೊತ್ತಡವನ್ನೂ ನಿಯಂತ್ರಿಸುತ್ತದೆ. ಮೂಳೆಗಳು ಬಲವಾಗಿರಲು ಸಹಾಯ ಮಾಡುತ್ತದೆ. ಆದರೆ ಮೂತ್ರಪಿಂಡದ ಕಾಯಿಲೆಗಳು ಬಹಳ ತೊಂದರೆ ಕೊಡುತ್ತದೆ.

ಅತಿಯಾದ ಪ್ರೋಟೀನ್‌ ಸೇವನೆಯು ಕಣ್ಣುಗಳು ಉಬ್ಬುವಂತೆ ಮಾಡುತ್ತದೆ. ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ನೀವು ಪದೇ ಪದೆ ಏಳುವುದು ಸೇರಿದಂತೆ ಇನ್ನಿತರ ಲಕ್ಷಣಗಳು ದುರ್ಬಲ ಮೂತ್ರಪಿಂಡದ ಲಕ್ಷಣಗಳಾಗಿವೆ. ಮೂತ್ರಪಿಂಡಗಳು ದುರ್ಬಲಗೊಂಡಿದೆ ಎನ್ನುವುದು ತಿಳಿದುಬಂದಲ್ಲಿ ಅದನ್ನು ನಿವಾರಿಸಲು ಕೆಲವೊಂದು ಮನೆ ಮದ್ದುಗಳಿವೆ.

ಆಹಾರದಲ್ಲಿ ವಿಟಮಿನ್ ಸಿ ಹೆಚ್ಚು ಸೇವಿಸಬೇಕು: ಮೂತ್ರಪಿಂಡಗಳು ದುರ್ಬಲವಾಗಿದ್ದಲ್ಲಿ ನಿಮ್ಮ ಆಹಾರದಲ್ಲಿ ಹೆಚ್ಚು ವಿಟಮಿನ್‌ ಸಿ ಸೇವಿಸಿ. ಅದಕ್ಕಾಗಿ ಆಗಾಗ್ಗೆ ನಿಂಬೆರಸ ಸೇವಿಸುವುದು ಅವಶ್ಯಕ. ಸಿಟ್ರಸ್ ಹಣ್ಣುಗಳು, ಬ್ರೊಕೊಲಿ, ಸೌತೆಕಾಯಿ, ಮತ್ತು ಹಸಿರು ತರಕಾರಿಗಳನ್ನು ಹೇರಳವಾಗಿ ಸೇವಿಸಬೇಕು. ಸಿಟ್ರೇಟ್ ಅಂಶವು ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯನ್ನು ತಡೆಯುತ್ತದೆ. ಸಣ್ಣ ಕಲ್ಲುಗಳನ್ನು ಕರಗಿಸುತ್ತದೆ. ಈ ಕಲ್ಲುಗಳು ಮೂತ್ರದ ಮೂಲಕ ಹಾದುಹೋಗುತ್ತದೆ.

ಉಪ್ಪನ್ನು ಕಡಿಮೆ ಸೇವಿಸಿ: ನಿಮ್ಮ ಮೂತ್ರಪಿಂಡಗಳು ದುರ್ಬಲವಾದಾಗ ಉಪ್ಪನ್ನು ಕಡಿಮೆ ಮಾಡುವುದು ಉತ್ತಮ. ಅಧಿಕ ರಕ್ತದೊತ್ತಡದಿಂದ ಕಿಡ್ನಿ ಆರೋಗ್ಯ ಹಾಳಾಗುತ್ತದೆ.

ಕಡಿಮೆ ಪೊಟ್ಯಾಸಿಯಮ್ ಆಹಾರ ಸೇವಿಸಿ: ಬಾಳೆಹಣ್ಣು, ಕಿತ್ತಳೆ, ಎಲೆಕೋಸು, ಲೆಟ್ಯೂಸ್ ಮತ್ತು ಟೊಮ್ಯಾಟೊಗಳಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಸೇಬು, ಎಲೆಕೋಸು, ಕ್ಯಾರೆಟ್, ಬೀನ್ಸ್, ದ್ರಾಕ್ಷಿ, ಸ್ಟ್ರಾಬೆರಿಗಳಲ್ಲಿ ಪೊಟ್ಯಾಸಿಯಮ್ ಕಡಿಮೆ ಇರುತ್ತದೆ. ಮೂತ್ರಪಿಂಡಗಳು ದುರ್ಬಲವಾಗಿದ್ದರೆ ಹೆಚ್ಚಿನ ಪೊಟ್ಯಾಸಿಯಮ್ ಆಹಾರ ಸೇವಿಸುವುದನ್ನು ತಪ್ಪಿಸಬೇಕು.

ಪ್ರೋಟೀ ಕಡಿಮೆ ಮಾಡಿ: ಪ್ರೋಟೀನ್-ಭರಿತ ಮಾಂಸವನ್ನು ಕಡಿಮೆ ಮಾಡುವುದು ಅವಶ್ಯಕ. ಹೆಚ್ಚುವರಿ ಪ್ರೋಟೀನ್ ಮೂತ್ರಪಿಂಡ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಕೊತ್ತಂಬರಿ ರಸ ಸೇವಿಸಿ: ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಕೊತ್ತಂಬರಿ ಸೊಪ್ಪು, ಪುದೀನಾ ಮುಂತಾದ ಎಲೆಗಳ ರಸವನ್ನು ಸೇವಿಸಬೇಕು. ಈ ಖನಿಜ ಲವಣಗಳು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸುತ್ತದೆ. ಊಟಕ್ಕೆ ಅರ್ಧ ಗಂಟೆ ಮೊದಲು ಒಂದು ಲೋಟ ಕೊತ್ತಂಬರಿ ಸೊಪ್ಪಿನ ರಸ ಕುಡಿಯಿರಿ.

ಇದೆಲ್ಲದರ ಜೊತೆಗೆ ತಜ್ಞ ವೈದ್ಯರನ್ನು ಸಂಪರ್ಕಿಸಿ.