Hair Care: ಮನೆಯಲ್ಲಿಯೇ ಸುಲಭದಲ್ಲಿ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ಮನೆಯಲ್ಲಿಯೇ ಸುಲಭದಲ್ಲಿ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?

Hair Care: ಮನೆಯಲ್ಲಿಯೇ ಸುಲಭದಲ್ಲಿ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?

ಬಾಳೆಹಣ್ಣು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಬಾಳೆಹಣ್ಣು ಎಂದರೆ ಅದು ತಿನ್ನಲು ಮಾತ್ರವಲ್ಲ, ನಿಮ್ಮ ಸೌಂದರ್ಯ ವೃದ್ಧಿಸುವಲ್ಲೂ ಬಳಕೆಯಾಗುತ್ತದೆ. ಬಾಳೆಹಣ್ಣು ಬಳಸಿಕೊಂಡು, ವಿವಿಧ ರೀತಿಯ ನೈಸರ್ಗಿಕ ಹೇರ್ ಮಾಸ್ಕ್ ಮನೆಯಲ್ಲೇ ತಯಾರಿಸಬಹುದು.

ಮನೆಯಲ್ಲಿಯೇ ಸುಲಭದಲ್ಲಿ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?
ಮನೆಯಲ್ಲಿಯೇ ಸುಲಭದಲ್ಲಿ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸುವುದು ಹೇಗೆ? (PC: Canva)

ಬಾಳೆಹಣ್ಣು ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸಿ, ಅದನ್ನು ತಲೆಗೆ ಹಚ್ಚಿಕೊಂಡರೆ ಕೂದಲು ಮೃದುವಾಗುವುದು ಮಾತ್ರವಲ್ಲ, ಕೂದಲು ರೇಷ್ಮೆಯಂತೆಯೇ ಹೊಳೆಯುತ್ತದೆ. ಜತೆಗೆ ಬುಡದಿಂದಲೇ ಗಟ್ಟಿಯಾಗುತ್ತದೆ. ಬಾಳೆಹಣ್ಣು ಮತ್ತು ಕೆಳಗೆ ಸೂಚಿಸಿರುವ, ಮನೆಯಲ್ಲೇ ದೊರಕುವ ಸರಳ ವಸ್ತುಗಳಿಂದ ನಿಮ್ಮ ಕೂದಲಿನ ಆರೈಕೆ ಮಾಡಬಹುದು. ಸುಂದರ, ಸದೃಢ ಮತ್ತು ಹೊಳೆಯುವ ತಲೆಕೂದಲು ನಿಮ್ಮದಾಗಲು ಈ ಟಿಪ್ಸ್ ಬಳಸಿ ನೋಡಿ.

ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸುವುದು ಹೇಗೆ?

ಕ್ಲಾಸಿಕ್ ಬನಾನ ಹೇರ್ ಮಾಸ್ಕ್

  • ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಚೆನ್ನಾಗಿ ಹಿಂಡಿ, ಮೆದುವಾದ ಪೇಸ್ಟ್ ಮಾಡಿಕೊಳ್ಳಿ
  • ತಲೆ ಮತ್ತು ಬುರುಡೆಗೆ ಚೆನ್ನಾಗಿ ಅದನ್ನು ಹಚ್ಚಿಕೊಳ್ಳಿ
  • ಶವರ್ ಕ್ಯಾಪ್‌ನಿಂದ ತಲೆಯನ್ನು ಮುಚ್ಷಿ 30 ನಿಮಿಷ ಹಾಗೆಯೇ ಬಿಡಿ
  • ನಂತರ ಹದಬಿಸಿ ನೀರಿನಲ್ಲಿ ಶಾಂಪೂ ಬಳಸಿ ತಲೆಕೂದಲನ್ನು ಚೆನ್ನಾಗಿ ತೊಳೆಯಿರಿ.

ಜೇನುತುಪ್ಪ ಮತ್ತು ಬಾಳೆಹಣ್ಣಿನ ಮಾಸ್ಕ್

  • ಬಾಳೆಹಣ್ಣನ್ನು ಚೆನ್ನಾಗಿ ಹಿಂಡಿ, 2 ಟೇಬಲ್‌ಸ್ಪೂನ್ ಜೇನಿನೊಂದಿಗೆ ಮಿಶ್ರ ಮಾಡಿಕೊಳ್ಳಿ.
  • ನಂತರ ಈ ಮಿಶ್ರಣವನ್ನು ತಲೆ, ಬುರುಡೆಗೆ ಹಚ್ಚಿಕೊಳ್ಳಿ
  • ಶವರ್ ಕ್ಯಾಪ್‌ನಿಂದ ತಲೆಯನ್ನು ಮುಚ್ಷಿ 30 ನಿಮಿಷ ಹಾಗೆಯೇ ಬಿಡಿ,
  • ನಂತರ ಹದಬಿಸಿ ನೀರಿನಲ್ಲಿ ಶಾಂಪೂ ಬಳಸಿ ತಲೆಕೂದಲನ್ನು ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ: ಬೆಳಗಿನ ಹೊತ್ತು ಮಾತ್ರ ಕಾಣಿಸುವ ಮಧುಮೇಹದ ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬೇಡಿ

ಮೊಸರು ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್

  • ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಎರಡು ಟೀಸ್ಪೂನ್ ಮೊಸರಿನೊಂದಿಗೆ ಮಿಶ್ರ ಮಾಡಿ.
  • ನಂತರ ಆ ಮಿಶ್ರಣವನ್ನು ತಲೆ, ಬುರುಡೆಗೆ ಹಚ್ಚಿಕೊಳ್ಳಿ
  • ಶವರ್ ಕ್ಯಾಪ್‌ನಿಂದ ತಲೆಯನ್ನು ಮುಚ್ಷಿ 30 ನಿಮಿಷ ಹಾಗೆಯೇ ಬಿಡಿ,
  • ನಂತರ ಹದಬಿಸಿ ನೀರಿನಲ್ಲಿ ಶಾಂಪೂ ಬಳಸಿ ತಲೆಕೂದಲನ್ನು ಚೆನ್ನಾಗಿ ತೊಳೆಯಿರಿ.

ಅವಕಾಡೊ ಮತ್ತು ಬನಾನ ಹೇರ್ ಮಾಸ್ಕ್

  • ಹಣ್ಣಾದ ಬಾಳೆಹಣ್ಣು, ಅವಕಾಡೊವನ್ನು ಚೆನ್ನಾಗಿ ಮಿಶ್ರ ಮಾಡಿ ಕಲಸಿಕೊಳ್ಳಿ.
  • ನಂತರ ಈ ಮಿಶ್ರಣವನ್ನು ತಲೆ, ಬುರುಡೆಗೆ ಹಚ್ಚಿಕೊಳ್ಳಿ
  • ಶವರ್ ಕ್ಯಾಪ್‌ನಿಂದ ತಲೆಯನ್ನು ಮುಚ್ಷಿ 30 ನಿಮಿಷ ಹಾಗೆಯೇ ಬಿಡಿ,
  • ನಂತರ ಹದಬಿಸಿ ನೀರಿನಲ್ಲಿ ಶಾಂಪೂ ಬಳಸಿ ತಲೆಕೂದಲನ್ನು ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ: ಬಿಳಿ ಕೂದಲಿನ ಸಮಸ್ಯೆಯಿಂದ ಕಂಗಾಲಾಗಿದ್ದೀರಾ? ಇಲ್ಲಿದೆ ಶಾಶ್ವತ ಪರಿಹಾರ

ಆಲಿವ್ ಎಣ್ಣೆ ಮತ್ತು ಬಾಳೆಹಣ್ಣು

  • ಎರಡು ಟೀ ಸ್ಪೂನ್ ಆಲಿವ್ ಎಣ್ಣೆಯ ಜತೆ ಬಾಳೆಹಣ್ಣನ್ನು ಕಲಸಿ ಮಿಶ್ರ ಮಾಡಿ.
  • ನಂತರ ಆ ಮಿಶ್ರಣವನ್ನು ತಲೆ, ಬುರುಡೆಗೆ ಹಚ್ಚಿಕೊಳ್ಳಿ
  • ಶವರ್ ಕ್ಯಾಪ್‌ನಿಂದ ತಲೆಯನ್ನು ಮುಚ್ಷಿ 30 ನಿಮಿಷ ಹಾಗೆಯೇ ಬಿಡಿ,
  • ನಂತರ ಹದಬಿಸಿ ನೀರಿನಲ್ಲಿ ಶಾಂಪೂ ಬಳಸಿ ತಲೆಕೂದಲನ್ನು ಚೆನ್ನಾಗಿ ತೊಳೆಯಿರಿ.

ಮೊಟ್ಟೆ ಮತ್ತು ಬಾಳೆಹಣ್ಣು

  • ಒಂದು ಮೊಟ್ಟೆಯ ಜತೆ ಬಾಳೆಹಣ್ಣನ್ನು ಮಿಶ್ರ ಮಾಡಿ, ಚೆನ್ನಾಗಿ ಕಲಸಿಕೊಳ್ಳಿ.
  • ನಂತರ ಈ ಮಿಶ್ರಣವನ್ನು ತಲೆ, ಬುರುಡೆಗೆ ಹಚ್ಚಿಕೊಳ್ಳಿ
  • ಶವರ್ ಕ್ಯಾಪ್‌ನಿಂದ ತಲೆಯನ್ನು ಮುಚ್ಷಿ 30 ನಿಮಿಷ ಹಾಗೆಯೇ ಬಿಡಿ,
  • ನಂತರ ಹದಬಿಸಿ ನೀರಿನಲ್ಲಿ ಶಾಂಪೂ ಬಳಸಿ ತಲೆಕೂದಲನ್ನು ಚೆನ್ನಾಗಿ ತೊಳೆಯಿರಿ.

ಬನಾನ ಹೇರ್ ಮಾಸ್ಕ್ ತಯಾರಿಸಲು ಟಿಪ್ಸ್

  • ಬಾಳೆಹಣ್ಣಿನ ಹೇರ್ ಮಾಸ್ಕ್ ಅನ್ನು ತಯಾರಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.
  • ವಾರದಲ್ಲಿ ಒಮ್ಮೆ ಮಾತ್ರ ಬಾಳೆಹಣ್ಣಿನ ಹೇರ್ ಮಾಸ್ಕ್ ತಯಾರಿಸಿ, ತಲೆಗೆ ಹಚ್ಚಿಕೊಳ್ಳಿ
  • ನಿಮ್ಮ ತಲೆಕೂದಲಿನ ವಿಧಕ್ಕೆ ಅನುಗುಣವಾದ ಹೇರ್ ಮಾಸ್ಕ್ ತಯಾರಿಸಿ, ಅಂದರೆ ನಿಮ್ಮದು ಎಣ್ಣೆಯ ಅಂಶ ಹೊಂದಿರುವ, ತೇವವಾದ ತಲೆಕೂದಲು ಆಗಿದ್ದರೆ, ಮಾಸ್ಕ್‌ನಲ್ಲಿ ಹೆಚ್ಚಿನ ಎಣ್ಣೆಯ ಅಂಶ ಸೇರಿಸಬೇಡಿ.
  • ತಲೆಕೂದಲಿಗೆ ಮಾಸ್ಕ್ ಹಚ್ಚಿದ ಬಳಿಕ, ಬೆಚ್ಚಗಿನ ಟವೆಲ್‌ನಲ್ಲಿ, ಕ್ಯಾಪ್‌ ಮೂಲಕ ಕೂದಲನ್ನು ಕಟ್ಟಿಬಿಡಿ.
  • ತಲೆಕೂದಲು ತೊಳೆಯುವಾಗ ಉತ್ತಮ ಕಂಡೀಶನರ್ ಬಳಸುವುದನ್ನು ಮರೆಯಬೇಡಿ.
  • ನಿಯಮಿತವಾಗಿ ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಸುವುದು ತಲೆಕೂದಲಿನ ಆರೋಗ್ಯಕ್ಕೆ ಉತ್ತಮ.

ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚು ಕಾಡಬಹುದು ಮೂತ್ರನಾಳದ ಕಲ್ಲಿನ ಸಮಸ್ಯೆ: ಕಾರಣವೇನು ಗೊತ್ತಾ?

ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಕೆಯ ಕೆಲವೊಂದು ಅಡ್ಡಪರಿಣಾಮಗಳು

  • ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಕೆಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಕೆಲವರಿಗೆ ಅಲರ್ಜಿ ಇದ್ದರೆ, ಅದರಿಂದ ಸಮಸ್ಯೆಯಾಗಬಹುದು.
  • ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ನಿಗದಿತ ಪ್ರಮಾಣದಲ್ಲಷ್ಟೇ ಬಳಸಬೇಕು.
  • ಬಾಳೆಹಣ್ಣು ಅಂಟು-ಅಂಟಾಗಿರುವುದರಿಂದ, ತಲೆಕೂದಲನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ತಲೆಯಲ್ಲಿ ಅಂಟು ಅಂಶ ಉಳಿದರೆ ಕೂದಲಿಗೆ ಸಮಸ್ಯೆಯಾಗಬಹುದು.

Whats_app_banner