ಮಕ್ಕಳು ಕಟ್ಟಿದ ಮೂಗು ಸಮಸ್ಯೆಯಿಂದ ಬಳಲುತ್ತಿದ್ದಾರಾ: ಇಲ್ಲಿದೆ ಸಿಂಪಲ್ ಮನೆಮದ್ದು
ದೀಪಾವಳಿಯಂದು ಪಟಾಕಿಗಳಿಂದ ಹೊರಹೊಮ್ಮುವ ಹೊಗೆ ಹಾಗೂ ಬದಲಾಗುತ್ತಿರುವ ಋತುವಿನಿಂದ ಅನೇಕ ಮಕ್ಕಳು ಕಟ್ಟಿದ ಮೂಗು, ಶೀತ ಸಮಸ್ಯೆಯಿಂದ ಬಳಲುತ್ತಾರೆ. ನಿಮ್ಮ ಮಕ್ಕಳು ಕೂಡ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಈ ಸಿಂಪಲ್ ಮನೆಮದ್ದನ್ನು ಪ್ರಯತ್ನಿಸಬಹುದು.
ಬದಲಾಗುತ್ತಿರುವ ಋತುವಿನಲ್ಲಿ ಅನೇಕ ಮಕ್ಕಳು ಶೀತ, ಕೆಮ್ಮಿನಿಂದ ಬಳಲುತ್ತಾರೆ. ಈಗಂತೂ ಕೆಲವೊಮ್ಮೆ ಮಳೆ ಬಂದರೆ, ಕೆಲವೊಮ್ಮೆ ಬಿಸಿಲು, ಚಳಿ, ಶೀತಗಾಳಿಯಿಂದ ಬಳಲುತ್ತಾರೆ. ಇದಲ್ಲದೆ, ದೀಪಾವಳಿ ಹಬ್ಬಕ್ಕೆ ಪಟಾಕಿ ಸುಡುವುದರಿಂದ ಮಾಲಿನ್ಯದ ಹೊಗೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಮೂಗು ಮತ್ತು ಗಂಟಲು ಬಿಗಿತದಿಂದಾಗಿ ಚಿಕ್ಕ ಮಕ್ಕಳಿಗೆ ಸಮಸ್ಯೆಯಾಗಬಹುದು. ಮಗು ಕಟ್ಟಿದ ಮೂಗು ಸಮಸ್ಯೆಯಿಂದ ಒದ್ದಾಡುತ್ತಿದ್ದರೆ ಇದನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಮಗು ವೇಗವಾಗಿ ಉಸಿರಾಡುತ್ತಿದ್ದರೆ, ಉಸಿರಾಟದಲ್ಲಿ ಉಬ್ಬಸ ಶಬ್ಧವಿದೆ, ಅಂದರೆ ಮಗುವಿನ ಎದೆಯಲ್ಲಿ ಲೋಳೆ ಸಂಗ್ರಹವಾಗಿದೆ ಎಂದರ್ಥ. ಇದಕ್ಕಾಗಿ ಆಯುರ್ವೇದದ ಪರಿಹಾರವನ್ನು ಕಂಡುಕೊಳ್ಳಬಹುದು. ಪಟಾಕಿ ಹೊಗೆಯಿಂದ ಮಕ್ಕಳ ಕಟ್ಟಿದ ಮೂಗಿನ ಸಮಸ್ಯೆಯನ್ನು ನಿವಾರಿಸಬಹುದು.
ಮಕ್ಕಳ ಕಟ್ಟಿದ ಮೂಗಿನ ಸಮಸ್ಯೆ ಇಲ್ಲಿದೆ ಪರಿಹಾರ
ಓಂಕಾಳು ಹಬೆ: ಸಣ್ಣ ಮಕ್ಕಳು ಹೆಚ್ಚಾಗಿ ಕಷಾಯದಂತಹ ವಸ್ತುಗಳನ್ನು ಕುಡಿಯಲು ಇಷ್ಟಪಡುವುದಿಲ್ಲ. ಹೀಗಾಗಿ ಕಟ್ಟಿದ ಮೂಗನ್ನು ಹಬೆಯ ಸಹಾಯದಿಂದ ತೆರೆಯಲು ಓಂ ಕಾಳು ಹಬೆಯನ್ನು ತೆಗೆದುಕೊಳ್ಳಬಹುದು. ಒಂದು ಟೀಸ್ಪೂನ್ ಓಂಕಾಳನ್ನು ನೀರಿನಲ್ಲಿ ಹಾಕಿ ಕುದಿಯಲು ಬಿಡಿ. ಅದು ಕುದಿಯಲು ಪ್ರಾರಂಭಿಸಿದಾಗ, ಮಗುವಿಗೆ ಅದರ ಹಬೆಯ ವಾಸನೆ ಬರುವಂತೆ ಮಾಡಿ. ಬಿಸಿ ನೀರು ಆಗಿರುವುದರಿಂದ ತುಂಬಾ ಜಾಗರೂಕತೆ ವಹಿಸುವುದು ಮುಖ್ಯ. ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಕಟ್ಟಿದ ಮೂಗು ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಪುದೀನಾ ಎಲೆಗಳ ಪರಿಹಾರ: ಪಟಾಕಿಗಳಿಂದ ಹೊರಹೊಮ್ಮುವ ಹೊಗೆಯು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ. ರಾಸಾಯನಿಕಗಳಿಂದ ತುಂಬಿದ ಈ ಹೊಗೆಯು ಮಗುವಿನ ಉಸಿರಾಟದ ನಾಳದ ಮೂಲಕ ಶ್ವಾಸಕೋಶಕ್ಕೆ ಹೋದರೆ, ಅದನ್ನು ದುರ್ಬಲಗೊಳಿಸುತ್ತದೆ. ಇದು ಅಸ್ತಮಾ ಮತ್ತು ಸೈನಸ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಈ ವೇಳೆ, ಎಂಟರಿಂದ ಹತ್ತು ಪುದೀನಾ ಎಲೆಗಳು ಮತ್ತು ಒಂದು ಟೀಸ್ಪೂನ್ ಓಂಕಾಳು, ಕರಿಮೆಣಸು ಮತ್ತು ಸ್ವಲ್ಪ ಶುಂಠಿಯನ್ನು ನೀರಿನಲ್ಲಿ ಕುದಿಸಿ. ಅದರ ಹಬೆಯನ್ನು ಮಕ್ಕಳಿಗೆ ತೆಗೆದುಕೊಳ್ಳುವಂತೆ ಮಾಡಿ. ಇದು ಕಟ್ಟಿದ ಮೂಗಿಗೆ ಪರಿಹಾರವನ್ನು ನೀಡುತ್ತದೆ. ಅಲ್ಲದೆ, ಮಾಲಿನ್ಯದಿಂದ ಉಂಟಾಗುವ ಅಸ್ವಸ್ಥತೆಗೆ ಪರಿಹಾರ ನೀಡುತ್ತದೆ.
ಈ ಸಣ್ಣ ವಿಧಾನವು ಮೂಗು ಕಟ್ಟುವಿಕೆಯಿಂದ ಪರಿಹಾರ ನೀಡುತ್ತದೆ
ಮಕ್ಕಳ ಕಟ್ಟಿದ ಮೂಗನ್ನು ತೆರೆಯಲು ಲವಣಯುಕ್ತ ನೀರನ್ನು ಬಳಸಲಾಗುತ್ತದೆ. ರಾಸಾಯನಿಕ ಆಧಾರಿತ ಲವಣಯುಕ್ತ ನೀರನ್ನು ಬಳಸುವ ಬದಲು, ಎರಡು ಚಮಚ ಉಪ್ಪು ಮತ್ತು ಕುದಿಸಿದ ನೀರನ್ನು ಸೇರಿಸಿ. ಇದು ಕಟ್ಟಿದ ಮೂಗಿಗೆ ಪರಿಹಾರ ನೀಡುತ್ತದೆ.