ಗಂಟಲು ನೋವಿಗೆ ಮನೆಯಲ್ಲೇ ತಯಾರಿಸಿ ಆಯುರ್ವೇದಿಕ ಚೂರ್ಣ; ಅಂಗಡಿಯಿಂದ ಕೊಂಡು ತಂದ ಔಷಧಿಗಿಂತಲೂ ಇದು ಸ್ಟ್ರಾಂಗ್
ವಾತಾವರಣ ತಣ್ಣಗಾಗುತ್ತಿದ್ದಂತೆ ಗಂಟಲು ನೋವು, ಕೆಮ್ಮಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಇದನ್ನು ತಪ್ಪಿಸಲು ನೀವು ಮನೆಯಲ್ಲೇ ಮದ್ದು ತಯಾರಿಸಬಹುದು. ಯಾವ ರೀತಿ ತಯಾರು ಮಾಡುವುದು? ಇದಕ್ಕೆ ಏನೆಲ್ಲ ಬೇಕು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ನೀವೂ ಮನೆಯಲ್ಲಿ ಇದನ್ನು ಟ್ರೈ ಮಾಡಿ.
ವಾತಾವರಣ ತಣ್ಣಗಾಗುತ್ತಿದ್ದಂತೆ ಗಂಟಲು ನೋವು, ಕೆಮ್ಮಿನಂತಹ ಸಮಸ್ಯೆಗಳು ಹೆಚ್ಚಾಗುತ್ತವೆ. ಮಕ್ಕಳು ಮತ್ತು ವಯಸ್ಕರು ಎಲ್ಲರೂ ಗಂಟಲು ನೋವಿನ ಬಗ್ಗೆ ಬೇಸರ ಹೊಂದಿದ್ದಾರೆ. ಯಾರನ್ನೇ ಕೇಳಿದರು ಈಗ ಹವಾಮಾನ ಸರಿ ಇಲ್ಲ. ಚೌತಿ ಮುಗಿತಲ್ಲ ಹಾಗಾಗಿ ಗಂಟಲು ನೋವು ಹೀಗೆ ಬೇರೆ ಬೇರೆ ಕಾರಣಗಳನ್ನು ಕೊಡುತ್ತಾರೆ. ಕಾರಣ ಬೇರೆ ಬೇರೆಯಾದರೂ ಸಮಸ್ಯೆ ಒಂದೇ ಆಗಿದೆ. ಅದೇ ಕಾರಣಕ್ಕೆ ನಾವು ಇಂದು ಗಂಟಲು ನೋವಿಗೆ ಮನೆಯಲ್ಲೇ ಯಾವ ರೀತಿ ಮದ್ದು ಮಾಡಿಕೊಳ್ಳಬಹುದು ಎಂಬುದನ್ನು ನೀಡಿದ್ದೇವೆ ಗಮನಿಸಿ. ನೀವೂ ನಿಮ್ಮ ಮನೆಯಲ್ಲಿ ಈ ಚೂರ್ಣವನ್ನು ತಯಾರಿಸಿ.
ಪ್ರತಿ ಬಾರಿಯೂ ಆ್ಯಂಟಿಬಯೋಟಿಕ್‌ಗಳನ್ನು ತೆಗೆದುಕೊಳ್ಳುವುದು, ಮಾತ್ರೆ ತಿನ್ನುವುದು ಸರಿ ಅಲ್ಲ. ಅದರ ಬದಲಾಗಿ ಆರೋಗ್ಯಕ್ಕೆ ಹಾನಿಯಾಗದ ರೀತಿ ಏನಾದರೂ ಮನೆಮದ್ದು ಮಾಡಿಕೊಳ್ಳುವುದು ಉತ್ತಮ. ಹೀಗಿರುವಾಗ ನೀವು ತ್ರಿಕಟು ಚೂರ್ಣವನ್ನು ಮನೆಯಲ್ಲಿ ಮಾಡಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆಲವು ಆಯುರ್ವೇದ ವಿಧಾನಗಳನ್ನು ಅನುಸರಿಸಿ, ನೀವು ನೋಯುತ್ತಿರುವ ಗಂಟಲಿನಿಂದ ಪರಿಹಾರವನ್ನು ಪಡೆಯಬಹುದು.ಗಂಟಲು ನೋವು, ಶೀತ, ಕಫ ಮತ್ತು ಜೀರ್ಣಕ್ರಿಯೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಅಡುಗೆಮನೆಯಲ್ಲಿರುವ ಮೂರು ವಸ್ತುಗಳನ್ನು ಬಳಸಬಹುದು. ಆಯುರ್ವೇದದ ಪ್ರಕಾರ ಗಂಟಲು ನೋವು ನಿವಾರಣೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಗೃಹೋಪಯೋಗಿ ವಸ್ತುಗಳಿಂದ ಗಂಟಲು ನೋವನ್ನು ನಿವಾರಿಸಬಹುದು.
ತ್ರಿಕಟು ಚೂರ್ಣ
ಆಯುರ್ವೇದದಲ್ಲಿ ತ್ರಿಕಟು ಚೂರ್ಣ ಬಹಳ ಮುಖ್ಯ . ಕರಿಮೆಣಸು, ಕೊತ್ತಂಬರಿ ಸೊಪ್ಪು ಮತ್ತು ಪಿಪ್ಪಲಿಯನ್ನು (ಕಾಣಲು ಕಾಳುಮೆಣಸಿನ ಕಡ್ಡಿಯ ರೀತಿ ಇರುತ್ತದೆ) ಬೆರೆಸಿ ಈ ಚೂರ್ಣವನ್ನು ತಯಾರಿಸಬಹುದು. ಪ್ರತಿ ಮನೆಯಲ್ಲೂ ಮಸಾಲೆ ಬಟ್ಟಲಿನಲ್ಲಿ ಇವುಗಳು ಇದ್ದೇ ಇರುತ್ತದೆ. ಶುಂಠಿಯನ್ನೂ ಸಹ ಇದಕ್ಕೆ ಸೇರಿಸಿಕೊಳ್ಳಬಹುದು. ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಕರಿಮೆಣಸಿನ ಪುಡಿ ಮತ್ತು ಒಣ ಶುಂಠಿಯ ಪುಡಿ ಗಂಟಲು ನೋವನ್ನು ಕಡಿಮೆ ಮಾಡುತ್ತದೆ. ಅವುಗಳನ್ನು ಆಹಾರದ ಭಾಗವಾಗಿ ಮಾಡುವುದರಿಂದ ಹಸಿವು ಸುಧಾರಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಾಳುಮೆಣಸಿನ ಪುಡಿ ಮತ್ತು ಶುಂಠಿ ಪುಡಿ ಉಸಿರಾಟದ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಕೆಮ್ಮು, ಶೀತ, ಅಸ್ತಮಾ, ಅಲರ್ಜಿ ಮುಂತಾದ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ.
ಪಿಪ್ಪಲಿ
ಪಿಪ್ಪಲಿ ಆಯುರ್ವೇದ ಅಂಗಡಿಗಳಲ್ಲಿಯೂ ಸಿಗುತ್ತದೆ. ಇವುಗಳ ಬಳಕೆಯು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಇದು ಥೈರಾಯ್ಡ್ ಸಮಸ್ಯೆ, ನೋಯುತ್ತಿರುವ ಗಂಟಲು ಸರಿಪಡಿಸಲು ಇದರ ಪುಡಿಯನ್ನು ದಿನಕ್ಕೆ 3 ಗ್ರಾಂವರೆಗೆ ತೆಗೆದುಕೊಳ್ಳಬಹುದು. ರಾತ್ರಿ ಊಟದ ನಂತರ ಈ ಪುಡಿಯನ್ನು ತಿನ್ನುವುದು ಒಳ್ಳೆಯದು. ತ್ರಿಕಟ ಪುಡಿಯನ್ನು ಜೇನುತುಪ್ಪ ಅಥವಾ ನೀರಿನೊಂದಿಗೆ ಸೇವಿಸಬಹುದು.
ಈ ಮಿಶ್ರಣವನ್ನು ಶೀತ ವಾತಾವರಣದಲ್ಲಿ ಮಾತ್ರ ಬಳಸಬೇಕು. ಇಲ್ಲವಾದರೆ ಅಥವಾ ಹೆಚ್ಚಿಗೆ ನೀವು ಇದನ್ನು ತಿಂದರೆ ಖಂಡಿತ ಹೀಟ್ ಆಗುತ್ತದೆ. ಇದು ಮಸಾಲೆ ಪದಾರ್ಥವಾಗಿದ್ದು ಶೀತ ಆದಾಗ ಮಾತ್ರ ನೀವು ಬಳಸಬೇಕಾಗುತ್ತದೆ. ಆ ಕಾರಣಕ್ಕೆ ಇದನ್ನು ಬೇಸಿಗೆಯಲ್ಲಿ ಅಷ್ಟಾಗಿ ತಿನ್ನಬೇಡಿ.
ಶೀತ, ಕೆಮ್ಮು ಮತ್ತು ಅಸ್ತಮಾ
ಶೀತ, ಕೆಮ್ಮು ಮತ್ತು ಅಸ್ತಮಾದಿಂದ ಬಳಲುತ್ತಿರುವವರು ತ್ರಿಕಟ ಚೂರ್ಣವನ್ನು ಸೇವಿಸಬಹುದು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಚಯಾಪಚಯವನ್ನು ಸಹ ಸುಧಾರಿಸುತ್ತದೆ. ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ.
ಗಮನಿಸಿ: ಈ ಲೇಖನದಲ್ಲಿ ತಿಳಿಸಲಾದ ವಿಷಯಗಳನ್ನು ಸಲಹೆಗಳಾಗಿ ಮಾತ್ರ ತೆಗೆದುಕೊಳ್ಳಿ. ಯಾವುದೇ ಚಿಕಿತ್ಸೆ/ಔಷಧಿ/ಆಹಾರವನ್ನು ತೆಗೆದುಕೊಳ್ಳುವ ಮೊದಲು ವೈದ್ಯರನ್ನು ಅಥವಾ ತಜ್ಞರನ್ನು ಸಂಪರ್ಕಿಸಿ.
ವಿಭಾಗ