Honda Dio 125: ಭಾರತದ ರಸ್ತೆಗೆ ಲಗ್ಗೆ ಇರಿಸಿದೆ 2025ರ ಹೋಂಡಾ ಡಿಯೋ 125 ಸ್ಕೂಟರ್; ಇಲ್ಲಿದೆ ಬೆಲೆ ವಿವರ
ಹೋಂಡಾ ಕಂಪನಿ ಭಾರತದ ಮಾರುಕಟ್ಟೆಗೆ ತನ್ನ ಜನಪ್ರಿಯ ಸ್ಕೂಟರ್ ಡಿಯೋದ 2025ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ 123.92 ಸಿಸಿ ಸಿಂಗಲ್ ಸಿಲಿಂಡರ್ ಪಿಜಿಎಂ-ಫೈ ಎಂಜಿನ್ ಹೊಂದಿದ್ದು, 8.19 ಬಿಹೆಚ್ ಪಿ ಮತ್ತು 10.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಜಪಾನ್ ಮೂಲದ ಜನಪ್ರಿಯ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ 2025ರ ಡಿಯೋ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ನವೀಕರಿಸಿದ ಸ್ಕೂಟರ್ ಆಕರ್ಷಕ ವಿನ್ಯಾಸದ ಬದಲಾವಣೆಗಳು, ಒಬಿಡಿ 2-ಕಾಂಪ್ಲೈಂಟ್ ಎಂಜಿನ್ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 2025ರ ಹೋಂಡಾ ಡಿಯೋವನ್ನು ಡಿಎಲ್ಎಕ್ಸ್ ಮತ್ತು ಎಚ್-ಸ್ಮಾರ್ಟ್ ಎಂಬ ಎರಡು ಆವೃತ್ತಿಗಳಲ್ಲಿ ಪರಿಚಯಿಸಲಾಗಿದೆ. ಇವುಗಳ ಬೆಲೆ ಕ್ರಮವಾಗಿ 96,749 ಮತ್ತು 1,02,144 ರೂ. ಇದ್ದು, ಎರಡೂ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.
2025ರ ಹೋಂಡಾ ಡಿಯೋ ಸ್ಕೂಟರ್ ವಿಶೇಷತೆಗಳೇನು?
2025ರ ಹೋಂಡಾ ಡಿಯೋ ಸ್ಕೂಟರ್‌ನಲ್ಲಿ 4.2 ಇಂಚಿನ ಟಿಎಫ್‌ಟಿ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ಇದು ಈಗ ಮೈಲೇಜ್ ಇಂಡಿಕೇಟರ್, ಟ್ರಿಪ್ ಮೀಟರ್, ಇಕೋ ಇಂಡಿಕೇಟರ್ ಮತ್ತು ಶ್ರೇಣಿಯನ್ನು ತೋರಿಸುತ್ತದೆ. ಹೋಂಡಾ ರೋಡ್ ಸಿಂಕ್ ಅಪ್ಲಿಕೇಶನ್ ಬೆಂಬಲವೂ ಇದೆ, ಇದು ನ್ಯಾವಿಗೇಷನ್ ಮತ್ತು ಕಾಲ್ ಮತ್ತು ಮೆಸೇಜ್ ನೋಟಿಫಿಕೇಶನ್ ಅಲರ್ಟ್ ಕಾರ್ಯಗಳನ್ನು ಸಕ್ರಿಯಗೊಳಿಸುತ್ತದೆ, ಸವಾರರು ಚಲಿಸುವಾಗ ಸಂಪರ್ಕದಲ್ಲಿರಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಮೊಬೈಲ್ ಸಾಧನಗಳನ್ನು ಚಾರ್ಜ್ ಮಾಡಲು ಸ್ಮಾರ್ಟ್ ಕೀ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸಹ ಇದೆ.
ಯಾವ ಬಣ್ಣಗಳಲ್ಲಿ ಲಭ್ಯ
2025ರ ಹೋಂಡಾ ಡಿಯೋ ಸ್ಕೂಟರ್ ಅನ್ನು ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ಸ್ಪೋರ್ಟ್ಸ್ ಯೆಲ್ಲೋ, ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಮತ್ತು ಇಂಪೀರಿಯಲ್ ರೆಡ್ ಎಂಬ ಐದು ಬಣ್ಣಗಳಲ್ಲಿ ದೊರೆಯಲಿದೆ.
ಡಿಯೋ ಎಂಜಿನ್ ಅಪ್‌ಗ್ರೇಡ್
2025ರ ಹೋಂಡಾ ಡಿಯೋ ಬೈಕಿನಲ್ಲಿ 123.92 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8.19 ಬಿಹೆಚ್‌ಪಿ ಪವರ್ ಮತ್ತು 10.5 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ. ಇಂಧನ ಬಳಕೆ ಮತ್ತು ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಐಡ್ಲಿಂಗ್ ಸ್ಟಾರ್ಟ್ ಮತ್ತು ಸ್ಟಾಪ್ ಸಿಸ್ಟಮ್ ಸಹ ಇದೆ.
