ಹೋಂಡಾ ರೆಬೆಲ್ 500: ಭಾರತದಲ್ಲಿ ಬಿಡುಗಡೆಯಾಯ್ತು 5. 12 ಲಕ್ಷ ರೂ ಬೆಲೆಯ ಪ್ರೀಮಿಯಂ ಕ್ರೂಸರ್ ಬೈಕ್
ಕನ್ನಡ ಸುದ್ದಿ  /  ಜೀವನಶೈಲಿ  /  ಹೋಂಡಾ ರೆಬೆಲ್ 500: ಭಾರತದಲ್ಲಿ ಬಿಡುಗಡೆಯಾಯ್ತು 5. 12 ಲಕ್ಷ ರೂ ಬೆಲೆಯ ಪ್ರೀಮಿಯಂ ಕ್ರೂಸರ್ ಬೈಕ್

ಹೋಂಡಾ ರೆಬೆಲ್ 500: ಭಾರತದಲ್ಲಿ ಬಿಡುಗಡೆಯಾಯ್ತು 5. 12 ಲಕ್ಷ ರೂ ಬೆಲೆಯ ಪ್ರೀಮಿಯಂ ಕ್ರೂಸರ್ ಬೈಕ್

ಹೋಂಡಾ ಕಂಪನಿಯ ನೂತನ ರೆಬೆಲ್ 500 ಪ್ರೀಮಿಯಂ ಕ್ರೂಸರ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 5.12 ಲಕ್ಷ ದರ ಹೊಂದಿದೆ. ಕಂಪನಿಯ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್ ಶಿಪ್ ಮೂಲಕ ಈ ಬೈಕ್ ಮಾರಾಟವಾಗಲಿದೆ.

ಹೋಂಡಾ ರೆಬೆಲ್ 500
ಹೋಂಡಾ ರೆಬೆಲ್ 500

ಬೆಂಗಳೂರು: ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ರೆಬೆಲ್ 500 ಪ್ರೀಮಿಯಂ ಕ್ರೂಸರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಹೋಂಡಾ ರೆಬೆಲ್ 500 ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 5.12 ಲಕ್ಷಗಳಾಗಿದೆ. ಕಂಪನಿಯ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್ ಶಿಪ್ ಮೂಲಕ ಮಾರಾಟವಾಗಲಿರುವ ಈ ಬೈಕ್ ಗುರುಗ್ರಾಮ್, ಮುಂಬೈ ಮತ್ತು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಬುಕಿಂಗ್ ಮಾಡಿರುವ ಗ್ರಾಹಕರಿಗೆ ಜೂನ್ 2025 ರಿಂದ ಬೈಕ್ ದೊರೆಯಲಿದೆ.

ರೆಬೆಲ್ 500 ಹೋಂಡಾದ ಜಾಗತಿಕ ಕ್ರೂಸರ್ ಸರಣಿಯ ಭಾಗವಾಗಿ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದೆ. ರೆಬೆಲ್ 500 ತನ್ನ ಸ್ಪಷ್ಟವಾದ ಸ್ಟ್ರೀಟ್ ಪ್ರೆಸೆನ್ಸ್, ಟಾರ್ಕ್ ಎಂಜಿನ್ ಮತ್ತು ಲೇಡ್-ಬ್ಯಾಕ್ ಎರ್ಗೊನಾಮಿಕ್ಸ್‌ನೊಂದಿಗೆ, ಆಕರ್ಷಕ ವಿನ್ಯಾಸವನ್ನು ಹುಡುಕುತ್ತಿರುವ ಸವಾರರಿಗೆ ಸೂಕ್ತವಾಗಿದೆ.

ಹೋಂಡಾ ರೆಬೆಲ್ 500: ವೈಶಿಷ್ಟ್ಯಗಳು

ರೆಬೆಲ್ 500 ಬೈಕ್ 471 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್-ಟ್ವಿನ್ ಎಂಜಿನ್ ಹೊಂದಿದ್ದು, 8,500 ಆರ್‌ಪಿಎಂನಲ್ಲಿ 34 ಕಿಲೋವ್ಯಾಟ್ ಮತ್ತು 6,000 ಆರ್ ಪಿಎಂನಲ್ಲಿ 43.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡಿನ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ನಗರ ಪ್ರಯಾಣ ಮತ್ತು ಹೆದ್ದಾರಿ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಿದೆ. ರೆಬೆಲ್ 500 ಬೈಕ್ ಅನ್ನು ಟ್ಯೂಬ್ಲಾರ್ ಸ್ಟೀಲ್ ಫ್ರೇಮ್‌ನಲ್ಲಿ ನಿರ್ಮಿಸಲಾಗಿದ್ದು, 690 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇದು ಸಸ್ಪೆಂಷನ್‌ಗಾಗಿ ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಡ್ಯುಯಲ್ ಶೋವಾ ಶಾಕ್ ಅಬ್ಸಾರ್ಬರ್ ಬಳಸುತ್ತದೆ. ಈ ಬೈಕಿನ ಮುಂಭಾಗದಲ್ಲಿ 296 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಈ ಚಕ್ರಗಳು ಮುಂಭಾಗದಲ್ಲಿ 130/90-16 ಮತ್ತು ಹಿಂಭಾಗದಲ್ಲಿ 150/80-16 ಗಾತ್ರದ ಡನ್ಲಪ್ ಟೈರ್ ಹೊಂದಿವೆ.

ಆಕರ್ಷಕ ವಿನ್ಯಾಸ

ಈ ಬೈಕ್ ಪೂರ್ಣ ಎಲ್ಇಡಿ ಲೈಟಿಂಗ್ ಪ್ಯಾಕೇಜ್ ಅನ್ನು ಪಡೆಯುತ್ತದೆ, ಇದರಲ್ಲಿ ವೃತ್ತಾಕಾರದ ಹೆಡ್ಲೈಟ್ ಅದರ ರೆಟ್ರೊ ಲುಕ್‌ಗೆ ಸರಿಹೊಂದುತ್ತದೆ. ಜತೆಗೆ ಎಲ್‌ಸಿಡಿ ಪರದೆಯನ್ನು ಹೊಂದಿದ್ದು, ವೇಗ, ಗೇರ್ ಸ್ಥಾನ ಮತ್ತು ಇಂಧನ ಮಟ್ಟದಂತಹ ಅಗತ್ಯ ಸವಾರಿ ಮಾಹಿತಿಯನ್ನು ನೀಡುತ್ತದೆ.

ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in